Site icon Vistara News

Star Singer Fashion: ನೆಕ್ಲೇಸ್‌ ಧರಿಸಿ ಹಾಡಿದ ಸಂಜಿತ್‌ ಹೆಗಡೆ; ಜೆಂಡರ್‌ ಫ್ಯಾಷನ್‌ ರೂಲ್ಸ್‌ ಬ್ರೇಕ್‌!

sanjith hegde broke gender fashion rules with fusion fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಟಾರ್‌ ಗಾಯಕ ಸಂಜಿತ್‌ ಹೆಗಡೆಯ ಫ್ಯೂಶನ್‌ ಫ್ಯಾಷನ್‌ ಹಾಗೂ ಸ್ಟೈಲ್‌ಗೆ ಜೆನ್‌ ಜಿ ಯುವಕ-ಯುವತಿಯರು ಫಿದಾ ಆಗಿದ್ದಾರೆ. ಇನ್ನು ಅವರ ಇತ್ತೀಚಿನ ʻಗೀಜಗ ಹಕ್ಕಿʼ ಟ್ರೆಂಡಿಂಗ್‌ ಆಲ್ಬಂನಲ್ಲಿ ಧರಿಸಿರುವ ಫ್ರಿಂಝ್‌ ನೆಕ್ಲೇಸ್‌ ಹಾಗೂ ಮಲ್ಟಿ ಫಿಂಗರ್‌ರಿಂಗ್ಸ್‌ನ ಫ್ಯೂಶನ್‌ ಜ್ಯುವೆಲ್ ಫ್ಯಾಷನ್‌, ಜೆಂಡರ್‌ ಫ್ಯಾಷನ್‌ ರೂಲ್ಸ್‌ ಬ್ರೇಕ್‌ ಮಾಡಿದೆ (Star Singer Fashion). ಹೊಸ ರಿಜಿನಲ್‌ ಪಾಪ್‌ ಕಲ್ಚರ್‌ ಫ್ಯಾಷನ್‌ಗೆ ನಾಂದಿ ಹಾಡಿದೆ.

ವಿಂಟೇಜ್‌ ಕ್ರಿಸ್ಟಲ್‌ ಫ್ರಿಂಝ್‌ ನೆಕ್‌ಪೀಸ್‌

ಕೋಕ್ ಸ್ಟುಡಿಯೊ ಪ್ರಸ್ತುತ ಪಡಿಸಿರುವ ಈ ಆಲ್ಬಂ ಹಾಡಿನಲ್ಲಿ ಗೋಲ್ಡನ್‌ ಪ್ಯಾಚ್‌ ವರ್ಕ್‌ನ ಬ್ಲ್ಯಾಕ್‌ ಪ್ಯಾಂಟ್‌ ಹಾಗೂ ಕೋಟ್‌ ಸ್ಟೈಲ್‌ ಶರ್ಟ್‌ ಮಾನೋಕ್ರೋಮ್‌ ಔಟ್‌ಫಿಟ್‌ನಲ್ಲಿ ಸಂಜಿತ್‌ ಹೆಗಡೆ ಕಾಣಿಸಿಕೊಂಡಿದ್ದಾರೆ. ಇನ್ನು, ಇದರೊಂದಿಗೆ ಧರಿಸಿರುವ ವಿಂಟೇಜ್‌ ಕ್ರಿಸ್ಟಲ್‌ ಫಿಂಝ್‌ ನೆಕ್ಲೇಸ್‌ ಅಥವಾ ನೆಕ್‌ಪೀಸ್‌ ಹಾಗೂ ಮೈಕ್‌ ಹಿಡಿದ ಅವರ ಕೈ ಬೆರಳುಗಳಲ್ಲಿರುವ ಮಲ್ಟಿ ಫಿಂಗರ್‌ ರಿಂಗ್ಸ್‌ , ರೆಟ್ರೊ ಪಾಪ್‌ ಸ್ಟಾರ್ಸ್ ಫ್ಯೂಶನ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ನೆನಪಿಸುವಂತಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಯಾ.

ಸಂಜಿತ್‌ ಫ್ಯಾಷನ್‌ ಲುಕ್‌

ಟಾಲ್‌ ಹಾಗೂ ಸ್ಲಿಮ್‌ ಆಗಿರುವ ಸಂಜಿತ್‌, ಅವರದ್ದೇ ಆದ ಒಂದಿಷ್ಟು ಸ್ಟೈಲ್‌ ಸ್ಟೇಟ್‌ಮೆಂಟ್‌ ಹೊಂದಿದ್ದಾರೆ. ಅವರ ಕರ್ಲಿ ಲಾಂಗ್‌ ಹೇರ್‌ ಅವರ ಫೇವರೇಟ್‌ ಸ್ಟೈಲ್‌ಗಳಲ್ಲೊಂದು ಎಂಬುದು ನೋಡಿದಾಗಲೇ ತಿಳಿಯುತ್ತದೆ. ಆಗಾಗ ಅವರು ಮಾಡುವ ಕರ್ಲಿ ಹನ್‌ ಹೇರ್‌ಸ್ಟೈಲ್‌ ಕೂಡ ಅವರ ಸ್ಟೈಲ್‌ನಲ್ಲಿ ಸೇರಿದೆ. ಇನ್ನು ನೆಕ್‌ಚೈನ್‌ ಧರಿಸುವುದು ಕೂಡ ಅವರಿಗಿಷ್ಟ ಎಂಬುದಕ್ಕೆ ಅವರ ಫೋಟೊಗಳೇ ಸಾಕ್ಷಿ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಒಟ್ನಲ್ಲಿ, ಸಂಜಿತ್‌ ಅವರದ್ದು ಟೈಮ್‌ಲೀ ಸ್ಟೈಲಿಂಗ್‌ ಎಂದು ವಿಮರ್ಶಿಸುತ್ತಾರೆ ಫ್ಯಾಷನಿಸ್ಟಾಗಳು.

ಇದನ್ನೂ ಓದಿ: Sanjith Hegde : ಸಖತ್‌ ಟ್ರೆಂಡ್‌ ಆಯ್ತು ಸಂಜಿತ್‌ ಹೆಗಡೆಯ ʻಗೀಜಗ ಹಕ್ಕಿʼ ಹಾಡು; ಇದರಲ್ಲಿದೆ ಯಕ್ಷಗಾನದ ಟಚ್‌!

Star Singer Fashion

ಟೀಮ್‌ ಫ್ಯೂಶನ್‌ ಫ್ಯಾಷನ್‌

ಇತ್ತೀಚೆಗೆ ಸಂಜಿತ್‌ ಅವರ ಗೀಜಗ ಹಕ್ಕಿ ಹಾಡು, ಸಂಗೀತ ಪ್ರಿಯರನ್ನು ಆಕರ್ಷಿಸಿದ್ದರೇ, ಅವರ ಈ ಫ್ಯೂಶನ್‌ ಫ್ಯಾಷನ್‌, ಹಲವರ ಹುಬ್ಬೇರಿಸಿದೆ. ಅಷ್ಟು ಮಾತ್ರವಲ್ಲ! ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಇಡೀ ಟೀಮ್‌ ಕಲಾವಿದರೂ ಕೂಡ ಒಂದಲ್ಲ ಒಂದು ಫ್ಯೂಶನ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇದು ಈ ಜನರೇಷನ್‌ನ ಯುವಕ-ಯುವತಿಯರ ಚಾಯ್ಸ್‌ ಕೂಡ. ಇದು ಈ ಜನರೇಷನ್‌ನ ರಿಜಿನಲ್‌ ಪಾಪ್‌ ಕಲ್ಚರ್‌ ಫ್ಯಾಷನ್‌ಗೆ ಮುನ್ನುಡಿ ಬರೆದಿದೆ ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ಅಮಿತ್‌.

ಈ ಹಾಡಿನಲ್ಲಿ ಪಸನ್ನಕುಮಾರ ಹೆಗಡೆ ಅವರ ಭಾಗವತ ದನಿ ಇದೆ. ಸಾಕಷ್ಟು ಸಂಗೀತ ವಾದ್ಯಗಳು, ಮಕ್ಕಳ ದನಿ, ಶಾಸ್ತ್ರೀಯ ಆಧುನಿಕ ಸಂಗೀತ ಜತೆಯಾಗಿ ಈ ಹಾಡು ಮೂಡಿಬಂದಿದೆ. ಸಂಜಿತ್‌ ಅವರ ಸೋದರ ಸಂಬಂಧಿಗೆ ಪಕ್ಷಿಗಳ ಬಗ್ಗೆ ತುಂಬ ಆಸಕ್ತಿ. ಆಗ ಅವರು ಗೀಜಗ ಬಗ್ಗೆ ಮಾತನಾಡುವಾಗ ಗೂಡು ನೇಯುವುದರ ಬಗ್ಗೆಯೂ ಪ್ರಸ್ತಾಪಿಸಿದ್ದರಂತೆ. ಇದನ್ನೇ ಹಾಡಿಗೆ ಹಣೆದಯಲಾಗಿದೆ ಎನ್ನುತ್ತಾರೆ ಸಂಜಿತ್‌. ಈ ಹಾಡಿಗೆ ಇನ್‌ಸ್ಟ್ರುಮೆಂಟೇಶನ್‌ ಮಾಡಿರುವುದು ಚರಣ್‌ ರಾಜ್‌.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version