Site icon Vistara News

Taapsee Pannu: ನಟಿ ತಾಪ್ಸಿ ಪನ್ನು ತಿಂಗಳಿಗೆ ಆಹಾರತಜ್ಞರಿಗಾಗಿ 1 ಲಕ್ಷ ರೂ. ವೆಚ್ಚ ಮಾಡುತ್ತಿರುವುದೇಕೆ?

#image_title

ಮುಂಬೈ: ಸಿನಿಮಾ ನಟ ನಟಿಯರು ತಮ್ಮ ದೇಹದ ಬಗ್ಗೆ, ಸೌಂದರ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಕೆಲವರು ಅತಿ ಎನ್ನಿಸುವಷ್ಟು ಹಣವನ್ನು ಖರ್ಚು ಮಾಡುವುದುಂಟು. ನಟಿ ತಾಪ್ಸಿ ಪನ್ನು (Taapsee Pannu) ಅವರು ಪ್ರತಿ ತಿಂಗಳು ತಮ್ಮ ಆಹಾರತಜ್ಞರಿಗೆಂದೇ ಒಂದು ಲಕ್ಷ ರೂ. ಖರ್ಚು ಮಾಡುತ್ತಾರಂತೆ.

ಇದನ್ನೂ ಓದಿ: Kabzaa Movie: ಕಬ್ಜ ಸೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌: ಸಿನಿಮಾದಲ್ಲಿದ್ದಾರ ನಟ? ವಿಡಿಯೊ ವೈರಲ್‌!
ಹೌದು. ತಾಪ್ಸಿ ಅವರು ಪ್ರತಿ ತಿಂಗಳು ತಮ್ಮ ಆಹಾರತಜ್ಞರಿಗೆಂದು ಸರಿ ಸುಮಾರು ಒಂದು ಲಕ್ಷ ರೂ. ಖರ್ಚು ಮಾಡುತ್ತಾರೆ. ಈ ವಿಚಾರವನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. “ನನ್ನ ತಂದೆ ಕಷ್ಟ ಪಟ್ಟು ದುಡಿಯುತ್ತಾರೆ, ಹಣವನ್ನು ಖರ್ಚು ಮಾಡದೆ ಕೂಡಿಡುತ್ತಾರೆ. ನಾನು ಅವರಿಗಾಗಿ ಏನು ಮಾಡಿದರೂ ಹಣ ಖರ್ಚು ಮಾಡಿದೆ ಎಂದು ಬೈಯುತ್ತಾರೆ. ಈಗ ನಾನು ಆಹಾರತಜ್ಞರಿಗೇ ಒಂದು ಲಕ್ಷ ರೂ. ಖರ್ಚು ಮಾಡುವುದು ಗೊತ್ತಾದರೆ ನನಗೆ ಬೈಯುತ್ತಾರೆ” ಎಂದು ಅವರು ಹೇಳಿದ್ದಾರೆ.

ಇಷ್ಟೊಂದು ಹಣವನ್ನು ಈ ರೀತಿಯಲ್ಲಿ ಖರ್ಚು ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿರುವ ಅವರು, “ನಾನು ಯಾವ ಚಲನಚಿತ್ರವನ್ನು ಮಾಡುತ್ತಿದ್ದೇನೆ ಮತ್ತು ನನ್ನ ಜೀವನದಲ್ಲಿ ನಾನು ಎಲ್ಲಿದ್ದೇನೆ ಎಂಬುದರ ಆಧಾರದ ಮೇಲೆ ನನ್ನ ಆಹಾರಕ್ರಮವು ನಿರಂತರವಾಗಿ ಬದಲಾಗುತ್ತದೆ. ಪ್ರತಿ ನಾಲ್ಕೈದು ವರ್ಷಗಳ ನಂತರ, ನಿಮ್ಮ ದೇಹವೂ ಬದಲಾಗುತ್ತದೆ. ಈ ವೃತ್ತಿಯಲ್ಲಿ, ನಮ್ಮಲ್ಲಿ ಹೆಚ್ಚಿನವರಿಗೆ ವೃತ್ತಿಪರರ ಸಲಹೆಯ ಅಗತ್ಯವಿರುತ್ತದೆ. ನಾವು ಯಾವ ನಗರ ಅಥವಾ ನಾವು ಯಾವ ದೇಶದಲ್ಲಿ ಇದ್ದೇವೆ ಎನ್ನುವುದೂ ಕೂಡ ಆಹಾರ ಸೇವಿಸುವ ವಿಚಾರದಲ್ಲಿ ಮುಖ್ಯವಾಗುತ್ತದೆ. ಹಾಗಾಗಿ ಒಬ್ಬ ಆಹಾರತಜ್ಞರು ಮುಖ್ಯವಾಗುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: KGF Movie : ಕೆಜಿಎಫ್‌ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ ತಪ್ಪಿಗೆ ಕ್ಷಮೆ ಯಾಚಿಸಿದ ತೆಲುಗು ನಿರ್ದೇಶಕ
ತಾವು ತಮ್ಮ ತಾಯಿಗೂ ಆಹಾರತಜ್ಞರಿಂದ ಸಲಹೆ ನೀಡುತ್ತಿರುವುದಾಗಿಯೂ ನಟಿ ಹೇಳಿಕೊಂಡಿದ್ದಾರೆ. “ಆರೋಗ್ಯ ಹದಗೆಟ್ಟ ಮೇಲೆ ಆಸ್ಪತ್ರೆಗೆ ಹೋಗುವುದಕ್ಕಿಂತ, ಆರೋಗ್ಯ ಹದಗೆಡದಂತಹ ಆಹಾರ ಸೇವಿಸುವುದೇ ಒಳ್ಳೆಯದು. ಇದು ಫ್ಯಾನ್ಸಿ ಅಲ್ಲ ಬದಲಾಗಿ ಅಗತ್ಯತ” ಎಂದು ನಟಿ ಹೇಳಿದ್ದಾರೆ.

Exit mobile version