KGF Movie : ಕೆಜಿಎಫ್‌ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ ತಪ್ಪಿಗೆ ಕ್ಷಮೆ ಯಾಚಿಸಿದ ತೆಲುಗು ನಿರ್ದೇಶಕ Vistara News

ಟಾಲಿವುಡ್

KGF Movie : ಕೆಜಿಎಫ್‌ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ ತಪ್ಪಿಗೆ ಕ್ಷಮೆ ಯಾಚಿಸಿದ ತೆಲುಗು ನಿರ್ದೇಶಕ

ಕನ್ನಡದ ಕೆಜಿಎಫ್‌ ಸಿನಿಮಾ (KGF Movie) ತಲೆಬುಡವಿಲ್ಲದ ಸಿನಿಮಾ ಎಂದು ಹೇಳಿದ್ದ ತೆಲುಗು ನಿರ್ದೇಶಕ ವೆಂಕಟೇಶ್‌ ಮಹಾ ವಿಡಿಯೊ ಮೂಲಕ ಕ್ಷಮೆ ಯಾಚಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ಕನ್ನಡದ ಕೆಜಿಎಫ್‌ ಸಿನಿಮಾ (KGF Movie) ವಿಶ್ವ ಮಟ್ಟದಲ್ಲಿ ಹೆಸರು ಮಾಡಿದಂತಹ ಸಿನಿಮಾ. ರಾಕಿ ಭಾಯ್‌ ಯಶ್‌ ಅವರನ್ನು ವಿಶ್ವಕ್ಕೇ ಪರಿಚಯಿಸಿಕೊಂಡ ಸಿನಿಮಾವದು. ಆದರೆ ಈ ಸಿನಿಮಾ ಬಗ್ಗೆ ವಿರುದ್ಧವಾಗಿಯೂ ಮಾತನಾಡುವವರು ಕೆಲವರು ಇದ್ದಾರೆ. ಅದೇ ರೀತಿ ಇತ್ತೀಚೆಗೆ ತೆಲುಗು ನಿರ್ದೇಶಕ ಒಬ್ಬರು ಕೆಜಿಎಫ್‌ ಸಿನಿಮಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ, ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ: ICC T20 Rankings: ಜೀವನ ಶ್ರೇಷ್ಠ ಟಿ20 ಶ್ರೇಯಾಂಕ ಗಿಟ್ಟಿಸಿದ ಶುಭಮನ್​ ಗಿಲ್​!

ಕೆಜಿಎಫ್‌ ಸಿನಿಮಾ ಬಗ್ಗೆ ತೆಲುಗು ನಿರ್ದೇಶಕ ವೆಂಕಟೇಶ್‌ ಮಹಾ ಅವರು ಇತ್ತೀಚೆಗೆ ನಾಲಿಗೆ ಹರಿಬಿಟ್ಟಿದ್ದರು. ಕೆಜಿಎಫ್‌ ಸಿನಿಮಾ ತಲೆ ಬುಡವಿಲ್ಲದ ಸಿನಿಮಾ ಎಂದು ಹೇಳಿದ್ದರು. ಹಾಗೆಯೇ ರಾಕಿ ಭಾಯ್‌ ಪಾತ್ರದಕ್ಕೂ ಕೂಡ ಗೌರವ ಕೊಡದೆ ಮಾತನಾಡಿದ್ದರು. ಈ ವಿಚಾರದಲ್ಲಿ ರಾಕಿ ಭಾಯ್‌ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ನಮ್ಮ ಕನ್ನಡದ ಸಿನಿಮಾ ಮಾತನಾಡಿದ್ದಕ್ಕೆ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದರು.  ‌

ಅಭಿಮಾನಿಗಳ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ವೆಂಕಟೇಶ್‌ ಮಹಾ ಅಧಿಕೃತವಾಗಿ ಕ್ಷಮೆ ಯಾಚಿಸಿದ್ದಾರೆ. “ನನ್ನ ಹೇಳಿಕೆಯಿಂದ ಅನೇಕರಿಗೆ ನೋವಾಗಿದೆ. ಭಾಷೆಯ ಬಗ್ಗೆ ಮಾತನಾಡಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ ಸಿನಿಮಾ ಬಗ್ಗೆ ಹೇಳಿರುವುದು ಕೇವಲ ನನ್ನ ಮಾತಲ್ಲ. ಹಲವರು ಸಿನಿಮಾ ಬಗ್ಗೆ ನೀಡಿದ ಅಭಿಪ್ರಾಯವನ್ನೇ ನಾನು ಹೇಳಿದ್ದೇನಷ್ಟೇ. ಆ ಸಿನಿಮಾ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ವಾಪಸು ಪಡೆಯುವುದಿಲ್ಲ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

South Cinema

Rashmika Mandanna: ʻದಿಯಾʼ ಹೀರೊ ಜತೆ ರಶ್ಮಿಕಾ ಮಂದಣ್ಣ ರೊಮ್ಹಾನ್ಸ್‌!

Rashmika Mandanna: ರಶ್ಮಿಕಾ ಮಂದಣ್ಣ ‘ಅನಿಮಲ್’ ಸಿನಿಮಾ ಸಕ್ಸೆಸ್‌ ಅಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಬಗ್ಗೆಯೂ ಚರ್ಚೆ ಆಗುತ್ತಿದೆ. ಇದೀಗ ರಶ್ಮಿಕಾ ‘ದಿ ಗರ್ಲ್‌ಫ್ರೆಂಡ್’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

VISTARANEWS.COM


on

Rashmika Mandanna and Dheekshith Shetty
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ‘ದಿ ಗರ್ಲ್‌ಫ್ರೆಂಡ್’ ಎಂಬ ರೋಮಾಂಚಕ ಪ್ರೇಮಕಥೆಯಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಏಳು ವರ್ಷಗಳ ವೃತ್ತಿಜೀವನದಲ್ಲಿ ಇದು ನಟಿಯ 24ನೇ ಚಿತ್ರವಾಗಿದೆ. ‘ದಿ ಗರ್ಲ್‌ಫ್ರೆಂಡ್’ ರಶ್ಮಿಕಾ ಅವರ ಸೋಲೊ ಸಿನಿಮಾ ಎನ್ನಲಾಗಿದೆ. ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಕನ್ನಡದ ‘ದಿಯಾ’ ಚಿತ್ರದಲ್ಲಿ ನಟಿಸಿ ಗೆದ್ದಿದ್ದ ನಟ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನ ‘ದಸರಾ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟ ನಾನಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ‘ಅನಿಮಲ್’ ಸಿನಿಮಾ ಸಕ್ಸೆಸ್‌ ಅಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಬಗ್ಗೆಯೂ ಚರ್ಚೆ ಆಗುತ್ತಿದೆ. ಇದೀಗ ರಶ್ಮಿಕಾ ‘ದಿ ಗರ್ಲ್‌ಫ್ರೆಂಡ್’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ರಾಹುಲ್ ರವೀಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ದೀಕ್ಷಿತ್ ಶೆಟ್ಟಿ ಅವರು ಕನ್ನಡದಲ್ಲಿ ‘ಬ್ಲಿಂಕ್’, ‘ಕೆಟಿಎಂ’, ‘ಶೀಘ್ರವೇಮ ಕಲ್ಯಾಣ ಪ್ರಾಪ್ತಿರಸ್ತು’, ‘ಸ್ಟ್ರಾಬೆರಿ’ ಹಾಗೂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. 15 ದಿನಗಳ ಹಿಂದೆಯಷ್ಟೆ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಿದೆ. ಮೊದಲ ದಿನ ದೀಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

Rashmika Mandanna romance with Diya hero Dheekshith Shetty

ಇದನ್ನೂ ಓದಿ: Rashmika Mandanna: ನೀರಿನಲ್ಲಿ ಮುಳುಗಿದ ರಶ್ಮಿಕಾ; ‘ದಿ ಗರ್ಲ್‌ಫ್ರೆಂಡ್’ ಫಸ್ಟ್‌ ಲುಕ್‌ ಔಟ್‌!

ಗೀತಾ ಆರ್ಟ್ಸ್ ಅವರ 51ನೇ ಸಿನಿಮಾವಿದು. ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಶೀಘ್ರದಲ್ಲೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ ಎಂದು ವದಂತಿಗಳಿವೆ.

Continue Reading

South Cinema

Bigg Boss Telugu 7: ಬಿಗ್‌ ಬಾಸ್‌ ತೆಲುಗು ವೇದಿಕೆಯಲ್ಲಿ ಕನ್ನಡ ಮಾತನಾಡಿದ ಆಶಿಕಾ ರಂಗನಾಥ್‌!

Bigg Boss Telugu 7: ನಟಿ ಆಶಿಕಾ ರಂಗನಾಥ್‌ ಅವರು ಬಿಗ್‌ ಬಾಸ್‌ ವೇದಿಕೆಯಲ್ಲಿ ಮುಖ್ಯ ಅತಿಯಾಗಿ ಭಾಗಿಯಾಗಿದ್ದರು. ಆಶಿಕಾ ಜತೆ ಶೋಭಾ ಶೆಟ್ಟಿ ಅವರು ಕನ್ನಡದಲ್ಲಿ ಮಾತನಾಡಿರುವುದು ಸಖತ್‌ ವೈರಲ್‌ ಆಗಿದೆ. ಅಮರ್‌ದೀಪ್‌ಗೆ ಫ್ಲೈ ಕಿಸ್‌ ಕೊಟ್ಟಿದ್ದಾರೆ ಆಶಿಕಾ.

VISTARANEWS.COM


on

Ashika Ranganath spoke Kannada on the Bigg Boss Telugu stage
Koo

ಬೆಂಗಳೂರು: ಬಿಗ್ ಬಾಸ್ ತೆಲುಗು (Bigg Boss Telugu 7) ಸೀಸನ್ 7 ಶೋನಲ್ಲಿ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ (Shobha Shetty) ಅವರು ಸ್ಪರ್ಧಿಯಾಗಿದ್ದಾರೆ. ಶೋಭಾ ಅವರು ಬಿಗ್‌ ಬಾಸ್‌ ಮೂಲಕ ಸಖತ್‌ ಸುದ್ದಿಯಾಗಿದ್ದಾರೆ. ಮಾತ್ರವಲ್ಲ ಅದೇ ವೇದಿಕೆಯಲ್ಲಿ ಅವರ ಬಾಯ್‌ಫ್ರೆಂಡ್‌ ಯಾರು ಎಂಬುದು ಈ ಮುಂಚೆ ರಿವೀಲ್‌ ಆಗಿತ್ತು. ಇದೀಗ ನಟಿ ಆಶಿಕಾ ರಂಗನಾಥ್‌ ಅವರು ಬಿಗ್‌ ಬಾಸ್‌ ವೇದಿಕೆಯಲ್ಲಿ ಮುಖ್ಯ ಅತಿಯಾಗಿ ಭಾಗಿಯಾಗಿದ್ದರು. ಆಶಿಕಾ ಜತೆ ಶೋಭಾ ಶೆಟ್ಟಿ ಅವರು ಕನ್ನಡದಲ್ಲಿ ಮಾತನಾಡಿರುವುದು ಸಖತ್‌ ವೈರಲ್‌ ಆಗಿದೆ. ಅಮರ್‌ದೀಪ್‌ಗೆ ಫ್ಲೈ ಕಿಸ್‌ ಕೊಟ್ಟಿದ್ದಾರೆ ಆಶಿಕಾ.

ಈ ಬಾರಿ ಬಿಗ್‌ ಬಾಸ್‌ ತೆಲುಗುವಿನಲ್ಲಿ ಕನ್ನಡ ಹೆಚ್ಚಾಗಿ ಕೇಳಿ ಬರುತ್ತಿದೆ ಎಂದರೆ ಅದಕ್ಕೆ ಶೋಭಾ ಅವರೇ ಕಾರಣ. ಈ ಬಾರಿ ನಟಿ ಆಶಿಕಾ ರಂಗನಾಥ್‌ ಕೂಡ ಮುಖ್ಯ ಅತಿಥಿಯಾಗಿ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊ ಕೂಡ ಸಖತ್‌ ವೈರಲ್‌ ಆಗಿದೆ. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಕನ್ನಡತಿ ಆಶಿಕಾ ರಂಗನಾಥ್ ಅವರು ಈಗ ನಾಗಾರ್ಜುನ ಅಭಿನಯದ ‘ನಾ ಸಾಮಿರಂಗ’ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.

‘ಬಿಗ್ ಬಾಸ್’ ವೇದಿಕೆ ಮೇಲೆ ಆಶಿಕಾ ರಂಗನಾಥ್ ಅವರನ್ನು ಕಂಡ ಸ್ಪರ್ಧಿಗಳು ಖುಷಿಯಾದರು. ನಾಗಾರ್ಜುನ ಅವರು, ‘ನಮ್ಮ ನಾಯಕಿಗೆ ಎಷ್ಟು ಮಾರ್ಕ್ಸ್ ಕೊಡುತ್ತೀರಿ’ ಎಂದು ಸ್ಪರ್ಧಿ ಅಮರ್‌ಗೆ ಕೇಳಿದರು. ಅದಕ್ಕೆ ಅವರು, ‘100ಕ್ಕೆ 1000 ಮಾರ್ಕ್ಸ್‌ ಕೊಡುತ್ತೇನೆ ಸರ್‌’ ಎಂದು ಹೇಳಿದರು. ಮತ್ತೆಲ್ಲ ಸ್ಪರ್ಧಿಗಳು ಆಶಿಕಾ ಅವರನ್ನು ಕಂಡು ಹಾಡಿ ಹೊಗಳಿದ್ದಾರೆ. ಒಬ್ಬ ಸ್ಪರ್ಧಿ ʻʻಆಶಿಕಾ ಅವರು ನೋಡಲು ತೆಲುಗು ಹುಡುಗಿ ತರ ಇದ್ದಾರೆʼʼಎಂದರು. ನಾಗಾರ್ಜುನ್‌ ಕೂಡ ಶೋಭಾ ಜತೆ ಮಾತನಾಡಿಸುತ್ತೇನೆ ಎಂದು ಮಾತನಾಡಿದರು. ಆಗ ಆಶಿಕಾ ಮತ್ತು ಶೋಭಾ ಅವರು ಕನ್ನಡದಲ್ಲಿಯೇ ಮಾತನಾಡಿದರು.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

ಆಗ ಶೋಭಾ ಅವರು ʻʻಆಶಿಕಾ ತೆಲುಗು ಹುಡುಗಿ ತರವೇ ಇದ್ದಾರೆ ಹಾಗೂ ಕನ್ನಡ ಹುಡುಗಿಯಂತೆಯೂ ಇದ್ದಾರೆʼʼಎಂದರು. ವಿಶೇಷವೆಂದರೆ ಟಾಪ್ 5 ಸ್ಪರ್ಧಿಗಳಲ್ಲಿ ಶೋಭಾ ಶೆಟ್ಟಿ ಕೂಡ ಒಬ್ಬರು. ಶೋಭಾ ಶೆಟ್ಟಿ ಅವರು ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರ ತಂಗಿ ತನು ಪಾತ್ರವನ್ನು ನಿಭಾಯಿಸುತ್ತಿದ್ದರು.

‘ನಾ ಸಾಮಿ ರಂಗ’ ಚಿತ್ರವನ್ನು ವಿಜಯ್ ಬಿನ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಚಿತ್ತುರಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ಅವರನ್ನು ನಾಯಕಿಯನ್ನಾಗಿ ಮಾಡಿಕೊಳ್ಳುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ.ಸಾಕಷ್ಟು ಸಿನಿಮಾಗಳಲ್ಲಿ ನಟಿ ತೊಡಗಿಗೊಂಡಿದ್ದು ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದನ್ನು ಹೊರತುಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸಿದ್ದಾರೆ. ಶರಣ್​ ಜತೆ ಅವರು ನಟಿಸಿದ ‘ರ‍್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತೈತಿ..’ ಹಾಡಿಗೆ ಸಾಕಷ್ಟು ಖ್ಯಾತಿ ಗಳಿಸಿದರು.

Continue Reading

South Cinema

Santosham Awards 2023: ಚಿರಂಜೀವಿ ಪಿಆರ್‌ಒ ಸುರೇಶ್‌ರಿಂದ ಕನ್ನಡ ಸ್ಟಾರ್ಸ್‌ಗೆ ಅವಮಾನ!

Santosham Awards 2023: ಸುರೇಶ್ ಗೋವಾದಲ್ಲಿ ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಈ ರೀತಿ ಮೋಸವಾಗಿರುವ ಕಾರಣಗಳಿಂದಾಗಿ ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಕನ್ನಡದ ಸ್ಟಾರ್ಸ್‌ ತೆರಳಿದ್ದಾರೆ.

VISTARANEWS.COM


on

Chiranjeevi PRO Suresh Kondeti Shame on Kannada Stars
Koo

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಪಿಆರ್‌ಒ ಸುರೇಶ್ ಕೊಂಡೇಟಿಯಿಂದ ಕನ್ನಡದ ತಾರೆಯರಿಗೆ ದೊಡ್ಡ ಅವಮಾನವಾಗಿದೆ. ಸಂತೋಷಂ ಅವಾರ್ಡ್ಸ್ (Santosham Awards 2023) ನೀಡಲು ಕನ್ನಡ ಸ್ಟಾರ್ಸ್‌ಗೆ ಗೋವಾಗೆ ಆಹ್ವಾನ ನೀಡಿದ್ದರು ಸುರೇಶ್‌. ಗೋವಾದಲ್ಲಿ ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಾಂತಿ ಸಿನಿಮಾಗೆ ಅವಾರ್ಡ್ ನೀಡುತ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಕೂಡ ಆಗಿದ್ದು, ಆಯೋಜನೆಯಲ್ಲಿ ಮಹಾ ಎಡವಟ್ಟು ಸಂಭವಿಸಿದೆ.

ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಈ ರೀತಿ ಮೋಸವಾಗಿರುವ ಕಾರಣಗಳಿಂದಾಗಿ ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಕನ್ನಡದ ಸ್ಟಾರ್ಸ್‌ ತೆರಳಿದ್ದಾರೆ. ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಸೇರಿದಂತೆ ಸುಮಾರು 30ರಿಂದ 35 ಮಂದಿ ಕನ್ನಡದ ಸ್ಟಾರ್ಸ್‌ಗಳು ಭಾಗಿಯಾಗಿದ್ದರು ಎನ್ನಲಾಗಿದೆ.

ತಮಿಳು ತಾರೆಯರು ಕೂಡ ಸಂತೋಷಂ ಫಿಲ್ಮ್ ಅವಾರ್ಡ್ಸ್ ನಲ್ಲಿ ಭಾಗಿಯಾಗದಿರಲು ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ. ರಿಯಾಜ್‌ ಎನ್ನುವರು ಟ್ವೀಟ್‌ನಲ್ಲಿ, ಕಾಲಿವುಡ್‌ ತಾರೆಯರಿಗೆ ಟಿಕೆಟ್‌ವನ್ನು ಸುರೇಶ್‌ ಅವರು ಕೊಡದೇ ಇರುವ ಕಾರಣ, ಸಂತೋಷಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಏರ್ ಪೋರ್ಟ್‌ಗೆ ಕನ್ನಡದ ಸ್ಟಾರ್ಸ್‌ಗಳು ಆಗಮಿಸಲಿದ್ದಾರೆ.

ಇದನ್ನೂ ಓದಿ: Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

ಸುರೇಶ್ ಕೊಂಡೇಟಿ ಒಡೆತನದ ಸಂತೋಷಂ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ಟಾಲಿವುಡ್ ಮತ್ತು ಇತರ ಭಾರತೀಯ ಭಾಷೆಯ ಚಲನಚಿತ್ರಗಳಿಗೆ ಗೌರವ ನೀಡುವ ಪ್ರಶಸ್ತಿ ಇದಾಗಿದೆ. ನಟರಿಗೆ ಮಾತ್ರವಲ್ಲದೆ ಒಟಿಟಿ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ನೀಡುತ್ತ ಬರುತ್ತಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Continue Reading

South Cinema

Ram Charan: ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದ ರಾಮ್​ ಚರಣ್​!

Ram Charan: ‘ಗೇಮ್​ ಚೇಂಜರ್​’ ಸಿನಿಮಾದ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಅವರು ಸಣ್ಣ ಬ್ರೇಕ್​ ಪಡೆದುಕೊಂಡಿದ್ದರು.

VISTARANEWS.COM


on

am charan visits Chamundeshwari Temple Mysuru
Koo

ಮೈಸೂರು: ಟಾಲಿವುಡ್‌ ನಟ ರಾಮ್‌ಚರಣ್‌ ಅವರು ಡಿಸೆಂಬರ್​ 3ರಂದು ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ‘ಗೇಮ್​ ಚೇಂಜರ್​’ (Ram Charan) ಸಿನಿಮಾದ ಶೂಟಿಂಗ್​ ಸಲುವಾಗಿ ರಾಮ್​ ಚರಣ್​ ಅವರು ಹಲವು ದಿನಗಳಿಂದ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ‘ಗೇಮ್​ ಚೇಂಜರ್​’ ಸಿನಿಮಾದ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಅವರು ಸಣ್ಣ ಬ್ರೇಕ್​ ಪಡೆದುಕೊಂಡಿದ್ದರು. ನವೆಂಬರ್​ 30ರಂದು ಮತದಾನ ಮಾಡಿದ ಬಳಿಕ ಅವರು ಮೈಸೂರಿಗೆ ವಾಪಸಾಗಿದ್ದರು.

ಇದೀಗ ರಾಮ್‌ಚರಣ್‌ ಅವರು ಚಿತ್ರತಂಡದೊಂದಿಗೆ ದೇವಾಲಯಕ್ಕೆ ಆಗಮಿಸಿ ನಾಡಿನ ಅಧಿದೇವತೆ ದರ್ಶನ ಪಡೆದಿದ್ದಾರೆ. ಮಾರ್ಚ್‌ 27ರ ಬೆಳಗ್ಗೆ RC 15 ಗೇಮ್ ಚೇಂಜರ್‌ ಎಂದು ಶಿರ್ಷಿಕೆ ಅನಾವರಣ ಮಾಡಿತ್ತಿ. ಚಿತ್ರತಂಡ ಟೈಟಲ್‌ ಟೀಸರ್‌ ಕೂಡ ಹಂಚಿಕೊಂಡಿತ್ತು. 2019 ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Ram Charan: ಈಜುಕೊಳದಲ್ಲಿ ರಾಮ್‌ಚರಣ್‌ ಮಗಳ ಪ್ರತಿಬಿಂಬ; ಇಟಲಿಯಲ್ಲಿದೆ ಮೆಗಾ ಕುಟುಂಬ!

ಬುಚ್ಚಿ ಬಾಬು ಸನಾ ಜತೆ ಕೈ ಜೋಡಿಸಿದ ರಾಮ್‌ಚರಣ್‌

ನಟ ರಾಮ್ ಚರಣ್ (Ram Charan) ಅವರ ಮುಂದಿನ ಚಿತ್ರ ಸೂಪರ್ ಹಿಟ್ ‘ಉಪ್ಪೆನ’ ಸಿನಿಮಾ ನೀಡಿದ್ದ ನಿರ್ದೇಶಕ (Uppena director Buchi Babu Sana) ಬುಚ್ಚಿ ಬಾಬು ಸನಾ(Buchi Babu Sana) ಅವರೊಂದಿಗೆ ಎಂಬುದು ವರದಿಯಾಗಿದೆ. ಮುಂದಿನ ವರ್ಷ ಜನವರಿಯಲ್ಲಿ ಬುಚ್ಚಿ ಬಾಬು ಸನಾ ಮತ್ತು ರಾಮ್ ಚರಣ್ ತಮ್ಮ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಚಿತ್ರದ ತಾರಾಬಳಗಕ್ಕೆ ಸಂಬಂಧಿಸಿದಂತೆ ಇನ್ನಷ್ಟು ರೋಚಕ (Ram Charan and Vijay Sethupathi) ಸುದ್ದಿ ಹೊರಬೀಳುತ್ತಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಸೇತುಪತಿ ಈಗಾಗಲೇ ದೇಶದ ಪ್ರಮುಖ ಸ್ಟಾರ್ ನಟರ ಎದುರು (Ramcharan upcoming project) ಖಳನಾಗಿ ಅಬ್ಬರಿಸಿದ್ದಾರೆ. ದಳಪತಿ ವಿಜಯ್‌ನಿಂದ ಶಾರುಖ್ ಖಾನ್, ಕಮಲ್ ಹಾಸನ್, ರಜನಿಕಾಂತ್ ಈ ಎಲ್ಲಾ ಸೂಪರ್‌ಸ್ಟಾರ್‌ಗಳ ಜತೆಗೆ ಕೆಲಸ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ ನಾಯಕ ಮತ್ತು ಖಳನಾಯಕರಾಗಿ ರಾಮ್ ಚರಣ್ ಮತ್ತು ವಿಜಯ್ ಸೇತುಪತಿ ಅವರನ್ನು ನೋಡುವುದು ಸಕತ್ ಅನುಭವವೆ ಆಗಿದೆ. ಈ ಹೊಸ ಸಿನಿಮಾದ ಮತ್ತೊಂದು ಮಾಹಿತಿ ಎಂದರೆ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುವ ನಿರೀಕ್ಷೆ ಇದೆ. ಸಿನಿಮಾಗೆ ಘಟಾನುಘಟಿಗಳ ದಂಡು ಒಂದಾಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

Continue Reading
Advertisement
Vistara News impact, Governmet to scrap 7 d rule of SCSP and TSP act
ಕರ್ನಾಟಕ5 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್5 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್5 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ6 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check6 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20237 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ7 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ7 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ7 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Vistara Top 10 News 7-12
ಕರ್ನಾಟಕ7 hours ago

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ10 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ11 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ16 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ23 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 days ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌