Kabzaa Movie: ಕಬ್ಜ ಸೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌: ಸಿನಿಮಾದಲ್ಲಿದ್ದಾರ ನಟ? ವಿಡಿಯೊ ವೈರಲ್‌! - Vistara News

ಸಿನಿಮಾ

Kabzaa Movie: ಕಬ್ಜ ಸೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌: ಸಿನಿಮಾದಲ್ಲಿದ್ದಾರ ನಟ? ವಿಡಿಯೊ ವೈರಲ್‌!

ಪುನೀತ್‌ ರಾಜ್‌ಕುಮಾರ್‌ ಅವರು ಕಬ್ಜ ಸಿನಿಮಾದ (Kabzaa Movie) ಸೆಟ್‌ಗೆ ಭೇಟಿ ಕೊಟ್ಟು ನಿರ್ದೇಶಕ ಆರ್.ಚಂದ್ರು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಪುನೀತ್‌ ಅವರು ಸೆಟ್‌ಗೆ ಭೇಟಿ ಕೊಟ್ಟಿರುವ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪುನೀತ್‌ ಬಾಸ್‌ ಸಿನಿಮಾದಲ್ಲಿ ಇರಬಹುದಾ? ಎಂದು ಪುನೀತ್‌ ಅಭಿಮಾನಿಗಳು ಟ್ವೀಟ್‌ ಮಾಡುತ್ತಿದ್ದಾರೆ.

VISTARANEWS.COM


on

Puneeth Rajkumar On Kabzaa Movie Set
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರವಾದ ಕಬ್ಜ ಸಿನಿಮಾ (Kabzaa Movie) ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಆರ್. ಚಂದ್ರು ಅವರ ನಿರ್ದೇಶನವಿರುವ ಈ ಸಿನಿಮಾ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಾದ ಮಾರ್ಚ್‌ 17ರಂದೇ ತೆರೆ ಕಾಣಲಿದೆ. ಇದೀಗ ಪುನೀತ್‌ ರಾಜ್‌ಕುಮಾರ್‌ ಅವರು ಕಬ್ಜ ಸೆಟ್‌ಗೆ ಭೇಟಿ ಕೊಟ್ಟ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪುನೀತ್‌ ರಾಜ್‌ಕುಮಾರ್‌ ಅವರು ಕಬ್ಜ ಸಿನಿಮಾದ ಸೆಟ್‌ಗೆ ಭೇಟಿ ಕೊಟ್ಟು ನಿರ್ದೇಶಕ ಆರ್.ಚಂದ್ರು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಪುನೀತ್‌ ಅವರು ಸೆಟ್‌ಗೆ ಭೇಟಿ ಕೊಟ್ಟಿರುವ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪುನೀತ್‌ ಬಾಸ್‌ ಸಿನಿಮಾದಲ್ಲಿ ಇರಬಹುದಾ? ಎಂದು ಪುನೀತ್‌ ಅಭಿಮಾನಿಗಳು ಟ್ವೀಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Kabzaa Trailer: ಕಬ್ಜ ಟ್ರೈಲರ್‌ ಬಿಡುಗಡೆ: ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ರಿಯಲ್‌ ಸ್ಟಾರ್‌!

ಕೆಜಿಎಫ್, ಕಾಂತಾರಾ ಸಿನಿಮಾಗಳಂತೆಯೇ ಕಬ್ಜ ಕೂಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ವಿಶ್ವಾದ್ಯಂತ ಒಟ್ಟು 4000 ತೆರೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಕಬ್ಜ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ವಿತರಣಾ ಹಕ್ಕನ್ನು ಲೈಕಾ ಪ್ರೊಡಕ್ಷನ್‌ ಸಂಸ್ಥೆ ಹಲವಾರು ಕೋಟಿ ರೂ. ಕೊಟ್ಟು ಖರೀದಿಸಿದೆ.

ವಿಡಿಯೊ ಇಲ್ಲಿದೆ

‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Sonu Srinivas Gowda: ಸಿಕ್ಕಾಪಟ್ಟೆ ಸೊಳ್ಳೆ ಕಾಟ ಇತ್ತು ಎಂದು ಜೈಲಿನ ಅನುಭವ ಹಂಚಿಕೊಂಡ ಸೋನು ಗೌಡ!

Sonu Srinivas Gowda: ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೈಲಿನಲ್ಲಿ ಏನಾಯಿತು? ಜೈಲಿನ ಅನುಭವ ಹೇಗಿತ್ತು ಎನ್ನುವುದನ್ನು ಯುಟ್ಯೂಬ್‌ ಮೂಲಕ ವಿವರಿಸಿದ್ದಾರೆ. ಜೈಲಿಗೆ ಹೋಗಿದ ಕೂಡಲೇ ಬಹಳ ಕೆಟ್ಟ ಅನುಭವ ಆಯ್ತು. ನಾಲ್ಕು ಗೋಡೆ ಮಧ್ಯೆ ಇದ್ದೆ ಎಂದು ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ಸೋನು ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇ ಪದೇ ಟ್ರೋಲ್‌ ಆಗಲು ಮೂಲ ಕಾರಣವಾಗಿತ್ತು.

VISTARANEWS.COM


on

Sonu Srinivas Gowda shares Jail Experience
Koo

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಬಂಧನವಾಗಿದ್ದ ʻಬಿಗ್‌ಬಾಸ್‌ ಒಟಿಟಿ ಸೀಸನ್‌-1ʼರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) 11 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಇದಾದ ಮೇಲೆ ಅವರ ಫ್ಯಾನ್ಸ್‌ ಸೋನು ಗೌಡ (Sonu Gowda in Jail experience) ತುಂಬ ಸೈಲೈಂಟ್‌ ಆಗಿ ಬಿಟ್ಟಿದ್ದಾರೆ ಎಂದು ನಟಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲು ಶುರು ಮಾಡಿದರು. ಇದೀಗ ಸೋನು ಮತ್ತೆ ದರ್ಶನ ಕೊಟ್ಟಿದ್ದಾರೆ. ಜೈಲಿನಲ್ಲಿ ಏನಾಯಿತು? ಜೈಲಿನ ಅನುಭವ ಹೇಗಿತ್ತು ಎನ್ನುವುದನ್ನು ಯುಟ್ಯೂಬ್‌ ಮೂಲಕ ವಿವರಿಸಿದ್ದಾರೆ.

ಸೋನು ಗೌಡ ಜೈಲಿನ ಅನುಭವ ಹಂಚಿಕೊಂಡು ʻʻಆರಂಭದಲ್ಲಿ ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದರು. ಬಳಿಕ ನನ್ನನ್ನು ಜೈಲಿಗೆ ಹಾಕಿದರು. ಜೈಲಿಗೆ ಹೋಗಿದ ಕೂಡಲೇ ಬಹಳ ಕೆಟ್ಟ ಅನುಭವ ಆಯ್ತು. ನಾಲ್ಕು ಗೋಡೆ ಮಧ್ಯೆ ಇದ್ದೆ. ಅಲ್ಲಿರುವ ಜನಗಳು, ಅದೆಲ್ಲ ನೋಡಿ ಯಾಕೆ ಬೇಕಿತ್ತು ಎಂದು ಅನ್ನಿಸಿತು. ಬೇರೆ ಎಲ್ಲ ಪಾತಕ ಕೃತ್ಯ ಮಾಡಿದವರ ಜತೆ ನಾನು ಇದ್ದೆ ಎಂದು ಒಂದು ಕ್ಷಣ ಬೇಸರವಾಯ್ತು. ಮೂರು ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. 3-4 ನಿಮಿಷ ಮಾತನಾಡಲು ಮೂರು ದಿನ ಕಾಯಬೇಕು. ಇದರಿಂದ ವ್ಯಕ್ತಿಯ ಬೆಲೆ ಎಷ್ಟು ಎನ್ನುವುದು ಗೊತ್ತಾಯಿತು’ ಎಂದಿದ್ದಾರೆ ಸೋನು ಗೌಡ.

ಇದನ್ನೂ ಓದಿ: Sonu Srinivas Gowda: ಪರಪ್ಪನ ಅಗ್ರಹಾರ ಜೈಲಿನಿಂದ ರೀಲ್ಸ್ ರಾಣಿ ಸೋನು ಗೌಡ ಬಿಡುಗಡೆ

ʻʻಟ್ರೋಲ್‌ ಪೇಜ್‌ಗಳು ನನಗೆ ತುಂಬ ಸಪೋರ್ಟ್‌ ಮಾಡಿದವು. ಇದಾದ ಬಳಿಕ ಹೊರ ಬಂದ ಮೇಲೆ ಫೋನ್‌ ನೋಡಿಲ್ಲ. ನನ್ನದು ಸಣ್ಣ ಸರ್ಕಲ್‌. ನನ್ನ ಅಣ್ಣ ಎಲ್ಲರೂ ನನ್ನ ಜತೆ ನಿಂತರು. ನನ್ನ ಪ್ರಕರಣದ ಬಗ್ಗೆ ಹೆಚ್ಚಿನದ್ದನ್ನು ಹೇಳೋಕೆ ಆಗಲ್ಲ. ಈಗ ನಾನು ಆರಾಮದಾಯಕವಾಗಿ ಹೊರಗಡೆ ಓಡಾಡುತ್ತಿದ್ದೇನೆ. ರೀಲ್ಸ್‌ ಮಾಡುತ್ತೇನೆ. ನಿಮ್ಮ ಸಪೋರ್ಟ್‌ ನನಗೆ ಬೇಕು. ಜೈಲಿನಲ್ಲಿ ತುಂಬ ಸೊಳ್ಳೆ ಇರ್ತಿತ್ತು. ಅದು ಬಹಳ ಕಷ್ಟವಾಗಿತ್ತು. 24 ವಯಸ್ಸಿನಲ್ಲಿ ಇದೆಲ್ಲ ನೋಡಿ ಬಿಟ್ಟೆ ಎನ್ನುವ ಬೇಜಾರು ಅಷ್ಟೇ ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಹಿಂದೊಮ್ಮೆ ಸೋನು ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇ ಪದೇ ಟ್ರೋಲ್‌ ಆಗಲು ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸಕ್ಕೆ ಹೋದರು. ಅಲ್ಲಿನ ಬೀಚ್‌ನಲ್ಲಿ ಬಿಂದಾಸ್‌ ಆಗಿ ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದರು. ಒಳ ಉಡುಪು ತೊಟ್ಟು, ಹಾಟ್‌ ಆಗಿ ಪೋಸ್ ನೀಡಿದ್ದ ಬೆನ್ನಲ್ಲೇ ಇದೀಗ ಬಿಕಿನಿ ವಿಡಿಯೊ ಶೇರ್‌ ಮಾಡಿಕೊಂಡಿದ್ದರು.

Continue Reading

ಸಿನಿಮಾ

Salman Khan: ಬಿಡಿಗಾಸೂ ಕೈಯಲ್ಲಿ ಇಲ್ಲದೇ ಇದ್ದಾಗ ಸಲ್ಮಾನ್‌ ಖಾನ್‌ ಸಹೋದರಿಯನ್ನು ಮದುವೆಯಾಗಿದ್ರಂತೆ ಈ ನಟ!

Salman Khan: ಅರ್ಪಿತಾ ಖಾನ್ ಮದುವೆಯಾಗುವಾಗ ಆಯುಷ್ ಶರ್ಮಾ ಅವರಿಗೆ ಕೇವಲ 24 ವರ್ಷ ವಯಸ್ಸು. ಆ ಸಮಯದಲ್ಲಿ ಆಯುಷ್ ಶರ್ಮಾ ಅವರಿಗೆ ಯಾವುದೇ ಆದಾಯ ಇರಲಿಲ್ಲ. ಆಯುಷ್ ಶರ್ಮಾ ಅವರ ತಂದೆ ತಾಯಿ ಶ್ರೀಮಂತ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದವರು. ಹಲವು ಸಮಸ್ಯೆಗಳನ್ನು ಎದುರಿಸಿ ಕುಟುಂಬದ ಒಪ್ಪಿಗೆ ಮೇರೆಗೆ ಅರ್ಪಿತಾ ಮತ್ತು ಆಯುಷ್ 2014ರಲ್ಲಿ ವಿವಾಹವಾದರು.

VISTARANEWS.COM


on

Salman khan Aayush Sharma recalls his father words marry Arpita
Koo

ಬೆಂಗಳೂರು: ನಟ ಸಲ್ಮಾನ್‌ ಖಾನ್‌ (Salman Khan) ಸಹೋದರಿ ಅರ್ಪಿತಾ ಖಾನ್ (Arpita Khan) ಅವರನ್ನು ನಟ ಆಯುಷ್ ಶರ್ಮಾ (Aayush Sharma) ಮದುವೆಯಾಗಿರುವುದು ಗೊತ್ತೇ ಇದೆ. ನಟ ಆಯುಷ್ ಶರ್ಮಾ ಅವರಿಗೆ ಆಗ ಕೇವಲ 24 ವರ್ಷ ವಯಸ್ಸು. ಆ ಸಮಯದಲ್ಲಿ ಆಯುಷ್ ಶರ್ಮಾ ಅವರಿಗೆ ಯಾವುದೇ ಆದಾಯ ಇರಲಿಲ್ಲ. ಆಯುಷ್ ಶರ್ಮಾ ಅವರ ತಂದೆ ತಾಯಿ ಶ್ರೀಮಂತ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದವರು. ಹೀಗಾಗಿ ಆಯುಷ್ ಶರ್ಮಾ ಅವರು ತಾವು ಒಂದು ಹಂತಕ್ಕೆ ಹೋಗುವವರೆಗೆ ಅರ್ಪಿತಾ ಖಾನ್ ಅವರ ಒಟ್ಟೂ ಖರ್ಚುಗಳನ್ನು ತಂದೆ ತಾಯಿಯೇ ನೋಡಿಕೊಳ್ಳಬೇಕು ಎಂದು ಹೇಳಿದ್ದರಂತೆ. ಈ ಬಗ್ಗೆ ಆಯುಷ್ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಆಯುಷ್‌ ಶರ್ಮಾ ಮಾತನಾಡಿ ʻʻನನ್ನ ತಂದೆ ತಾಯಿಗೆ ಅರ್ಪಿತಾಳನ್ನು ಮದುವೆಯಾಗುತ್ತಿದ್ದೇನೆ ಎಂದಾಗ ಅವರು ಶಾಕ್‌ ಆದರು. ಯಾಕಂದರೆ ಅರ್ಪಿತಾ ಸ್ಟೇಟಸ್‌ ಏನು? ನಮ್ಮದೇನು? ಎಂಬ ಭಯ ಅವರಲ್ಲಿ ಆವರಿಸಿತ್ತು. ಮಾತ್ರವಲ್ಲ ಅರ್ಪಿತಾಳ ಖರ್ಚನ್ನು ನಾವು ಹೇಗೆ ನಿಭಾಯಿಸೋದು ಎಂಬ ಆತಂಕ ಅವರಲ್ಲಿ ಆವರಿಸಿತ್ತುʼʼ ಎಂದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಮುಂದೆ ಲಾಠಿಚಾರ್ಜ್; ಮನೆ ಹೊರಗೆ ಜನಸಾಗರ!

ಮಾತು ಮುಂದುವರಿಸಿ ʻನನ್ನ ತಂದೆ ಭಯದಿಂದ ಈ ರೀತಿ ನನ್ನ ಬಳಿ ಕೇಳಿದರು. ನೀನು ಏನೂ ಕೆಲಸ ಮಾಡುತ್ತಿಲ್ಲ. ಹಣ ಕೂಡ ಗಳಿಸುತ್ತಿಲ್ಲ. ಅದರ ಮೇಲೆ ಶ್ರೀಮಂತೆ ಹುಡುಗಿಯನ್ನು ಮದುವೆಯಾಗುತ್ತಿದ್ದೀಯಾ. ಅವಳ ಖರ್ಚುಗಳನ್ನು ಹೇಗೆ ನಿಭಾಯಿಸುತ್ತೀಯಾ?ಎಂದು ಪ್ರಶ್ನೆ ಇಟ್ಟರು. ಆಗ ನಾನು ನೀವು ಹಣ ನೀಡುತ್ತೀರಾ?ಎಂದು ಮರು ಪ್ರಶ್ನೆ ಇಟ್ಟೆ. ನನ್ನ ತಂದೆ ಮದುವೆಯಾಗುತ್ತಿರುವುದು ನೀವು! ಪ್ರೀತಿಸುತ್ತಿರುವುದು ನೀವು! ನಾನು ನಿಮ್ಮೆಲ್ಲ ಖರ್ಚುಗಳಿಗೆ ಬಿಲ್‌ ಕಟ್ಟಬೇಕೆ ಎಂದು ಕೇಳಿದ್ದರುʼʼ ಎಂದರು.

ʻʻಇದಾದ ಮೇಲೆ ನನ್ನ ತಂದೆ ಸಾಕಷ್ಟು ನಿರಾಳವಾಗಿದ್ದರೂ, ನನ್ನ ತಾಯಿ ಮಾತ್ರ ಚಿಂತಿತರಾಗಿದ್ದರು. ನಾನು ಆಮೇಲೆ ಅಮ್ಮನ ಬಳಿ ಕೇಳಿದ್ದು ಒಂದೇ. ನಾವು ರಾಜಕೀಯ ಕುಟುಂಬದಿಂದ ಬಂದವರು. ಅರ್ಪಿತಾ ಸಿನಿಮಾ ಕುಟುಂಬದಿಂದ ಬಂದಿದ್ದರಿಂದ ಎರಡೂ ಕುಟುಂಬಗಳು ಹೊಂದಾಣಿಕೆಯಾಗುತ್ತವೆಯೇ ಎಂದು. ಹೀಗೆ ನನ್ನ ಕುಟುಂಬವನ್ನು ಮನವೊಲಿಸಿ, ಸಲ್ಮಾನ್‌ ಅವರನ್ನು ನನ್ನ ಕುಟುಂಬಕ್ಕೆ ಪರಿಚಯಿಸಿ, ಅಂತೂ ಮದುವೆ ಮಾಡಿಕೊಂಡೆವು. ಇನ್ನೊಂದು ವಿಚಾರ ಹೇಳಲೇಬೇಕು. ಸಲ್ಮಾನ್‌ ಅವರನ್ನು ಪರಿಚಯಿಸಿದ ನಂತರ ನನ್ನ ತಾಯಿ ಸಲ್ಮಾನ್‌ ಅವರನ್ನು ನೋಡಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದರು. ಇಂದಿಗೂ ಆ ಕ್ಷಣ ಮರೆಯಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Salman Khan: ʻಈದ್‌ʼಗೆ ಗುಡ್‌ ನ್ಯೂಸ್‌ ಕೊಟ್ಟ ಸಲ್ಮಾನ್ ಖಾನ್!

ಆಯುಷ್ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಪಂಡಿತ್ ಸುಖ್ ರಾಮ್ ಅವರ ಮೊಮ್ಮಗ. ಅರ್ಪಿತಾ ಮತ್ತು ಆಯುಷ್ 2014ರಲ್ಲಿ ವಿವಾಹವಾದರು. ಈಗ ದಂಪತಿಗೆ ಎರಡು ಮಕ್ಕಳು. ಮಗಳು ಆಯತ್ ಮತ್ತು ಮಗ ಅಹಿಲ್ ಶರ್ಮಾರ ಫೋಟೊಗಳನ್ನು ಆಗಾಗ ಆಯುಷ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಸಿನಿಮಾ ವಿಚಾರಕ್ಕೆ ಬಂದರೆ ಆಯುಷ್ ಮುಂದೆ ʻರುಸ್ಲಾನ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

ಸ್ಯಾಂಡಲ್ ವುಡ್

Manvita Kamath: ‘ಟಗರು ಪುಟ್ಟಿʼಗೆ ಗಂಡು ಹುಡುಕಿದ್ದು ಯಾರು? ಮದುವೆ ಸ್ಥಳದ ಮಾಹಿತಿ ಇಲ್ಲಿದೆ ನೋಡಿ!

Manvita Kamath: ಮಾನ್ವಿತಾ ಅವರು ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟರು. ಬಳಿಕ ಶಿವಣ್ಣನ ʻಟಗರುʼ ಸಿನಿಮಾದಲ್ಲಿ ಬಣ್ಣ ಹಚ್ಚಿ ʻಟಗರು ಪುಟ್ಟಿʼಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು. ಇದೀಗ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮ್ಯೂಸಿಕ್‌ ಪ್ರೊಡ್ಯೂಸರ್‌ ಆಗಿ ಗುರುತಿಸಿಕೊಂಡಿರುವ ಅರುಣ್‌ ಕುಮಾರ್‌ ಅವರ ಜತೆಗೆ ಮಾನ್ವಿತಾ ಮದುವೆ ಆಗುತ್ತಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ಮೇ 1ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ.

VISTARANEWS.COM


on

Manvita Kamath
Koo

ಬೆಂಗಳೂರು: `ಕೆಂಡಸಂಪಿಗೆ‘ (kendasampige Cinema Kannada) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸೆಸ್‌ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್ (Manvita Kamath). ಆರ್ ಜೆಯಾಗಿದ್ದ ಮಾನ್ವಿತಾ ಅವರು ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟರು. ಬಳಿಕ ಶಿವಣ್ಣನ ʻಟಗರುʼ ಸಿನಿಮಾದಲ್ಲಿ ಬಣ್ಣ ಹಚ್ಚಿ ʻಟಗರು ಪುಟ್ಟಿʼಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು. ಈ ಸುಂದರಿ ಈಗ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇನ್ನು ವಿಶೇಷ ಅಂದರೆ ಮಾನ್ವಿತಾ ಅಮ್ಮ ಹುಡುಕಿದ ಹುಡುಗನನ್ನೇ ವರಿಸುತ್ತಿದ್ದಾರೆ ‘ಟಗರು ಪುಟ್ಟಿ’. ಅವರೇ ಅರುಣ್‌ ಕುಮಾರ್‌!

ಕಳೆದ ವರ್ಷ ನಟಿಗೆ ಮಾತೃ ವಿಯೋಗವಾಗಿತ್ತು. ಮಾನ್ವಿತಾ ಕಾಮತ್ ಅವರ ತಾಯಿ ಸುಜಾತಾ ಕಾಮತ್‌ ಮಗಳ ಮದುವೆ ನೋಡಬೇಕು ಎಂದು ಕನಸು ಕಂಡಿದ್ದರು. ಆದರೆ ಅದಾಗಲೇ ತಾಯಿ ಕಿಡ್ನಿ ವೈಫಲ್ಯದಿಂದಾಗಿ ಬಾರದ ಲೋಕಕ್ಕೆ ಹೋಗಿ ಬಿಟ್ಟರು. ತಾವು ಬದುಕಿದ್ದಾಗಲೇ ಮಗಳಿಗೆಂದು ಗಂಡು ಹುಡುಕುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಹೀಗಿರುವಾಗಲೇ ಅರುಣ್‌ ಕುಮಾರ್‌ ಅವರ ತಾಯಿ ಶಾಲಿನಿ ಅವರ ಜತೆ ಮಾತನಾಡಿ ವಾಟ್ಸ್‌ಆ್ಯಪ್‌ ಮೂಲಕ ಮಾನ್ವಿತಾ ಅವರ ಫೋಟೊ ರವಾನಿಸಿದ್ದರು. ಈಗ ಮಾನ್ವಿತಾ ಅವರು ಅರುಣ್‌ ಜತೆ ಮದುವೆಗೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: Manvita Kamath: ʻಟಗರು ಪುಟ್ಟಿʼಗೆ ಕಂಕಣ ಭಾಗ್ಯ ಕೂಡಿ ಬಂತು! ವರ ಯಾರು?

ಅರುಣ್‌ ಕುಮಾರ್‌ ಯಾರು?

ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮ್ಯೂಸಿಕ್‌ ಪ್ರೊಡ್ಯೂಸರ್‌ ಆಗಿ ಗುರುತಿಸಿಕೊಂಡಿರುವ ಅರುಣ್‌ ಕುಮಾರ್‌ ಅವರ ಜತೆಗೆ ಮಾನ್ವಿತಾ ಮದುವೆ ಆಗುತ್ತಿದ್ದಾರೆ. ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ (ಜಿಎಸ್‌ಬಿ ಸಂಪ್ರದಾಯದಂತೆ) ಮೇ 1ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ, ಏಪ್ರಿಲ್ 30 ಅರಿಶಿನ ಶಾಸ್ತ್ರ ಜರುಗಿದರೆ, ಏಪ್ರಿಲ್ 30ರಂದು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಚಿಕ್ಕಮಗಳೂರಿನ ಕಳಸದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ʼಚೌಕ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮಾನ್ವಿತಾ. ಸದ್ಯ ಕನ್ನಡ ಮತ್ತು ಮರಾಠಿಯಲ್ಲಿ ನಿರ್ಮಾಣವಾಗಿರುವ ʻರಾಜಸ್ತಾನ ಡೈರೀಸ್‌ʼ ಮತ್ತು ʻಹ್ಯಾಪಿಲಿ ಮ್ಯಾರೀಡ್‌ʼ ಸಿನಿಮಾಗಳಲ್ಲಿಯೂ ನಟಿಸಿದ್ದು, ತೆರೆಗೆ ಬರಬೇಕಿದೆ.

Continue Reading

ಸ್ಯಾಂಡಲ್ ವುಡ್

Dolly Dhananjay: ಡಾಲಿ ಧನಂಜಯ್‌ ಜತೆ ಕೊಡಗಿನ ಕನ್ನಡತಿ ರೊಮ್ಯಾನ್ಸ್‌!

Dolly Dhananjay: ಕೊಡಗಿನ ಕನ್ನಡತಿ ಮೋಕ್ಷಾ ಕುಶಾಲ್‌ ʻಕೋಟಿʼ ( Koti Movie Kannada) ಸಿನಿಮಾದಲ್ಲಿ ಡಾಲಿ ಧನಂಜಯ್‌ (Dolly Dhananjay) ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬದ ದಿನ ಕೋಟಿ ಚಿತ್ರದ ಟೈಟಲ್‌ ಬಿಡುಗಡೆಯಾಗಿತ್ತು. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷವಾಗಿತ್ತು. ʻಕೋಟಿʼ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿತ್ತು.

VISTARANEWS.COM


on

Dolly Dhananjay Kotee Movie Kannada Moksha Kushal heroine
Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್‌ (ಪರಮೇಶ್ವರ್‌ ಗುಂಡ್ಕಲ್‌) (parameshwar gundkal) ನಿರ್ದೇಶನದ ʻಕೋಟಿʼ ಸಿನಿಮಾ ಟೀಸರ್‌ ಇಂದು (ಏ.13) ಬಿಡುಗಡೆಯಾಗಲಿದೆ. ಅದಕ್ಕೂ ಮುಂಚೆ ಚಿತ್ರತಂಡ ಬಿಗ್‌ ಅಪ್‌ಡೇಟ್‌ ಹಂಚಿಕೊಂಡಿದೆ. ಇದೀಗ ಸಿನಿಮಾ ನಾಯಕಿಯನ್ನು ಪರಿಚಯಿಸಿದ್ದಾರೆ. ಕೊಡಗಿನ ಕನ್ನಡತಿ ಮೋಕ್ಷಾ ಕುಶಾಲ್‌ (Moksha Kushal) ʻಕೋಟಿʼ ( Kotee Movie Kannada) ಸಿನಿಮಾದಲ್ಲಿ ಡಾಲಿ ಧನಂಜಯ್‌ (Dolly Dhananjay) ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ʻಕೋಟಿʼ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದೀಗ ಪರಮ್‌ ಅವರು ಈ ಬಗ್ಗೆ ಪೋಸ್ಟ್‌ ಶೇರ್‌ ಮಾಡಿ ʻʻಒಳ್ಳೆಯ ನಟರು ಪಾತ್ರಗಳಾಗಿಬಿಡುವುದನ್ನು ನೋಡುವುದೇ ಒಂದು ಖುಷಿ. ನಟನೆಯಲ್ಲಿ ಭಾವಕ್ಕೆ ಎಷ್ಟು ಅಂಕ? ಭಾಷೆಗೆ ಎಷ್ಟು ಅಂಕ? ಅಥವಾ ಬಾಡಿ ಲಾಂಗ್ವೇಜಿಗೆ ಎಷ್ಟು ಅಂಕ? ʻಕೋಟಿʼಗಂತೂ ಕನ್ನಡ ಮಾತಾಡುವ ನಾಯಕಿಯೇ ಬೇಕಾಗಿತ್ತು. ಸಿಕ್ಕಿದ್ದಾರೆ. ಕೊಡಗಿನ ಕನ್ನಡತಿ ಮೋಕ್ಷಾ ಕುಶಾಲ್‌. ʻಕೋಟಿʼಯ ನಾಯಕಿ ನವಮಿ!ʼʼಎಂದು ಪೋಸ್ಟರ್‌ ಜತೆ ನಟಿಯ ಪಾತ್ರ ಅನಾವರಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮೋಕ್ಷಾ ಕುಶಾಲ್‌ ಅವರು ನವಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಯುಗಾದಿ ಹಬ್ಬದ ದಿನ ‘ಕೋಟಿ’ ಚಿತ್ರದ ಟೈಟಲ್‌ ಬಿಡುಗಡೆಯಾಗಿತ್ತು. 500 ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷವಾಗಿತ್ತು. ʻಕೋಟಿʼ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿತ್ತು.

ಇದನ್ನೂ ಓದಿ: Allu Arjun: `ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!

ʻಹೊಯ್ಸಳʼ ನಂತರ ಬರುತ್ತಿರುವ ಧನಂಜಯ್‌ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್‌ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟೆಲಿವಿಷನ್‌ ಚಾನೆಲ್‌ನಿಂದ ಹೊರಗೆ ಬಂದಾಗ, ಹಿರಿತೆರೆಯಲ್ಲಿ ಕತೆಗಳನ್ನು ಹೇಳಬೇಕು ಎಂದು ತಾವು ಆಸೆ ಪಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ. ಈ ವರ್ಷ ಒಂದಾದ ಮೇಲೆ ಒಂದು ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ, ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣವಿದೆ.
ಇಂದೇ (ಏ.13)ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ.

Continue Reading
Advertisement
Terror Attack
ವಿದೇಶ6 mins ago

Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Urvashi Rautela
ಕ್ರೀಡೆ30 mins ago

Urvashi Rautela: ಕ್ರಿಕೆಟಿಗರಾದ ಪಂತ್​,ನಸೀಮ್​ಗೆ ಕೈಕೊಟ್ಟು ಖ್ಯಾತ ಫುಟ್ಬಾಲರ್​ ಜತೆ ಡೇಟಿಂಗ್ ಆರಂಭಿಸಿದ ಊರ್ವಶಿ ರೌಟೇಲಾ​

murder-case
ಕ್ರೈಂ53 mins ago

Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!

Gold price
ಚಿನ್ನದ ದರ1 hour ago

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Lok Sabha Election 2024
ಬೆಂಗಳೂರು1 hour ago

Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

Sonu Srinivas Gowda shares Jail Experience
ಸಿನಿಮಾ1 hour ago

Sonu Srinivas Gowda: ಸಿಕ್ಕಾಪಟ್ಟೆ ಸೊಳ್ಳೆ ಕಾಟ ಇತ್ತು ಎಂದು ಜೈಲಿನ ಅನುಭವ ಹಂಚಿಕೊಂಡ ಸೋನು ಗೌಡ!

CM Siddaramaiah
ಕರ್ನಾಟಕ1 hour ago

ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿದ್ದರಾಮಯ್ಯ; ಚುನಾವಣೆ ಮೊದಲೇ ಸೋಲೊಪ್ಪಿಗೆ?

Siddaramaiah
ಕರ್ನಾಟಕ2 hours ago

ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಶ್ರೀನಿವಾಸ ಪ್ರಸಾದ್!‌ ಏನಿದರ ಮರ್ಮ?

Vinesh Phogat
ಕ್ರೀಡೆ2 hours ago

Vinesh Phogat: ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ; ಡಬ್ಲ್ಯುಎಫ್‌ಐ ವಿರುದ್ಧ ಗಂಭೀರ ಆರೋಪ ಹೊರಿಸಿದ ವಿನೇಶ್

Salman khan Aayush Sharma recalls his father words marry Arpita
ಸಿನಿಮಾ2 hours ago

Salman Khan: ಬಿಡಿಗಾಸೂ ಕೈಯಲ್ಲಿ ಇಲ್ಲದೇ ಇದ್ದಾಗ ಸಲ್ಮಾನ್‌ ಖಾನ್‌ ಸಹೋದರಿಯನ್ನು ಮದುವೆಯಾಗಿದ್ರಂತೆ ಈ ನಟ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 day ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 day ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ2 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ4 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ4 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

ಟ್ರೆಂಡಿಂಗ್‌