ಬೆಂಗಳೂರು: ಜೀ ಕನ್ನಡ ವಾಹಿನಿಯ ಹಲವು ಧಾರಾವಾಹಿಗಳಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್ ಕೂಡ ಒಂದು. ಈ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಜತೆಗೆ ಟಿಆರ್‌ಪಿಯಲ್ಲಿ (Actor Darshan) ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಜಯಂತ್ ಪಾತ್ರಧಾರಿಗೆ ತನ್ನ ಹೆಂಡತಿ ಯಾರಿಗೂ ಕಾಲ್ ಮಾಡಬಾರದು ಅವಳು ನನ್ನದೊಂದೇ ಸ್ವತ್ತು ಎನ್ನುವ ರೀತಿಯಲ್ಲಿ ಆಡುತ್ತಾನೆ. ಮನೆಯ ಲ್ಯಾಂಡ್ಲೈನ್ ಫೋನ್ ಕೇಬಲ್ ಕೂಡ ಕಟ್ ಮಾಡುತ್ತಾನೆ. ʻಚಿನ್ನುಮರಿʼಯಂದೇ ಪ್ರೀತಿಯಿಂದ ಹೆಂಡತಿ ಕರೆದು, ಅತಿಯಾಗಿ ಸಂಶಯವೂ ಪಡ್ತಾನೆ. ಆದರೀಗ ಟ್ರೋಲ್ ಹೈಕ್ಳು ದರ್ಶನ್ ಕೊಲೆ ಕೇಸ್‌ಗೆ ಲಿಂಕ್ ಮಾಡಿ ಭಾರಿ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದಾರೆ. ʻʻಚಿನ್ನುಮರಿ ತಂಟೆಗೆ ಹೋದರೆ ಒದೆ…ಪವಿತ್ರಾ ಗೌಡ ತಂಟೆಗೆ ಹೋದರೆ ಕೊಲೆನೆʼʼಎಂದು ಟ್ರೋಲ್ ಮಾಡುತ್ತಿದ್ದಾರೆ.
ಜಯಂತ್ ಪಾತ್ರ ಹೇಗಿದೆ?
ಜಯಂತ್ ತುಂಬ ಶ್ರೀಮಂತ. ಈತನನ್ನು ಹುಡುಗನನ್ನು ಮಧ್ಯಮ ಕುಟುಂಬದ ಜಾಹ್ನವಿ ಮದುವೆ ಆಗಿದ್ದಾಳೆ. ಒಳ್ಳೆಯ ಹುಡುಗ ನಮಗೆ ಅಳಿಯನಾಗಿ ಸಿಕ್ಕಿದ್ದಾನೆ ಅಂತ ಜಾಹ್ನವಿ ಮನೆಯವರು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಆದರೆ ಜಯಂತ್ ಹಾಗಿಲ್ಲ. ತನ್ನ ಹೆಂಡ್ತಿ ತನ್ನನ್ನು ಮಾತ್ರ ಇಷ್ಟಪಡಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು, ನನ್ನ ಜೊತೆ ಮಾತಾಡಬೇಕು, ಮನೆ ಬಿಟ್ಟು ಎಲ್ಲಿಗೂ ಹೋಗಬಾರದು ಎಂದು ಏನೋನೋ ಮಸಲತ್ತು ಮಾಡ್ತಾನೆ. ‘ಸೈಕೋ’ ಜಯಂತ್‌ಗೆ ಬರೀ ಹೆಂಡತಿ ಮೇಲೆ ಅನುಮಾನ . ಆಫೀಸ್‌ನಲ್ಲಿ ಕೂತು, ಮನೆಯಲ್ಲಿ ಫಿಕ್ಸ್ ಮಾಡಿದ ಸಿಸಿ ಕ್ಯಾಮೆರ ಮೂಲಕ ಮೊಬೈಲ್‌ನಲ್ಲಿ ಕದ್ದು ನೋಡುವ ಜಯಂತ್‌ಗೆ ಬರೀ ಜಾಹ್ನವಿಯದ್ದೇ ಯೋಚನೆ. ಮಾತ್ರವಲ್ಲ ಕಾಲೇಜಿನಲ್ಲಿ ಜಾಹ್ನವಿಯನ್ನು ಪ್ರೀತಿಸುತ್ತಿದ್ದ ಹುಡುಗನಿಗೂ ಸಖತ್ ಒದೆ ಕೊಟ್ಟವ. ಈತನನ್ನು ಕಂಡರೆ ಸಾಕು ಪ್ರೇಕ್ಷಕರು ಕೂಡ ಗಾಬರಿಯಾಗುತ್ತಾರೆ.
ಇನ್ನು ಕಥೆಯಲ್ಲಿ ಜಯಂತ್ ಈ ಗುಣಗಳು ಜಾಹ್ನವಿಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅವಳು ಇದಕ್ಕೆ ಕಾರಣ ಏನು ಎಂದು ಹುಡುಕಿಕೊಂಡು ಹೋಗುವಾಗ ಗೊತ್ತಾಗಬಹುದು. ಆದರೀಗ ಜಯಂತ್ ಹಾಗೂ ನಟ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದಾರೆ. ದರ್ಶನ್ ಕೂಡ ಪವಿತ್ರಾ ಗೌಡ ಗೋಸ್ಕರ ಕೊಲೆಯೇ ಮಾಡಿಬಿಟ್ಟರು ಎಂದು ಈ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.
ಇನ್ನೂ ಕೆಲವರು ಈ ರೀತಿ ಕಮೆಂಟ್ ಹಾಕಿ ಜೀವ ಕಳೆದುಕೊಳ್ಳುವದಕ್ಕಿಂದ ಪುಟ್ಟಕ್ಕನ ಮಗಳು ಸ್ನೇಹಾ IAS ಪಾಸ್ ಆಗ್ತಾಳಾ ಎಂದು ಕಾಯೋದು ಉತ್ತಮ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇಟ್ಟಿನಲ್ಲಿ ದರ್ಶನ್ ಹೈಪ್‌ನಿಂದ ಧಾರಾವಾಹಿಗಳು ಪಾತ್ರಗಳು ಸಖತ್ ಚರ್ಚೆಯಲ್ಲಿವೆ.
ಇದನ್ನೂ ಓದಿ: Actor Darshan : Boss ನಿಮ್ಮನ್ನ ಈ ರೀತಿ ನೋಡೊಕೆ ಆಗ್ತಿಲ್ಲ; ಬಿಕ್ಕಿ ಬಿಕ್ಕಿ ಅತ್ತ ದರ್ಶನ್ ಮಹಿಳಾ ಅಭಿಮಾನಿ!
ದರ್ಶನ್ ಪ್ರಕರಣ ಏನು?
ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್ ಸೇರಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕೊನೆಗೆ ನಟ ದರ್ಶನ್ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ರೇಣುಕಾಸ್ವಾಮಿಗೆ ಒದ್ದಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ದರ್ಶನ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.