Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​ - Vistara News

ಕಿರುತೆರೆ

Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

Actor Darshan: ಇನ್ನೂ ಕೆಲವರು ಈ ರೀತಿ ಕಮೆಂಟ್‌ ಹಾಕಿ ಜೀವ ಕಳೆದುಕೊಳ್ಳುವದಕ್ಕಿಂದ ಪುಟ್ಟಕ್ಕನ ಮಗಳು ಸ್ನೇಹಾ IAS ಪಾಸ್‌ ಆಗ್ತಾಳಾ ಎಂದು ಕಾಯೋದು ಉತ್ತಮ ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಇಟ್ಟಿನಲ್ಲಿ ದರ್ಶನ್‌ ಹೈಪ್‌ನಿಂದ ಧಾರಾವಾಹಿಗಳು ಪಾತ್ರಗಳು ಸಖತ್‌ ಚರ್ಚೆಯಲ್ಲಿವೆ. ಟ್ರೋಲ್‌ ಹೈಕ್ಳು ದರ್ಶನ್‌ ಕೊಲೆ ಕೇಸ್‌ಗೆ ಲಿಂಕ್‌ ಮಾಡಿ ಭಾರಿ ಮಜವಾಗಿ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ. ʻʻಚಿನ್ನುಮರಿ ತಂಟೆಗೆ ಹೋದರೆ ಒದೆ…ಪವಿತ್ರಾ ಗೌಡ ತಂಟೆಗೆ ಹೋದರೆ ಕೊಲೆನೆʼʼಎಂದು ಟ್ರೋಲ್‌ ಮಾಡುತ್ತಿದ್ದಾರೆ.

VISTARANEWS.COM


on

Actor Darshan case comparision to serial troll
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೀ ಕನ್ನಡ ವಾಹಿನಿಯ ಹಲವು ಧಾರಾವಾಹಿಗಳಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್‌ ಕೂಡ ಒಂದು. ಈ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಜತೆಗೆ ಟಿಆರ್‌ಪಿಯಲ್ಲಿ (Actor Darshan) ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಜಯಂತ್‌ ಪಾತ್ರಧಾರಿಗೆ ತನ್ನ ಹೆಂಡತಿ ಯಾರಿಗೂ ಕಾಲ್ ಮಾಡಬಾರದು ಅವಳು ನನ್ನದೊಂದೇ ಸ್ವತ್ತು ಎನ್ನುವ ರೀತಿಯಲ್ಲಿ ಆಡುತ್ತಾನೆ. ಮನೆಯ ಲ್ಯಾಂಡ್​​ಲೈನ್​ ಫೋನ್ ಕೇಬಲ್ ಕೂಡ ಕಟ್ ಮಾಡುತ್ತಾನೆ. ʻಚಿನ್ನುಮರಿʼಯಂದೇ ಪ್ರೀತಿಯಿಂದ ಹೆಂಡತಿ ಕರೆದು, ಅತಿಯಾಗಿ ಸಂಶಯವೂ ಪಡ್ತಾನೆ. ಆದರೀಗ ಟ್ರೋಲ್‌ ಹೈಕ್ಳು ದರ್ಶನ್‌ ಕೊಲೆ ಕೇಸ್‌ಗೆ ಲಿಂಕ್‌ ಮಾಡಿ ಭಾರಿ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ. ʻʻಚಿನ್ನುಮರಿ ತಂಟೆಗೆ ಹೋದರೆ ಒದೆ…ಪವಿತ್ರಾ ಗೌಡ ತಂಟೆಗೆ ಹೋದರೆ ಕೊಲೆನೆʼʼಎಂದು ಟ್ರೋಲ್‌ ಮಾಡುತ್ತಿದ್ದಾರೆ.

ಜಯಂತ್‌ ಪಾತ್ರ ಹೇಗಿದೆ?

ಜಯಂತ್‌ ತುಂಬ ಶ್ರೀಮಂತ. ಈತನನ್ನು ಹುಡುಗನನ್ನು ಮಧ್ಯಮ ಕುಟುಂಬದ ಜಾಹ್ನವಿ ಮದುವೆ ಆಗಿದ್ದಾಳೆ. ಒಳ್ಳೆಯ ಹುಡುಗ ನಮಗೆ ಅಳಿಯನಾಗಿ ಸಿಕ್ಕಿದ್ದಾನೆ ಅಂತ ಜಾಹ್ನವಿ ಮನೆಯವರು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಆದರೆ ಜಯಂತ್‌ ಹಾಗಿಲ್ಲ. ತನ್ನ ಹೆಂಡ್ತಿ ತನ್ನನ್ನು ಮಾತ್ರ ಇಷ್ಟಪಡಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು, ನನ್ನ ಜೊತೆ ಮಾತಾಡಬೇಕು, ಮನೆ ಬಿಟ್ಟು ಎಲ್ಲಿಗೂ ಹೋಗಬಾರದು ಎಂದು ಏನೋನೋ ಮಸಲತ್ತು ಮಾಡ್ತಾನೆ. ‘ಸೈಕೋ’ ಜಯಂತ್‌ಗೆ ಬರೀ ಹೆಂಡತಿ ಮೇಲೆ ಅನುಮಾನ . ಆಫೀಸ್‌ನಲ್ಲಿ ಕೂತು, ಮನೆಯಲ್ಲಿ ಫಿಕ್ಸ್‌ ಮಾಡಿದ ಸಿಸಿ ಕ್ಯಾಮೆರ ಮೂಲಕ ಮೊಬೈಲ್‌ನಲ್ಲಿ ಕದ್ದು ನೋಡುವ ಜಯಂತ್‌ಗೆ ಬರೀ ಜಾಹ್ನವಿಯದ್ದೇ ಯೋಚನೆ. ಮಾತ್ರವಲ್ಲ ಕಾಲೇಜಿನಲ್ಲಿ ಜಾಹ್ನವಿಯನ್ನು ಪ್ರೀತಿಸುತ್ತಿದ್ದ ಹುಡುಗನಿಗೂ ಸಖತ್‌ ಒದೆ ಕೊಟ್ಟವ. ಈತನನ್ನು ಕಂಡರೆ ಸಾಕು ಪ್ರೇಕ್ಷಕರು ಕೂಡ ಗಾಬರಿಯಾಗುತ್ತಾರೆ.

ಇನ್ನು ಕಥೆಯಲ್ಲಿ ಜಯಂತ್‌ ಈ ಗುಣಗಳು ಜಾಹ್ನವಿಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅವಳು ಇದಕ್ಕೆ ಕಾರಣ ಏನು ಎಂದು ಹುಡುಕಿಕೊಂಡು ಹೋಗುವಾಗ ಗೊತ್ತಾಗಬಹುದು. ಆದರೀಗ ಜಯಂತ್‌ ಹಾಗೂ ನಟ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಆಗುತ್ತಿದ್ದಾರೆ. ದರ್ಶನ್‌ ಕೂಡ ಪವಿತ್ರಾ ಗೌಡ ಗೋಸ್ಕರ ಕೊಲೆಯೇ ಮಾಡಿಬಿಟ್ಟರು ಎಂದು ಈ ಮೂಲಕ ಟ್ರೋಲ್‌ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಈ ರೀತಿ ಕಮೆಂಟ್‌ ಹಾಕಿ ಜೀವ ಕಳೆದುಕೊಳ್ಳುವದಕ್ಕಿಂದ ಪುಟ್ಟಕ್ಕನ ಮಗಳು ಸ್ನೇಹಾ IAS ಪಾಸ್‌ ಆಗ್ತಾಳಾ ಎಂದು ಕಾಯೋದು ಉತ್ತಮ ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಇಟ್ಟಿನಲ್ಲಿ ದರ್ಶನ್‌ ಹೈಪ್‌ನಿಂದ ಧಾರಾವಾಹಿಗಳು ಪಾತ್ರಗಳು ಸಖತ್‌ ಚರ್ಚೆಯಲ್ಲಿವೆ.

ಇದನ್ನೂ ಓದಿ: Actor Darshan : Boss ನಿಮ್ಮನ್ನ ಈ ರೀತಿ ನೋಡೊಕೆ ಆಗ್ತಿಲ್ಲ; ಬಿಕ್ಕಿ ಬಿಕ್ಕಿ ಅತ್ತ ದರ್ಶನ್​ ಮಹಿಳಾ ಅಭಿಮಾನಿ!

ದರ್ಶನ್‌ ಪ್ರಕರಣ ಏನು?

ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್‌ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್‌ ಸೇರಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕೊನೆಗೆ ನಟ ದರ್ಶನ್‌ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್‌ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ರೇಣುಕಾಸ್ವಾಮಿಗೆ ಒದ್ದಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ದರ್ಶನ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Sunny Mahipal: ಗರ್ಭಿಣಿ ಪತ್ನಿ ಮೇಲೆ ʻನೇತ್ರಾವತಿʼ ಸೀರಿಯಲ್‌ ನಟನಿಂದ ಹಲ್ಲೆ ಆರೋಪ; ಮತ್ತೊಬ್ಬಳ ಜತೆ ನಿಶ್ಚಿತಾರ್ಥ?

Sunny Mahipal: ಕೆಲ ವರ್ಷ ಪ್ರಸಾರ ಕಂಡಿದ್ದ ‘ನೇತ್ರಾವತಿ’ ಧಾರಾವಾಹಿಯಲ್ಲಿ ಸನ್ನಿ ಮಹಿಪಾಲ್ (Sunny Mahipal) ನಟಿಸಿದ್ದರು. ಧಾರಾವಾಹಿ ಪೂರ್ಣಗೊಂಡಿದ್ದು, ಈಗ ಅವರು ಖಾಸಗಿ ಕಂಪನಿಯಲ್ಲಿ ಸನ್ನಿ ಮಹಿಪಾಲ್ ಕೆಲಸ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಯುವತಿಯರ ಜೊತೆ ಲಿವಿಂಗ್ ಟು ಗೆದರ್ ಆರೋಪ ಕೂಡ ನಟನ ವಿರುದ್ಧ ಕೇಳಿ ಬಂದಿದೆ.

VISTARANEWS.COM


on

Sunny Mahipal Nethravathi Serial Actor Kick His Pregnant Wife
Koo

ಬೆಂಗಳೂರು: ಒಬ್ಬರ ಜತೆ ಮದುವೆಯಾಗಿ ಮತ್ತೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ʻನೇತ್ರಾವತಿʼ ಧಾರಾವಾಹಿ ನಟನ ವಿರುದ್ಧ ಆರೋಪ ಕೇಳಿ (Sunny Mahipal) ಬಂದಿದೆ. ಸನ್ನಿ ಮಹಿಪಾಲ್ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೊಂದು ಪತ್ನಿ ಆರೋಪಿಸಿದ್ದಾರೆ. ಇದನ್ನು ಅಲ್ಲಗೆಳೆದ ಸನ್ನಿ ಮಹಿಪಾಲ್‌ ತನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿರುವುದಾಗಿ ಯುವತಿ ವಿರುದ್ಧ ಹೆಚ್‌ ಎ. ಎಲ್‌ ಠಾಣೆಗೆ ದೂರು ನೀಡಿದ್ದಾರೆ.

ಕೆಲ ವರ್ಷ ಪ್ರಸಾರ ಕಂಡಿದ್ದ ‘ನೇತ್ರಾವತಿ’ ಧಾರಾವಾಹಿಯಲ್ಲಿ ಸನ್ನಿ ಮಹಿಪಾಲ್ (Sunny Mahipal) ನಟಿಸಿದ್ದರು. ಧಾರಾವಾಹಿ ಪೂರ್ಣಗೊಂಡಿದ್ದು, ಈಗ ಅವರು ಖಾಸಗಿ ಕಂಪನಿಯಲ್ಲಿ ಸನ್ನಿ ಮಹಿಪಾಲ್ ಕೆಲಸ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಯುವತಿಯರ ಜೊತೆ ಲಿವಿಂಗ್ ಟು ಗೆದರ್ ಆರೋಪ ಕೂಡ ನಟನ ವಿರುದ್ಧ ಕೇಳಿ ಬಂದಿದೆ. 2024 ಜನವರಿಯಲ್ಲಿ ಯುವತಿಗೆ ಮಹಿಪಾಲ್ ಪರಿಚಯ ಆಗಿದೆ. ಈ ಯುವತಿ ಲಾ ಸ್ಟೂಡೆಂಟ್ ಆಗಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಶುರುವಾಗಿದೆ. ಬಳಿಕ ಅವರನ್ನು ಸನ್ನಿ ಪ್ರೀತಿ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಮದುವೆಯಾಗೋದಾಗಿ ನಂಬಿಸಿದ್ದರು. ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ವಿವಾಹ ಆದರು. ಸದ್ಯ ಮಹಿಳೆ ಎರಡು ತಿಂಗಳ ಗರ್ಭಿಣಿ.

ಇದಾದ ಬಳಿಕ ನಟ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾನೆ. ಪ್ರಶ್ನಿಸಲು ಹೋದ ಪತ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಪತಿ ಪತ್ನಿ ಮದುವೆಯಾದರು ಒಟ್ಟಿಗೆ ಇರಲಿಲ್ಲ .ನಮ್ಮ ಪೋಷಕರನ್ನ ಒಪ್ಪಿಸಿ ಮತ್ತೆ ಬರುತ್ತೇನೆ ಎಂದು ನಟ ಕಾಗೆ ಹಾರಿಸಿದ್ದ .ಅಲ್ಲದೇ ಸ್ನೇಹಿತರ ರೀತಿಯೇ ಇರಬೇಕು. ಸ್ನೇಹಿತರಂತೆಯೇ ಮೆಸೆಜ್ ಮಾಡ್ಬೇಕು ಎಂದು ಕಂಡಿಷನ್ ಹಾಕಿದ್ದನಂತೆ. ಅದರಂತೆಯೇ ಮಹಿಪಾಲ್ ಪತ್ನಿ ನಡೆದು ಕೊಂಡಿದ್ದರು. ಅದಾಗಲೇ ಕೆಲ ದಿನದ ಹಿಂದೆ ಬೇರೆ ಯುವತಿ ಜೊತೆಗೆ ಮಹಿಪಾಲ್ ಎಂಗೆಜ್ಮೆಂಟ್ ಆಗಿದ್ದನಂತೆ. ಇದನ್ನು ಪ್ರಶ್ನಿಸಲು 22 ರಂದು ರಾತ್ರಿ ಮಹಿಪಾಲ್ ಮನೆಗೆ ಪತ್ನಿ ಹೋಗಿದ್ದಾರೆ. ರಾತ್ರಿ 9.30 ಕ್ಕೆ ವಿಜ್ಙಾನ ನಗರ ದಲ್ಲಿರುವ ಮಹಿಪಾಲ್ ನಿವಾಸಕ್ಕೆ ಪತ್ನಿ ಹೋಗಿದ್ದರು.

ಇದನ್ನೂ ಓದಿ: Actor Darshan: 80 ವರ್ಷಗಳ ಹಿಂದೆ ನಡೆದಿತ್ತು ದರ್ಶನ್‌ ಮಾದರಿ ಕ್ರೈಂ! ಜೈಲು ಪಾಲಾಗಿದ್ದರು ತಮಿಳು ಸೂಪರ್ ಸ್ಟಾರ್!

ಈ ವೇಳೆ ಗಲಾಟೆಯಾಗಿ ಪತ್ನಿ ಮೇಲೆ ನಟ ಹಲ್ಲೆ ನಡೆಸಿದ್ದಾರೆ. ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಗಲಾಟೆಯಲ್ಲಿ ಗರ್ಭಪಾತ ಆಗಿರೋದಾಗಿ ಪತ್ನಿ ಹೇಳಿಕೆ ನೀಡಿದ್ದಾರೆ. ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿದೆ ಎಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ.  ಗಲಾಟೆ ಆದ ಮೇಲೆ 112ಕ್ಕೆ ಮಹಿಪಾಲ್ ಪತ್ನಿ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಭೇಟಿ ಕೊಟ್ಟಿದ್ದರು. ಗರ್ಭಪಾತದಿಂದಾಗಿ ಮಹಿಳೆಗೆ ರಕ್ತಸ್ರಾವವಾಗುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಅವರು ಮನವಿ ಮಾಡಿದ್ದರು. ಆದರೆ, ನಮ್ಮ ಬಳಿ ಮಹಿಳಾ ಸಿಬ್ಬಂದಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸ್ವತಃ ತಾವೆ ಕಾರು ಚಲಾಯಿಸಿಕೊಂಡು ಬಂದು ಅವರು ಆಸ್ಪತ್ರೆ ಸೇರಿದ್ದಾರೆ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅತ್ತ ಹೆಚ್ಎಎಲ್ ಪೊಲೀಸ್ ಠಾಣೆಗೆ ತೆರಳಿ ಸನ್ನಿ ಮಹಿಪಾಲ್ ಮನೆಗೆ ಅತಿಕ್ರಮ ಪ್ರವೇಶ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಬಲವಂತದಿಂದ ಮದುವೆಯಾಗಿರೋದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ದೂರು ಪಡೆದು ಹೆಚ್ಎಎಲ್ ಪೊಲೀಸರು ಸುಮ್ಮನಾಗಿದ್ದಾರೆ. ಇನ್ನೂ ಮಾಹಿತಿ ಪ್ರಕಾರ ಹಲ್ಲೆಗೂ ಮುನ್ನ ಗರ್ಭಪಾತ ಮಾಡಿಸಲು ಪತ್ನಿಗೆ ನಟ ಕಿರುಕುಳ ನೀಡಿದ್ದರು ಎನ್ನಲಾಗಿದೆ.

Continue Reading

ಸ್ಯಾಂಡಲ್ ವುಡ್

Chaitra Vasudevan: ನಾನು ಸಿಲ್ಲಿ ಹುಡುಗಿ ಅಲ್ಲ..ನನ್ನಂತವರಿಗೂ ಮೋಸ ಆಗುತ್ತದೆ ಅಂದುಕೊಂಡಿರಲಿಲ್ಲ ಎಂದ ಆ್ಯಂಕರ್ ಚೈತ್ರಾ!

Chaitra Vasudevan: ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಆದರೆ ಜೋಡಿ ತಮ್ಮ ಮಧ್ಯೆ ಇರುವ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್‌ ಪಡೆದುಕೊಂಡರು. ಇದೀಗ ಸಂದರ್ಶನವೊಂದರಲ್ಲಿ ಚೈತ್ರಾ ಅವರು ನೋವು ತೋಡಿಕೊಂಡಿದ್ದಾರೆ.

VISTARANEWS.COM


on

Chaitra Vasudevan says not a silly girl never thought that someone cheated me
Koo

ಬೆಂಗಳೂರು: ಬಿಗ್‌ ಬಾಸ್‌ʼನಿಂದ ಹೆಚ್ಚು ಜನಪ್ರಿಯರಾಗಿರುವ ಆ್ಯಂಕರ್ ಚೈತ್ರಾ ವಾಸುದೇವನ್‌ (Chaitra Vasudevan) ಅವರು ತಮ್ಮ ದಾಂಪತ್ಯಕ್ಕೆ ವಿಚ್ಛೇದನ ನೀಡಿರುವುದು ಗೊತ್ತೇ ಈದೆ. ಚೈತ್ರಾ ಅನೌನ್ಸ್‌ ಮಾಡಿದ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ನಡೆಯಿತು. ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಆದರೆ ಜೋಡಿ ತಮ್ಮ ಮಧ್ಯೆ ಇರುವ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್‌ ಪಡೆದುಕೊಂಡರು. ಇದೀಗ ಸಂದರ್ಶನವೊಂದರಲ್ಲಿ ಚೈತ್ರಾ ಅವರು ನೋವು ತೋಡಿಕೊಂಡಿದ್ದಾರೆ.

ಚೈತ್ರಾ ಮಾತನಾಡಿ ʻʻನಾನು ಈ ಬಗ್ಗೆ ಅನೌನ್ಸ್‌ ಮಾಡುವೆ ಮೊದಲೇ ಡಿವೋರ್ಸ್‌ ಮಾಡಿದ್ದೆ. ಈ ಬಗ್ಗೆ ನಾನು ಎಲ್ಲಿಯೂ ಹೇಳಲು ಇಷ್ಟ ಪಟ್ಟಿರಲಿಲ್ಲ. ನನ್ನ ತಂದೆ ತಾಯಿ ಕೂಡ ಆಗ ನನ್ನ ಜತೆ ನಿಂತು, ನಿನ್ನ ಜವಾಬ್ದಾರಿ ಅಂದಿದ್ದರು. ಬೇರೆಯವರ ಕರ್ಮ ಅವರು ಅನುಭವಿಸುತ್ತಾರೆ. ಎಲ್ಲೂ ಕಂಪ್ಲೇನ್‌ ಮಾಡಬೇಡು ಎಂದು ತಂದೆ ತಾಯಿ ಹೇಳಿದ್ದರು. ಕ್ಷುಲ್ಲಕ ಕಾರಣಕ್ಕೆ ಸಪ್‌ರೇಟ್‌ ಆದರು ಎನ್ನುವ ಗಾಸಿಪ್‌ ಹರಡಿತ್ತು. ಆದರೆ ರಿಯಲ್‌ ರೀಸನ್‌ ಬೇರೆ ಇದೆ. ನನ್ನ ಕುಟುಂಬ ಅಂದರೆ ನಾನು, ನನ್ನ ತಂದೆ ತಾಯಿ, ಸೇರಿ ಮೋಸ ಹೋದೆವು. ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಮೋಸ ಹೋದೆವು. ಆದರೆ ನಾನು 5 ವರ್ಷಗಳ ಕಾಲ ಕಾದೆ. ಎನೋ ಒಂದು ಆಗತ್ತೆ ಅಂತ. ನಾನು ಸಿಲ್ಲಿ ಹುಡುಗಿ ಅಲ್ಲ. ಏನೋ ಅಚೀವ್‌ ಮಾಡಬೇಕು..ಏನೋ ಮಾಡಬೇಕು ಎಂದು ದುಡ್ಡು ದುಡೀಬೇಕು ಎಂಬ ಕಾರಣಕ್ಕೆ ಸಪ್‌ರೇಟ್‌ ಆಗ್ತೀನಿ ಎನ್ನುವ ಸಿಲ್ಲಿ ಹುಡುಗಿ ನಾನಲ್ಲ. ನಾನು ಪ್ಲ್ಯಾನ್‌ ಮುಂಚೆ ಹೇಗ್‌ ಮಾಡಿದ್ದೆ ಅಂದರೆ, ನನ್ನ ಕುಟುಂಬ, ನನ್ನ ಫ್ಯಾಮಿಲಿ, ಅತ್ತೆ ಮಾವ ಹೀಗೆ ಜತೆಗೆ ಇರಬೇಕು, ಮಕ್ಕಳು ಇರಬೇಕು ಎಂದು ಬಯಸಿದ್ದೆ. ಆದರೆ ಕನಸು ನನಸಾಗಿಲ್ಲ. ಕಳೆದ ಎರಡು ವರ್ಷದ ಹಿಂದೆ ಏನು ಮಾಡಕ್ಕೆ ಆಗದೇ ಸುಮ್ಮನೇ ಇದ್ದೆ. ಕೆಟ್ಟ ದಿನಗಳು ಆಗಿದ್ದವು. ಯಾರಾದರೂ ಬಂದು ನನ್ನ ಸೇವ್‌ ಮಾಡ್ತಾರಾ ಎನ್ನುವ ಪರಿಸ್ಥಿತಿ ಇತ್ತು. ಆ ತರ ನಾನು ಹಾತೊರೆಯುತ್ತಿದ್ದೆ. ಪ್ರೀತಿ ಮಾಡಿ, ಆದರೆ ನಿಜ ಹೇಳಿ. ಆದರೆ ಯಾರಿಗೂ ಮೋಸ ಮಾಡಬೇಡಿ. ಆದರೆ ನಾನು ಯಾರಿಗೂ ಮೋಸ ಮಾಡಿಲ್ಲ. ಆದರೆ ನನಗೆ ಹೀಗ್‌ ಆಯ್ತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Chaitra Vasudevan: ಅಹಂಕಾರದಿಂದ ಬೇರೆಯಾಗಿಲ್ಲ ಎಂದು ಡಿವೋರ್ಸ್‌ ಅಸಲಿ ಕಾರಣ ತಿಳಿಸಿದ ಆ್ಯಂಕರ್ ಚೈತ್ರಾ!

ಕುಂದಾಪುರದ ಹುಡುಗಿ ಚೈತ್ರಾ ಜತೆ ಸತ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಕಾರ್ಯಕ್ರಮದ ನಿರೂಪಣೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಚೈತ್ರಾ ಅಭಿಮಾನಿಗಳ ಗಮನ ಸೆಳೆದರು.

ಡಿವೋರ್ಸ್‌ ಪೋಸ್ಟ್‌ ಹಂಚಿಕೊಂಡಿದ್ದ ಚೈತ್ರಾ

‘ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದರು.

ಆ್ಯಂಕರ್ ಆಗಿದ್ದ ಚೈತ್ರಾ ‘ಬಿಗ್ ಬಾಸ್ (big boss) ಕನ್ನಡ ಸೀಸನ್ 7’ರ ಸ್ಪರ್ಧಿಯಾಗಿದ್ದರು. ಚೈತ್ರಾ ವಾಸುದೇವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಚೈತ್ರಾ ತಮ್ಮದೇ ಆದ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ನಡೆಸುತ್ತಿದ್ದಾರೆ.

Continue Reading

ಬಿಗ್ ಬಾಸ್

Actress Siri: ನಾನೇನು ʻಮದುವೆʼಯ ವಿರೋಧಿ ಅಲ್ಲ, ವಿವಾಹ ಬೇಡ ಎಂದೂ ಅಂದುಕೊಂಡಿರಲಿಲ್ಲ ಎಂದ ಸಿರಿ!

Actress Siri: ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

VISTARANEWS.COM


on

Actress Siri Reaction about late marriage
Koo

ಬೆಂಗಳೂರು: `ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿರುವುದು ಗೊತ್ತೇ ಇದೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

ಸಿರಿ ಮಾತನಾಡಿ ʻʻಇಷ್ಟು ವರ್ಷ ನನಗೆ ಮದುವೆ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ನಮ್ಮ ತಾಯಿ ಬಿಟ್ಟರೆ ನಾನು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನನ್ನ ತಾಯಿಗೆ ಒಂದು ಮಾತು ಹೇಳುತ್ತ ಇದ್ದೆ. ನಿನ್ನ ಮಗಳು ಖುಷಿಯಾಗಿ ಇರಬೇಕು. ಅದೇ ಮುಖ್ಯ ಅಂದರೆ ನೋಡು ಅಂತಿದ್ದೆ. ಆದರೆ ಬಿಗ್‌ ಬಾಸ್‌ ಆದ ಬಳಿಕ ಆಗಬೇಕು ಎಂಬ ಮನಸ್ಸು ಬಂತು. ಆದರೆ ಒತ್ತಡ ಅಂತೇನಿಲ್ಲ. ಹೀಗೆ ಆಗಬೇಕು ಎಂದು ಅನ್ನಿಸಿತ್ತು. ಹೊರಗೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ಮಾಡಿದೆ. ಬಳಿಕ ಇವರನ್ನ ಮದುವೆ ಆಗಬಹುದು ಎಂದು ಅನ್ನಿಸಿದ ಮೇಲೆ ನಾನು ಮದುವೆಯಾದೆʼʼಎಂದರು.

ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿಲ್ಲ. ನನ್ನ ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದೇ ಇತ್ತು. ಮದುವೆ ವಿರುದ್ಧನೂ ಅಲ್ಲ ನಾನು. ನನ್ನ ಹಣೆಬರಹದಲ್ಲಿ ಈಗ ಬರ್ದಿದೆ. ಮನೆಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಈಗ ಆ ಕಾಲ ಕೂಡಿ ಬಂದಿದೆ. ಮದುವೆ ಬೇಗ ಆಗಿ ಏನಾದರೂ ಸಮಸ್ಯೆ ಮಾಡಿಕೊಳ್ಳುವುದಿಕ್ಕಿಂತ , ನಾನು ರೆಡಿ ಇದ್ದೀನಿ.. ಎಂದು ರೆಡಿ ಆದ ಮೇಲೆ ಮದುವೆ ಮದುವೆಯಾಗೋದು ಸರಿ. ಯಾರಿಗಾದರೂ ಇದು ದೊಡ್ಡ ನಿರ್ಧಾರ. ನನಗೆ ನನ್ನ ಪತಿ ಬದುಕು ಸೀರಿಯಲ್‌ ನಿಂದ ಪರಿಚಯ. ಇಬ್ಬರು ಸ್ನೇಹಿತರಾಗಿದ್ದೇವು. ಬಳಿಕ ಮತ್ತೆ ವರ್ಷಗಳ ನಂತರ ಟಚ್‌ನಲ್ಲಿ ಬಂದೆವು. ನಂತರ ಇಬ್ಬರು ಮದುವೆಯಾಗೋಣ ಎಂದು ನಿರ್ಧಾರ ಮಾಡಿದೆವು. ಈಗಲೂ ಫ್ರೆಂಡ್‌ ಜತಗೆ ಇದ್ದೇನೆ ಎಂದು ಅನ್ನಿಸುತ್ತೆ. ಇಬ್ಬರಲ್ಲೂ ಪ್ರಪೋಸ್‌ ಏನೂ ಆಗಿಲ್ಲ. ಮಾತುಕತೆ ಆಯ್ತು. ಹಾಗೇ ಮದುವೆ ಆದೆವುʼʼಎಂದರು.

ಇದನ್ನೂ ಓದಿ: Actress Siri: ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀವೆ; ಪತಿಯನ್ನು ಬಣ್ಣಿಸಿದ ಸಿರಿ!

ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್​ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

Continue Reading

ಕಿರುತೆರೆ

Star Suvarna: `ಸುವರ್ಣ ಗೃಹಮಂತ್ರಿ’ಯ ಸಾರಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿಶಂಕರ್

Star Suvarna: ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

VISTARANEWS.COM


on

Star suvarna Ravi Shankar entered television suvarna grahamanthri
Koo

ಬೆಂಗಳೂರು: ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ “ಸುವರ್ಣ ಗೃಹಮಂತ್ರಿ” ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್ ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ (Ravi shankar) ಅವರನ್ನು ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದು, ‘ಸುವರ್ಣ ಗೃಹಮಂತ್ರಿ’ಯ ಸಂಚಿಕೆಯಲ್ಲಿ ರವಿಶಂಕರ್ (suvarna gruha mantri) ರವರ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

ಇದನ್ನೂ ಓದಿ: Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ .

Continue Reading
Advertisement
Allergies During Monsoon
ಆರೋಗ್ಯ8 mins ago

Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

Dina Bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ7 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ7 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ7 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ7 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ8 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ8 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ9 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕರ್ನಾಟಕ9 hours ago

Assembly Session: ಕೆಳಮನೆಯಲ್ಲಿ ವಿಧಾನ ಮಂಡಲ ಅನರ್ಹತಾ‌ ನಿವಾರಣಾ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ13 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ17 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌