Site icon Vistara News

BBK Season 10: ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ರು ಸ್ಪೆಷಲ್‌ ಗೆಸ್ಟ್‌

guruji

guruji

ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್‌ 10 (BBK Season 10) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ತಕ್ಕಂತೆ ದಾಖಲೆಯ ಪ್ರಮಾಣದಲ್ಲಿ ಟಿಆರ್‌ಪಿಯೂ ದೊರೆತಿದೆ. ಸ್ಪರ್ಧಿಗಳ ಜಗಳ, ಸ್ನೇಹ, ಒಂದಲ್ಲ ಒಂದು ವಿವಾದ ಇನ್ನಿತರ ಕಾರಣಗಳಿಂದ ಈ ಶೋ ಗಮನ ಸೆಳೆಯುತ್ತಿದೆ. ಜತೆಗೆ ಮನೆಯೊಳಕ್ಕೆ ವಿಶೇಷ ಅತಿಥಿಗಳೂ ಆಗಮಿಸಿ ಸ್ಪರ್ಧಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೀಗ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಬ್ರಹ್ಮಾಂಡ ಗುರೂಜಿ (Brahmanda Guruji) ಎಂದೇ ಜನಪ್ರಿಯರಾಗಿರುವ ನರೇಂದ್ರ ಬಾಬು ಶರ್ಮಾ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.

ನರೇಂದ್ರ ಬಾಬು ಶರ್ಮಾ ಬಿಗ್‌ಬಾಸ್‌ ಮನೆಯೊಳಗೆ ಆಗಮಿಸುವ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅವರು ಮನೆಯೊಳಗೆ ಆಗಮಿಸಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಗುರೂಜಿ ಮನೆಯೊಳಗೆಲ್ಲ ಓಡಾಡುತ್ತಿರುವುದು ಪ್ರೋಮೋದಲ್ಲಿ ಕಂಡುಬಂದಿದೆ. ಅವರು ಸ್ಪರ್ಧಿಗಳ ಜತೆ ಲವಲವಿಕೆಯಿಂದ ಮಾತುಕತೆಯನ್ನೂ ನಡೆಸಿದ್ದಾರೆ. ಅವರು ಮನೆಯಲ್ಲಿ ಎಲ್ಲರನ್ನು ಹುಡುಕುತ್ತಾ ಓಡಾಡುತ್ತಿದ್ದಾರೆ. ʼʼಎಲ್ರೋ ಇದ್ದೀರಾ? ಬಿಗ್ ಬಾಸ್ ಇವರನ್ನೆಲ್ಲಾ ಒಂದೆಡೆ ಸ್ಟ್ಯಾಚು ಮಾಡಿ ಬಿಡಿ. ನನ್ನ ಕೈಯಲ್ಲಿ ಓಡಾಡಲು ಆಗಲ್ಲ. ಮನೆಯಿಂದ ಹೊರಗೆ ಹೋಗ್ತಿನಿʼʼ ಎಂದು ಎಂದಿನ ತಮ್ಮ ಶೈಲಿಯಲ್ಲಿ ಡೈಲಾಗ್‌ ಹೊಡೆದಿದ್ದಾರೆ.

ಬಿಗ್‌ಬಾಸ್‌ ನಂಟು

ಬ್ರಹ್ಮಾಂಡ ಗುರೂಜಿ ಮತ್ತು ಬಿಗ್‌ಬಾಸ್‌ ನಡುವೆ ಉತ್ತಮ ನಂಟಿದೆ. ಅವರು ಮೊದಲ ಸೀಸನ್​ನ ಸ್ಪರ್ಧಿಯಾಗಿದ್ದರು. ಅಲ್ಲದೆ ಮೂರನೇ ರನ್ನರ್​ ಅಪ್​ ಆಗಿ ಅವರು ಹೊರಹೊಮ್ಮಿದ್ದರು. ಜೀ ಕನ್ನಡ ವಾಹಿನಿಯ ಬೃಹತ್ ಬ್ರಹ್ಮಾಂಡ, ಸುವರ್ಣ ವಾಹಿನಿಯ ಭವ್ಯ ಬ್ರಹ್ಮಾಂಡ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನ ಬ್ರಹ್ಮಾಂಡದಂತಹ ಕಾರ್ಯಕ್ರಮಗಳ ಸರಣಿಯಿಂದ ಅವರು ಜನಪ್ರಿಯಯಾಗಿದ್ದರು. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಬಳಿಕ ಬಿಗ್‌ ಬಾಸ್‌ ಸ್ಪರ್ದಿಯಾಗಿ ಇನ್ನಷ್ಟು ಗಮನ ಸೆಳೆದರು. ಸದ್ಯ 10ನೇ ಸೀಸನ್‌ ಮನೆಯೊಳಗೆ ಬಂದಿದ್ದು, ಯಾವ ರೀತಿಯ ಟ್ವಿಸ್ಟ್‌ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: BBK Season 10 : ಡ್ರೋನ್‌ ಪ್ರತಾಪ್‌ ಅಮ್ಮನಿಗೆ LOVE YOU ಎಂದು ಹೇಳಿದ ಕಿಚ್ಚ ಸುದೀಪ್!

ಡಬಲ್‌ ಎಲಿಮಿನೇಷನ್‌

ಬಿಗ್‌ ಬಾಸ್‌ ಈ ವಾರ ಸ್ಪರ್ಧಿಗಳಿಗೆ ಡಬಲ್‌ ಶಾಕ್‌ ನೀಡಿತ್ತು. ಅಂದರೆ ಎರಡೆರಡು ಎಲಿಮಿನೇಷನ್‌ ನಡೆಸಲಾಗಿದೆ. ಶನಿವಾರದ (ನ. 18) ಸಂಚಿಕೆಯಲ್ಲಿ ಇಶಾನಿ ಮನೆಯಿಂದ ಹೊರ ನಡೆದಿದ್ದರೆ, ಭಾನುವಾರ(ನ. 19)ದ ‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಸಂಚಿಕೆಯಲ್ಲಿ ಭಾಗ್ಯಶ್ರೀ ಔಟ್‌ ಆಗಿದ್ದರು. ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ದಸರಾ ಹಬ್ಬ ಮತ್ತು ವರ್ತೂರ್ ಸಂತೋಷ್‌ ಅವರ ಕಾರಣದಿಂದ ಎಲಿಮಿನೇಷನ್ ನಡೆಯದೆ ಸ್ಪರ್ಧಿಗಳು ಬಚಾವಾಗಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲ. ಬಿಗ್‌ ಬಾಸ್‌ ಮನೆಯಿಂದ ಇದುವರೆಗೆ 5 ಮಂದಿ ಹೊರ ಹೋಗಿದ್ದಾರೆ. ಸ್ನೇಕ್ ಶ್ಯಾಮ್, ಗೌರೀಶ್‌ ಅಕ್ಕಿ, ರಕ್ಷಕ್ ನಂತರ ಇದೀಗ ಇಶಾನಿ ಮತ್ತು ಭಾಗ್ಯಶ್ರೀ ತಮ್ಮ ಸ್ಪರ್ಧೆಯನ್ನು ಕೊನೆಗೊಳಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version