BBK Season 10 : ಡ್ರೋನ್‌ ಪ್ರತಾಪ್‌ ಅಮ್ಮನಿಗೆ LOVE YOU ಎಂದು ಹೇಳಿದ ಕಿಚ್ಚ ಸುದೀಪ್! - Vistara News

ಕಿರುತೆರೆ

BBK Season 10 : ಡ್ರೋನ್‌ ಪ್ರತಾಪ್‌ ಅಮ್ಮನಿಗೆ LOVE YOU ಎಂದು ಹೇಳಿದ ಕಿಚ್ಚ ಸುದೀಪ್!

BBK Season 10 : ಬಿಗ್‌ ಬಾಸ್‌ ಸೀಸನ್‌ 10ನ ಭಾವುಕ ಮತ್ತು ಲವಲವಿಕೆಯ ಕ್ಷಣಗಳು ಶನಿವಾರ ದಾಖಲಾದವು. ಡ್ರೋನ್‌ ಪ್ರತಾಪ್‌ ಮತ್ತು ಅಪ್ಪ ಮೂರು ವರ್ಷಗಳ ಬಳಿಕ ಮಾತನಾಡಿಕೊಂಡರು. ಪ್ರತಾಪ್‌ ತನ್ನ ಅಮ್ಮನಿಗೆ I Love you ಎಂದು ಹೇಳುವಂತೆ ಸುದೀಪ್‌ಗೆ ಮನವಿ ಮಾಡಿದರು!

VISTARANEWS.COM


on

Drone pratap and Kiccha Sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 10 (BBK Season 10) ವೇದಿಕೆ ಶನಿವಾರ ರಾತ್ರಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಮಾತು ಆಡದ ಡ್ರೋನ್‌ ಪ್ರತಾಪ್‌ (Drone Pratap) ಮತ್ತು ಅವರ ತಂದೆ ಪ್ರೀತಿಯಿಂದ ಮನಸಿನ ಮಾತು ಹಂಚಿಕೊಂಡರು. ಅಪ್ಪನ ಧ್ವನಿ ಕೇಳುತ್ತಿದ್ದಂತೆಯೇ ಡ್ರೋನ್‌ ಪ್ರತಾಪ್‌ ಅಂತೂ ಬಿಕ್ಕಿಬಿಕ್ಕಿ ಅತ್ತರು. ಅತ್ತ ಕಡೆಯಿಂದ ಅಪ್ಪನೇ ಸಮಾಧಾನ ಮಾಡಿದರು. ಮೂರು ವರ್ಷಗಳ ಹಸಿವು ಇಂಗುತ್ತಿದ್ದಂತೆಯೇ ಲವಲವಿಕೆಯಿಂದ ಪುಟಿದೆದ್ದ ಡ್ರೋನ್‌ ತನ್ನದೊಂದು ಆಸೆ ಪೂರೈಸುವಂತೆ ಕಿಚ್ಚ ಸುದೀಪ್‌ (Kiccha Sudeep) ಅವರನ್ನು ಕೇಳಿಕೊಂಡರು.

ನನ್ನ ಅಮ್ಮನ ಹೆಸರು ಸವಿತಾ.. ಅವರು ನಿಮ್ಮ ದೊಡ್ಡ ಅಭಿಮಾನಿ. ಸಣ್ಣ ವಯಸ್ಸಿನಿಂದಲೂ ನಿಮ್ಮ ಸಿನಿಮಾ ನೋಡುತ್ತಿದ್ದಾರೆ ಎಂದು ಹೇಳಿದರು ಡ್ರೋನ್‌ ಪ್ರತಾಪ್‌. ಆಗ ನಕ್ಕ ಸುದೀಪ್‌ ʻʻಹಾಗಿದ್ದರೆ ನಂಗೇನು 80 ವರ್ಷ ಆಗಿದೆಯಾʼ ಎಂದು ಕೇಳಿದರು. ಆಗ ಪ್ರತಾಪ್‌ ʻನಾವು ಸಣ್ಣ ಇರುವಾಗಿನಿಂದ ಸರ್‌ʼ ಎಂದು ತಿದ್ದಿದರು!

ಮೊದಲು ಅಮ್ಮ ಸವಿತಾ ಅವರಿಗೆ ಒಂದು ಹಲೋ ಹೇಳಿ ಎಂದು ಪ್ರತಾಪ್‌ ರಿಕ್ವೆಸ್ಟ್‌ ಮಾಡಿದರು. ಸುದೀಪ್‌ ಅವರು ವೇದಿಕೆಯ ಮೂಲಕ ʻಸವಿತಾ ಅವರೇ.. ನಿಮ್ಮ ಸುಪುತ್ರನ ಜೊತೆ ನಮ್ಮನ್ನೂ ನೋಡುತ್ತಿದ್ದೀರಾ. ನಿಮ್ಮ ಪತಿ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಮಧ್ಯೆ ಏನು ನಡೆದಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ಪ್ರೀತಿಸುವ ವಸ್ತುವನ್ನ ಕಳೆದುಕೊಳ್ಳದ ಹಾಗೆ ಆದಷ್ಟು ನೋಡಿಕೊಳ್ಳಿ.. ಥ್ಯಾಂಕ್ಯು’’ ಎಂದರು. ಬಳಿಕ ಇನ್ನೇನಾದರೂ ಹೇಳಬೇಕಾಗಿತ್ತಾ ಎಂದು ಪ್ರತಾಪ್‌ ಅವರನ್ನು ಕೇಳಿದರು.

ಆಗ ಡ್ರೋನ್‌ ಪ್ರತಾಪ್‌, ನನ್ನ ಅಮ್ಮನಿಗೊಂದು ಲವ್‌ ಯೂ ಅಂತ ಹೇಳಿಬಿಡಿ ಎಂದು ಹೇಳಿದರು! ಡ್ರೋನ್‌ ಪ್ರತಾಪ್‌ ಆಸೆಯಂತೆ ಸುದೀಪ್‌ ಅವರು ʻಲವ್‌ ಯೂ ಆಲ್‌ʼ ಎಂದು ಸಂದೇಶ ರವಾನಿಸಿದರು.

Drone pratap and Kiccha Sudeep

ಒಟ್ಟಿನಲ್ಲಿ ಡ್ರೋನ್‌ ಪ್ರತಾಪ್‌ ಮತ್ತು ಮನೆಯ ನಡುವೆ ಮೂರು ವರ್ಷಗಳಿಂದ ಮುರಿದು ಹೋಗಿದ್ದ ಸಂಬಂಧವನ್ನು ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ವೇದಿಕೆಯ ಮೂಲಕ ಮರು ಜೋಡಣೆ ಮಾಡಿದರು.

ಅಪ್ಪನ ಕರೆ ಬಂದಾಗ ಡ್ರೋನ್‌ ಪ್ರತಾಪ್‌ ಹೇಗೆ ಪ್ರತಿಕ್ರಿಯಿಸಿದರು?

ಡ್ರೋನ್‌ ಪ್ರತಾಪ್‌ ಮತ್ತು ಕುಟುಂಬದ ಮಧ್ಯೆ ಕಳೆದ ಮೂರು ವರ್ಷಗಳಿಂದ ಸಂಪರ್ಕವೇ ಇರಲಿಲ್ಲ. ಪ್ರತಾಪ್‌ ಎದುರಿಸಿದ ಡ್ರೋನ್‌ ವಂಚನೆ ಆರೋಪದಿಂದ ಅಪಮಾನಕ್ಕೆ ಒಳಗಾದ ಕುಟುಂಬ ಅವರನ್ನು ದೂರ ಇಟ್ಟಿತ್ತು. ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸುವಾಗಲೂ ಪ್ರತಾಪ್‌ ಒಂಟಿಯಾಗಿಯೇ ಬಂದಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಹಲವು ಬಾರಿ ’ನಾನು ನಮ್ಮ ತಂದೆ – ತಾಯಿ ಜೊತೆಗೆ 3 ವರ್ಷಗಳಿಂದ ಮಾತನಾಡಿಲ್ಲ. ಒಮ್ಮೆ ಮಾತನಾಡಿಸಿ ಪ್ಲೀಸ್‌ ಎಂದು ಗೋಗರೆದಿದ್ದರು.

ಇತ್ತೀಚೆಗೆ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಅವರ ಮನೆಯಿಂದ ಸ್ಪೆಷಲ್‌ ಫುಡ್‌ ಬಂದಿತ್ತು ಮತ್ತು ಪತ್ರವೂ ಬಂದಿತ್ತು. ಪ್ರತಾಪ್‌ಗೆ ಪಾಯಸ ಬಂದಿತ್ತು. ಆದರೆ, ಪತ್ರವನ್ನು ಪಡೆಯಲು ಟಾಸ್ಕ್‌ ಇದ್ದಿದ್ದರಿಂದ ಎಲ್ಲರಿಗೂ ಪತ್ರ ಸಿಕ್ಕಿರಲಿಲ್ಲ. ಪ್ರತಾಪ್‌ ಗೂ ಪತ್ರ ಸಿಕ್ಕಿರಲಿಲ್ಲ. ಹೀಗಾಗಿ ಈ ಪಾಯಸ ಮನೆಯಿಂದಲೇ ಬಂತಾ ಇಲ್ಲವಾ ಎನ್ನುವುದರ ಬಗ್ಗೆ ಡ್ರೋನ್‌ ಪ್ರತಾಪ್‌ಗೆ ಸ್ಪಷ್ಟತೆ ಇರಲಿಲ್ಲ.

Drone pratap  talks to Appa

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಅವರು ಪ್ರತಾಪ್‌ ಅವರನ್ನು ಉದ್ದೇಶಿಸಿ ʻಹೇಗಿದೆ ನಿಮ್ಮ 3 ವರ್ಷದ ಹಸಿವು?ʼ ಎಂದು ಕೇಳಿದರು. ಆಗ ಡ್ರೋನ್ ಪ್ರತಾಪ್, “ಜಾಸ್ತಿಯಾಗಿದೆ ಸರ್‌, ಎಲ್ಲರೂ ತಮ್ಮ ಮನೆಯವರನ್ನು ನೆನಪಿಸಿಕೊಂಡಾಗ, ಪತ್ರಗಳು ಬಂದಾಗʼ ಅಂದರು. ಪಾಯಸ ಕಳಿಸಿದ್ದು ನಮ್ಮ ಮನೆಯಿಂದನೇನಾ ಎಂದು ಡ್ರೋನ್‌ ಕೇಳಿದಾಗ, ʻʻಎಲ್ಲ ಪ್ರಶ್ನೆಗಳಿಗೂ ಉತ್ತರ ನಮ್ಮ ಬಳಿ ಇದೆ. ಆದರೆ, ಉತ್ತರ ಕೊಡಬೇಕಾಗಿಲ್ಲ. ಬಹುಶಃ ಪತ್ರ ಸಿಕ್ಕಿದ್ದರೆ ಪಾಯಸದ ಗುಟ್ಟು ಹೊರಗೆ ಬಂದಿರೋದುʼʼ ಎಂದು ನಕ್ಕರು ಸುದೀಪ್‌.

ಮನೆಯಿಂದ ಬರುವ ಪತ್ರದಲ್ಲಿ ಏನು ನಿರೀಕ್ಷೆ ಮಾಡುತ್ತಿದ್ದಿರಿ ಎಂದು ಸುದೀಪ್‌ ಕೇಳಿದಾಗ, ಪತ್ರವನ್ನೇ ನಿರೀಕ್ಷೆ ಮಾಡುತ್ತಿದ್ದರೆ ಸರ್‌ ಎಂದರು ಪ್ರತಾಪ್‌. 3 ವರ್ಷದಲ್ಲಿ ಏನು ನಿರೀಕ್ಷೆ ಮಾಡ್ತಿದ್ರಿ ಎಂದು ಕೇಳಿದಾಗ, ʻʻಅಪ್ಪ.. ನಮ್ಮ ಅಪ್ಪ ಹೇಳುವ ಮಾತನ್ನ ನಿರೀಕ್ಷೆ ಮಾಡ್ತಿದ್ದೆ ಸರ್‌ ಎಂದರು.

ಅಷ್ಟು ಹೊತ್ತಿಗೆ ಡ್ರೋನ್‌ ಒಮ್ಮೆಗೇ ಭಾವುಕರಾದರು… ಅಪ್ಪಾ.. ಅಂದರು. ಆಗ ಸುದೀಪ್‌ ನೀವು ಅಪ್ಪಾ ಅಂತ ಕರೆಯೋದು ಹಿತವಾಗಿದೆ. ಇನ್ನೊಮ್ಮೆ ಜೋರಾಗಿ ಕರೆಯಿರಿ ಅಂದರು. ಆಗ ಪ್ರತಾಪ್‌ ಜೋರಾಗಿ ಮತ್ತು ಅಷ್ಟೇ ಹಿತವಾಗಿ ʻಅಪ್ಪಾ…ʼ ಎಂದರು. ಆಗ ಒಮ್ಮಿಂದೊಮ್ಮೆಗೇ ಅಪ್ಪನಿಗೆ ಕಾಲ್‌ ಕನೆಕ್ಟ್‌ ಆಗಿ ಅಪ್ಪ ಲೈನ್‌ಗೆ ಬಂದರು!

ಅಪ್ಪನ ಧ್ವನಿ ಕೇಳುತ್ತಲೇ ಡ್ರೋನ್‌ ದುಃಖದ ಕಟ್ಟೆ ಒಡೆದೇ ಹೋಯಿತು. ಬಿಕ್ಕಿ ಬಿಕ್ಕಿ ಅತ್ತಾಗ ಅಪ್ಪನೇ ಸಮಾಧಾನ ಮಾಡಿದರು. ಅಳಬೇಡ.. ಯಾಕೆ ಅಳ್ತಿದಿಯಾ ಎಂದು ಕೇಳಿದರು.

ಡ್ರೋನ್‌ ಮತ್ತು ಅಪ್ಪ ಚೆನ್ನಾಗಿ ಮಾತನಾಡಿಕೊಂಡರು. ಡ್ರೋನ್‌ ನಾನು ಮಾಡಿದ್ದೆಲ್ಲ ತಪ್ಪಾಯ್ತು ಅಂತ ಕ್ಷಮೆ ಕೇಳಿದರು. ಅಮ್ಮ, ಪುಟ್ಟಿ ಹೇಗಿದ್ದಾರೆ ಎಂದು ವಿಚಾರಿಸಿದರು.

ʻನೀನು ಚೆನ್ನಾಗಿ ಆಡ್ತಾ ಇದ್ದೀಯಾ.. ಆಡು. ಊರವರೂ ಚೆನ್ನಾಗಿ ಆಡ್ತಿದ್ದೀಯಾ ಅಂತಿದ್ದಾರೆ. ಪುಟ್ಟೀನೂ ಹೇಳ್ತಿದ್ದಾಳೆ ಎಂದು ಅಪ್ಪ ಹೇಳಿದರು.

ಆಗ ಡ್ರೋನ್‌ ಪ್ರತಾಪ್‌: ಅಪ್ಪ ಒಂದ್ಸಲ ನೋಡಲು ಬಾ ಅನ್ನುತ್ತಾರೆ. ಅದಕ್ಕೆ ಅಪ್ಪ: ಬರ್ತೀನಿ. ಪ್ರತಿದಿನ ನೋಡ್ತಾ ಇದ್ದೀವಿ. ಚೆನ್ನಾಗಿ ಆಡು. ನಾವೇನೂ ಬೇಜಾರು ಮಾಡಿಕೊಂಡಿಲ್ಲ. ಧೈರ್ಯವಾಗಿ ಆಡು ಎಂದು ಧೈರ್ಯ ತುಂಬಿದರು. ಕೊನೆಗೆ ಡ್ರೋನ್‌ ಪ್ರತಾಪ್‌ ಜೋರಾಗಿ, ಐ ಲವ್ ಯೂ ಅಪ್ಪ. ನಾನು ನಿಮ್ಮನ್ನ ತುಂಬಾ ಪ್ರೀತಿಸ್ತೀನಿ ಅಂದ್ರು.

ಇದನ್ನೂ ಓದಿ: BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ

ವೇದಿಕೆಗೆ ಮಂಡಿಯೂರಿ ನಮಸ್ಕರಿಸಿದ ಪ್ರತಾಪ್‌

ಅಪ್ಪನ ಜತೆ ಮಾತನಾಡಿದ ಬಳಿಕ ಬಹಳ ನಿರಾಳರಾದ ಡ್ರೋನ್‌ ಪ್ರತಾಪ್‌, ʻʻನಿಮ್ಮಂದಲೇ.. ಎಲ್ಲಾ ಸರಿ ಆಯ್ತು ಸರ್. 3 ವರ್ಷದಿಂದಲೂ ಅವರೇ ಮಾತನಾಡಸಲಿ, ಅವನೇ ಮಾತನಾಡಿಸಲಿ, ನಾನ್ಯಾಕೆ, ನಾನ್ಯಾಕೆ ಅಂತ ನಡೆಯುತ್ತಲೇ ಇತ್ತು. ಅದು ಬ್ಲಾಕಿಂಗ್‌ವರೆಗೂ ಹೋಯ್ತು. ಅವರಿಗೆ ನಾನು ಇಲ್ಲಿಗೆ ಬರೋದು ಇಷ್ಟವೇ ಇರಲಿಲ್ಲ. ಈಗ ಮಾತನಾಡಿದರು. ತುಂಬಾ ಥ್ಯಾಂಕ್ಸ್ ಸರ್‌. ಇದನ್ನ ನಾನು ಮರೆಯೋದಿಲ್ಲʼʼ ಎಂದು ಹೇಳಿ ಸುದೀಪ್‌ ಅವರಿಗೆ ಕೈಮುಗಿದರು. ಮಂಡಿಯೂರಿ ಬಿಗ್‌ ಬಾಸ್‌ ವೇದಿಕೆಗೆ ನಮಿಸಿದರು.

ಕೊನೆಗೆ ಸುದೀಪ್‌ ಮುಂದೆ ತಪ್ಪೊಪ್ಪಿಕೊಂಡ ಡ್ರೋನ್‌

‘ಬಿಗ್ ಬಾಸ್ ವೇದಿಕೆಯಿಂದ ನಿಮ್ಮ ಜೀವನದಲ್ಲಿ ಹಲವಾರು ಸರಿಹೋಗಿದೆ ಅಂತ ಅಂದುಕೊಳ್ಳುತ್ತೇವೆ. ಬಿಗ್ ಬಾಸ್’ ಶೋ ಇರೋದು ಅದಕ್ಕಲ್ಲ. ಆದರೆ, ಈ ವೇದಿಕೆಯಿಂದ ಒಬ್ಬ ವ್ಯಕ್ತಿಗೆ ಏನೇನು ಒಳ್ಳೆಯದ್ದಾಗಬಹುದು ಎಂಬ ಉದಾಹರಣೆಗಳು ಮೊದಲನೇ ಸೀಸನ್‌ನಿಂದ ಇಲ್ಲಿಯವರೆಗೂ ನಡೆದಿದೆ. ಅದು ಈ ವೇದಿಕೆಗೆ ಮಾತ್ರ ಇರುವ ತಾಕತ್ತುʼʼ ಎಂದು ಸುದೀಪ್‌ ಹೇಳಿದರು.

ಅದಕ್ಕೆ ಡ್ರೋನ್‌ ಪ್ರತಾಪ್‌, ‘’ಖಂಡಿತ ಹೌದು ಸರ್. ಬಹುಶಃ ಇದಾಗಿರಲಿಲ್ಲ ಅಂದಿದ್ರೆ ಗೊತ್ತಿಲ್ಲ ನಾನು ಯಾವಾಗ ಮಾತಾಡ್ತಿದ್ನೋ.. ಏನಾಗುತ್ತಿತ್ತೋ ಅಂತ. ಇಲ್ಲಿಯವರೆಗೂ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಈಗ ನಮ್ಮ ಅಪ್ಪ-ಅಮ್ಮ ಎಲ್ಲವನ್ನೂ ಮರೆತಿದ್ದಾರೆ, ಊರಿನಲ್ಲೂ ಮಾತಾಡುತ್ತಿದ್ದಾರೆ ಅಂದ್ರೆ ನಮ್ಮ ತಂದೆ-ತಾಯಿಗೂ ಗೌರವ ಸಿಗುವ ತರಹ ಆಗಿದೆ ಅಂದುಕೊಳ್ಳುತ್ತಿದ್ದೇನೆ. ಬಿಗ್ ಥ್ಯಾಂಕ್ಸ್ ಟು ಯು ಸರ್ʼʼ ಎಂದರು.

ಕೊನೆಯಲ್ಲಿ ಸುದೀಪ್‌ ಒಂದು ಪ್ರಶ್ನೆ ಕೇಳಿದರು: ಹೊರಗಡೆ ನೀವು ಸಾಧನೆ ಮಾಡಿದ ಹಾಗೆ, ಕೆಲವು ತಪ್ಪುಗಳನ್ನೂ ನೀವು ಮಾಡಿದ್ದೀರಿ ಅಂತ ಒಪ್ಪಿಕೊಳ್ತೀರಾ? ಆಗ ಡ್ರೋನ್‌ ಪ್ರತಾಪ್‌, ‘’ಹೌದು ಸರ್. ಒಪ್ಪಿಕೊಳ್ತೀನಿ’’ ಎಂದರು. ಸುದೀಪ್‌ ತಮ್ಮ ಸಿಗ್ನೇಚರ್‌ ಸ್ಟೈಲ್‌ನಲ್ಲಿ ಆಲ್‌ ದಿ ಬೆಸ್ಟ್‌ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಂಡ್ಯ

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

Varthur Santhosh : ಹಳ್ಳಿಕಾರ್ ಒಡೆಯ ವಿವಾದ ಮತ್ತೆ ತಾರಕಕ್ಕೇರಿದೆ. ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ತಿರುಗಿ ಬಿದ್ದಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

VISTARANEWS.COM


on

By

Varthur Santhosh
Koo

ಮಂಡ್ಯ: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಸ್ಪರ್ಧಿಯಾಗಿ ಗಮನ ಸೆಳೆದಿದ್ದ ವರ್ತೂರಿನ ಕೃಷಿಕ ವರ್ತೂರು ಸಂತೋಷ್‌ ವಿರುದ್ಧ ಹಳ್ಳಿಕಾರ್‌ ಸಂರಕ್ಷಕರು ಸಿಡಿದೆದ್ದಿದ್ದಾರೆ. ವರ್ತೂರ್‌ ಸಂತೋಷ್‌‌ (Varthur Santhosh) ಬಿಗ್ ಬಾಸ್ ಮನೆಯಲ್ಲಿದ್ದಾಗ ಹಳ್ಳಿಕಾರ್ ಒಡೆಯ‌ ಬಿರುದು ವಿವಾದಕ್ಕೆ ಸೃಷ್ಟಿಯಾಗಿತ್ತು.

ಈ ಹಿಂದೆ ಹಳ್ಳಿಕಾರ್ ತಳಿ ಸಂರಕ್ಷಕರು ವರ್ತೂರು ಬೆಂಬಲಿಗರಿಗೆ ತಿಳುವಳಿಕೆ ಹೇಳಲು ಚರ್ಚಾಗೋಷ್ಠಿ ಏರ್ಪಡಿಸಿದ್ದರು. ಅಂದು ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ತಲಾತಲಾಂತರಿಂದ ಹಳ್ಳಿಕಾರ್ ತಳಿ ಸಂರಕ್ಷಕರ ನಡುವೆ ಜಟಾಪಟಿ ಶುರುವಾಗಿತ್ತು. ಈ ವಾಗ್ವಾದದಿಂದಾಗಿ ಕಾರ್ಯಕ್ರಮದ ಅರ್ಧದಲ್ಲೆ ಸಂತೋಷ್ ಬೆಂಬಲಿಗರನ್ನು ಪೊಲೀಸರು ಕಳುಹಿಸಿದ್ದರು. ನಂತರ ಬಿಗ್ ಬಾಸ್ ಮನೆಯಿಂದ ಹೊರ ಬಂದ ವರ್ತೂರ್‌ ಸಂತೋಷ್‌ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದರು. ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಸಂತೋಷ್‌ ಏಕವಚನದಲ್ಲಿ ಹರಿಹಾಯ್ದಿದ್ದರು.

ಇದನ್ನೂ ಓದಿ: Actor Darshan: ದೇಹ ಅಷ್ಟೇ ಅಲ್ಲ, ಮಾತೂ ತೂಕ ಇರ್ಬೇಕು; ದರ್ಶನ್‌ಗೆ ಉಮಾಪತಿ ತಿರುಗೇಟು!

ವರ್ತೂರ್ ಸಂತೋಷ್‌ ಮಾತಿಗೆ ಹಳ್ಳಿಕಾರ್ ಸಂರಕ್ಷಕರು ಮತ್ತೆ ಸಿಡಿದೆದ್ದಿದ್ದಾರೆ. ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ಳುವುದು, ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರಿಂದ ಹಳ್ಳಿಕಾರ್ ಸಂರಕ್ಷಣೆ ಮಾಡುತ್ತಿರುವ ರೈತರಿಗೂ ಹಾಗು ಅವರ ಭಾವನೆಗೂ ಧಕ್ಕೆಯಾಗಿದೆ ಎಂದು ಹಳ್ಳಿಕಾರ್‌ ಸಂರಕ್ಷಕರು ಕಿರಿಕಾರಿದ್ದಾರೆ.

ಗೂಗಲ್‌ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಜರ್ವೇಷನ್ ಎಂದು ರಾಂಗ್ ಮೆಸೇಜ್ ನೀಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುತ್ತೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎಂದು ಬಿಂಬಿತವಾಗಬಹುದು. ಆದ್ದರಿಂದ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಎಲ್ಲಾ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಶೀಘ್ರ ಕಾನೂನು ಸಮರ ಸಾರುತ್ತೇವೆ. ಗೂಗಲ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿಪಟೇಲ್ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

Nannamma Super Star 3: ತಾಯಿಗೆ ಪಾದಪೂಜೆ ಮಾಡಿ ಕ್ಷಮೆ ಕೋರಿದ ವರ್ತೂರ್‌ ಸಂತೋಷ್‌!

Nannamma Super Star 3: ಕಲರ್ಸ್‌ ಕನ್ನಡ ಸೀರಿಯಲ್‌ ಸಂತೆ, ಕಾಮಿಡಿ ಶೋಗಳು, ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿಗಳು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

VISTARANEWS.COM


on

Varthur Santhosh bowed to his mother and apologized!
Koo

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ʻನನ್ನಮ್ಮ ಸೂಪರ್ ಸ್ಟಾರ್ʼ (Nannamma Super Star) ಮತ್ತೆ ಬಂದಿದೆ. ಮಕ್ಕಳ ಮುದ್ದು ಮಾತುಗಳು , ಅವರ ಆಟಗಳು ನೋಡುಗರನ್ನು ರಂಜಿಸುತ್ತಲೇ ಬರುತ್ತಿದೆ. ಎರಡು ಸೀಸನ್‌ ಪ್ರಸಾರವಾದ ಬಳಿಕ ಈಗ ಮೂರನೇ ಸೀಸನ್‌ ಶುರುವಾಗಿದೆ. ಕಲರ್ಸ್‌ ಕನ್ನಡ ಸೀರಿಯಲ್‌ ಸಂತೆ, ಕಾಮಿಡಿ ಶೋಗಳು, ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿಗಳು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಇದೀಗ ʻನನ್ನಮ್ಮ ಸೂಪರ್ ಸ್ಟಾರ್ʼ ವೇದಿಕೆಗೆ ವರ್ತೂರ್‌ ಸಂತೋಷ್‌ ಹಾಗೂ ಅವರ ತಾಯಿ ಬಂದಿದ್ದರು. ಇದೇ ವೇಳೆ ವೇದಿಕೆಯಲ್ಲಿ ವರ್ತೂರ್‌ ಅವರು ತಾಯಿಗೆ ಪಾದಪೂಜೆ ಮಾಡಿ ಕ್ಷಮೆ ಕೋರಿದ್ದಾರೆ.

ಕಲರ್ಸ್‌ ಕನ್ನಡ ಹೊಸ ಪ್ರೋಮೊ ಹಂಚಿಕೊಂಡಿದೆ. ವರ್ತೂರ್‌ ಅವರು ಮಾತನಾಡಿ ʻʻನಮ್ಮ ತಾಯಿ ಇರಲಿಲ್ಲ ಅಂದರೆ ವರ್ತೂರ್‌ ಸಂತೋಷ್‌ ಇವತ್ತು ಇರುತ್ತಿರಲ್ಲ. ಸಣ್ಣ ವಯಸ್ಸಿನಲ್ಲಿಯೇ ನನ್ನ ತಂದೆ ತೀರಿಕೊಂಡಾಗ, ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ತಂದೆ ತಾಯಿ ದೇವರುಗಳು. ದೇವರುಗಳನ್ನು ಬೇರೆಯವರು ಸೃಷ್ಟಿ ಮಾಡಲು ಆಗುವುದಿಲ್ಲ. ನಮ್ಮ ತಾಯಿಗೆ ನನ್ನ ಕಡೆಯಿಂದ ತುಂಬಾ ನೋವಾಗಿದೆ. ನನ್ನ ಕ್ಷಮಿಸಮ್ಮಾʼʼ ಎಂದು ಭಾವುಕರಾದರು.

ಇದನ್ನೂ ಓದಿ: Nannamma Super Star 3: ʻನನ್ನಮ್ಮ ಸೂಪರ್ ಸ್ಟಾರ್‌ʼಗೆ ನಿರೂಪಕಿಯಾದ ಸುಷ್ಮಾ ರಾವ್!

ʻನನ್ನಮ್ಮ ಸೂಪರ್ ಸ್ಟಾರ್ʼ

ಮೊದಲ ಸೀಸನ್‍ನಲ್ಲಿ ವನ್ಷಿಕಾ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ವಿಜೇತರಾಗಿ ಹೊರಹೊಮ್ಮಿದ್ದರು. ಎರಡನೇ ಸೀಸನ್‌ನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗೆ ಅಂದರೆ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ವಿಜೇತರಾಗಿದ್ದರು.ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್‌ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಅಮ್ಮ ಮಕ್ಕಳ ಜತೆಗೆ ಕಿರುತೆರೆಯ ಚಿನಕುರುಳಿ ಎಂತಲೇ ಖ್ಯಾತಿ ಪಡೆದ ವನ್ಷಿಕಾ ನಿರೂಪಕಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ಎರಡನೇ ಸೀಸನ್‌ನಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಶೋ ಬಹಳ ವಿಶೇಷವಾಗಿತ್ತು. ಏಕೆಂದರೆ ಶೋನಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು.

ಕಳೆದ ಸೀಸನ್‌ನಂತೆ ಈ ಬಾರಿಯೂ ಸೃಜನ್ ಲೋಕೇಶ್, ತಾರಾ ಅನುರಾಧಾ, ಅನುಪ್ರಭಾಕರ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸ್ಪರ್ಧಿಗಳ ಜತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳಾಗಿ ನಟಿಸುತ್ತಿರುವ ಸುಷ್ಮಾ ರಾವ್ ‘ನನ್ನಮ್ಮ ಸೂಪರ್ ಸ್ಟಾರ್’ನ ನಿರೂಪಕಿಯಾಗಿ ದ್ದಾರೆ.

Continue Reading

ಕಿರುತೆರೆ

Shanmukh Jaswanth: ʻಬಿಗ್ ಬಾಸ್ʼ ರನ್ನರ್‌ ಅಪ್‌ ಇದೀಗ ಪೊಲೀಸರ ಅತಿಥಿ!

Shanmukh Jaswanth:  ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದ ಕಾರಣಕ್ಕೆ ಪೊಲೀಸರು ಸಂಪತ್‌ ವಿನಯ್‌ರನ್ನು ಬಂಧಿಸಲು ಮನೆಗೆ ತೆರಳಿದ್ದರು. ಈ ವೇಳೆ ಷಣ್ಮುಖ್‌ ಜಸ್ವಂತ್‌ ಗಾಂಜಾ ಸೇವನೆ ಮಾಡುತ್ತಿದ್ದರು.

VISTARANEWS.COM


on

Bigg Boss Telugu contestant Shanmukh Jaswanth arrested
Koo

ಬೆಂಗಳೂರು: ಬಿಗ್ ಬಾಸ್ ತೆಲುಗು ಐದನೇ ಸೀಸನ್‌ ರನ್ನರ್‌ಅಪ್‌ (Shanmukh Jaswanth) , ಯೂಟ್ಯೂಬರ್ ಮತ್ತು ನಟ ಷಣ್ಮುಖ್ ಜಸ್ವಂತ್‌ ಮನೆಯಲ್ಲಿಯೇ ಗಾಂಜಾ ಸೇವಿಸುವಾಗ ಪೊಲೀಸರ ಅತಿಥಿಯಾಗಿದ್ದಾರೆ. ಷಣ್ಮುಖ್ ಅವರ ಜತೆ ಇದ್ದ ಸಹೋದರ ಸಂಪತ್ ವಿನಯ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.  ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದ ಕಾರಣಕ್ಕೆ ಪೊಲೀಸರು ಸಂಪತ್‌ ವಿನಯ್‌ರನ್ನು ಬಂಧಿಸಲು ಮನೆಗೆ ತೆರಳಿದ್ದರು. ಈ ವೇಳೆ ಷಣ್ಮುಖ್‌ ಜಸ್ವಂತ್‌ ಗಾಂಜಾ ಸೇವನೆ ಮಾಡುತ್ತಿದ್ದರು.

ಷಣ್ಮುಖ್ ಅವರ ಸಹೋದರ ಸಂಪತ್ ವಿನಯ್ ಅವರು ಯುವತಿಯೊಂದಿಗೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಗೆ ಇನ್ನೇನು ಒಂದು ವಾರ ಇದೆ ಎನ್ನುವಾಗಲೇ ಇನ್ನೊಬ್ಬ ಮಹಿಳೆಯನ್ನು ವಿವಾಹವಾದರು. ಇದೀಗ ಸಂಪತ್ ತನಗೆ ಮೋಸ ಮಾಡಿದ್ದಾನೆ ಎಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹಿಳೆ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ʻಷಣ್ಮುಖ್ ಮುಖಾಂತರ ಸಂಪತ್‌ನನ್ನು ಭೇಟಿಯಾಗಿದ್ದು, ಈಗ ಬೇರೊಬ್ಬರನ್ನು ಮದುವೆಯಾಗಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಸಂಪತ್‌ ವಿನಯ್‌ ನನಗೆ ಮೋಸ ಮಾಡಿದ್ದಾನೆʼ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಕೇಸ್‌ ದಾಖಲು ಮಾಡಿಕೊಂಡ ಪೊಲೀಸರು, ವಿಚಾರಣೆಗಾಗಿ ಸಂಪತ್‌ನನ್ನು ಕರೆದುಕೊಂಡು ಬರಲು ಆತನ ಮನೆಗೆ ತೆರಳಿದ್ದರು. ಈ ವೇಳೆ ಯುವತಿಯೂ ಕೂಡ ಪೊಲೀಸರೊಂದಿಗೆ ಹೋಗಿದ್ದಾಳೆ. ಪೊಲೀಸರು ಶೋಧ ಕಾರ್ಯ ಮಾಡುವ ವೇಳೆ ಆತ ಗಾಂಜಾ ಸೇವಿಸುತ್ತಿದ್ದ ಎನ್ನುವುದು ಗೊತ್ತಾದ ತಕ್ಷಣ ಬಂಧನ ಮಾಡಿದ್ದಾರೆ.

ಇದನ್ನೂ ಓದಿ: Actor Darshan: 6.2 ಅಡಿ ಎತ್ತರದ ದರ್ಶನ್ ಚಾಕೊಲೇಟ್ ಪ್ರತಿಮೆ ಅನಾವರಣ: ಸ್ನೇಹಿತರ ಬಿಗ್‌ ಸರ್ಪ್ರೈಸ್​

ಪೊಲೀಸರು ಆತನನ್ನು ಮತ್ತು ಆತನ ಸಹೋದರನನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗೂ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ. 2021ರಲ್ಲಿ ಹೈದರಾಬಾದ್‌ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ಷಣ್ಮುಖ್ ಅವರನ್ನು ಬಂಧಿಸಲಾಗಿತ್ತು. ಈ ಹಿಂದೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಬಂಧಿತರಾಗಿದ್ದರು.

ಸಾಫ್ಟ್‌ವೇರ್‌ ಡೆವಲಪರ್‌, ʻಸೂರ್ಯ ವೆಬ್‌ ಸಿರೀಸ್‌ʼ ಮೂಲಕ ಪ್ರಖ್ಯಾತಿ ಪಡೆದಿರುವ ಷಣ್ಮುಖ್‌, ಈ ಮೂಲಕವೇ ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಮನ್ನಣೆ ಪಡೆದುಕೊಂಡಿದ್ದರು. ಶಬರೀಶ್ ಕಂಡ್ರೇಗುಲ ಮತ್ತು ಅವರ ಸಹೋದರ ನಿರ್ದೇಶನದ ʻವೈವಾʼ ಕಿರುಚಿತ್ರದಲ್ಲಿ ನಟಿಸಿದ ಷಣ್ಮುಖ್‌ ಖ್ಯಾತಿ ಗಳಿಸಿದರು. ನಟಿ ದೀಪ್ತಿ ಸುನೈನಾ ಅವರೊಂದಿಗೆ ಡೇಟಿಂಗ್ ಕೂಡ ಮಾಡಿದ್ದರು. 2021ರಲ್ಲಿ ಬಿಗ್ ಬಾಸ್ ತೆಲುಗಿನ ಐದನೇ ಸೀಸನ್‌ನಲ್ಲಿ ಭಾಗವಹಿಸಿದ ಬಳಿಕ ದೀಪ್ತಿ ಸುನೈನಾ ಜತೆ ಬ್ರೇಕಪ್‌ ಮಾಡಿಕೊಂಡರು. ತಮ್ಮ ಆಟದ ಮೂಲಕ ಗಮನಸೆಳೆದಿದ್ದ ಷಣ್ಮುಖ್‌, ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದರು.

Continue Reading

ಕಿರುತೆರೆ

Drone Prathap: ಡ್ರೋನ್​ ಪ್ರತಾಪ್‌ರನ್ನು ಮದುವೆಯಾಗಲು ಮುಗಿಬಿದ್ದ ಹೊಸಪೇಟೆ ಯುವತಿಯರು!

Drone Prathap:  ವಿನಯ್‌ ಅವರು ಆನೆಯ ಮೂಲಕ ಬಂದಿದ್ದರೆ, ಡ್ರೋನ್​ ಪ್ರತಾಪ್​ ಗರುಡದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೋಮೊ ವೈರಲ್‌ ಆಗಿದೆ. ಮಾತ್ರವಲ್ಲ ಪ್ರತಾಪ್‌ ಕೂಡ ಸಖತ್‌ ಆಗಿಯೇ ವೆದಿಕೆ ಮೇಲೆ ಸ್ಟೆಪ್ಸ್‌ ಹಾಕಿದರು.

VISTARANEWS.COM


on

Drone Prathap kendasampige serial santhe
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 ಮುಗಿದು ಇಷ್ಟು ದಿನ ಕಳೆದರು ಅದರ ಕ್ರೇಜ್‌ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ಡ್ರೋನ್‌ ಪ್ರತಾಪ್‌ (Drone Prathap) ಅವರು ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಹೊಸಪೇಟೆಯಲ್ಲಿ ʻಕೆಂಡಸಂಪಿಗೆʼ ಸೀರಿಯಲ್ ಸಂತೆ ಆಗಿದೆ. ಅದರಲ್ಲಿ ಬಿಗ್​ಬಾಸ್​ ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ವಿನಯ್‌ ಅವರು ಆನೆಯ ಮೂಲಕ ಬಂದಿದ್ದರೆ, ಡ್ರೋನ್​ ಪ್ರತಾಪ್​ ಗರುಡದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೋಮೊ ವೈರಲ್‌ ಆಗಿದೆ. ಮಾತ್ರವಲ್ಲ ಪ್ರತಾಪ್‌ ಕೂಡ ಸಖತ್‌ ಆಗಿಯೇ ವೆದಿಕೆ ಮೇಲೆ ಸ್ಟೆಪ್ಸ್‌ ಹಾಕಿದರು.

ಪ್ರೋಮೊದಲ್ಲಿ ವಿನಯ್‌ ಹಾಗೂ ಡ್ರೋನ್‌ಗೆ ನಿರೂಪಕ ನಿರಂಜನ್‌ ಹಲವಾರು ಪ್ರಶ್ನೆಗಳನ್ನೂ ಕೇಳಿದ್ದರು. ಇದೇ ಸಮಯದಲ್ಲಿ ವಿನಯ್​ ಅವರು ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ. ʻʻಎಲ್ಲಿಗೆ ಹೋದರೂ ತಮಗೆ ಎಲ್ಲರೂ ಗೌರವ ಕೊಡಬೇಕು, ಚಪ್ಪಾಳೆಯಿಂದ ಬರಮಾಡಿಕೊಳ್ಳಬೇಕು ಎನ್ನುವ ಕನಸು ಇತ್ತು. ಅದೆಲ್ಲ ಬಿಗ್​ಬಾಸ್​​ಗೆ ಹೋಗಿ ಬಂದ ಮೇಲೆ ಕನಸಾಗಿದೆʼʼ ಎಂದಿದ್ದಾರೆ. ಇದೇ ವೇಳೆ ನಿರೂಪಕ, ಡ್ರೋನ್​ ಪ್ರತಾಪ್​ ಅವರಿಗೆ ʻನೀವ್ಯಾಕೆ ಬಿಗ್​ಬಾಸ್​ ಕಪ್​ ಗೆಲ್ಲಲಿಲ್ಲ?ʼ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರತಾಪ್​ ನಗುವಿನ ಮೂಲಕ ಉತ್ತರ ನೀಡಿದ್ದಾರೆ. ಇದಕ್ಕೆ ಏನು ಉತ್ತರ ನೀಡಿದ್ದಾರೆ ಎನ್ನುವುದು ಕೆಂಡಸಂಪಿಗೆ ಸೀರಿಯಲ್ ಸಂತೆ ನೋಡಿದರೆ ಗೊತ್ತಾಗಲಿದೆ.

ಇದನ್ನೂ ಓದಿ: Drone Prathap: ಬಿಗ್‌ಬಾಸ್‌ ವೇದಿಕೆಯಲ್ಲಿ ನುಡಿದಂತೆ ನಡೆದ ಡ್ರೋನ್‌ ಪ್ರತಾಪ್‌; ಅಭಿಮಾನಿಗಳಿಂದ ಮೆಚ್ಚುಗೆ

ಇನ್ನೊಂದು ಪ್ರೋಮೊದಲ್ಲಿ ಕೂಡ ಹೊಸಪೇಟೆ ಯುವತಿಯರು ಕಾರ್ತಿಕ್‌ ಹಾಗೂ ವಿನಯ್‌ ಅವರ ಫ್ರೆಂಡ್‌ಶಿಪ್‌ ಇಷ್ಟ ಎಂದು ಹೇಳಿದ್ದಾರೆ. ಅದೇ ರೀತಿ ಹೊಸಪೇಟೆಯ ಯುವತಿಯರು ಡ್ರೋನ್​ ಪ್ರತಾಪ್​ ಅವರಿಗೆ, ʻನೀವು ಎಂದರೆ ತುಂಬಾ ಇಷ್ಟ. ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆʼ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್​ ಪ್ರತಾಪ್​ ನಾಚಿ ನೀರಾಗಿದ್ದಾರೆ. ʻಕೆಂಡಸಂಪಿಗೆ ಸೀರಿಯಲ್ ಸಂತೆʼ ಇದೇ ಭಾನುವಾರ ಸಂಜೆ 4.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10 (Bigboss kannada season 10)ರ ಪ್ರಬಲ ಸ್ಪರ್ಧಿಯಾಗಿದ್ದ ಡ್ರೋನ್‌ ಪ್ರತಾಪ್‌ (Drone Prathap) ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದರು. ಸದ್ಯ ಅವರು ಅಭಿಮಾನಿಗಳ ಭೇಟಿ, ರಿಯಾಲಿಟಿ ಶೋ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಬಿಡುವಿಲ್ಲದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್‌ ದಾನ ಮಾಡಿದ ಪ್ರತಾಪ್‌

ಬಿಗ್​ಬಾಸ್ ವೇದಿಕೆ ಮೇಲೆ ಮಾತನಾಡಿದ್ದ ಪ್ರತಾಪ್, ತಾನು ಬಿಗ್​ಬಾಸ್​ ಗೆದ್ದರೆ ಬರುವ ಹಣ, ಇನ್ನಿತರ ಉಡುಗೊರೆಗಳನ್ನು ಅರ್ಹರಿಗೆ ದಾನ ಮಾಡುವುದಾಗಿ ಹೇಳಿದ್ದರು. ರನ್ನರ್ ಅಪ್ ಆಗಿದ್ದ ಪ್ರತಾಪ್​ಗೆ 10 ಲಕ್ಷ ರೂ. ಬಹುಮಾನದ ಜತೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್‌ ಉಡುಗೊರೆಯಾಗಿ ನೀಡಲಾಗಿತ್ತು. ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Continue Reading
Advertisement
Karthik Mahesh And Namratha Gowda in wedding dress For Ad Shoot
ಸಿನಿಮಾ14 mins ago

Karthik-Namratha: ಹಸೆಮಣೆ ಮೇಲೆ ಕಾರ್ತಿಕ್‌-ನಮ್ರತಾ: ಸಂಗೀತಾಗೆ `ಕರಿಮಣಿ ಮಾಲೀಕ’ ಯಾರು?

WPL 2024
ಕ್ರಿಕೆಟ್14 mins ago

WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

Shahjahan-Sheikh
ದೇಶ18 mins ago

Sandeshkhali Violence: ಲೈಂಗಿಕ ದೌರ್ಜನ್ಯ ಆರೋಪಿ, ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ ಬಂಧನ

Doctor listens to the human lungs
ಆರೋಗ್ಯ44 mins ago

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

kannada sign boards
ಪ್ರಮುಖ ಸುದ್ದಿ1 hour ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ1 hour ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ1 hour ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ1 hour ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ2 hours ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ2 hours ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ4 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌