Site icon Vistara News

BBK Season 10: ಬಿಗ್‌ಬಾಸ್‌ ಮನೆಯಲ್ಲಿ ಯಾರೂ ಮುಗ್ಧರಿಲ್ಲ!; ಇಶಾನಿ ಮನದಾಳ

eshani

eshani

ಬೆಂಗಳೂರು: ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಬಿಗ್‌ಬಾಸ್‌ (BBK Season 10) ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ರ‍್ಯಾಪರ್‌ ಇಶಾನಿ (Rapper Eshani). ಇಷ್ಟು ವಾರಗಳ ಕಾಲದ ಅವರ ಬಿಗ್‌ಬಾಸ್ ಜರ್ನಿ ಹೇಗಿತ್ತು? ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು? ಎನ್ನುವ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಮರುಕ್ಷಣವೇ JioCinemaಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎನ್ನುವುದನ್ನು ಅವರ ಮಾತುಗಳಲ್ಲಿಯೇ ಕೇಳೋಣ.

ಆತ್ಮವಿಶ್ವಾಸ ಇತ್ತು

ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದೀನಿ. 99% ನಾನು ಇರ್ತೀನಿ ಅಂತ ಆತ್ಮವಿಶ್ವಾಸ ಇತ್ತು. ಉಳಿದ 1% ಆಗಲ್ಲ ಅನಿಸಿತ್ತು. ನನಗೆ ಹಠ ಜಾಸ್ತಿ. ಗೇಮ್ ಆಡುವ ಅವಕಾಶ ಜಾಸ್ತಿ ಸಿಗಲಿಲ್ಲ. ಅದರಿಂದ ನನಗೆ ಬೇಜಾರಾಗಿತ್ತು. ನನ್ನನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ನನ್ನ ಶಕ್ತಿ ಏನು ಎನ್ನುವುದನ್ನು ತೋರಿಸಲಾಗಲಿಲ್ಲ. ನಾನು ಸ್ವಲ್ಪ ಎಮೋಷನಲ್ ಆಗಿದೀನಿ. ಆದರೆ ಎಮೋಷನಲ್ ಆಗಿರುವುದು, ವೀಕ್‌ನೆಸ್ ಅಲ್ವೇ ಅಲ್ಲ. ಅದು ಸ್ಟ್ರೆಂಥ್‌. ಆದರೆ ಅದನ್ನು ನೋಡಿ ಯಾವಾಗ್ಲೂ ನನ್ನ ನಾಮಿನೇಷನ್‌ ಮಾಡ್ತಿದ್ರು. ಕಳಪೆಯಲ್ಲಿ ಹಾಕ್ತಿದ್ರು. ಇದನ್ನೇ ರೀಸನ್ ಕೊಡ್ತಿದ್ರು ಎಂದು ಇಶಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಪ್ರಕಾರ ಅದು ಸರಿ ಎಂದು ನನಗೆ ಅನಿಸುವುದಿಲ್ಲ. ಮನೆಯೊಳಗೆ ಗುಂಪುಗಳಿದ್ದವು. ನಾನು ಬೇರೆ ಗುಂಪಿನಲ್ಲಿದ್ದರೆ ನನಗೆ ಇನ್ನೂ ಅವಕಾಶಗಳು ಸಿಗುತ್ತಿತ್ತು ಎಂದೂ ಅನಿಸುವುದಿಲ್ಲ. ವಿನಯ್‌, ನಮ್ರತಾ, ಮೈಕಲ್, ಸ್ನೇಹಿತ್ ಎಲ್ಲರ ಜತೆ ಖುಷಿಯಾಗಿದ್ದೆ. ಅವರು ನನಗೆ ಯಾವಾಗಲೂ ಸಪೋರ್ಟ್‌ ಮಾಡಿದ್ದಾರೆ. ಅವರಿಂದ ನನಗೆ ಡಿಸ್ಟ್ರಾಕ್ಷನ್ ಆಗಿಲ್ಲ. ಆದರೆ ನನ್ನ ವೈಯಕ್ತಿಕ ಆಯ್ಕೆಗಳಿಂದ ನನಗೆ ತೊಂದರೆಯಾಗಿರುವುದು. ಅವರು ನನಗೆ ತುಂಬ ಒಳ್ಳೆಯ ಸ್ನೇಹಿತರು ಎಂದು ಇಶಾನಿ ತಿಳಿಸಿದ್ದಾರೆ.

ಮತ್ತೆ ಅವಕಾಶ ಸಿಕ್ಕರೆ…

ಮತ್ತೆ ಬಿಗ್‌ಬಾಸ್‌ಗೆ ಹೋಗುವುದು ಸಾಧ್ಯವಾದರೆ ನಾನು ನನ್ನದೇ ಲೆಕ್ಕಾಚಾರ ಇಟ್ಟುಕೊಂಡು ಆಟ ಆಡುತ್ತೇನೆ. ಯಾರು ಫೇಕ್, ಯಾರು ರಿಯಲ್ ಎಂದು ವಿಶ್ಲೇಷಿಸಿ ಮುಂದಡಿ ಇಡುವೆ. ಟಾಸ್ಕ್‌ ವಿಷಯಲ್ಲಿಯೂ ನಾನು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ. ಏನಾದರೂ ಇರಲಿ, ನಾನು ನನಗೋಸ್ಕರ ಆಡುತ್ತಿದ್ದೆ. ಇನ್ಯಾರಿಗೋಸ್ಕರನೋ ಅಲ್ಲ. ಟೀಮ್‌ನಲ್ಲಿ ಆಡಬೇಕು ಅಂದರೆ ನಾನು ನನಗೋಸ್ಕರ ಆಟ ಆಡ್ತಿದ್ದೆ. ಟೀಮ್ ಗೆಲ್ಲಬೇಕು ಅಂತಲೇ ಆಟ ಆಡ್ತಿದ್ದೆ, ಆದರೆ ನಾನು ಟೀಮ್ ಲೀಡರ್ ಆಗಬೇಕು ಎಂದು ಗಟ್ಟಿಯಾಗಿ ಹೇಳುತ್ತಿದ್ದೆ. ಎಂಪಥಿ ಮತ್ತು ಇಂಟಲಿಜೆನ್ಸ್‌ನಲ್ಲಿ ನನಗೆ ನಂಬಿಕೆ ಇದೆ. ಇವೆರಡನ್ನೂ ಉಪಯೋಗಿಸಿಕೊಳ್ಳಲು ಫೋಕಸ್ ಮಾಡುತ್ತಿದ್ದೆ ಎಂದು ರ‍್ಯಾಪರ್‌ ಹೇಳಿದ್ದಾರೆ.

ಯಾರು ಫೇಕ್?

ಮನೆಯೊಳಗೆ ವಿನಯ್‌, ನಮ್ರತಾ ಎಲ್ರೂ ಪ್ರಾಮಾಣಿಕರಾಗಿಯೇ ಇದ್ದರು. ನನ್ನ ಪ್ರಕಾರ ಮೈಕಲ್ ತುಂಬ ಪ್ರಾಮಾಣಿ. ಅದು ಪ್ರಾರಂಭದಲ್ಲಿ ನನಗೆ ಕಾಣಿಸಲಿಲ್ಲ. ಕೊನೆಕೊನೆಗೆ ಕಾಣಿಸಿತು. ಈಗ ನಾನು ವಾಪಸ್ ಹೋಗಲು ಸಾಧ್ಯವಾದರೆ ಎಲ್ಲದಕ್ಕೂ ಮೈಕಲ್ ಸೈಡ್ ತಗೋತಿದ್ದೆ. ತುಕಾಲಿ ಅವರನ್ನು ನಾನು ಊಸರವಳ್ಳಿ ಎಂದು ಕರೆದಿದ್ದೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಅವರು ಒಂದ್ಸಲ ನನ್ನ ಜತೆ ಸರಿಯಾಗಿ ಮಾತಾಡ್ತಿದ್ರು. ಮತ್ತೊಮ್ಮೆ ಇನ್ನೊಂದು ಗ್ರೂಪಲ್ಲಿ ಹೋಗಿ ಇನ್ನೇನಾದ್ರೂ ಹೇಳ್ತಿದ್ರು. ಉದ್ದೇಶಪೂರ್ವಕವಾಗಿ ಡ್ರಾಮಾ ಕ್ರಿಯೇಟ್ ಮಾಡಿ ಕಾಣೆಯಾಗ್ತಿದ್ರು. ಹಾಗಾಗಿ ಅವರು ನನಗೆ ಒಂಚೂರು ಇಷ್ಟವಾಗಲಿಲ್ಲ. ಅವರು ನಂಬರ್ ಒನ್ ಫೇಕ್. ಎರಡನೇ ಫೇಕ್‌ ನೀತು. ಅವರಿಗೆ ಪರ್ಸನಾಲಿಟಿ ಇರಲೇ ಇಲ್ಲ. ನನ್ನ ಪ್ರಕಾರ ಮನೆಯಲ್ಲಿ ಯಾರೂ ಮುಗ್ಧರಿಲ್ಲ. ಪ್ರತಾಪ್ ಇನೋಸೆಂಟ್ ಅಂದುಕೊಂಡಿದ್ದೆ. ಸ್ವಲ್ಪ ಮುಗ್ಧತೆ ಇದೆ ಅವರಲ್ಲಿ. ಆದರೆ ಅವರು ತುಂಬ ಬುದ್ಧಿವಂತರು. ಅಂದರೆ ಪಾಸಿಟೀವ್ ದೃಷ್ಟಿಯಿಂದಲೇ ಬುದ್ಧಿವಂತರು. ಗೇಮ್ ಹೇಗೆ ಆಡಬೇಕು ಎಂದು ಅವರಿಗೆ ಗೊತ್ತು. ಹಾಗಾಗಿ ಖಂಡಿತವಾಗಿ ಮನೆಯಲ್ಲಿ ಯಾರೂ ಮುಗ್ಧರಿಲ್ಲ ಎಂದು ಇಶಾನಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ರು ಸ್ಪೆಷಲ್‌ ಗೆಸ್ಟ್‌

ಇಶಾನಿ ಫೈನಲ್ ಲೀಸ್ಟ್‌!

ಬಿಗ್‌ಬಾಸ್ ಫಿನಾಲೆಯಲ್ಲಿ ಇರುವ ಐದು ಸ್ಫರ್ಧಿಗಳಲ್ಲಿ ನಾನೂ ಒಬ್ಬಳಾಗಬೇಕು ಎಂದು ನನಗೆ ಆಸೆ ಇತ್ತು. ಆದರೆ ಆಗಲಿಲ್ಲ. ನನ್ನ ಪ್ರಕಾರ ವಿನಯ್, ಮೈಕಲ್, ಸಂಗೀತಾ, ಕಾರ್ತಿಕ್‌ ಮತ್ತು ನಮ್ರತಾ ಕೊನೆಯವರೆಗೆ ಉಳಿದುಕೊಳ್ಳುತ್ತಾರೆ. ಇವರಲ್ಲಿ ಮೈಕಲ್ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ಇಶಾನಿ ಹೇಳಿದ್ದಾರೆ.

ಜಿಯೊ ಸಿನಿಮಾ ಟಾಸ್ಕ್‌ಗಳ ಮಜಾ

ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳು ತುಂಬ ಮಜವಾಗಿದ್ದವು. ಕಳೆದ ವಾರ ಲಗೋರಿ ಆಡಿದೆವು. ಅದು ತುಂಬ ಮಜವಾಗಿತ್ತು. ಯಾಕೆಂದರೆ ಫಸ್ಟ್ ಟೈಮ್ ನಾನು ಲಗೋರಿ ಆಡುತ್ತಿರುವುದು. ನನಗೆ ಲಗೋರಿ ಏನೆಂದೇ ಗೊತ್ತಿರಲಿಲ್ಲ. ಅದನ್ನು ಆಡಿ ಖುಷಿಯಾಯ್ತು. ಹಾಗೆಯೇ ಆನೆಗೆ ಬಾಲ ಬಿಡಿಸುವ ಟಾಸ್ಕ್ ಕೂಡ ಸಖತ್ ಎಂಜಾಯ್ ಮಾಡಿದೆ. ಆ ಥರ ಸಾಕಷ್ಟ ಟಾಸ್ಕ್ ಇದ್ದವು ಎಂದು ಇಶಾನಿ ಖುಷಿಯಿಂದ ಹೇಳಿದ್ದಾರೆ.

ಕನ್ನಡ ರ‍್ಯಾಪ್ ಬರೆಯಬೇಕು

ಕನ್ನಡ ಇನ್ನೂ ಕಲಿಯುತ್ತಿದ್ದೇನೆ. ಇನ್ನೂ ಚೆನ್ನಾಗಿ ಕಲಿಯಬೇಕು ಅಂತ ಆಸೆ ಇದೆ. ಇನ್ನಷ್ಟು ಸ್ಪಷ್ಟವಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ ರ‍್ಯಾಪ್ ಸಾಂಗ್ ಬರೆಯಬೇಕು ಎಂಬ ಆಸೆ ಇದೆ. ಬಿಗ್‌ಬಾಸ್ ಮನೆಯೊಳಗೂ ಟ್ರೈ ಮಾಡುತ್ತಿದ್ದೆ. ಸ್ವಲ್ಪ ಟೈಮ್ ತಗೊಳ್ತು. ಸ್ನೇಹಿತರ ಹೆಲ್ಪ್ ತಗೊಳ್ತಿದ್ದೆ. ಅವರ ಜತೆ ಚರ್ಚಿಸುತ್ತಿದ್ದೆ. ಅದೆಲ್ಲ ಕಲಿಯುತ್ತಿದ್ದೆ. ಇನ್ನು ಮುಂದೆಯೂ ಕನ್ನಡದಲ್ಲಿ ಬರೆಯುವುದನ್ನು ಮುಂದುವರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಇಶಾನಿ ನುಡಿದಿದ್ದಾರೆ.

ಬಿಗ್‌ಬಾಸ್ ಮನೆ ನೆನಪಾದ್ರೆ ಅಳ್ತೀನಿ

ಬಿಗ್‌ಬಾಸ್ ಮನೆ ನೆನಪಾದ್ರೆ ಅಳು ಬರುತ್ತೆ. ಮನೆಯೊಳಗೆ ಅಡುಗೆ ಮಾಡುವುದು, ಬಾತ್ ರೂಮ್, ಅಡುಗೆ ಕೋಣೆ ಕ್ಲೀನ್ ಮಾಡುವುದು, ನನ್ನ ಹಾಸಿಗೆ ನಾನೇ ನೋಡಿಕೊಳ್ಳುವುದು ಇದೆಲ್ಲ ನನಗೆ ಹೊಸದು. ಇದೆಲ್ಲದರ ಮಹತ್ವ ಬಿಗ್‌ಬಾಸ್ ಮನೆಯೊಳಗೆಬಂದ ಮೇಲೆ ಅರ್ಥವಾಯ್ತು. ಅಲ್ಲಿನ ನನ್ನ ಫ್ರೆಂಡ್ಸ್‌ ಎಲ್ರನ್ನೂ ತುಂಬ ಮಿಸ್ ಮಾಡ್ಕೋತೀನಿ. ಸಂಗೀತಾ ಬಂದು ಎಲ್ಲರನ್ನು ಹೆದರಿಸುತ್ತಿದ್ರು, ತಲೆದಿಂಬಿನಲ್ಲಿ ಹೊಡೆದಾಡಿಕೊಳ್ತಿದ್ವಿ. ಅವೆಲ್ಲಾನೂ ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್ ಶೋ ನಾನು ತುಂಬ ಕೃತಜ್ಞಳಾಗಿದೀನಿ. ನನಗೆ ಇನ್ನೊಮ್ಮೆ ಅವಕಾಶ ಸಿಕ್ರೆ ಬಂದೇ ಬರ್ತಿನಿ. ಬರುವ ಆಸೆಯೂ ಇದೆ ಎಂದು ಇಶಾನಿ ಹೇಳಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version