BBK Season 10: ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ರು ಸ್ಪೆಷಲ್‌ ಗೆಸ್ಟ್‌ Vistara News

ಕಿರುತೆರೆ

BBK Season 10: ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ರು ಸ್ಪೆಷಲ್‌ ಗೆಸ್ಟ್‌

BBK Season 10: ದಿನ ಕಳೆದಂತೆ ಬಿಗ್‌ಬಾಸ್‌ ಕನ್ನಡ ಸೀಸನ್‌ ವೀಕ್ಷಕರನ್ನು ಆಕರ್ಷಿಸುತ್ತಿದ್ದು, ಈ ಬಾರಿ ಮನೆಯೊಳಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ.

VISTARANEWS.COM


on

guruji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್‌ 10 (BBK Season 10) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ತಕ್ಕಂತೆ ದಾಖಲೆಯ ಪ್ರಮಾಣದಲ್ಲಿ ಟಿಆರ್‌ಪಿಯೂ ದೊರೆತಿದೆ. ಸ್ಪರ್ಧಿಗಳ ಜಗಳ, ಸ್ನೇಹ, ಒಂದಲ್ಲ ಒಂದು ವಿವಾದ ಇನ್ನಿತರ ಕಾರಣಗಳಿಂದ ಈ ಶೋ ಗಮನ ಸೆಳೆಯುತ್ತಿದೆ. ಜತೆಗೆ ಮನೆಯೊಳಕ್ಕೆ ವಿಶೇಷ ಅತಿಥಿಗಳೂ ಆಗಮಿಸಿ ಸ್ಪರ್ಧಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದೀಗ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಬ್ರಹ್ಮಾಂಡ ಗುರೂಜಿ (Brahmanda Guruji) ಎಂದೇ ಜನಪ್ರಿಯರಾಗಿರುವ ನರೇಂದ್ರ ಬಾಬು ಶರ್ಮಾ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.

ನರೇಂದ್ರ ಬಾಬು ಶರ್ಮಾ ಬಿಗ್‌ಬಾಸ್‌ ಮನೆಯೊಳಗೆ ಆಗಮಿಸುವ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅವರು ಮನೆಯೊಳಗೆ ಆಗಮಿಸಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಗುರೂಜಿ ಮನೆಯೊಳಗೆಲ್ಲ ಓಡಾಡುತ್ತಿರುವುದು ಪ್ರೋಮೋದಲ್ಲಿ ಕಂಡುಬಂದಿದೆ. ಅವರು ಸ್ಪರ್ಧಿಗಳ ಜತೆ ಲವಲವಿಕೆಯಿಂದ ಮಾತುಕತೆಯನ್ನೂ ನಡೆಸಿದ್ದಾರೆ. ಅವರು ಮನೆಯಲ್ಲಿ ಎಲ್ಲರನ್ನು ಹುಡುಕುತ್ತಾ ಓಡಾಡುತ್ತಿದ್ದಾರೆ. ʼʼಎಲ್ರೋ ಇದ್ದೀರಾ? ಬಿಗ್ ಬಾಸ್ ಇವರನ್ನೆಲ್ಲಾ ಒಂದೆಡೆ ಸ್ಟ್ಯಾಚು ಮಾಡಿ ಬಿಡಿ. ನನ್ನ ಕೈಯಲ್ಲಿ ಓಡಾಡಲು ಆಗಲ್ಲ. ಮನೆಯಿಂದ ಹೊರಗೆ ಹೋಗ್ತಿನಿʼʼ ಎಂದು ಎಂದಿನ ತಮ್ಮ ಶೈಲಿಯಲ್ಲಿ ಡೈಲಾಗ್‌ ಹೊಡೆದಿದ್ದಾರೆ.

ಬಿಗ್‌ಬಾಸ್‌ ನಂಟು

ಬ್ರಹ್ಮಾಂಡ ಗುರೂಜಿ ಮತ್ತು ಬಿಗ್‌ಬಾಸ್‌ ನಡುವೆ ಉತ್ತಮ ನಂಟಿದೆ. ಅವರು ಮೊದಲ ಸೀಸನ್​ನ ಸ್ಪರ್ಧಿಯಾಗಿದ್ದರು. ಅಲ್ಲದೆ ಮೂರನೇ ರನ್ನರ್​ ಅಪ್​ ಆಗಿ ಅವರು ಹೊರಹೊಮ್ಮಿದ್ದರು. ಜೀ ಕನ್ನಡ ವಾಹಿನಿಯ ಬೃಹತ್ ಬ್ರಹ್ಮಾಂಡ, ಸುವರ್ಣ ವಾಹಿನಿಯ ಭವ್ಯ ಬ್ರಹ್ಮಾಂಡ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನ ಬ್ರಹ್ಮಾಂಡದಂತಹ ಕಾರ್ಯಕ್ರಮಗಳ ಸರಣಿಯಿಂದ ಅವರು ಜನಪ್ರಿಯಯಾಗಿದ್ದರು. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಬಳಿಕ ಬಿಗ್‌ ಬಾಸ್‌ ಸ್ಪರ್ದಿಯಾಗಿ ಇನ್ನಷ್ಟು ಗಮನ ಸೆಳೆದರು. ಸದ್ಯ 10ನೇ ಸೀಸನ್‌ ಮನೆಯೊಳಗೆ ಬಂದಿದ್ದು, ಯಾವ ರೀತಿಯ ಟ್ವಿಸ್ಟ್‌ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: BBK Season 10 : ಡ್ರೋನ್‌ ಪ್ರತಾಪ್‌ ಅಮ್ಮನಿಗೆ LOVE YOU ಎಂದು ಹೇಳಿದ ಕಿಚ್ಚ ಸುದೀಪ್!

ಡಬಲ್‌ ಎಲಿಮಿನೇಷನ್‌

ಬಿಗ್‌ ಬಾಸ್‌ ಈ ವಾರ ಸ್ಪರ್ಧಿಗಳಿಗೆ ಡಬಲ್‌ ಶಾಕ್‌ ನೀಡಿತ್ತು. ಅಂದರೆ ಎರಡೆರಡು ಎಲಿಮಿನೇಷನ್‌ ನಡೆಸಲಾಗಿದೆ. ಶನಿವಾರದ (ನ. 18) ಸಂಚಿಕೆಯಲ್ಲಿ ಇಶಾನಿ ಮನೆಯಿಂದ ಹೊರ ನಡೆದಿದ್ದರೆ, ಭಾನುವಾರ(ನ. 19)ದ ‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಸಂಚಿಕೆಯಲ್ಲಿ ಭಾಗ್ಯಶ್ರೀ ಔಟ್‌ ಆಗಿದ್ದರು. ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ದಸರಾ ಹಬ್ಬ ಮತ್ತು ವರ್ತೂರ್ ಸಂತೋಷ್‌ ಅವರ ಕಾರಣದಿಂದ ಎಲಿಮಿನೇಷನ್ ನಡೆಯದೆ ಸ್ಪರ್ಧಿಗಳು ಬಚಾವಾಗಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲ. ಬಿಗ್‌ ಬಾಸ್‌ ಮನೆಯಿಂದ ಇದುವರೆಗೆ 5 ಮಂದಿ ಹೊರ ಹೋಗಿದ್ದಾರೆ. ಸ್ನೇಕ್ ಶ್ಯಾಮ್, ಗೌರೀಶ್‌ ಅಕ್ಕಿ, ರಕ್ಷಕ್ ನಂತರ ಇದೀಗ ಇಶಾನಿ ಮತ್ತು ಭಾಗ್ಯಶ್ರೀ ತಮ್ಮ ಸ್ಪರ್ಧೆಯನ್ನು ಕೊನೆಗೊಳಿಸಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

ಉದಯ ಟಿವಿಯಲ್ಲಿ ಪ್ರಸಾರವಾಗುವ ‘ಕನ್ಯಾದಾನʼ ಧಾರಾವಾಹಿಯಲ್ಲಿ (Kanyadana Serial) ನಟಿಸುತ್ತಿದ್ದಾರೆ. ಈ ಬಗ್ಗೆ ರೀಲ್ಸ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

VISTARANEWS.COM


on

galipata neetu
Koo
galipata neetu in kanyadana kannada serial

ಆರಂಭದಲ್ಲಿ ಕೆಲ ಧಾರಾವಾಹಿಗಳಲ್ಲಿ ಮಿಂಚಿದ್ದ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ಅವರು ಮತ್ತೆ ಕಿರುತೆರೆ ಲೋಕಕ್ಕೆ ಕಮ್‌ಬ್ಯಾಕ್‌ ಆಗಿದ್ದಾರೆ. ‘ಬಿಗ್ ಬಾಸ್‌’ ಕನ್ನಡ ಸೀಸನ್ 2 ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ನೀತು ಕಾಣಿಸಿಕೊಂಡಿದ್ದಾರೆ. ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗುವ ‘ಕನ್ಯಾದಾನʼ ಧಾರಾವಾಹಿಯಲ್ಲಿ (Kanyadana Serial) ನಟಿಸುತ್ತಿದ್ದಾರೆ. ಈ ಬಗ್ಗೆ ರೀಲ್ಸ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

galipata neetu

ಕನ್ಯಾದಾನ ಧಾರಾವಾಹಿಯಲ್ಲಿ ತಂದೆ ತನ್ನ ಐದು ಹೆಣ್ಣು ಮಕ್ಕಳ ಜೀವನ ಸುಂದರವಾಗಿ ಇರಬೇಕು ಎಂದು ಏನೆಲ್ಲ ಮಾಡುತ್ತಾನೆ ಎಂಬುದು ಕಥೆಯ ಒನ್‌ಲೈನ್‌ ಸ್ಟೋರಿ.

galipata neetu

ಈ ಹಿಂದೆ ನಟಿ ಸುಧಾರಾಣಿ ಅವರು ವಿಶೇಷ ಪಾತ್ರದಲ್ಲಿ ‘ಕನ್ಯಾದಾನ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಈಗಾಗಲೇ 600 ಸಂಚಿಕೆಗಳನ್ನು ಪೂರೈಸಿದೆ ಧಾರಾವಾಹಿ. ಇದೀಗ ನೀತು ಅವರ ಎಂಟ್ರಿ ಆಗಿದೆ.

ಇದನ್ನೂ ಓದಿ: Physical Abuse: ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನ ಬಂಧನ

galipata neetu

ಅಕ್ಕ-ತಂಗಿಯರಾದ ರಚನಾ ಹಾಗೂ ದೀಪು ನಡುವೆ ವಾರ್‌ ಆಗಿದೆ. ಇದು ತಂದೆ ಅಶ್ವತ್ಥನ ದುಃಖಕ್ಕೆ ಕಾರಣವಾಗಿದೆ. ಮಕ್ಕಳಿಬ್ಬರ ಈ ನಡೆಗೆ ಬೇಸತ್ತು ಅಶ್ವತ್ಥ ಮನೆ ಬಿಟ್ಟು ಹೋಗಿದ್ದಾನೆ. ರಚನಾ ಮತ್ತು ದೀಪು ನಡುವಿನ ಮನಸ್ತಾಪವನ್ನು ನೀತು ಹೇಗೆ ಸರಿಪಡಿಸುತ್ತಾರೆ? ಎಂಬುದೇ ಈ ವಿಶೇಷ ಸಂಚಿಕೆಯಲ್ಲಿದೆ.

galipata neetu

ಗಾಳಿಪಟ’ ಸಿನಿಮಾ ತೆರೆಕಂಡು 15 ವರ್ಷಗಳು ಕಳೆದಿದೆ. ದಿಗಂತ್‌ಗೆ ನಾಯಕಿಯಾಗಿ ನೀತು ಶೆಟ್ಟಿ ನಟಿಸಿದ್ದರು. ಇದೀಗ ಮತ್ತೆ ನಟಿಯ ನಟನೆಯನ್ನು ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ ಅವರ ಫ್ಯಾನ್ಸ್‌!

Continue Reading

ಕಿರುತೆರೆ

BBK SEASON 10: ಸ್ಪರ್ಧಿಗಳ ಕಾಲಿಗೆ ಹಗ್ಗ; ಕಣ್ಣೀರಿಟ್ಟ ಸಿರಿ

BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಸಿರಿ ಕಣ್ಣೀರು ಸುರಿಸಿದ್ದಾರೆ. ಟಾಸ್ಕ್‌ ವೇಳೆ ಅವರಿಗೆ ನೋವಾಗಿದ್ದು, ನೋಡಿಕೊಂಡು ಆಡಿ ಎಂದು ಇತರ ಸ್ಪರ್ಧಿಗಳಿಗೆ ಹೇಳಿದ್ದಾರೆ.

VISTARANEWS.COM


on

siri bbk
Koo

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಶೋ ದಿನದಿಂದ ದಿನಕ್ಕೆ ರೋಚಕವಾಗುತ್ತ ಸಾಗುತ್ತಿದೆ. ಇತ್ತೀಚೆಗಷ್ಟೇ 50 ದಿನ ಪೂರೈಸಿರುವ ಶೋಗೆ ವೈಲ್ಡ್‌ ಕಾರ್ಡ್‌ ಮೂಲಕ ಇಬ್ಬರು ಸ್ಪರ್ಧಿಗಳು ಸೇರ್ಪಡೆಯಾಗಿದ್ದಾರೆ. ಇತ್ತ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಇಂದು ನೀಡಿದ್ದ ಟಾಸ್ಕ್‌ ಸಖತ್‌ ಚಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಕಂಡು ಬಂದಿದೆ. Jio Cinema ಬಿಡುಗಡೆ ಮಾಡಿರುವ ಹೊಸ ಪ್ರೋಮೊದಲ್ಲಿ ಈ ಆಟದ ರೂಪುರೇಷೆಗಳು ಜಾಹೀರಾಗಿವೆ.

ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿ ಹೋಗಿ ಬಾಲ್‌ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.
ಈ ಟಾಸ್ಕ್‌ನಲ್ಲಿ ಬಾಲ್‌ ಎತ್ತುವಾಗ ಎರಡೂ ತಂಡದ ನಡುವೆ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್‌ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಈ ಝಲಕ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕಣ್ಣೀರಿಟ್ಟ ಸಿರಿ

ಈ ಟಾಸ್ಕ್​ ವೇಳೆ ಕೆಲವರು ನಡೆದುಕೊಂಡ ರೀತಿಯಿಂದ ಸಿರಿಗೆ ಕಷ್ಟ ಆಗಿದೆ. ಅವರು ನೋವಿನಿಂದ ಕಣ್ಣೀರು ಹಾಕಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಆಟ ಗೆಲ್ಲಲೇಬೇಕು ಎಂಬ ಜಿದ್ದಿನಿಂದ ಒಬ್ಬರ ಮೇಲೆ ಮತ್ತೊಬ್ಬರು ಬಿದ್ದಿದ್ದರಿಂದ ಸಿರಿ ಅವರಿಗೆ ನೋವಾಗಿದೆ. ಮಾತ್ರವಲ್ಲ ಕೆಲವು ಸ್ಪರ್ಧಿಗಳು ತೊಂದರೆ ಅನುಭವಿಸಿದ್ದಾರೆ. ಸ್ನೇಹಿತ್​, ಮೈಕೆಲ್​ ಮುಂತಾದವರು ಬಲ ಪ್ರಯೋಗಿಸಿ ಬೇರೆಯವರನ್ನು ತಳ್ಳಿದ್ದಾರೆ. ‘ಏನಿದು ರಾಕ್ಷಸರ ರೀತಿ?ʼ ಎಂದು ಮಹಿಳಾ ಸ್ಪರ್ಧಿಗಳು ಟೀಕಿಸಿದ್ದಾರೆ.

ಇದನ್ನೂ ಓದಿ: BBK SEASON 10: ಕನ್ನಡ ಪತ್ರವನ್ನು ಓದಿದ ಮೈಕಲ್‌; ದಂಗಾದ ಸ್ಪರ್ಧಿಗಳು

ಗಾಯಗೊಂಡ ತನಿಷಾ ಕುಪ್ಪಂಡ 

ಟಾಸ್ಕ್‌ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನುವ ಸುದ್ದಿಯ ನಡುವೆಯೇ ಈ ಬೆಳವಣಿಗೆ ಕಂಡು ಬಂದಿದೆ. ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ತನಿಷಾ ನಾಮಿನೇಟ್ ಆಗಿದ್ದರು. ಅವರನ್ನು ಸೇವ್ ಮಾಡುವಂತೆ ಕಾರ್ತಿಕ್ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿದ್ದ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಸದ್ಯ ತನಿಷಾ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

Mandya Ramesh: ಶೂಟಿಂಗ್ ವೇಳೆ ಮಂಡ್ಯ ರಮೇಶ್‌ಗೆ ಗಾಯ; ಆಸ್ಪತ್ರೆಗೆ ದಾಖಲು

Mandya Ramesh: ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ನಟ ಮಂಡ್ಯ ರಮೇಶ್‌ ಅವರ ಬಲಗಾಲು, ಬಲಗೈ ಮತ್ತು ಎಡಗೈಗೆ ಗಾಯಗಳಾಗಿವೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

VISTARANEWS.COM


on

Mandya Ramesh
Koo

ಬೆಂಗಳೂರು: ಸೀರಿಯಲ್‌ ಶೂಟಿಂಗ್ ವೇಳೆ ನಟ ಮಂಡ್ಯ ರಮೇಶ್‌ (Mandya Ramesh) ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ರಮೇಶ್ ಅರವಿಂದ್ ನಿರ್ಮಾಣದ ಆಸೆ ಧಾರಾವಾಹಿ ಚಿತ್ರೀಕರಣದಲ್ಲಿ ನಟಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಮಂಡ್ಯ ರಮೇಶ್‌ ಗಾಯಗೊಂಡಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಸೋಮವಾರ ಘಟನೆ ನಡೆದಿದ್ದು, ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಬಲಗಾಲು, ಬಲಗೈ ಮತ್ತು ಎಡಗೈಗೆ ಗಾಯಗಳಾಗಿವೆ. ಹೀಗಾಗಿ ಎಡಗಾಲಿನ ಮಂಡಿ ಭಾಗಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಇರುವ ಅಪೊಲೋ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಂಜೆ ಡಿಸ್ಚಾರ್ಜ್‌ ಆಗಲಿದ್ದಾರೆ ಎಂದು ಮಂಡ್ಯ ರಮೇಶ್ ಪತ್ನಿ ಸರೋಜಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ | Ravichandran: ಮಾತಿನ ಮನೆಯಲ್ಲಿ ‘ದ ಜಡ್ಜ್ ಮೆಂಟ್’; ಕ್ರೇಜಿಸ್ಟಾರ್‌ ಅಭಿನಯದ ಚಿತ್ರ ಶೀಘ್ರ ತೆರೆಗೆ

ಈ ಬಗ್ಗೆ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ಪ್ರತಿಕ್ರಿಯಿಸಿ, ಶೂಟಿಂಗ್‌ ಮಾಡುತ್ತಿದ್ದಾಗ ತಂದೆಯವರು ಎಡವಿ ಬಿದ್ದಾಗ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೀರಿಯಲ್‌ ಶೂಟಿಂಗ್‌ ವೇಳೆ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈಗ ಅವರಿಗೆ ಯಾವುದೇ ತೊಂದರೆ ಇಲ್ಲ, ಆರೋಗ್ಯವಾಗಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ನಟಿ ಲೀಲಾವತಿ ಆರೋಗ್ಯ ವಿಚಾರಿಸಿ ಭಾವುಕರಾದ ಶಿವ ರಾಜ್‌ಕುಮಾರ್‌

shiv raj kumar
shiv raj kumar

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಕನ್ನಡದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನೆಲಮಂಗಲ ತಾಲೂಕಿನಲ್ಲಿರುವ ಸೋಲದೇವನಹಳ್ಳಿಯ ನಿವಾಸಕ್ಕೆ ನಟ ಶಿವ ರಾಜ್‌ಕುಮಾರ್ (Shiva Rajkumar) ಹಾಗೂ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

‘‘ಲೀಲಾವತಿ ಅವರಿಗೆ ಮೊದಲಿನಿಂದಲೂ ನಮ್ಮ ಬಗ್ಗೆ ಅಪಾರ ಪ್ರೀತಿ. ನಾವು ಅವರನ್ನು ಯಾವಾಗ ಕಂಡರೂ ಅದೇ ಆತ್ಮೀಯತೆ, ಅದೇ ಪ್ರೀತಿಯೊಂದ ಮಾತನಾಡಿಸುತ್ತಿದ್ದರು. ಅವರ ಆ ಪ್ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈಗ ವಿನೋದ್ ರಾಜ್‌ ಅವರನ್ನು ನೋಡಿದರೆ ಅವರ ತಾಯಿಯನ್ನೇ ನೋಡಿದಂತೆ ಆಗುತ್ತದೆ. ಲೀಲಾವತಿ ಅವರ ಆರೋಗ್ಯ ಕ್ಷೀಣಿಸಿರುವ ಬಗ್ಗೆ ಬೇಜಾರಾಗುತ್ತದೆ. ಆದರೆ ಅವರು ಇನ್ನೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಅವರಿಗೆ ದೇವರ ಆಶೀರ್ವಾದವಿದೆ. ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ಅವರ ಮಗನ ಪ್ರೀತಿ ಇದೆ’’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

‘ʼಅಮ್ಮ ನನ್ನ ಧ್ವನಿ ಕಂಡು ಹಿಡಿದರು. ಈ ವಯಸ್ಸಿನಲ್ಲಿಯೂ ಅವರು ನೋವನ್ನು ಸಹಿಸಿಕೊಂಡು ಇರುವ ಶಕ್ತಿ ಇದೆಯಲ್ಲ ಅದು ಸಾಮಾನ್ಯದ್ದಲ್ಲ. ಯೋಗ ಪುರುಷರು ಅನ್ನುತ್ತಾರಲ್ಲ ಹಾಗೆ. ಈಗಲೂ ಅವರು ಸ್ಟ್ರಾಂಗ್ ಆಗಿದ್ದಾರೆ. ಒಳ್ಳೆಯ ಮನಸ್ಸಿರುವವರು, ಒಳ್ಳೆಯ ವ್ಯಕ್ತಿತ್ವ ಉಳ್ಳವರು. ನಾವು ಅವರನ್ನು ಇಷ್ಟೊಂದು ಪ್ರೀತಿಸಲು ಅದೇ ಕಾರಣ’ʼ ಎಂದು ಶಿವಣ್ಣ ಭಾವುಕರಾದರು. ಜತೆಗೆ ವಿನೋದ್‌ ರಾಜ್‌ ಕೈ ಹಿಡಿದು ಸಾಂತ್ವಾನ ಹೇಳಿದರು.

ʼʼನೋವು ಎಲ್ಲರಿಗೂ ಆಗುತ್ತೆ. ನಾವು ತಾಳಿಕೊಂಡಿಲ್ಲವೇ ಹಾಗೆಯೇ ನೀವು ಧೈರ್ಯ ತಂದುಕೊಳ್ಳಿ. ನಿಮ್ಮ ತಾಯಿಯವರಿಗೆ ಮಗ ಚೆನ್ನಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅವರ ಆಸೆಯಂತೆ ನೀವು ಚೆನ್ನಾಗಿರಬೇಕು’’ ವಿನೋದ್ಎಂ‌ ರಾಜ್‌ ಅವರ ಕೈ ಹಿಡಿದು ಶಿವರಾಜ್ ಕುಮಾರ್ ಧೈರ್ಯ ತುಂಬಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

BBK SEASON 10: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ತನಿಷಾ; ಕಾರಣವೇನು?

BBK SEASON 10: ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ ನಿರ್ವಹಿಸುವ ವೇಳೆ ಸ್ಪರ್ಧಿ ತನಿಷಾ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರು ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಡಿದೆ.

VISTARANEWS.COM


on

thanisha
Koo

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಶೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸ್ಪರ್ಧಿಗಳ ಜಗಳ, ಸ್ನೇಹ, ಕಿತ್ತಾಟಗಳಿಂದ ಸದ್ದು ಮಾಡುತ್ತಿರುವ ಬಿಗ್‌ ಬಾಸ್‌ ಮನೆಯಲ್ಲಿ ಅವಘಡವೊಂದು ನಡೆದಿದೆ ಎನ್ನಲಾಗಿದೆ. ಟಾಸ್ಕ್‌ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ (Tanisha Kuppanda) ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಪ್ರಬಲ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು ಚಿಕಿತ್ಸೆಗಾಗಿ ಅವರನ್ನು ಮನೆಯಿಂದ ಕಳುಹಿಸಲಾಗಿದೆಯಂತೆ.

ಎಂದಿನಂತೆ ಬಿಗ್‌ ಬಾಸ್‌ ಸ್ಪರ್ಧಿಗಳ ಎರಡು ತಂಡ ಮಾಡಿ ಟಾಸ್ಕ್‌ ಕೊಟ್ಟಿದ್ದರು. ಅದರ ಪ್ರಕಾರ, ಒಂದು ತಂಡದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತಂದು ದೂರದಲ್ಲಿ ಇಟ್ಟಿರುವ ಕೊಳವೆಯೊಂದರಕ್ಕೆ ತುಂಬಿಸಬೇಕಿತ್ತು. ಕೊಳವೆಯೊಳಗೆ ಹೋದ ನೀರು ಗಾಜಿನ ಬಾಕ್ಸ್‌ನಲ್ಲಿ ಶೇಖರ ಆಗುತ್ತಿತ್ತು. ಎದುರು ತಂಡದವರು ಇದಕ್ಕೆ ಅಡ್ಡಿ ಪಡಿಸಬಹುದಿತ್ತು. ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್ ಆಗುತ್ತಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಅದರಂತೆ ಎರಡು ತಂಡಗಳು ಅಖಾಡಕ್ಕೆ ಇಳಿದಿದ್ದವು.

ಒಂದು ತಂಡದಲ್ಲಿ ಡ್ರೋನ್ ಪ್ರತಾಪ್‌, ಪವಿ ಪೂವಪ್ಪ, ತುಕಾಲಿ ಸಂತೋಷ್‌, ನಮ್ರತಾ, ವರ್ತೂರು, ಸಿರಿ ಇದ್ದರೆ ಇನ್ನೊಂದು ತಂಡದಲ್ಲಿ ಮೈಕಲ್, ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ಇದ್ದರು. ಈ ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೇರ ನಡೆನುಡಿಯ ತನಿಷಾ ಮೊದಲಿನಿಂದಲೂ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ತನಿಷಾ ಅವರಿಗೆ ಏನಾಗಿದೆ? ಯಾವಾಗ ಮತ್ತೆ ಬಿಗ್‌ ಬಾಸ್ ಮನೆಗೆ ಮರಳಲಿದ್ದಾರೆ? ಎಂದು ಅಭಿಮಾನಿಗಳು ಪ್ರಶ್ನಿಸತೊಡಗಿದ್ದಾರೆ.

BBK Season 10: ರಕ್ತ ಬಂದ್ರೂ ಜಗ್ಗಲ್ಲ; ಸಂಗೀತಾ-ತನಿಷಾ ಜಗಳ ಮುಗಿಯಲ್ಲ!

20 ಮೆಣಸಿನಕಾಯಿ ತಿಂದಿದ್ದ ತನಿಷಾ

ಈ ಹಿಂದೆ ಟಾಸ್ಕ್‌ನಲ್ಲಿ ಸವಾಲು ಸ್ವೀಕರಿಸಿದ್ದ ತನಿಷಾ 20 ಮೆಣಸಿನಕಾಯಿಯನ್ನು ತಿಂದು ಗಮನ ಸೆಳೆದಿದ್ದರು. ಕಾರ್ತಿಕ್, ವರ್ತೂರು ಸಂತೋಷ್ ಜತೆ ಅವರು ಉತ್ತಮ ಸ್ನೇಹವನ್ನು ಕಾಪಾಡಿಕೊಂಡಿದ್ದಾರೆ. ಈ ಬಾರಿ ತನಿಷಾ ನಾಮಿನೇಟ್ ಆಗಿದ್ದರು. ಅವರನ್ನು ಸೇವ್ ಮಾಡುವಂತೆ ಕಾರ್ತಿಕ್ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿದ್ದ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಕೆಲವು ದಿನಗಳ ಹಿಂದೆ ತನಿಷಾ ಹಾಗೂ ಸಂಗೀತಾ ಮಧ್ಯೆ ವಾಗ್ವಾದ ನಡೆದಿತ್ತು. ಸದ್ಯ ತನಿಷಾ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಿ ಬಿಗ್‌ ಬಾಸ್‌ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Assembly Election Results 2023
ದೇಶ22 seconds ago

ಕಾಂಗ್ರೆಸ್‌ಗೆ ತೆಲಂಗಾಣ, 3 ರಾಜ್ಯಗಳಲ್ಲಿ ಬಿಜೆಪಿ ದಿಗ್ವಿಜಯ; ಫಲಿತಾಂಶದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Maratha Mahamela cannot be held Belagavi district administration denies permission for MES
ಕರ್ನಾಟಕ22 mins ago

Assembly Session: ಮರಾಠ ಮಹಾಮೇಳಾವ್‌ ನಡೆಸುವಂತಿಲ್ಲ; ಎಂಇಎಸ್‌ಗೆ ಟಕ್ಕರ್‌ ಕೊಟ್ಟ ಜಿಲ್ಲಾಡಳಿತ

Tulu Language
ಕರ್ನಾಟಕ24 mins ago

Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತಿನಿಧ್ಯ? ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

Rajastan Elections: 10 reasons for BJP Win
ದೇಶ39 mins ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ40 mins ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ51 mins ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್60 mins ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ1 hour ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ2 hours ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ8 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ21 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌