ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ಶೋ ಜನಮೆಚ್ಚುಗೆ ಪಡೆದಿದೆ. ಹಾಗೆಯೇ, ಬಡವರು ಬಂದು, ಪ್ರತಿಭೆ ಪ್ರದರ್ಶಿಸಿ ಕೋಟ್ಯಧೀಶರಾದ ಉದಾಹರಣೆ ಹೆಚ್ಚಿವೆ. ಹಾಗಾಗಿಯೇ, ಕೌನ್ ಬನೇಗಾ ಕರೋಡ್‌ಪತಿ ಶೋ 15ನೇ ಸೀಸನ್‌ವರೆಗೆ ಮುಂದುವರಿದಿದೆ. ಇನ್ನು ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಜಸ್‌ಕರಣ್ ಸಿಂಗ್ ಎಂಬ ಯುವಕನು ಕೋಟ್ಯಧೀಶನಾಗುತ್ತಿದ್ದಾನೆ. ಅಷ್ಟೇ ಅಲ್ಲ, ಆತ ಏಳು ಕೋಟಿ ರೂ. ಗೆಲ್ಲುತ್ತಾನಾ ಎಂಬುದನ್ನು ಅಮಿತಾಭ್ ಬಚ್ಚನ್ (Amitabh Bachchan) ಸಸ್ಪೆನ್ಸ್‌ನಲ್ಲಿ ಇಟ್ಟಿದ್ದಾರೆ.
ಹೌದು, ಅಮಿತಾಭ್ ಬಚ್ಚನ್ ಅವರು ಶೋನಲ್ಲಿ ಪಂಜಾಬ್‌ನ ಜಸ್‌ಕರಣ್ ಸಿಂಗ್ ಅವರಿಗೆ 7 ಕೋಟಿ ರೂಪಾಯಿಯ ಪ್ರಶ್ನೆ ಕೇಳಿರುವ, ಆ ಪ್ರಶ್ನೆಗೆ ಉತ್ತರಿಸಲು ಯುವಕನು ಯೋಚನೆಯಲ್ಲಿ ಮುಳುಗಿರುವ ಪ್ರೋಮೊವನ್ನು ಸೋನಿ ಚಾನೆಲ್ ಹಂಚಿಕೊಂಡಿದೆ. ಹಾಗಾಗಿ, ಜಸ್‌ಕಿರಣ್ ಸಿಂಗ್ ಈ ಬಾರಿ ಏಳು ಕೋಟಿ ರೂ. ಗೆದ್ದು ಇತಿಹಾಸ ಸೃಷ್ಟಿಸಲಿದ್ದಾರಾ ಅಥವಾ ಒಂದು ಕೋಟಿ ರೂಪಾಯಿ ಪಡೆದು ಆಟವನ್ನು ಕ್ವಿಟ್ ಮಾಡಲಿದ್ದಾರಾ ಎಂಬ ಕುತೂಹಲ ಮೂಡಿದೆ.
ವೈರಲ್ ಆಗಿರುವ ಪ್ರೋಮೊ
ಏಳು ಕೋಟಿ ರೂಪಾಯಿ ಪ್ರಶ್ನೆಯ ಕೌನ್ ಬನೇಗಾ ಕರೋಡ್‌ಪತಿ ಶೋ ಸೆಪ್ಟೆಂಬರ್ 4 ಹಾಗೂ ಸೆಪ್ಟೆಂಬರ್ 5ರಂದು ಪ್ರಸಾರವಾಗಲಿದೆ. ರಾಜಸ್ಥಾನದ ಖಾಲ್ರಾ ನಿವಾಸಿಯಾದ, ಕೇವಲ 21 ವರ್ಷದ, ಯುಪಿಎಸ್‌ಸಿಗೆ ಸಿದ್ಧತೆ ನಡೆಸಿರುವ ಜಸ್‌ಕರಣ್ ಸಿಂಗ್ ಅವರು ಸರಿಯಾದ ಉತ್ತರ ನೀಡಿದರೆ 7 ಕೋಟಿ ರೂ. ಪಡೆಯಲಿದ್ದಾರೆ. ಇನ್ನು ಆಟವನ್ನು ಕ್ವಿಟ್ ಮಾಡಿದರೂ ಒಂದು ಕೋಟಿ ರೂ. ಪಡೆಯಲಿದ್ದಾರೆ. ಆ ಮೂಲಕ 15ನೇ ಸೀಸನ್‌ನ ಮೊದಲ ಕೋಟ್ಯಧೀಶ ಎನಿಸಲಿದ್ದಾರೆ.
ಇದನ್ನೂ ಓದಿ: Raksha Bandhan: ಅಮಿತಾಭ್ ಬಚ್ಚನ್‌ಗೆ ರಾಖಿ ಕಟ್ಟಿದ ಬಂಗಾಳ ಸಿಎಂ ಮಮತಾ! ಬಚ್ಚನ್ ‘ಭಾರತ ರತ್ನ’ ಎಂದಿದ್ದೇಕೆ?
ಕೌನ್ ಬನೇಗಾ ಕರೋಡ್‌ಪತಿ ಶೋ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದೆ. 15 ಸೀಸನ್‌ಗಳನ್ನೂ ಅಮಿತಾಭ್ ಬಚ್ಚನ್ ಅವರೇ ನಡೆಸುಕೊಂಡು ಬರುತ್ತಿದ್ದು, ಭಾರತ ಮಾತ್ರವಲ್ಲ ವಿದೇಶದಲ್ಲೂ ಶೋ ಖ್ಯಾತಿ ಗಳಿಸಿದೆ. ಬಡವರು, ಪ್ರತಿಭಾವಂತರು, ಸೆಲೆಬ್ರಿಟಿಗಳು ಕೂಡ ಶೋನಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲೂ ಇದೇ ಮಾದರಿಯ ಶೋ, “ಕನ್ನಡದ ಕೋಟ್ಯಧಿಪತಿ” ಹಲವು ಸಿಸನ್‌ಗಳಲ್ಲಿ ಪ್ರಸಾರವಾಗಿದೆ.