Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ Pragati Bhandari 3 ತಿಂಗಳುಗಳು ago ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರುವ ಕಪ್ಪು ಸೀರೆಯುಟ್ಟು ಗಮನ ಸೆಳೆದಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ಜತೆ ಬ್ಲ್ಯಾಕ್ ಹ್ಯಾಂಡ್ ಗ್ಲೌಸ್, ಅದರ ಮೇಲೆ ಡೈಮಂಡ್ ರಿಂಗ್ ಮತ್ತು ಸಿಂಹಿಣಿಯ ಲೋಗೋ ಇರುವ ಬೆಲ್ಟ್ ಇದು ಬೆಡಗಿಯ ನ್ಯೂ ಲುಕ್‌ನ ವಿಷೇಶವಾಗಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್ ಮತ್ತು ಹಾಟ್ ಫೋಟೊಗಳನ್ನು ಪೋಸ್ಟ್ ಮಾಡಿರುವ ನಮ್ಮು “Some wars help us bloom” ಎಂದು ಕ್ಯಾಪ್ಶನ್ ಸಹ ಹಾಕಿಕೊಂಡಿದ್ದಾರೆ. ಕೆಲದಿನಗಳ ಹಿಂದೆ ಪ್ಯಾರ್ ಗೆ ಆಗ್ಬಿಟ್ಟೈತೆ ನಟಿ ಪಾರುಲ್ ಯಾದವ್ ಬ್ಲ್ಯಾಕ್ ಸೀರೆ ಧರಿಸಿ ಬೋಲ್ಡ್ ಆಗಿ ಫೋಟೊ ಶೂಟ್ ಮಾಡಿಸಿದ್ದು ಅದು ವೈರಲ್ ಆಗಿತ್ತು. ಇದೀಗ ಅವರನ್ನು ಮೀರಿಸುವ ಹಾಗೆ ನಟಿ ನಮ್ರತಾ ಗೌಡ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯಕ್ಕೆ ಜಿಮ್ ವರ್ಕೌಟ್ ಮಾಡಿ ಫಿಟ್ ಆಗುತ್ತಿರುವ ನಮ್ರತಾ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಆಗಲಿದ್ದಾರೆ.