Site icon Vistara News

Urfi Javed : ತುಟಿ ಸರ್ಜರಿ ಮಾಡಿಸಿಕೊಂಡು ಮುಖವೇ ಊದಿಸಿಕೊಂಡಿದ್ದ ಊರ್ಫಿ ಜಾವೇದ್​!

Urfi Javed

ಮುಂಬಯಿ: ಚಿತ್ರ ವಿಚಿತ್ರವಾಗಿ ಡ್ರೆಸ್​ ಮಾಡಿಕೊಂಡು ಬಂದು ಅಭಿಮಾನಿಗಳಿಗೆ ಶಾಕ್​ ಕೊಡುವ ಹಿಂದಿ ಬಿಗ್​ ಬಾಸ್​​ ಸ್ಪರ್ಧಿ ಊರ್ಫಿ ಜಾವೇದ್​ ತಮ್ಮ ತುಟಿಯ ಸೌಂದರ್ಯದ ಗುಟ್ಟನ್ನು ಬಿಚ್ಚಿಡುವ ಜತೆಗೆ ತುಟಿ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಮುಖವೇ ಊದಿಕೊಂಡ ಪ್ರಸಂಗವನ್ನು ಹೇಳಿಕೊಂಡಿದ್ದಾರೆ. ಫ್ಯಾಶನ್ ವಿಚಾರದಲ್ಲಿ ಡಿಫರೆಂಟ್​ ಎನಿಸಿಕೊಂಡಿರುವ ಊರ್ಫಿ ನೇರ ಮಾತಿನ ಸೆಲೆಬ್ರಿಟಿ. ಹೀಗಾಗಿ ಅವರು ತುಟಿ ಸರ್ಜರಿ ಮಾಡಿಕೊಂಡ ಬಳಿಕ ಎದುರಿಸಿದ ಸಂಕಷ್ಟವನ್ನೂ ಬಹಿರಂಗಗೊಳಿಸಿದ್ದಾರೆ.

ಬಿಟೌನ್​ನಲ್ಲಿ ಫ್ಯಾಷನ್ ಡಿಸಾಸ್ಟರ್ ಎಂದೇ ಕರೆಯಲ್ಪಡುವ ಊರ್ಫಿ ತಮ್ಮ ಕಾಸ್ಮಿಟಿಕ್ ಸರ್ಜರಿ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳೋದು ತಪ್ಪಲ್ಲ. ಆದರೆ, ಸ್ವಲ್ಪ ಯಾಮಾರಿದರೂ ಇದ್ದ ಬದ್ದ ಅಂಗಗಳೆಲ್ಲವೂ ಊದಿಕೊಳ್ಳುತ್ತವೆ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವೇಳೆ ಅವರು ಸರ್ಜರಿ ಮಾಡಿಕೊಳ್ಳುವುದಕ್ಕೆ ಹಣ ಹೊಂದಿಸಲು ಪಟ್ಟಿರುವ ಕಷ್ಟವನ್ನೂ ವಿವರಿಸಿದ್ದಾರೆ.

ಉರ್ಫಿ ತನ್ನ ಸೌಂದರ್ಯ ಪ್ರಕ್ರಿಯೆಯ ವಿವಿಧ ಹಂತಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಲಿಪ್ ಫಿಲ್ಲರ್ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು 18 ನೇ ವಯಸ್ಸಿನಿಂದ ಲಿಪ್ ಫಿಲ್ಲರ್​​ ಸರ್ಜರಿ ಪಡೆಯುತ್ತಿದ್ದೇನೆ. ಆಗ ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ ಆದರೆ ನನ್ನ ತುಟಿಗಳು ತುಂಬಾ ಸಣ್ಣದಿದ್ದವು. ಹೀಗಾಗಿ ನಾನು ದೊಡ್ಡ ಪೂರ್ಣ ತುಟಿಗಳನ್ನು ಬಯಸಿದ್ದೆ. ಅಂತೆಯೇ ಸರ್ಜರಿಗೆ ಒಳಗಾದರೆ. ಅದು ತಪ್ಪಾಗಿ ಕೆಲವೊಂದು ಸಮಸ್ಯೆಗಳು ಉಂಟಾದವು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Actor Yash : ರಾಕಿ ಭಾಯ್​ ಯಶ್​ ನಾಪತ್ತೆ; ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ!

ತನ್ನ ಅಭಿಮಾನಿಗಳಿಗಾಗಿ ಊರ್ಫಿ ಕೆಲವೊಂದು ಎಚ್ಚರಿಕೆಗಳನ್ನೂ ನೀಡಿದ್ದಾರೆ. “ನಾನು ಸೌಂದರ್ಯ ಚಿಕಿತ್ಸೆ ಮಾಡಿಸಿಕೊಳ್ಳಬೇಡಿ ಎಂದು ಹೇಳುತ್ತಿಲ್ಲ. ಆದರೆ ನಾನು ಹೇಳಲು ಪ್ರಯತ್ನಿಸುತ್ತಿರುವುದು ಲಿಪ್​ ಪಿಲ್ಲರ್​​ಗಳು ಅಥವಾ ಬೊಟೊಕ್ಸ್ ಪಡೆಯುವಾಗ ಜಾಗರೂಕರಾಗಿರಿ. ನನ್ನ ಮುಖಕ್ಕೆ ಯಾವುದು ಸರಿಹೊಂದುತ್ತದೆ ಎಂದು ನನಗೆ ತಿಳಿದಿದೆ ಮತ್ತು ಈಗ ಕಡಿಮೆ ಎಂದು ನನಗೆ ತಿಳಿದಿದೆ. ಕಾಸ್ಮೆಟಿಕ್ ಸರ್ಜರಿ ಮಾಡಿಕೊಳ್ಳುವ ಮೊದಲು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡುವುದು ಉತ್ತಮ. ನಿಮ್ಮನ್ನು ಅಥವಾ ನಿಮ್ಮ ಮುಖವನ್ನು ನೀವೇ ದ್ವೇಷಿಸುವ ಬದಲು ನಿಮ್ಮ ಮುಖ ಅಥವಾ ದೇಹದ ಬಗ್ಗೆ ನಿಮಗೆ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಿ. ಆದರೆ, ಉತ್ತಮ ವೈದ್ಯರಿಂದ ಮಾತ್ರ ಎಂದು ಬರೆದುಕೊಂಡಿದ್ದಾರೆ.

Exit mobile version