ಮುಂಬೈ: ಇದು ಪ್ರೇಮಿಗಳ ವಾರ (Valentine’s Week). ಫೆ.7ರಿಂದ ಫೆ.14ರವರೆಗೆ ರೋಸ್ ಡೇ, ಹಗ್ ಡೇ, ಪ್ರಾಮಿಸ್ ಡೇ ಹೀಗೆ ಹಲವು ಡೇಗಳನ್ನು ಆಚರಿಸಿಕೊಳ್ಳುತ್ತ ಪ್ರೀತಿ ಹಂಚುವ ವಾರ. ಪ್ರೀತಿಯ ಜತೆ ಸಂಗೀತವೂ ಇದ್ದರೆ ಅದರ ಮಜಾ ಬೇರೆ ಎನ್ನುವುದು ಪ್ರೇಮಿಗಳ ಮಾತು. ಈ ವಾರದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಡೆಡಿಕೇಟ್ ಮಾಡಲು ಅಥವಾ ಅವರೊಂದಿಗೆ ಆಲಿಸುವುದಕ್ಕಾಗಿ ಲವ್ ಸಾಂಗ್‌ಗಳ ಹುಡುಕಾಟದಲ್ಲಿರಬಹುದು. ನಿಮಗೆ ಸುಲಭವಾಗಲೆಂದೇ ಹಿಂದಿಯ ಇತ್ತೀಚಿನ ಟಾಪ್ ಐದು ಲವ್ ಹಾಡುಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
ಇದನ್ನೂ ಓದಿ: Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ?
ತೆರೆ ಪ್ಯಾರ್ ಮೇ:
ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ʼತು ಜೂಟಿ ಮ್ಹೇ ಮಕ್ಕರ್ʼ ಸಿನಿಮಾದ ತೆರೆ ಪ್ಯಾರ್ ಮೇ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಟ್ರೆಂಡ್ ಆಗಿದೆ. ಅಮಿತಾಭ್ ಭಟ್ಟಾಚಾರ್ಯ ಬರೆದಿರುವ ಈ ಹಾಡನ್ನು ಅರಿಜಿತ್ ಸಿಂಗ್ ಮತ್ತು ನಿಕಿತಾ ಹಾಡಿದ್ದಾರೆ.
ರಬ್ಬಾ ಜಾನ್ದಾ
ಮಿಷನ್ ಮಜ್ನು ಸಿನಿಮಾದ ರಬ್ಬಾ ಜಾನ್ದಾ ಕೂಡ ಒಂದೊಳ್ಳೆ ಪ್ರೀತಿಯ ಹಾಡಾಗಿದೆ. ಈ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜತೆಯಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶಬ್ಬೀರ್ ಅಹಮದ್ ಅವರು ಬರೆದಿರುವ ಈ ಗೀತೆಗೆ ಜುಬಿನ್ ನೌಟಿಯಾಲ್ ಅವರು ಧ್ವನಿ ನೀಡಿದ್ದಾರೆ.
ತೋಡಿ ಜಗಾ
ಸಿದ್ದಾರ್ಥ್ ಮಲ್ಹೋತ್ರಾ ಅವರ ಇನ್ನೊಂದು ಸಿನಿಮಾ ಮರ್ಜವಾನ್. ಈ ಸಿನಿಮಾದ ʼತೋಡಿ ಜಗಾ ದೇ ದೇ ಮುಜೇʼ ಹಾಡು ಕೂಡ ಪ್ರೇಮಿಗಳಿಗೆ ಇಷ್ಟವಾದ ಹಾಡು. ರಶ್ಮಿ ವೈರಾಗ್ ಅವರ ಸಾಹಿತ್ಯವಿರುವ ಈ ಹಾಡನ್ನು ಅರಿಜಿತ್ ಸಿಂಗ್ ಅವರು ಹಾಡಿದ್ದಾರೆ.
ಮಾನ್ ಮೇರಿ ಜಾನ್
ಇತ್ತೀಚೆಗೆ ಟ್ರೆಂಡ್ ಆದ ಆಲ್ಬಂ ಸಾಂಗ್‌ಗಳಲ್ಲಿ ಒಂದು ʼಮಾನ್ ಮೇರಿ ಜಾನ್ʼ. ಕಿಂಗ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಹಾಡು 20 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.
ಬನಾ ಶರಾಬಿ
ವಿಕ್ಕಿ ಕೌಶಲ್ ಮತ್ತು ಕಿಯಾರಾ ಅಡ್ವಾಣಿ ಜತೆಯಾಗಿ ನಟಿಸಿರುವ ʼಗೋವಿಂದ ನಾಮ್ ಮೇರಾʼ ಸಿನಿಮಾದ ʼಬನಾ ಶರಾಬಿʼ ಹಾಡು ಪ್ರೇಮಿಗಳ ಹಾಡಾಗಿದೆ. ತನಿಷ್ಕ್ ಬಗ್ಚಿ ಅವರು ಬರೆದಿರುವ ಈ ಹಾಡನ್ನು ಜುಬಿನ್ ನೌಟಿಯಾಲಾ ಅವರು ಹಾಡಿದ್ದಾರೆ.