Site icon Vistara News

Vignesh Shivan: ಧೋನಿಯ ಆಟೋಗ್ರಾಫ್ ಪಡೆದ ನಯನತಾರಾ ಪತಿ; ವಿಘ್ನೇಶ್ ಶಿವನ್ ಭಾವುಕ ಪೋಸ್ಟ್‌!

Vignesh Shivan MS Dhoni

ಬೆಂಗಳೂರು: ದಕ್ಷಿಣದ ಪ್ರತಿಭಾವಂತ ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರು ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಅವರಿಂದ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಅದೂ ಕೂಡ ತಮ್ಮ ಟೀ ಶರ್ಟ್‌ ಮೇಲೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ. ಭಾವನಾತ್ಮಕ ಕ್ಯಾಪ್ಷನ್‌ ಮೂಲಕ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಎಂ.ಎಸ್.ಧೋನಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಕ್ಲಿಪ್‌ನಲ್ಲಿ ವಿಕ್ಕಿಯ ಬಿಳಿ ಟಿ-ಶರ್ಟ್‌ನಲ್ಲಿ ಧೋನಿ ಸಹಿ ಮಾಡುತ್ತಿರುವುದು ಕಂಡುಬಂದಿದೆ.

ಧೋನಿ ಮತ್ತು ಅವರ ಪತ್ನಿ ಸಾಕ್ಷಿ ತಮಿಳು ಚಿತ್ರ ‘ಎಲ್‌ಜಿಎಂ’ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ತಮ್ಮದೇ ಧೋನಿ ಎಂಟರ್‌ಟೈನ್‌ಮೆಂಟ್‌ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ʻಲೆಟ್ಸ್ ಗೆಟ್ ಮ್ಯಾರೀಡ್ʼ ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೀಗ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಅವರಿಂದ ಆಟೋಗ್ರಾಫ್ ಪಡೆದುಕೊಂಡಿದ್ದಾರೆ ನಿರ್ದೇಶಕ ವಿಘ್ನೇಶ್ ಶಿವನ್ .

ವಿಘ್ನೇಶ್ ಶಿವನ್ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ʻʻನನ್ನ ಹೀರೊ, ನನ್ನ ಕ್ಯಾಪ್ಟನ್‌, ನನ್ನ ರೋಲ್‌ ಮಾಡೆಲ್‌ ಧೋನಿ. ನಾನು ತುಂಬ ಪ್ರೀತಿಸುವ ಮತ್ತು ಪ್ರತಿದಿನ ನೋಡುವ ವ್ಯಕ್ತಿ ಇವರು. ನಾನು ಧೋನಿ ಅವರನ್ನು ನೋಡಿದಾಗಲೆಲ್ಲಾ ನನ್ನ ಮುಖದಲ್ಲಿ ಸಂತೋಷ ಎದ್ದು ಕಾಣುತ್ತದೆ. ಧೋನಿ ಅವರು ತಮಿಳು ಇಂಡಸ್ಟ್ರಿಯಲ್ಲಿ ಸಿನಿಮಾ ಮಾಡುವುದನ್ನು ನೋಡಿ ತುಂಬಾ ಖುಷಿಯಾಗಿದೆ. ಧೋನಿ ಎಂಟರ್‌ಟೈನ್‌ಮೆಂಟ್‌ ನಿರ್ಮಾಣ ಸಂಸ್ಥೆಯಿಂದ ಬರುವ ಎಲ್ಲ ಚಲನಚಿತ್ರಗಳನ್ನು ಬೆಂಬಲಿಸುತ್ತೇವೆ. ಸಾಕ್ಷಿ ಅವರಿಗೂ ತಮಿಳು ಸಿನಿಮಾಗೆ ಸ್ವಾಗತ. ʻಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ತಂಡಕ್ಕೆ ಶುಭ ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: MS Dhoni: ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ

ನಿರ್ದೇಶಕ ವಿಘ್ನೇಶ್ ಶಿವನ್ ಪೋಸ್ಟ್‌

ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾದ ಟ್ರೈಲರ್‌ ಈಗಾಗಲೇ ಬಿಡುಗಡೆಗೊಂಡಿದೆ. ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿರುವ ಲೆಟ್ಸ್ ಗೆಟ್ ಮ್ಯಾರೀಡ್ ಆದಷ್ಟು ಬೇಗ ತೆರೆಗೆ ಬರಲಿದೆ.

Exit mobile version