ಬೆಂಗಳೂರು: ʼವಿಜಯಾನಂದʼ ಚಲನಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಹಾಗೂ ನಟ ನಿಹಾಲ್ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ನಿಹಾಲ್ ಮತ್ತು ರಿಷಿಕಾ ಶರ್ಮಾ ಅವರು ಈ ಕುರಿತು ಶುಭಸುದ್ದಿ ನೀಡಿದ್ದು, ಫೆಬ್ರವರಿ 15ರಂದು ಮದುವೆ ಆಗುತ್ತಿರುವುದಾಗಿ ಈ ಜೋಡಿ ತಿಳಿಸಿದೆ.
‘ವಿಜಯಾನಂದ’ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು. ಕಳೆದ 9 ವರ್ಷಗಳಿಂದಲೂ ನಿಹಾಲ್ ಮತ್ತು ರಿಷಿಕಾ ಶರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಫೆಬ್ರವರಿ 15ರಂದು ಬೆಂಗಳೂರಿನ ಮಲ್ಲೇಶ್ವರದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ನಿಹಾಲ್ ಮತ್ತು ರಿಷಿಕಾ ಶರ್ಮಾ ಸಪ್ತಪದಿ ತುಳಿಯಲಿದ್ದಾರೆ. ಫೆಬ್ರವರಿ 17ರಂದು ಮಧ್ಯಾಹ್ನ 12 ಗಂಟೆ ನಂತರ ಧಾರವಾಡದ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರಿಸೆಪ್ಷನ್ ನಡೆಯಲಿದೆ.
ಈ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಾಕ್ಷಿ ಆಗಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿಹಾಲ್ ಮತ್ತು ರಿಷಿಕಾ ಶರ್ಮಾ ತಮ್ಮಿಬ್ಬರ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Vijayananda Film | ವರ್ಲ್ಡ್ ವೈಡ್ ವಿಜಯಾನಂದ ಗ್ರ್ಯಾಂಡ್ ರಿಲೀಸ್: ರಾರಾಜಿಸುತ್ತಿದೆ ಬಿಗ್ ಕಟೌಟ್!