Site icon Vistara News

Viral News: ಕಿಚ್ಚ ಸುದೀಪ್-ಸಚಿನ್ ತೆಂಡೂಲ್ಕರ್ ಫೋಟೋ ವೈರಲ್!

Viral News Kichcha Sudeepa-Sachin Tendulkar Photo goes Viral

ಬೆಂಗಳೂರು: ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ (Sachin Tendulkar) ಜತೆಗಿನ ಕಿಚ್ಚ ಸುದೀಪ್ (Kichcha Sudeepa) ಅವರಿದ್ದ ಫೋಟೋ ಸಹಿತ ಎಕ್ಸ್ ಪೋಸ್ಟ್ ಸಖತ್ ವೈರಲ್ ಆಗಿದೆ. ಕಿಚ್ಚ ಸುದೀಪ್ ಅವರು ಜನವರಿ 16ರಂದು ಆಸ್ಕ್ ಕಿಚ್ ಹ್ಯಾಷ್ ಟ್ಯಾಗ್ ಆರಂಭಿಸಿದ್ದರು. ಈ ವೇಳೆ, ಹೇಮಂತ್ ಶೈವ್ ಎನ್ನುವವರು ಸಚಿನ್ ತೆಂಡೂಲ್ಕರ್ ಅವರ ಜತೆಗೆ ಸುದೀಪ್ ಇರುವ ಫೋಟೋವನ್ನು ಪೋಸ್ಟ್ ಮಾಡಿ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಸುದೀಪ್ ಅವರಿಗೆ ಕೇಳಿದ್ದರು. ಈ ಫೋಟೋಗೆ ಸುದೀಪ್ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರೂ ಕಮೆಂಟ್ ಮಾಡಿದ್ದು, ಭಾರೀ ವೈರಲ್ ಆಗಿದೆ(Viral News).

ಸಚಿನ್ ತೆಂಡೂಲ್ಕರ್ ಪೋಸ್ಟ್‌ನಲ್ಲಿ ಏನಿದೆ?

ನಿಮ್ಮನ್ನು ಭೇಟಿಯಾದ ಆ ದಿನ ಯಾರೋ ಈ ಫೋಟೋನ ಎಷ್ಟು ಚೆನ್ನಾಗಿ ಕ್ಲಿಕ್ ಮಾಡಿದ್ದಾರೆ. ನಿಮಗೆ ಜೀವನದಲ್ಲಿ ಉತ್ತಮ ಆರೋಗ್ಯ ಹಾಗೂ ಖುಷಿಯನ್ನೇ ಹಾರೈಸುತ್ತೇನೆ ಎಂದು ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಿಚ್ಚ ಪ್ರತಿಕ್ರಿಯೆಸಿದ್ದು ಇದು ಅನಿರೀಕ್ಷಿತ, ನೀವು ನನಗೆ ಇನ್ನೊಂದು ಸ್ಮರಣೀಯ ಕ್ಷಣವನ್ನು ನೀಡಿದ್ದೀರಿ ಎಂದು ರೀಟ್ವೀಟ್ ಮಾಡಿದ್ದಾರೆ. ಸದ್ಯ ಇಬ್ಬರ ಸಂಭಾಷೆಣೆಯ ಟ್ವೀಟ್ ವೈರಲ್ ಆಗಿದೆ.

ಸುದೀಪ್ ಪೋಸ್ಟ್‌ನಲ್ಲಿ ಏನಿದೆ?

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಅಭಿಪ್ರಾಯದ ಪೋಸ್ಟ್‌‌ಗೆ ಕಮೆಂಟ್ ಮಾಡಿ ರಿಪೋಸ್ಟ್ ಮಾಡಿರುವ ಸುದೀಪ್ ಅವರು, ವಾಹ್… ಇದನ್ನು ನಿರೀಕ್ಷಿಸಿರಲಿಲ್ಲ… ನೀವು ನನಗೆ ಮತ್ತೊಂದು ಸ್ಮರೀಯಣ ಕ್ಷಣವನ್ನು ಉಡುಗೋರೆಯಾಗಿ ನೀಡಿದ್ದೀರಿ.. ತುಂಬ ಪ್ರೀತಿ ಮತ್ತು ಬೆಸ್ಟ್ ವಿಶ್ ಸಚಿನ್ ತೆಂಡೂಲ್ಕರ್ ಸರ್ ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮತ್ತು ಕನ್ನಡ ಸೂಪರ್ ಸ್ಟಾರ್ ನಡುವಿನ ಪೋಸ್ಟ್ ವಿನಿಮಯ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಸಾಕಷ್ಟು ಜನರು ರಿಪೋಸ್ಟ್ ಮಾಡುವ ಮೂಲಕ ವೈರಲ್ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಸುದೀಪ್ ಅವರು ಕ್ರಿಕೆಟ್ ಪ್ರೇಮಿ. ಅವರು ಕ್ರಿಕೆಟ್ ಕೂಡ ಆಡುತ್ತಾರೆ. ಹಾಗಾಗಿ, ಭಾರತೀಯ ಕ್ರಿಕೆಟ್ ಆಟಗಾರರ ಬಗ್ಗೆ ಅವರಿಗೆ ತುಸು ಹೆಚ್ಚೇ ಒಲವು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸೆಲೆಬ್ರಿಟಿ ಕ್ಲಿಕೆಟ್‌ ಲೀಗ್‌ನಲ್ಲೂ ಸುದೀಪ್ ಕ್ರಿಕೆಟ್ ಆಡುತ್ತಾರೆ.

ಈ ಸುದ್ದಿಯನ್ನೂ ಓದಿ: Celebrity Cricket League : ಬಿಗ್​ಬಾಸ್​ ಮುಗಿಸಿ ಕ್ರಿಕೆಟ್​ ಆಡಲು ಹೊರಟ ಕಿಚ್ಚ ಸುದೀಪ್​

Exit mobile version