ಬೆಂಗಳೂರು: ತಮಿಳು ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ (Women Film Directors) ಕೊಡುಗೆ ಅಪಾರ. ಸಿನಿಮಾ ಕ್ಷೇತ್ರದಲ್ಲೂ ಸಹ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಹಲವಾರು ಚಿತ್ರಗಳನ್ನು ನೀಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾದರೆ ಅಂತಹ ಮಹಿಳಾ ನಿರ್ದೇಶಕಿಯರು ಯಾರು ಎಂಬುದನ್ನು ನೋಡೋಣ…
ಕಿರುತಿಗ ಉದಯನಿಧಿ (Kiruthiga Udhayanidhi)
ವನಕ್ಕಂ ಚೆನ್ನೈ (Vanakkam Chennai) ಚಿತ್ರವನ್ನು ಕಿರುತಿಗ ಉದಯನಿಧಿ ನಿರ್ದೇಶಿಸಿದ್ದಾರೆ. ಪ್ರೀತಿಯ ಕಥಾ ಹಂದರ ಹೊಂದಿರುವ ಈ ಸಿನಿಮಾ 2013ರಲ್ಲಿ ತೆರೆ ಕಂಡಿತು. ರೊಮ್ಯಾಂಟಿಕ್ ಕಾಮಿಡಿ ಆಗಿರುವ “ಕಿರುತಿಗ”ವನ್ನು ಪತಿ ಉದಯನಿಧಿ ಜತೆ ಸೇರಿ ನಿರ್ದೇಶಿಸಿರುವುದು ವಿಶೇಷ. ನಟ ಶಿವ ಮತ್ತು ನಟಿ ಪ್ರಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ವಿಶ್ವಾದ್ಯಂತ ಹೆಸರು ಮಾಡಿತು.
ಇದನ್ನೂ ಓದಿ | Vikram Film | ಒಟಿಟಿಗೆ ಬರಲಿದೆ ವಿಕ್ರಮ್ ಸಿನಿಮಾ: ಪಂಚ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಗಾಯತ್ರಿ ಪುಷ್ಕರ್ (Pushkar–Gayathri)
ಬ್ಲಾಕ್ ಬಸ್ಟರ್ ಸಿನಿಮಾ “ವಿಕ್ರಮ್ ವೇದ” (Vikram Vedha) ಚಿತ್ರವನ್ನು ಗಾಯತ್ರಿ ಮತ್ತು ಅವರ ಪತಿ ಪುಷ್ಕರ್ ಒಟ್ಟಿಗೆ ನಿರ್ದೇಶನ ಮಾಡಿದ್ದಾರೆ. ಇದು ಜುಲೈ 21, 2017ರಲ್ಲಿ ಸಖತ್ ಸದ್ದು ಮಾಡಿತ್ತು. ಪೊಲೀಸ್ ಮತ್ತು ದರೋಡೆಕೋರರ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಮಾಧವನ್, ವಿಜಯ್ ಸೇತುಪತಿ, ಶ್ರದ್ಧಾ ಶ್ರೀನಾಥ್, ಕತೀರ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್, ಪ್ರೇಮ್, ಅಚ್ಯುತ್ ಕುಮಾರ್, ಹರೀಶ್ ಪೆರಾಡಿ ಮತ್ತು ವಿವೇಕ್ ಪ್ರಸನ್ನ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
“ವಿಕ್ರಂ ವೇದ” ಎಷ್ಟರಮಟ್ಟಿಗೆ ಹೆಸರು ಮಾಡಿತ್ತೆಂದರೆ, ಪ್ರೇಕಕರು ಬಹಳವಾಗಿಯೇ ಈ ಸಿನಿಮಾವನ್ನು ಒಪ್ಪಿದ್ದರು. ಈ ಸಿನಿಮಾವು ಆನಂದ ವಿಕಟನ್ ಪ್ರಶಸ್ತಿ ಹಾಗೂ ಟೆಕ್ನೋಫ್ಸ್ ಮತ್ತು ಎಡಿಸನ್ ಎಂಬ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮೊದಲನೇ ವಾರದಲ್ಲಿ 170 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಸುಧಾ ಕೊಂಗರ (Sudha Kongara)
ಇರುಧಿ ಸುಟ್ರು (Irudhi Suttru) ಹಾಗೂ ಸೂರರೈ ಪೊಟ್ರು (Soorarai Pottru) ಸಿನಿಮಾಗಳನ್ನು ನಿರ್ದೇಶಿಸಿದ ಕೀರ್ತಿ ಸುಧಾ ಕೊಂಗರ ಅವರದ್ದು. ಸೂರರೈ ಪೊಟ್ರು ಸಿನಿಮಾದಲ್ಲಿ ಸೂರ್ಯ ಅವರ ಅಮೋಘ ನಟನೆಗೆ ಅವರನ್ನು ಆಸ್ಕರ್ ಸಂಬಂಧಪಟ್ಟ ಸಮಿತಿಯೊಂದ ಸದಸ್ಯತ್ವಕ್ಕಾಗಿ ಆಮಂತ್ರಣ ನೀಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಈ ಸಿನಿಮಾ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. 2020ರಲ್ಲಿ ತೆರೆ ಕಂಡ ಈ ಸಿನಿಮಾ ನಿಜ ಜೀವನ ಆಧಾರಿತವಾಗಿ ಚಿತ್ರೀಕರಣಗೊಂಡಿದೆ.
ಲಕ್ಷ್ಮೀ ರಾಮಕೃಷ್ಣನ್ (Lakshmy Ramakrishnan)
ಆರೋಹಣಂ (Aarohanam) ಚಿತ್ರ ಕ್ಷ್ಮೀ ರಾಮಕೃಷ್ಣನ್ ಅವರ ಚೊಚ್ಚಲ ನಿರ್ದೆಶನದ ಚಿತ್ರವಾಗಿದೆ. ವಿಜಿ ಚಂದ್ರಶೇಖರ್, ಜಯಪ್ರಕಾಶ್, ಉಮಾ ಮತ್ತು ರಾಜೀ ವಿಜಯ್ ಸಾರಥಿ ಇತರರು ನಟಿಸಿದ್ದಾರೆ. ಚಿತ್ರವು ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವ ಕಾಣೆಯಾದ ತಾಯಿಯ ಸುತ್ತ ನಡೆಯುವ ಕಥೆಯಾಗಿದೆ.
ಐಶ್ವರ್ಯ ರಜನಿಕಾಂತ್ (Aishwarya Rajinikanth)
ರಜನಿಕಾಂತ್ ಅವರ ಪುತ್ರಿ ಐಶ್ವರ್ಯ “೩” (3 film) ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದು, ಈ ಚಿತ್ರದ ಪರಿಕಲ್ಪನೆ ಜನರನ್ನು ಮೆಚ್ಚಿಸಿತ್ತು. ಥ್ರಿಲರ್ ಹಾಗೂ ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಅವರ ಚೊಚ್ಚಲ ನಿರ್ದೇಶನವಾಗಿದೆ. ಈ ಚಿತ್ರದ ವೈ ದಿಸ್ ಕೊಲೆವರಿ ಡಿ ಹಾಡು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
ಹಲೀತಾ ಶಮೀಮ್ (Halitha Shameem)
2019ರಲ್ಲಿ ಸಿಲ್ಲು ಕರುಪಟ್ಟಿ (Sillu Karuppatti) ಸಿನಿಮಾ ಪ್ರೀತಿಯ ಸಂಕೇತದ ತಿರುಳನ್ನು ಹೊಂದಿರುವ ಅತ್ಯಂತ ಜನಪ್ರಿಯ ಸಿನಿಮಾ ಆಗಿದೆ. ವಿವಿಧ ವಯೋಮಾನದ ನಾಲ್ಕು ಜೋಡಿಗಳ ಪ್ರೇಮಕಥೆಯನ್ನು ಈ ಸಿನಿಮಾ ಹೊಂದಿದೆ. ಹಲೀತಾ ಶಮೀಮ್ ಅವರ ನಿರ್ದೇಶನಕ್ಕೆ ಭಾರಿ ಮೆಚ್ಚುಗೆಯನ್ನು ಪಡೆಯಿತು.
ಚಿತ್ರದಲ್ಲಿ ಸಮುದ್ರಕನಿ, ಸುನೈನಾ, ಮಣಿಕಂದನ್ ಕೆ, ನಿವೇದಿತಾ ಸತೀಶ್, ಕ್ರವ್ಮಗ ಶ್ರೀರಾಮ್, ಲೀಲಾ ಸ್ಯಾಮ್ಸನ್, ಸಾರಾ ಅರ್ಜುನ್ ಮತ್ತು ರಾಹುಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಟೊರೊಂಟೊ ತಮಿಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಕೆಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. ಜತೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ | 777 ಚಾರ್ಲಿ | ಸಿನಿಮಾ ನೋಡಿ ಕಾಲಿವುಡ್ ನಿಂದ ಸ್ಯಾಂಡಲ್‌ವುಡ್‌ಗೆ ಬಂತು ಕಾಲ್!