Site icon Vistara News

Yash |‌ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ರಾಕಿಂಗ್‌ ಸ್ಟಾರ್‌ ಯಶ್ ರೆಡಿ: ಅಭಿಮಾನಿಗಳಿಗೆ ಹೇಳಿದ್ದೇನು?

Yash

ಬೆಂಗಳೂರು: ರಾಕಿಂಗ್‌ ಸ್ವಾರ್‌ ಯಶ್‌ (Yash) ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿದ್ದಾರೆ. ಈ ಹಿಂದೆ ಅಷ್ಟೇ ಫ್ಯಾಮಿಲಿ ಜತೆ ಇರುವ ಫೋಟೊ ಒಂದನ್ನು ಶೇರ್‌ ಮಾಡಿಕೊಂಡಿದ್ದರು. ಇಟಲಿ ಫ್ಯಾನ್ಸ್‌ ಜತೆ ಯಶ್‌ ಮತ್ತು ರಾಧಿಕಾ ಫೋಟೊ ಹಂಚಿಕೊಂಡು ಸುದ್ದಿಯಲ್ಲಿದ್ದರು. ಇದೀಗ ಸ್ವಾತಂತ್ರ್ಯೋತ್ಸವದ ಕುರಿತು ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಈಗಲೇ ಯಶ್‌ ಶುಭ ಹಾರೈಸಿದ್ದಾರೆ. ಪ್ರತಿ ಮನೆಗೂ ಧ್ವಜ ತರೋಣ ಎಂದು ಸಂದೇಶ ರವಾನಿಸಿದ್ದಾರೆ.

ʻʻವೈವಿಧ್ಯತೆಯೊಂದಿಗೆ ಭರವಸೆ, ಆಕಾಂಕ್ಷೆಗಳು ಮತ್ತು ಏಕತೆಯ ಸಂಕೇತವನ್ನು ಹೊಂದಿರುವ ನಮ್ಮ ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರದ ಗುರುತು, ಭಾರತೀಯ ರಾಷ್ಟ್ರಧ್ವಜವನ್ನು ನಮ್ಮ ಮನೆಗಳಿಗೆ ತರೋಣ ಮತ್ತು 13-15 ಆಗಸ್ಟ್ 2022ರವರೆಗೆ ಧ್ವಜಾರೋಹಣ ಮಾಡೋಣʼ. ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

ಕೆಜಿಎಫ್‌-2 ನಂತರ ಯಶ್‌ ಇದುವೆರೆಗೂ ಮುಂದಿನ ಚಿತ್ರದ ಬಗ್ಗೆ ಘೋಷಣೆ ಮಾಡಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ | Rocking Star Yash | ರಾಕಿ ಬಾಯ್‌ ಯಶ್‌ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!

Exit mobile version