ರಕ್ತದಿಂದ ಸುವರ್ಣಕ್ಷಾರವು ಕಿಡ್ನಿಯ ಮೂಲಕ ಶೋಧಿಸಲ್ಪಟ್ಟು ಮೂತ್ರದೊಂದಿಗೆ ಹೊರಬರುವ ತತ್ವಕ್ಕೆ ಗೋಮೂತ್ರ ಎಂದು ಹೇಳಲಾಗುತ್ತದೆ. ಇಂತಹ ಗೋಮೂತ್ರವನ್ನು ನಾನಾ ರೋಗಗಳ ನಿವಾರಣೆಗೆ ಬಳಸುವ ಬಗ್ಗೆ ಆಯುರ್ವೇದದಲ್ಲಿ ಸಾಕಷ್ಟು ಉಲ್ಲೇಖವಿದೆ. ಸುಮಾರು 3,500 ವರ್ಷಗಳ ಹಿಂದೆಯೇ ನಮ್ಮ ಆಯುರ್ವೇದಾಚಾರ್ಯರಾದ ʻಬಾಗಬಟ್ಟರು’ ಇದರ ಕುರಿತು ವಿವರವಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ʻಶುಶ್ರತ ಸಂಹಿತೆʼ, ʻಚರಕ ಸಂಹಿತೆʼ, ʻಅಷ್ಟಾಂಗ ಸಂಗ್ರಹʼ, ʻರಾಜ ನಿಘಂಟುʼ ಮತ್ತು ʻಅಮೃತಸಾಗರʼ ಸೇರಿದಂತೆ ಇನ್ನು ಹಲವು ಗ್ರಂಥಗಳಲ್ಲಿ ಗೋಮೂತ್ರದ ವಿಶೇಷತೆಯನ್ನು ಸಾಕಷ್ಟು ಪಂಡಿತರು ಸವಿಸ್ತಾರವಾಗಿ ವಿವರಿಸಿದ್ದಾರೆ.
ಹಾಲೊಂದೇ ಗೋವಿನಿಂದ ಸಿಗುವ ಏಕೈಕ ಆರ್ಥಿಕ ಆದಾಯ ಎಂದು ನಂಬಿರುವ ಇತ್ತೀಚಿನ ಜನಮಾನಸಕ್ಕೆ ಒಂದಂಶ ತಿಳಿದಿಲ್ಲ. ಗೋವು ತನ್ನ ಜೀವಿತಾವಧಿಯಲ್ಲಿ ಹುಟ್ಟಿದ ಕೆಲ ವರ್ಷಗಳ ನಂತರದಿಂದ ಹಿಡಿದು ಸಾಯುವ ಕೆಲ ವರ್ಷಗಳ ಹಿಂದಿನವರೆಗೂ ಮಾತ್ರ ಹಾಲನ್ನು ನೀಡುತ್ತದೆ. ಆದರೆ ಅದು ಹುಟ್ಟಿದಾಗಿನಿಂದ ಸಾಯುವವರೆಗೂ ಅತ್ಯಮೂಲ್ಯವಾದ, ಹಾಲಿಗಿಂತ ಅತಿ ಹೆಚ್ಚಿನ ಬೆಲೆ ಕಟ್ಟಲಾಗದಂತಹ ಗೋಮೂತ್ರ ಮತ್ತು ಗೋಮಯವನ್ನು ನೀಡುತ್ತದೆ. ಈ ಕಾರಣಕ್ಕೆ ʻತುಳಸಿ ಮತ್ತು ಗೋವು ಇರುವ ಮನೆಗೆ ವೈದ್ಯ ಬರಲಾರ’ ಎಂಬುದಾಗಿ ನಮ್ಮ ಹಿರಿಯರು ಹೇಳಿರುವುದು.
ಅನೇಕ ಆಯುರ್ವೇದ ವೈದ್ಯರು ಹಲವಾರು ಅಸಾಧ್ಯರೋಗ ಸಹಿತ 108 ರೋಗಗಳ ಮೇಲೆ ಗೋಮೂತ್ರದ ಅನೇಕ ಔಷಧಿಗಳನ್ನು ತಯಾರಿಸಿ ಸಾವಿರಾರು ಜನರಿಗೆ ಯಶಸ್ವೀ ಚಿಕಿತ್ಸೆಯನ್ನು ನೀಡಿ ಗೋಮೂತ್ರದ ಶ್ರೇಷ್ಠತೆಯನ್ನು ಸಾಧಿಸಿದ್ದಾರೆ. ಆಧುನಿಕ ಭಾರತದಲ್ಲಿ ಗೋಮೂತ್ರದ ಬಗ್ಗೆ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಕಿಮೋಥೆರಪಿ ಹಾಗೂ ರೇಡಿಯೇಷನ್ ಚಿಕಿತ್ಸೆಯಿಂದಲೂ ಹಿಡಿತಕ್ಕೆ ಬಾರದ ಕ್ಯಾನ್ಸರ್ ರೋಗಿಗಳಿಗೆ ಗೋಮೂತ್ರದ ವಿಶಿಷ್ಟ ಚಿಕಿತ್ಸಾ ಪ್ರಯೋಗ ಹಾಗೂ ಔಷಧಗಳು ಪರಿಣಾಮವನ್ನು ಬೀರಿವೆ. ಇದರ ಜೊತೆ ವೈಕ್ರಾಂತ ಭಸ್ಮ, ಕಾಂಚನಾರ ಗುಗ್ಗುಲು, ಶಂಖ ಭಸ್ಮ, ಲೋಕನಾಥ ರಸ, ಗಂಡಮಾಲ ಕಂಡನ ರಸ ಮುಂತಾದ ಅಪರೂಪದ ಔಷಧ ಮೂಲಗಳನ್ನು ಸೂಕ್ತ ಪ್ತಮಾಣದಲ್ಲಿ ಮಿಶ್ರಣಮಾಡಿ ತಯಾರಿಸಿದ ಔಷಧದಿಂದ ಶೇಕಡಾ 80ರಷ್ಟು ಕ್ಯಾನ್ಸರ್ ಕಣಗಳು ನಿಯಂತ್ರಣಕ್ಕೆ ಬರುವುದು ಸಾಬೀತಾಗಿದೆ.
ಭಾರತದ ಗೋತಳಿಗಳ ಮೂತ್ರ ಹೇಗೆ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಬಗ್ಗೆಯೂ ಸಾಕಷ್ಟು ಸಂಶೋಧನೆಗಳಾಗಿವೆ. ದೇಶಿ ಗೋವುಗಳು ಔಷಧೀಯ ಸಸ್ಯಗಳನ್ನು ತಿನ್ನುವುದರಿಂದ ಅದರ ಅಂಶ ಮೂತ್ರದ ಮೂಲಕ ಹೊರ ಬರುತ್ತದೆ. ಮುಖ್ಯವಾಗಿ ಭಾರತೀಯ ಗೋತಳಿಗಳ ಡುಬ್ಬದಲ್ಲಿ ಸೂರ್ಯನಾಡಿ ಮತ್ತು ಚಂದ್ರನಾಡಿ ಹಾದು ಹೋಗುತ್ತವೆ. ಇದರಿಂದ ಇವುಗಳ ಡುಬ್ಬದ ಮೇಲೆ ಬಿದ್ದ ಸೂರ್ಯನ ಕಿರಣಗಳಿಂದ ಆರೋಗ್ಯವರ್ಧಕ ರಾಸಾಯನಿಕ ಕ್ರಿಯೆ ನಡೆದು ಕೆರೊಟಿನ್ ಎಂಬ ಪದಾರ್ಥ ಬಿಡುಗಡೆಯಾಗುತ್ತದೆ. ಇಂತಹ ಕೆರೊಟಿನ್ ಸತ್ವವು ರೋಗ ನಿರೋಧಕ ಗುಣವನ್ನು ಹೊಂದಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ.
ಆಯುರ್ವೇದ ಪದ್ಧತಿಯಲ್ಲಿ ವಿಷಯುಕ್ತ ಪದಾರ್ಥಗಳನ್ನು ಗೋಮೂತ್ರದಲ್ಲಿ ಕಡ್ಡಾಯವಾಗಿ ಶುದ್ಧೀಕರಿಸುವುದು ಇದರ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಎಂತಹ ವಿಷವೇ ಆಗಿರಲಿ ಮೂರು ದಿನಗಳವರೆಗೆ ಗೋಮೂತ್ರದಲ್ಲಿದ್ದರೆ ಶುದ್ಧವಾಗುತ್ತದೆ. ಮಣ್ಣಿನಲ್ಲಿ ಬಿಟ್ಟರೆ ಗೋಮೂತ್ರದಲ್ಲಿ ಮಾತ್ರ ಇಷ್ಟು ಪ್ರಮಾಣದ ಜೀವ ಸತ್ವಗಳಿವೆ ಎಂದು ಹೇಳಲಾಗಿದೆ. ಹಾಗೆಯೇ ಇದು ಅಷ್ಟಾಗಿ ಹಾಳಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ತಾಮ್ರದ ಅಂಶ. ಹೀಗಾಗಿ ತಾಮ್ರವನ್ನು ಗೋಮೂತ್ರದ ಪ್ರಸಾರವೇ ಎಂದು ಹೇಳಲಾಗಿದೆ. ಇಂದಿಗೂ ಆಯುರ್ವೇದ ಪದ್ದತಿಯಲ್ಲಿ ಗೋಮೂತ್ರಕ್ಕೆ ವಿಶಿಷ್ಠ ಸ್ಥಾನಮಾನವಿದೆ. ಇದಕ್ಕೆ ಸಾಕ್ಷಿ ಭಾರತೀಯ ಆಯುರ್ವೇದ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎಚ್.ಎಸ್. ಶಾಸ್ತ್ರಿಯವರು ʻಹಲವಾರು ಆಯುರ್ವೇದಿಯ ಔಷಧಿಗಳಲ್ಲಿ ಗೋಮೂತ್ರವನ್ನು ಇಂದಿಗೂ ಬಳಸಲಾಗುತ್ತ್ತಿದೆ’ ಎಂಬುದಾಗಿ ಹೇಳಿರುವುದು.
ಇಂತಹ ಸಂಜೀವಿನಿಯಾದ ಗೋಮೂತ್ರವು ರೋಗವನ್ನು ನಿವಾರಿಸುವುದರ ಜೊತೆಗೆ ಭವಿಷ್ಯದಲ್ಲಿ ಅದು ಪುನಃ ಮತ್ತೆಂದೂ ಬರದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿರುವುದು ದೃಢಪಟ್ಟಿದೆ. ಕೇವಲ ಗೋಮೂತ್ರವೊಂದರಲ್ಲೇ ಶರೀರದಲ್ಲಿನ ಎಲ್ಲಾ ದುಷ್ಪರಿಣಾಮಗಳನ್ನು ಸಂಪೂರ್ಣ ದೂರಗೊಳಿಸುವ ರಾಸಾಯನಿಕ ಗುಣ ಮತ್ತು ಕ್ಷಮತೆ ಇದೆ. ಇದು ಪ್ರತಿವಿಷದಂತೆ ವರ್ತಿಸಿ ಶರೀರದ ವಿಷಗಳನ್ನು ದೂರ ಮಾಡುತ್ತದೆ. ಹೀಗಾಗಿ ಇದೊಂದು ರೋಗಾಣು ನಾಶಕವೂ ಹೌದು, ಶಕ್ತಿಶಾಲಿ ಕೀಟನಾಶಕವೂ ಹೌದು.
ಚಿಕಿತ್ಸಾ ರೂಪದಲ್ಲಿ ಗೋಮೂತ್ರಕ್ಕೆ ವಿಶಿಷ್ಟವಾದ ಸ್ಥಾನ. ರಸಾಯನಶಾಸ್ತ್ರದ ಅನುಸಾರ ಗೋಮೂತ್ರದಲ್ಲಿ 22 ಅತ್ಯುತ್ತಮವಾದ ಔಷಧೀಯ ಸತ್ವದ ರಾಸಾಯನಿಕ ಪದಾರ್ಥಗಳಿದ್ದು ಇದು ಸರ್ವರೋಗ ಪರಿಹಾರಕಾರಿ. ಇದರಲ್ಲಿರುವ ನೈಟ್ರೋಜನ್, ಯೂರಿಯಾ ಹಾಗೂ ಅಮೋನಿಯಾ ಕಾಡಬಹುದಾದ ಹಲವು ರೋಗಗಳಿಂದ ಶರೀರವನ್ನು ರಕ್ಷಿಸುತ್ತದೆ. ಇದರಲ್ಲಿನ ಯೂರಿಕ್ ಆಮ್ಲವು ಪ್ರಾಕೃತಿಕವಾಗಿರುವುದರಿಂದ ಶರೀರದ ಸಂತುಲನೆಯನ್ನು ಕಾಪಾಡುತ್ತದೆ. ಹಾಗೆಯೇ ಇದರಲ್ಲಿನ ಅಮೋನಿಯಾ ರಕ್ತದ ಶುದ್ಧತೆ ಮತ್ತು ರಕ್ತವನ್ನು ಬಲಶಾಲಿಯಾಗಿಡುವುದರಿಂದ ರಕ್ತ ವಿಕಾರ ಜನ್ಯರೋಗಗಳನ್ನು ಶರೀರವು ನಷ್ಟಗೊಳಿಸುತ್ತದೆ.
ಶರೀರಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡದ ಇಂತಹ ಅತ್ಯಮೂಲ್ಯವಾದ ಗೋಮೂತ್ರವನ್ನು ನೀಡುವ ಹಸು ಸ್ವತಂತ್ರವಾಗಿ ಓಡಾಡಿಕೊಂಡಿರಬೇಕು. ಹೀಗೆ ಎಲ್ಲಾ ಪ್ರಾಯದ ಗೋವುಗಳ ಗೋಮೂತ್ರವನ್ನು ಔಷಧಿಗೆ ಉಪಯೋಗಿಸಬಹುದು. ಇಲ್ಲಿಯವರೆಗೆ ಭಾರತದ ವಿಜ್ಞಾನಿಗಳು ಇದರಲ್ಲಿರುವ 35ಕ್ಕೂ ಹೆಚ್ಚು ರಾಸಾಯನಿಕಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಶೇಕಡಾ 95ರಷ್ಟು ನೀರು, ಶೇಕಡಾ 2.5ರಷ್ಟು ಯೂರಿಯಾ ಹಾಗೂ ಶೇಕಡಾ 2.5ರಷ್ಟು ಇನ್ನಿತರೆ ರಸಾಯನಿಕಗಳಿರುವುದನ್ನು ಪತ್ತೆಹಚ್ಚಿದ್ದಾರೆ. ಇದರಲ್ಲಿ ಪ್ರಮುಖವಾದುದು ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ವಸ್ತುವಾದ ಯೂರಿಯಾ. ಮಾನವ ಶರೀರವು ಪ್ರೋಟೀನನ್ನು ಬಳಸಿ ಕೊನೆಯಲ್ಲಿ ಉಳಿಯುವ ಶೇಷವೇ ಯೂರಿಯಾ.
ಒಂದು ಲೀಟರ್ ಗೋಮೂತ್ರದಲ್ಲಿ 20 ರಿಂದ 60 ಮಿಲಿ ಲೀಟರ್ ಎಲೈಂಟೈನ್, 0.10 ರಿಂದ 1.40 ಮಿಲಿಗ್ರಾಂ ಕ್ಯಾಲ್ಸಿಯಂ, 0.10 ರಿಂದ 1.1 ಮಿಲಿ ಇ .ಕ್ಲೋರೈಡ್ ಐಯಾನುಗಳು, 15 ರಿಂದ 20 ಮಿಲಿಗ್ರಾಂ ಕ್ರಿಯೆಟಿನೈನ್, 3.7 ಮಿಲಿ ಗ್ರಾಂ ಮೆಗ್ನೇಷಿಯಂ, 23 ರಿಂದ 28 ಮಿಲಿಗ್ರಾಂ ಅಮೋನಿಯಾ, 1.8 ರಿಂದ 1.5 ಮಿಲಿ ಇ.ಕ್ಯೂ ಪೊಟಾಷಿಯಂ, 0.2 ರಿಂದ 1.1 ಮಿಲಿ ಇ.ಕ್ಯೂ ಸೋಡಿಯಂ, 3 ರಿಂದ 15 ಮಿಲಿ ಗ್ರಾಂ ಸಲ್ಪೇಟ್, 1 ರಿಂದ 4 ಮಿಲಿ ಗ್ರಾಂ ಯೂರಿಕ್ ಆಸಿಡ್, 64 ಯೂ ಎಸ್.ಜಿ.ಪಿ.ಟಿ ಮತ್ತು 42 ಯೂ ಎಸ್.ಜಿ.ಒ.ಪಿ ಇರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.
ಮನುಷ್ಯನ ದೇಹದಲ್ಲಿ ಕುರ್ಕುಮೀನ್ ಎಂಬುದು ಇಲ್ಲದಿದ್ದಾಗ ಕ್ಯಾನ್ಸರ್ ಬರುತ್ತದೆ. ಆದರೆ ಗೋಮೂತ್ರದಲ್ಲಿ ಕುರ್ಕುಮೀನ್ ಹೆಚ್ಚಾಗಿದೆ. ಇದು ಹೃದಯ ರೋಗ ಅಥವಾ ವಿಷ ಪ್ರಭಾವದಿಂದ ಹೃದಯವನ್ನು ರಕ್ಷಿಸುತ್ತದೆ. ಹಸಿವೆಯಿಲ್ಲದಿರುವಿಕೆ, ಅಜೀರ್ಣ, ಬೇಧಿಯಂತಹ ಸಾಮಾನ್ಯ ರೋಗದಿಂದ ಹಿಡಿದು ಸಿಹಿಮೂತ್ರ, ಕುಷ್ಠ, ಹೃದಯ ಸಂಬಂಧಿ, ಸ್ನಾಯುವಿಕಾರ, ಸ್ಮೃತಿನಾಶ, ಕಾಲರ, ಕಾಮಾಲೆ, ಕ್ಯಾನ್ಸರ್‌ನಂತಹ 42ಕ್ಕೂ ಹೆಚ್ಚಿನ ಭೀಕರ ರೋಗಗಳು ಗೋಮೂತ್ರದಿಂದ ಗುಣವಾಗುತ್ತದೆ. ಹಾಗೆಯೇ ಮೂತ್ರರೋಗದವರಿಗೆ ರಕ್ತದಲ್ಲಿನ ವಿಷಮತೆಯನ್ನು ನಿಯಂತ್ರಿಸುವುದಷ್ಟೇ ಅಲ್ಲದೆ ದೊಡ್ಡ ಕರುಳಿನ ಕ್ರಿಯೆಗೆ ಹೆಚ್ಚಿನ ಬಲವನ್ನು ನೀಡುತ್ತದೆ.
ಗೋಮೂತ್ರದಲ್ಲಿರುವ ರೋಗ ನಿರೋಧಕ ಶಕ್ತಿ ಇರುವ ಬಗ್ಗೆ ʻಕೇಂದ್ರ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಕೇಂದ್ರ’ ಕೂಡ ದೃಢೀಕರಿಸಿದೆ. ಲಕ್ನೋದಲ್ಲಿರುವ ʻಸಿಮಾಪ’ ಎಂಬ ಸಂಸ್ಥೆ ಗೋಮೂತ್ರ ಸೇವನೆಯಿಂದ ಆಂಟಿಬಯೋಟಿಕ್‌ಗಳ ಕಾರ್ಯಕ್ಷಮತೆ 4 ರಿಂದ 5 ಪಟ್ಟು ಹೆಚ್ಚುತ್ತದೆ ಎಂಬುದನ್ನು ಸಂಶೋಧನೆಯಿಂದ ಸಾಬೀತುಪಡಿಸಿದೆ. ಈ ಸಂಶೋಧನೆಗೆ ಅಮೆರಿಕದಿಂದ ಪೇಟೆಂಟ್ ಕೂಡ ದೊರಕಿದೆ. ಹಾಗೆಯೇ ಸಿ.ಡಿ.ಆರ್.ಐ. ಎಂಬ ಸಂಸ್ಥೆಯು ಗೋಮೂತ್ರದ ಪರೀಕ್ಷೆ ನಡೆಸಿ, ಮನುಷ್ಯನ ಜೀವಕ್ಕೆ ಬೇಕಾದ ʻಸಂಪೂರ್ಣ ರೋಗ ನಿವಾರಕ ಶಕ್ತಿ ಗೋಮೂತ್ರದಲ್ಲಿದೆ’ ಎಂಬುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ಬಿಹಾರದ ʻಚಾಕುಲಿಯಾ’, ಮಹಾರಾಷ್ಟ್ರದ ʻದೇವಲಾಪುರ್’, ಮುಂಬಯಿಯ ʻಕೇಶವ ಸೃಷ್ಠಿ’, ಮಧ್ಯಪ್ರದೇಶದ ʻದುರ್ಗ’ ಮತ್ತು ದಿಲ್ಲಿಯ ʻಹರೆವಾಲಿ’ ಹಾಗೂ ಗುಜರಾತ್‌ನ ʻಕರ್ಣವತಿ’ ಎಂಬಲ್ಲಿ ಗೋಮೂತ್ರದಿಂದ ಔಷಧಿ ಮತ್ತು ಕೀಟನಾಶಕವನ್ನು ಉತ್ಪಾದಿಸುವ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಒಂದು ಗೋವು ಪ್ರತಿನಿತ್ಯ ಸುಮಾರು 5 ಲೀಟರ್ ಗೋಮೂತ್ರವನ್ನು ನೀಡುತ್ತದೆ. ಒಬ್ಬ ಮನುಷ್ಯ ಆರೋಗ್ಯದಿಂದಿರಲು ಪ್ರತಿ ನಿತ್ಯ ಸುಮಾರು 25 ಮಿಲಿ ಲೀಟರ್ ಗೋಮೂತ್ರ ಬೇಕಾಗುತ್ತದೆ. ಹೀಗಾಗಿ ಒಂದು ಗೋವು ಪ್ರತಿನಿತ್ಯ ನೀಡುವ ಸುಮಾರು 5 ಲೀಟರ್ ಗೋಮೂತ್ರದಿಂದ ಸುಮಾರು 200 ಜನರ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ ಪ್ರತಿಯೊಂದು ಗೋವನ್ನು 200 ಜನರ ಆಸ್ಪತ್ರೆ ಮತ್ತು ಅದಕ್ಕೆ ಬೇಕಾಗುವ ಔಷಧದ ಕಾರ್ಖಾನೆ ಎಂದು ಪರಿಗಣಿಸಬಹುದಲ್ಲವೇ?.
ಇದನ್ನೂ ಓದಿ : ಗೋ ಸಂಪತ್ತು : ಎಚ್ಚರ! ನಕಲಿ ಹಾಲೂ ಮಾರುಕಟ್ಟೆಯಲ್ಲಿದೆ!