Site icon Vistara News

ಅಮೃತ ನೆನಪು-75 | ಸ್ವಾತಂತ್ರ್ಯ ಹೋರಾಟದ ಜ್ವಾಲೆಯಲ್ಲಿ ಹವಿಸ್ಸಾದವರು ಇವರು!

ಅಮೃತ ಸ್ವಾತಂತ್ರ್ಯದ ಸಂಭ್ರಮದ ಧ್ವಜವು ಇಂದು ಮೇಲೆ ಏರುವಾಗ ಈ 75 ಮಂದಿಯ ಸ್ಮರಣೆ ಮಾಡೋಣ. ಈ ದೇಶದ ಸ್ವಾತಂತ್ರ್ಯವು ಸುಲಭದಲ್ಲಿ ಪ್ರಾಪ್ತಿ ಆದದ್ದು ಅಲ್ಲ ಎಂಬ ಅಂಶವು ಮನದಲ್ಲಿ ಇರಲಿ. ಈ 75 ಮಂದಿಯ ನೆನಪು ಭಾರತವನ್ನು ಗಟ್ಟಿ ಮಾಡುತ್ತದೆ.

1) ಜಗತ್ತಿನ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಆದ ಉಳ್ಳಾಲದ ರಾಣಿ ಅಬ್ಬಕ್ಕ.
2) ಬ್ರಿಟಿಷ್ ಸೈನ್ಯವನ್ನು ಎರಡೆರಡು ಬಾರಿ ಸೋಲಿಸಿದ ಕಿತ್ತೂರು ಚೆನ್ನಮ್ಮ.
3)ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ಕಾನೂನಿಗೆ ಸಡ್ಡು ಹೊಡೆದ ಝಾನ್ಸಿ ರಾಣಿ ಲಕ್ಷ್ಮೀಬಾಯಿ.
4) ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಸಿಡಿದೆದ್ದ ಕೊನೆಯ ಮೊಗಲ್ ದೊರೆ ಬಹದ್ದೂರ್ ಶಾ ಜಫರ್.
5) 1857ರ ಕ್ರಾಂತಿಗೆ ನಾಂದಿ ಹಾಡಿದ ಮಂಗಲ್ ಪಾಂಡೆ.
6) ಪಂಜಾಬ್‌ನ ಸಿಂಹ ಲಾಲಾ ಲಜಪತ್ ರಾಯ್.
7) ಗಾಂಧಿಯಂತಹ ನಾಯಕರಿಗೆ ದೀಕ್ಷೆ ಕೊಟ್ಟ ಗೋಪಾಲಕೃಷ್ಣ ಗೋಖಲೆ.
8)ಕಿತ್ತೂರು ರಾಣಿಯ ಆಜ್ಞೆ ಹೊತ್ತು ವೀರಾವೇಶದ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ.
9) ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತೊಡೆ ತಟ್ಟಿ ಹೋರಾಡಿದ ಬಂಗಾಳದ ದೊರೆ ಸಿರಾಜುದ್ದೌಲ.
10) 1857ರ ಹೀರೋಗಳಲ್ಲಿ ಒಬ್ಬನಾದ ತಾತ್ಯಾ ಟೋಪೆ.

11) ಅಮೆರಿಕ ಸರ್ವ ಧರ್ಮ ಸಭೆಯಲ್ಲಿ ಭಾರತೀಯತೆಯ ಸಿಂಹ ನಾದ ಮೊಳಗಿಸಿದ ವಿವೇಕಾನಂದ.
12) ಆಧ್ಯಾತ್ಮದ ಶಿಖರ ಗುರು ಮಹರ್ಷಿ ಅರಬಿಂದೋ.
13) ಅಮರಗೀತೆಯಾದ ‘ವಂದೇ ಮಾತರಮ್’ ಬರೆದ ಬಂಕಿಮ ಚಂದ್ರ ಚಟರ್ಜಿ.
14) ‘ಸಾರೆ ಜಹಾನ್ ಸೆ ಅಚ್ಚಾ’ ಗೀತೆ ಬರೆದ ಕವಿ ಇಕ್ಬಾಲ್.
15)’ ಏ ಮೇರೆ ವತನ್ ಕೆ ಲೋಗೋ’ ಈ ಸೈನಿಕರ ಗೀತೆಯನ್ನು ಬರೆದ ಕವಿ ಪ್ರದೀಪ್.
16) ಭಾರತ ಸ್ವಾತಂತ್ರ್ಯದ ಹೋರಾಟಕ್ಕೆ ಹೊಸ ದಿಕ್ಕನ್ನು ಕೊಟ್ಟ ಮಹಾತ್ಮಾ ಗಾಂಧಿ.
17) ರಾಷ್ಟ್ರಗೀತೆ ‘ಜನ ಗಣ ಮನ’ ಬರೆದ ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ.
18) ನಾನು ಅಜಾದ್ ಎಂದು ಗರ್ಜಿಸಿ ಅಜೇಯವಾಗಿ ನಿರ್ಗಮಿಸಿದ ಚಂದ್ರಶೇಖರ್ ಆಜಾದ್.
19) ಕ್ರಾಂತಿಕಾರಿಗಳ ಮಹಾ ನಾಯಕ ರಾಮಪ್ರಸಾದ್ ಬಿಸ್ಮಿಲ್.
20) ತನ್ನ 23ನೆಯ ವಯಸ್ಸಿಗೆ ನಗು ನಗುತ್ತಾ ಗಲ್ಲಿಗೇರಿದ ಭಗತ್ ಸಿಂಗ್.

21) ಜಲಿಯನ್‌ ವಾಲಾ ಭಾಗ್ ಹತ್ಯಾಕಾಂಡದ ಸೇಡು ತೀರಿಸಿದ ಕ್ರಾಂತಿಕಾರಿ ಹುತಾತ್ಮನಾದ ಉಧಮ್ ಸಿಂಗ್.
22) ಭಗತ್ ಸಿಂಗ್ ಜೊತೆಗೆ ಪಾರ್ಲಿಮೆಂಟ್ ಭವನದಲ್ಲಿ ಬಾಂಬ್ ಎಸೆದ ಬಟುಕೇಶ್ವರ್ ದತ್ತ.
23) ಬಂಗಾಳದ ಮಹಾ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್.
24) ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದ ಕವಿ ಸುಬ್ರಮಣ್ಯ ಭಾರತಿ.
25) ‘ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು’ ಎಂದ ಬಾಲಗಂಗಾಧರ ತಿಲಕ್.
26) ಲಂಡನ್ನಿಗೆ ಹೋಗಿ ಅಲ್ಲಿ ಕ್ರಾಂತಿಕಾರಿ ಸಂಘಟನೆ ಮಾಡಿದ ವೀರ ಸಾವರ್ಕರ್.
27) ಆಧುನಿಕ ಭಾರತದ ಕನಸು ಕಂಡ ರಾಜಾರಾಮ ಮೋಹನ್ ರಾಯ್.
28) ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಕಾರ್ನಾಡ್ ಸದಾಶಿವರಾವ್.
29) ಹೋರಾಟಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಜವಾಹರಲಾಲ್ ನೆಹರೂ.
30) ಭಗತ್ ಸಿಂಗ್ ಜೊತೆ ನಗುತ್ತ ಗಲ್ಲು ಶಿಕ್ಷೆಯನ್ನು ಪಡೆದ ಕ್ರಾಂತಿಕಾರಿ ರಾಜಗುರು.

31) ನಗುನಗುತ್ತ ಗಲ್ಲಿಗೇರಲು ಸಾಧ್ಯ ಎಂದು ತೋರಿಸಿದ ದಿಟ್ಟತನದ ಸುಖದೇವ್ ಥಾಪರ್.
32) ಸ್ವಾತಂತ್ಯ ಹೋರಾಟಕ್ಕೆ ಪ್ರೇರಣೆ ಆಗಿ ನಿಂತ ದೇವೇಂದ್ರ ನಾಥ್ ಟಾಗೋರ್.
33) ಹೋರಾಟಗಾರರಿಗೆ ಆಶ್ರಯ ನೀಡಿದ ಮೋತಿಲಾಲ್ ನೆಹರು.
34) ಗಾಂಧಿ ಅವರ ಎಲ್ಲ ಹೋರಾಟಗಳಿಗೆ ಸ್ಫೂರ್ತಿಯಾಗಿ ನಿಂತ ಪತ್ನಿ ಕಸ್ತೂರ್ಬಾಗಾಂಧಿ.
35) ಕಾಶಿ ಬನಾರಸ್ ವಿವಿಯ ಸ್ಥಾಪಕ ಮದನ ಮೋಹನ್ ಮಾಳವೀಯ.
36) ಇಂಗ್ಲೆಂಡನಲ್ಲಿ ಕರ್ಜನ್ ವ್ಯಾಲಿ ಹತ್ಯೆಯನ್ನು ಮಾಡಿ 17ನೆ ವಯಸ್ಸಿಗೆ ಹುತಾತ್ಮನಾದ ಮದನ್ ಲಾಲ್ ಧಿಂಗ್ರಾ.
37) ಆಂಧ್ರಪ್ರದೇಶದ ಕ್ರಾಂತಿಯ ಕಿಡಿ ಅಲ್ಲೂರಿ ಸೀತಾರಾಮ ರಾಜು.
38)ಬ್ರಿಟಿಷ್ ಸರಕಾರವನ್ನು ನಡುಗಿಸಿದ ಕ್ರಾಂತಿಕಾರಿ ವಾಸುದೇವ್ ಬಲವಂತ ಫಡ್ಕೆ.
39) ಸಾವನ್ನು ಕೂಡ ನಗುತ್ತ ಸ್ವಾಗತ ಮಾಡಿದ ರಾಸಬೀಹಾರಿ ಬೋಸ್
40) ಸುಭಾಸ್ ಚಂದ್ರ ಬೋಸರ ಭಾರತ ರಾಷ್ಟ್ರೀಯ ಸೇನೆಯ ದಂಡ ನಾಯಕಿ ಲಕ್ಷ್ಮಿ ಸೆಹಗಲ್.

41) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾರತದ ಧ್ವಜ ಹಾರಿಸಿದ ಅರುಣಾ ಅಸಫ್ ಅಲಿ.
42) ತನ್ನ ಹಾಡುಗಳ ಮೂಲಕ ಹೋರಾಟಗಾರರಿಗೆ ಸ್ಫೂರ್ತಿ ಆದ ಸರೋಜಿನಿ ನಾಯ್ಡು.
43) ಚಿತ್ತಗಾಂಗ್ ಶಸ್ತ್ರಗಳ ಪ್ರಕರಣದಲ್ಲಿ ಬ್ರಿಟಿಷ್ ಸರಕಾರಕ್ಕೆ ಸವಾಲಾದ ಸೂರ್ಯ ಸೇನ್.
44) ಉಡುಪಿಯಲ್ಲಿ ಸ್ವಾತಂತ್ರ್ಯ ಹೋರಾಟದ ಮಹಾಪೋಷಕ ಹಾಜಿ ಅಬ್ದುಲ್ಲಾ ಸಾಬ್.
45) ಬಾರ್ದೊಲಿಯ ಹೋರಾಟಗಾರ, ಉಕ್ಕಿನ ಮನುಷ್ಯ, ಭಾರತ ಏಕೀಕರಣ ಶಿಲ್ಪಿ ಸರ್ದಾರ್ ವಲ್ಲಭಭಾಯ್ ಪಟೇಲ್.
46) ಭಾರತೀಯ ಶಿಕ್ಷಣಕ್ಕೆ ಮಹಾ ಕೊಡುಗೆ ಮೌಲಾನ ಅಬುಲ್ ಕಲಾಂ ಆಜಾದ್.
47) ಸ್ವದೇಶಿ ಚಳುವಳಿಯ ಮುಂಚೂಣಿಯ ಹೆಸರು ಬಿಪಿನ್ ಚಂದ್ರ ಪಾಲ್.
48) ಕರ್ನಾಟಕದ ಗಾಂಧಿ ಎಂದೇ ಕರೆಸಿಕೊಂಡ ಯೋಧ ಹರ್ಡೇಕರ್ ಮಂಜಪ್ಪ.
49) ಮಂಗಳೂರಿನ ಹೋರಾಟಗಾರರ ಸ್ಫೂರ್ತಿದೇವತೆ ಕಮಲಾ ದೇವಿ ಚಟ್ಟೋಪಾಧ್ಯಾಯ.
50) ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ತ್ಯಾಗ ಮಾಡಿದ ಕಾರ್ಕಳದ ಎಂ.ಡಿ.ಅಧಿಕಾರಿ.

51) ಕೊಡಗು ಜಿಲ್ಲೆಯ ಸಿಡಿಲಧ್ವನಿ ಗುಡ್ಡೆಮನೆ ಅಪ್ಪಯ್ಯ ಗೌಡರು.
52) ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ.
53) ಕ್ರಾಂತಿಪಥದ ಕೋಲ್ಮಿಂಚು ರಾಜೇಂದ್ರ ಲಾಹಿರಿ.
54) 1857ರ ಇನ್ನೊಬ್ಬ ಹೀರೋ ನಾನಾ ಸಾಹೇಬ್.
55) ಗಾಂಧಿಜಿಯವರಿಗೆ ದಲಿತ ಹೋರಾಟದ ಸ್ಫೂರ್ತಿ ನೀಡಿದ ಬ್ರಹ್ಮಶ್ರೀ ನಾರಾಯಣಗುರು.
56) ಬ್ರಿಟಿಷ್ ವಿಜ್ಞಾನಿಗಳಿಗೆ ಲಂಡನ್ನಿನಲ್ಲಿ ಅಪಮಾನ ಮಾಡಿದ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್.
57) ಹಿಂದೂ ಮುಸ್ಲಿಂ ಐಕ್ಯತೆಯ ಪ್ರತೀಕ ಬೇಗಂ ಹಜ್ರತ್ ಮಹಲ್.
58) ಭಾರತೀಯ ತತ್ವಶಾಸ್ತ್ರದ ಮಹಾ ವಿದ್ವಾಂಸ ಕೆ ಎಂ ಮುನಿಷಿ.
59) ಸ್ವಾತಂತ್ಯ ಹೋರಾಟದ ಪಿತಾಮಹ ದಾದಾಭಾಯಿ ನವರೋಜಿ.
60) ಬ್ರಿಟಿಷ್ ಭಾರತದ ಕೊನೆಯ ಕೊಂಡಿ ಸಿ.ರಾಜಗೋಪಾಲಾಚಾರಿ.

61) ‘ಫಿಲಾಸಫಿ ಆಫ್ ಬಾಂಬ್’ ಪುಸ್ತಕ ಬರೆದ ಕ್ರಾಂತಿಕಾರಿ ಭಗವತಿ ಚರಣ್ ವೋಹ್ರಾ.
62) ಸತ್ಯಾಗ್ರಹದ ಮೇರು ಹೆಸರು ಜತೀಂದ್ರನಾಥ್ ದಾಸ್.
63) ಸ್ವಾತಂತ್ರ್ಯದ ಹೃದಯ ಬಡಿತ ಆನ್ನಿಬೆಸೆಂಟ್.
64) ಕ್ರಾಂತಿಕಾರರ ಹೋರಾಟದ ಕೆಚ್ಚು ಕುಂವರ್ ಸಿಂಘ್
65) ಜಗತ್ತಿನ ಅತೀ ದೊಡ್ಡ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಬಿ.ಆರ್.
ಅಂಬೇಡ್ಕರ್.
66) ರಕ್ತದಲ್ಲಿ ಸ್ವಾಭಿಮಾನದ ಕಿಚ್ಚು ಮೇಡಂ ಬಿಕಾಜಿ ಕಾಮಾ.
67) ಶಸ್ತ್ರಸಜ್ಜಿತ ಕ್ರಾಂತಿಯ ಅಧಿದೇವತೆ ದುರ್ಗಾವತಿ ದೇವಿ.
68) ಕೆಂಪುಕೋಟೆಯಲ್ಲಿ ಎರಡು ಬಾರಿ ಸಂಗೀತದ ಸುಧೆ ಹರಿಸಿದ ಉಸ್ತಾದ್ ಬಿಸ್ಮಿಲ್ಲಾ ಖಾನ್
69) ಆರೆಸ್ಸೆಸ್ ಸ್ಥಾಪಕ ಕೇಶವ ಬಲಿರಾಮಚಂದ್ರ ಹೆಡಗೆವಾರ್.
70) ಆದಿವಾಸಿ ಹೋರಾಟದ ಮಹಾಸ್ಫೂರ್ತಿ ಬಿರ್ಸಾ ಮುಂಡ.

71) ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್.
72) ಭಾರತೀಯ ಶಿಕ್ಷಣದ ದಿಕ್ಕನ್ನು ಬದಲಿಸಿದ ಸರ್ವೆಪಲ್ಲಿ ರಾಧಾಕೃಷ್ಣನ್.
73) ಭಾರತೀಯ ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿದ ಪಿಂಗಳಿ ವೆಂಕಯ್ಯ.
74) ಕ್ವಿಟ್ ಇಂಡಿಯಾ ಚಳವಳಿಯ ಹೀರೋ ಜಯಪ್ರಕಾಶ್ ನಾರಾಯಣ್.
75) ಭಾರತದಲ್ಲಿ ಸ್ತ್ರೀ ಶಿಕ್ಷಣದ ಬೆಳಕಿಂಡಿ ಸಾವಿತ್ರಿ ಬಾಯಿ ಫುಲೆ.

ಈ ಪಟ್ಟಿ ಪರಿಪೂರ್ಣ ಅಲ್ಲ ಎಂದು ನನಗೆ ಗೊತ್ತಿದೆ. ಯಾವ ರೀತಿ ಪಟ್ಟಿ ಮಾಡಿದರೂ ಈ ಪಟ್ಟಿಯು ಪೂರ್ತಿ ಆಗಲು ಸಾಧ್ಯವೇ ಇಲ್ಲ. ಅದಕ್ಕೆ ಭಾರತವನ್ನು ಹಿರಣ್ಯಗರ್ಭೆ ಎಂದು ಕರೆಯುವುದು! ಈ ಎಲ್ಲ ಸ್ವಾತಂತ್ರ್ಯಯೋಧರನ್ನು ಈ ದಿನ ನೆನಪಿಸಿಕೊಳ್ಳೋಣ. ಜೈ ಹಿಂದ್!

ಇದನ್ನೂ ಓದಿ| ರಾಜ ಮಾರ್ಗ ಅಂಕಣ | ರವಿ ಬೆಳಗೆರೆಗೆ ಈಜಿಪ್ಟ್ ಸುಂದರಿ ಕೊಟ್ಟ ಉಡುಗೊರೆ ಯಾವುದು?

Exit mobile version