Site icon Vistara News

ಲೈಫ್‌ ಸರ್ಕಲ್‌ ಅಂಕಣ | ಪುರುಷಾರ್ಥವೆಂಬ ಜೀವನದ ಗುರಿಗಳು

kaivara life

ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮ ಎಂಬ ಮಾನವ ನಿರೀಕ್ಷೆಯ ನಾಲ್ಕು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಪುರುಷಾರ್ಥ ಎಂದರೆ- ಜೀವನದ ಗುರಿಯನ್ನು ಸಾಧಿಸಲು ಮಾನವ ಪ್ರಯತ್ನಗಳು. ಜೀವನದ ನಾಲ್ಕು ಗುರಿಗಳಿವೆ- ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಈ ನಾಲ್ಕು ತತ್ವಗಳು ಒಂದೆಡೆ ಸೇರಿದಾಗ ಜೀವನದಲ್ಲಿ ಸಾಮರಸ್ಯ ಮೂಡಿ ಸುಖದ ಹಾದಿ ಸುಗಮವಾಗುತ್ತದೆ.

ಒಬ್ಬ ವ್ಯಕ್ತಿಯನ್ನು ಹಿಡಿದಿಟ್ಟುಕೊಳ್ಳುವುದೇ ಧರ್ಮ. ಒಬ್ಬ ವ್ಯಕ್ತಿಯು ಜೀವನದಲ್ಲಿ ಕೆಲವು ಸಿದ್ಧಾಂತಗಳನ್ನು ನಂಬಿಕೊಂಡು ಅವುಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಾ ಬಂದಾಗ, ಅದು ಅವನ ಧರ್ಮವಾಗುತ್ತದೆ. ಇದೇ ಅವನ ಗುರುತಾಗುತ್ತದೆ. ಇದು ವ್ಯಕ್ತಿಯ ನೈಜ ಜೀವನಕ್ಕೆ ಸಂಬಂಧಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ, ಪುರುಷನಾಗಿರಲಿ, ಹೆಣ್ಣಿರಲಿ, ತನ್ನದೇ ಆದ ಧರ್ಮವನ್ನು ಹೊಂದಿರುತ್ತಾರೆ. ಸ್ಪಷ್ಟವಾಗಿ ನಿಗದಿಪಡಿಸಿದ ನಿಯಮಗಳು ಮತ್ತು ನಂಬಿಕೆಗಳನ್ನು ಅನುಸರಿಸಿ ಜೀವನದ ಚಟುವಟಿಕೆಗಳನ್ನು ನಿರ್ವಹಿಸುವುದನ್ನು ಧರ್ಮ ಎಂದು ಕರೆಯಲಾಗುತ್ತದೆ.

ಈಗಿನ ಕಾಲಘಟ್ಟದಲ್ಲಿ ಧರ್ಮವೂ ಅರ್ಥ ಪ್ರಧಾನವಾಗಿದೆ; ಹೆಳವನಾಗಿದೆ. ಹಣದ ಆಮಿಷದಿಂದ ಯಾರಾದರೂ ದಾರಿ ತಪ್ಪಬಹುದು. ಮಹಾನ್ ಧಾರ್ಮಿಕ ಮುಖಂಡರು ಯಾವ ರೀತಿಯ ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂಬುದನ್ನು ನೀವು ನೋಡಿರಬಹುದು. ಇದು ಧರ್ಮದ ಅರ್ಥ ಪ್ರಧಾನ ಸ್ವರೂಪ. ಜನರು ಧಾರ್ಮಿಕ ಆಚರಣೆಗಳ ಆಡಂಬರದಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡುವ ಮೂಲಕ ಖ್ಯಾತಿ ಲೂಟಿಯಲ್ಲಿ ತೊಡಗಿದ್ದಾರೆ. ವಾಸ್ತವವೆಂದರೆ ಇಂದು ಜೀವನದ ಇತರ ಮೂರು ಉದ್ದೇಶಗಳ ಮೇಲೆ ಧನವು ಪ್ರಾಬಲ್ಯ ಸಾಧಿಸಿದೆ. ನಾಲ್ಕು ಕಾಲುಳ್ಳ ಧರ್ಮ ಸ್ವರೂಪಿ ಗೋವುಗಳು ಮಾನವರ ಅವ್ಯವಸ್ಥೆಗಳ ಪರಿಣಾಮದಿಂದ ಗಂಟು ರೋಗದಿಂದ ಸಾಯುತ್ತಿವೆ. ಅದನ್ನು ನೋಡಿ ಕಣ್ಣೀರಿಡುತ್ತೇವೆ. ಅದಕ್ಕೇನುಪಾಯ ಎಂದು ಉನ್ನತ ವೈದ್ಯರೊಂದಿಗೆ ಚರ್ಚಿಸಿ ನಮ್ಮ ಕೈಯ್ಯಲ್ಲಾದಷ್ಟು ಸಸ್ಯೌಷಧವನ್ನು ಸೀಮಿತ ವ್ಯಾಪ್ತಿಯ ಗೋಪಾಲಕರಿಗೆ ಉಚಿತವಾಗಿ ಹಂಚುತ್ತಿದ್ದೇವೆ; ಚಿಕ್ಕಮಗಳೂರಿನ ನಮ್ಮ ಬ್ರಾಹ್ಮೀ ಆಯುರ್ವೇದ ಕ್ಲಿನಿಕ್ ವತಿಯಿಂದ. ಹಾಗೆಯೇ ಮದ್ಯಪಾನ, ಧೂಮಪಾನ, ತಂಬಾಕು, ಇತ್ಯಾದಿ ಮಾದಕ ವ್ಯಸನಗಳಿಂದ ನಮ್ಮ ಸುತ್ತಲಿನ ಸಮಾಜವನ್ನು ಮುಕ್ತಗೊಳಿಸುವ ಸಲುವಾಗಿ ನಶಾ ಮುಕ್ತಿ ಔಷಧವನ್ನೂ ತಯಾರಿಸಿ ಆರ್ತರಿಗೆ ಉಚಿತವಾಗಿ ಹಂಚುವ ಯೋಜನೆ ಹಮ್ಮಿಕೊಂಡಿದ್ದೇವೆ. ಎಲ್ಲಾ ರೀತಿಯ ವ್ಯಸನ ಮುಕ್ತರಾಗದೆ ದಿಟ್ಟ ನಿಲುವಿನ ಸಂವಹನ ಕಷ್ಟಸಾಧ್ಯ.

ಇದೆಲ್ಲಾ ನಾವು ಮಾನವರು ಸಾಂಘಿಕ ಜೀವಿಗಳು ಎಂಬುದರ ಪಾಲನೆಯ ಸಂತೃಪ್ತಿ ಒದಗಿಸುತ್ತವೆ. ಒಂದಿಷ್ಟು ದಾನ, ಧರ್ಮ, ಸೇವೆಗಳು ಇದ್ದರೆ ಮಾತ್ರ ಮನುಷ್ಯತ್ವ ಉಳಿದೀತು. ಬೇಕಾದಷ್ಟೇ ದುಡಿ, ದುಡಿದು ಅನ್ನವ ತಿನ್ನು ತಿನ್ನಿಸು, ದುಡಿದುದರಲ್ಲಿ ಕೊಂಚ ದಾನವ ಮಾಡು ಎಂಬುದು ಎಲ್ಲರೂ ಪಾಲಿಸಬೇಕಾದ ಆದರ್ಶ. ಆಗ ಸಂತೋಷ ನೆಮ್ಮದಿ ತಾನಾಗಿಯೇ ಇರುತ್ತದೆ. ಈ ಆರ್ಥಿಕ ಯುಗದಲ್ಲಿ ಜೀವನದ ನಾಲ್ಕು ಸ್ತಂಭಗಳಲ್ಲಿ ಮೂರು ಸ್ತಂಭಗಳು ಮುರಿದು ಬಿದ್ದಿವೆ. ಅಂತಹ ಪರಿಸ್ಥಿತಿಯಲ್ಲಿ ಸಂತೋಷ ಎಲ್ಲಿಂದ ಬರುತ್ತದೆ? ನಾವು ಒತ್ತಡವನ್ನು ಹೇಗೆ ನಿರ್ವಹಿಸಬಹುದು?

ಈ ಮಾನವೀಯ ಗುಣಲಕ್ಷಣಗಳು, ಅಂಶಗಳು ಮತ್ತು ಸಂಹಿತೆಗಳ ಸಂಪೂರ್ಣ ತಾಳ ಲಯವನ್ನು ಗಮನದಲ್ಲಿಟ್ಟುಕೊಂಡು ಸಂವಹನದ ಪಾತ್ರವನ್ನು ಮರು ವ್ಯಾಖ್ಯಾನಿಸುವುದು ಅಗತ್ಯವಾಗಿದೆ. ಸಂವಹನಕಾರನು ಅನುಸರಿಸಲು ಸ್ಪಷ್ಟವಾದ ನಿಯಮಗಳನ್ನು ಮತ್ತು ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾನೆ. ಅಧಿಕೃತ ಸಂವಹನದ ಉದ್ದೇಶಗಳು ವೈಯಕ್ತಿಕ ಆಸಕ್ತಿಯ ತ್ಯಾಗ, ಸಾರ್ವಜನಿಕ ಹಿತಾಸಕ್ತಿಯ ಆದ್ಯತೆ ಮತ್ತು ಪ್ರಸ್ತುತಪಡಿಸಿದ ಪ್ರಲೋಭನೆಗಳಿಗೆ ಸೋಲದಿರುವ ಮನಸ್ಥಿತಿಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಏಷಣದಿಂದ ಶಿಕ್ಷಣದವರೆಗಿನ ಅನ್ವೇಷಣ

ಯಾ ದೇವೀ ಸರ್ವಭೂತೇಷು ಛಾಯಾ ರೂಪೇಣ ಸಂಸ್ಥಿತ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಪರಿಣಾಮ ಧರ್ಮವಾದ ಕಾಮನೆಯನ್ನೇ ಧರ್ಮ ಎಂದು ಕರೆಯಲಾಗುತ್ತದೆ. ಬಯಕೆಯ ಒಂದು ಅರ್ಥ ಹಸಿವು-ಕ್ಷುಧೆ. ಇಚ್ಛೆಯ ನೆರವೇರದಿದ್ದರೆ, ವ್ಯಕ್ತಿಯು ವಿಚಲಿತನಾಗುತ್ತಾನೆ. ಹಸಿದವನು ಅಸಹಾಯಕನಾಗಿರುತ್ತಾನೆ. ಮಾಯೆಯ ವಿಧ್ಯಾ-ಅವಿಧ್ಯಾ ರೂಪವು ಬಯಕೆಯ ದಿಕ್ಕನ್ನು ನಿರ್ಧರಿಸುತ್ತದೆ. ಇಷ್ಟಾರ್ಥಗಳ ನೆರವೇರಿಕೆಯು ಹೊಸ ಶಕ್ತಿಯ ಹರಿವಿಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿಯು ಹೊಸ ಕಾರ್ಯವನ್ನು ಮಾಡಲು ಪ್ರೇರೇಪಿಸುತ್ತಾನೆ. ತನ್ನ ಅಹಂಕಾರದ ಹರಡುವಿಕೆಯಲ್ಲಿ ತೊಡಗುತ್ತಾನೆ. ಈ ಹೊಸ ಶಕ್ತಿಯನ್ನು ಛಾಯಾ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಹಗಲು ರಾತ್ರಿಯಲ್ಲಿ ವಿಭಿನ್ನ ನೆರಳುಗಳು ರೂಪುಗೊಳ್ಳುತ್ತವೆ. ಅದೇನೆಂದರೆ ತಾನು ಒಬ್ಬನೇ ಆದರೂ ಎಲ್ಲರೊಂದಿಗೆ ಭಿನ್ನವಾಗಿ ವರ್ತಿಸುತ್ತಾನೆ. ನಮ್ಮ ಪೋಷಕರು, ಒಡಹುಟ್ಟಿದವರು, ಸ್ನೇಹಿತರು ಇತ್ಯಾದಿ ಎಲ್ಲಾ ಸಂಬಂಧಗಳು ಕೇವಲ ನೆರಳುಗಳು.

ಪ್ರತಿಬಿಂಬಿತ ಮನಸ್ಸಿನ ಬಯಕೆಯೇ ನೆರಳು. ಮೂಲ ಮನಸ್ಸು ಅಥವಾ ಶ್ವೋವಸೀಯಸ್ ಮನಸ್ಸು ಅಥವಾ ಅವ್ಯಯ ಮನಸ್ಸೇ ನಮ್ಮ ಆತ್ಮ. ಅದರ ಮೇಲೆ ಅನೇಕ ಆವರಣಗಳಿವೆ. ಅವುಗಳನ್ನು ಮೀರಿ ಕಾಣುವ ಆತ್ಮಸ್ವರೂಪವೇ ಆತ್ಮದ ಪ್ರತಿಬಿಂಬ, ನೆರಳು. ಈ ಕಾರಣದಿಂದ ನಮ್ಮ ಬಯಕೆಗಳೂ ಎರಡು ವಿಧ. ಮೂಲ ಮನಸ್ಸಿನಲ್ಲಿ ಒಂದು, ಪ್ರತಿಬಿಂಬದ ಒಂದು. ಪ್ರಕೃತಿಯ ಎಲ್ಲಾ ಮೂರು ಗುಣಗಳು ಪ್ರತಿಬಿಂಬದಲ್ಲಿವೆ. ಅದರ ಆಸೆಯೂ ಗುಣಪ್ರಧಾನವಾಗಿರುತ್ತದೆ. ವಿದ್ಯೆ ಮತ್ತು ಅವಿದ್ಯೆಯಿಂದ ಸಂಚಾಲಿತವಾಗುತ್ತದೆ. (ವಿವಿಧಾ ಧ್ಯಾಯತೇತಿ ವಿಧ್ಯಾ). ಮೂಲ ಮನಸ್ಸು ಗುಣಾತೀತವಾಗಿದೆ. ಇದು ದೈವೇಚ್ಛೆ.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಕರ್ಮ ಮತ್ತು ಪುನರ್ಜನ್ಮದ ಸಂಬಂಧವೇನು?

ವ್ಯಕ್ತಿಯ ಬಯಕೆಯಿಂದ ದೈವೇಚ್ಛೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅವನ ಆಶಯವು ಪ್ರಾರಬ್ಧಕ್ಕೆ ಅಂಟಿಕೊಂಡಿರುತ್ತದೆ. ಆತ್ಮ ರೂಪವಾಗಿರುವ ಈ ಮನಸ್ಸು ಏನನ್ನೂ ಮಾಡುವುದಿಲ್ಲ. ಅದು ಸೀಮೆ ಮಾತ್ರವಾಗಿದೆ. ಒಬ್ಬ ವ್ಯಕ್ತಿಯು ಒಳ್ಳೆಯದು ಅಥವಾ ಕೆಟ್ಟದ್ದು, ಏನು ಮಾಡುತ್ತಾನೋ, ಏನಾಗುತ್ತಾನೋ, ಅದು ನೆರಳು ರೂಪವಾಗಿದೆ. ಆತ್ಮದೊಂದಿಗೆ ಸಂಪರ್ಕ ಹೊಂದಿದವನು ಶುದ್ಧನಾಗುತ್ತಾನೆ. ನೆರಳಿನ ರೂಪವು ಉದ್ದೇಶಪೂರ್ವಕ ನಾಟಕವಾಗಿದೆ. ನಾಟಕವನ್ನು ನೀವೇ ನಿರ್ಧರಿಸುತ್ತೀರ. ವಾಸ್ತವವನ್ನು ಮುಚ್ಚಿಟ್ಟು ನೈಜವಾಗಿ ತೋರುವ ಪ್ರಯತ್ನಕ್ಕೆ ನಾಟಕ ಎನ್ನುತ್ತಾರೆ. ಮನುಷ್ಯ ದಿನವೂ ತುಂಬಾ ಯೋಚನೆ ಮತ್ತು ಪ್ರಯತ್ನ ಮಾಡುತ್ತಾ ಸತ್ಯದಿಂದ ದೂರ ಬದುಕುತ್ತಾನೆ. ನಂತರ ಪ್ರತಿ ತಪ್ಪು ಫಲಿತಾಂಶಕ್ಕಾಗಿ ಭಾಗ್ಯ ಅಥವಾ ದೇವರನ್ನು ದೂಷಿಸುತ್ತಾನೆ. ಬುದ್ಧಿವಂತಿಕೆ ಬಹುಶಃ ಈ ವಿಷಯಕ್ಕಾಗಿ ಹುಟ್ಟಿದೆ. ಇದು ಅಹಂಕಾರದ ಮಗು. ವಿಜ್ಞಾನವು ಬುದ್ಧಿವಂತಿಕೆಯ ಕೊಡುಗೆಯಾಗಿದೆ ಮತ್ತು ಬುದ್ಧಿವಂತಿಕೆಯು ಅದರ ಬಳಕೆಯನ್ನು ನಿರ್ಧರಿಸುತ್ತದೆ. ಜೀವನದಲ್ಲಿ ಅನೇಕ ದೊಡ್ಡ ತೊಂದರೆಗಳಿಗೆ ಕಾರಣ ಬುದ್ಧಿಶಕ್ತಿ. ಅದೂ ಒಬ್ಬ ವ್ಯಕ್ತಿಯ ಛಾಯಾ ರೂಪ. ಹಾಗೆಯೇ ಮನಸ್ಸಿನ ಪ್ರತಿಬಿಂಬವೂ ಒಂದು ನೆರಳು. ಆದ್ದರಿಂದ, ಮನಸ್ಸು ಮತ್ತು ಬುದ್ಧಿಯ ನಿರ್ಧಾರಗಳನ್ನು ಸಹ ನೆರಳು ಎಂದು ಪರಿಗಣಿಸಲಾಗುತ್ತದೆ.

ಜೀವನದ ಗುರಿ ಪುರುಷಾರ್ಥ – ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಅಂದರೆ ಮೂರು ಗುಣಗಳ ಹಿಡಿತದಿಂದ ಹೊರಬರುವುದು. ಆಸೆಗಳನ್ನು ಮೀರಿ ಹೋಗುವುದು. ಆಗ ಬಂಧನವಿಲ್ಲ. ಮನಸ್ಸಿನಾಚೆ ಇಂತಹಾ ಸ್ಥಿತಿ ಸಾಧ್ಯ. ಅನ್ನಮಯ, ಪ್ರಾಣಮಯ ಮತ್ತು ಮನೋಮಯ ಕೋಶಗಳ ಸಂಪೂರ್ಣ ವ್ಯವಹಾರವು ತ್ರಿಗುಣಯುಕ್ತವಾಗಿದೆ. ಶರೀರದ ಆಹಾರದ ಜೊತೆಗೆ ಮನಸ್ಸು ಮತ್ತು ಇಂದ್ರಿಯಗಳ ವ್ಯಾಪಾರವೂ. ಈ ಎರಡರ ನಡುವೆ ವ್ಯವಹಾರ ಇರುವವರೆಗೆ ಅದು ಬಯಕೆ ಮತ್ತು ಫಲದ ವ್ಯಾಪಾರವಾಗಿರುತ್ತದೆ. ಆಗ ವ್ಯಕ್ತಿಯ ಪ್ರಜ್ಞೆ ಸುಪ್ತವಾಗಿದೆಯೇ ಅಥವಾ ಇಲ್ಲವೇ ಎಂಬುದು ಖಾತರಿಯಿಲ್ಲ. ಚೇತನದ ಜಾಗೃತಿಯ ಸೂತ್ರವು ವಿಜ್ಞಾನಮಯ ಕೋಶವಾಗಿದೆ. ಅಲ್ಲಿಗೆ ತಲುಪುವ ಪ್ರಧಾನ ಸಾಧನವೆಂದರೆ ಧ್ಯಾನ. ವಿಜ್ಞಾನದ ಸಹಾಯದಿಂದ ಚೇತನವನ್ನು ತಲುಪಲು ಸಾಧ್ಯವಿಲ್ಲ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ತಪಸ್ಸಿನ ಆಚರಣೆ ಹೇಗೆ?

Exit mobile version