Site icon Vistara News

ರಾಜ ಮಾರ್ಗ ಅಂಕಣ : ಸಾಧನೆ ಮಾಡ್ಬೇಕಾ? ಬದುಕಲ್ಲಿ ಗೆಲ್ಬೇಕಾ? ಇಲ್ಲಿದೆ 25 ಬೂಸ್ಟರ್‌ ಡೋಸ್!

Confidence

ದಿಗಂತದ ಕಡೆಗೆ ದೃಷ್ಟಿಯನ್ನು ನೆಟ್ಟು ಸಾಧನೆಯ ಹಸಿವು ಮತ್ತು ಕನಸಿನ ಕಸುವುಗಳನ್ನು ಜೊತೆಗೆ ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ ಸೂತ್ರಗಳು (ರಾಜ ಮಾರ್ಗ ಅಂಕಣ) ಖಂಡಿತ ನಿಮ್ಮನ್ನು ಗೆಲ್ಲಿಸುತ್ತವೆ.

ದಾರಿ ತೋರಿಸು ಗುರುವೇ…

1. ಗಮ್ಯ – ನಾವು ತಲುಪಬೇಕಾದ ಸ್ಥಳದ ಸರಿಯಾದ ಅರಿವು.
2. ದಾರಿ – ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ.
3. ಆತ್ಮವಿಶ್ವಾಸ – ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆಯು ನಮಗೆ ಇಂಧನ ಆಗುತ್ತದೆ.
4. ಎಚ್ಚರ – ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ.
5. ಮಾರ್ಗದರ್ಶಕರು – ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ.

Will Power, ತಂತ್ರ, ಮಂತ್ರ ಮತ್ತು ತಾಳ್ಮೆ

6. ಇಚ್ಛಾ ಶಕ್ತಿ – ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್.
7. ಪಾಸಿಟಿವ್ ಥಿಂಕಿಂಗ್ – ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು.
8. ಕಾಳಜಿ – ನಮ್ಮ ಜೊತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.
9. ಸ್ಟಾಟರ್ಜಿ – ದುರ್ಗಮವಾದ ಹಾದಿಯಲ್ಲಿ ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.
10. ತಾಳ್ಮೆ – ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರ್ಮೆಂಟ್.

ಸ್ಪರ್ಧೆ ಫೋಕಸ್ಡ್‌ ಆಗಿರಲಿ, ಒಬ್ಬ ಕಾಂಪಿಟೀಟರ್‌ ಇರಲಿ!

11. ಫೋಕಸ್ – ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡ ದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿ ಮನಸ್ಸು.
12. ಅಹಂ ರಾಹಿತ್ಯ – ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿಕ್ಷಿಪ್ತ ಭಾವನೆ.
13. ನಿರಂತರತೆ – ಯಾವ ಏರು, ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ.
14. ಕಾಂಪಿಟೆನ್ಸಿ – ಯಾವ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.
15. ನಮ್ಮ ಕಾಂಪಿಟಿಟರ್ – ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆಸುತ್ತಾರೆ.

ಸವಾಲುಗಳು ಬರ್ಲೇಬೇಕು, ನಮ್ಮಲ್ಲಿ ಪ್ಲ್ಯಾನಿಂಗ್‌ ಇರ್ಲೇಬೇಕು!

16. ಸವಾಲುಗಳು – ನಾವು ಒಳ್ಳೆಯ ಚಾಲಕ ಆಗಬೇಕಾದರೆ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು!
17. ಆದ್ಯತೆಗಳು – ಆಯ್ಕೆಗಳಲ್ಲಿ ಸರಿಯಾದದ್ದನ್ನು ಮತ್ತು ಸೂಕ್ತವಾದದ್ದನ್ನು ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.
18. ಐಕಾನಿಕ್ ಶಕ್ತಿ – ನಮಗೆ ಸದಾ ಕಾಲ ಪ್ರೇರಣೆ ನೀಡುವ ವ್ಯಕ್ತಿತ್ವವು ನಮ್ಮ ಜೊತೆಗೆ ಇದ್ದಷ್ಟು ನಮ್ಮ ಗೆಲುವು ಸುಲಭ ಆಗುತ್ತದೆ.
19. ಉತ್ಕೃಷ್ಟತೆ – ಯಾವಾಗಲೂ ಉತ್ತಮ ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.
20. ಪ್ಲಾನಿಂಗ್ – ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.

ಉದ್ದೇಶ ಸ್ಪಷ್ಟ ಇರಲಿ, ಸಾಗೋ ದಾರಿ ಅವಲೋಕನ ಇರಲಿ

21. ಉದ್ದೇಶದ ಸ್ಪಷ್ಟತೆ – ನಮ್ಮ ಪ್ರಯಾಣದ ಉದ್ದೇಶವು ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ. ಯಾಕೆ? ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ? ಪ್ರಶ್ನೆಗೆ ಉತ್ತರ ಕೊಡುವುದು ಸುಲಭ ಆಗುತ್ತದೆ.
22. ಅನುಭವದಿಂದ ಕಲಿಯುವುದು – ಬೇರೆಯವರ ತಪ್ಪುಗಳಿಂದ ಪಾಠ ಕಲಿಯುವುದು ಸುಲಭ. ಆದರೆ ನಮ್ಮದೇ ತಪ್ಪುಗಳಿಂದ ಪಾಠ ಕಲಿಯುವುದು ತುಂಬಾನೇ ಮುಖ್ಯ.
23. ಟೀಮ್ ವರ್ಕ್
– ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ.
24. ಸ್ವಯಂ ಶಿಸ್ತು – ನಮಗೆ ನಾವೇ ಹಾಕಿಕೊಂಡ ಅನುಶಾಸನ ಮತ್ತು ಶಿಸ್ತುಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.
25. ಅವಲೋಕನ
– ಪಯಣ ಮಾಡಿದ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡಿ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.

ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ. ನಿಮಗೆ ಶುಭವಾಗಲಿ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪೋಲಿಯೊ ಲಸಿಕೆಯ ಪೇಟೆಂಟ್‌ ನಿರಾಕರಿಸಿ ಫ್ರೀ ಆಗಿ ಹಂಚಿದ ಮಾನವತಾವಾದಿ ಡಾ. ಸಾಕ್

Exit mobile version