Site icon Vistara News

Raja Marga Column : ಜೀವನದಲ್ಲಿ ಹೇಗೆ ಇರಬೇಕು, ಹೇಗೆ ಇರಬಾರದು? ಇಲ್ಲಿದೆ 30 TIPS

dont be too busy be a Family man

ಇಲ್ಲಿ 30 ಭರತವಾಕ್ಯಗಳಿವೆ. ಒಂದೊಂದು ಮಾತೂ ಒಂದೊಂದು ಮುತ್ತು. ನೆನಪಿನಲ್ಲಿ ಇಟ್ಟುಕೊಂಡು ವ್ಯವಹರಿಸಿದರೆ ಬದುಕು ಸುಂದರ.
1) ಜೀವನದಲ್ಲಿ ತುಂಬಾ ಸೋಮಾರಿ ಆಗಬೇಡ (Dont be lazy), ಬೇರೆಯವರ ಮೇಲೆ ಡಿಪೆಂಡ್ ಆಗುವಷ್ಟು!
2) ಜೀವನದಲ್ಲಿ ತುಂಬಾ ಬ್ಯುಸಿ ಆಗಬೇಡ (Dont be very busy), ಪ್ರೀತಿಸುವವರಿಗೆ ಸಮಯ ಕೊಡಲಾಗದಷ್ಟು!
3) ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯಬೇಡ, ನಿನ್ನ ಪ್ರೀತಿ ಪಾತ್ರರನ್ನು ಆಲಂಗಿಸಲು ಆಗದಷ್ಟು!
4) ಜೀವನದಲ್ಲಿ ಒತ್ತಡವನ್ನು ನಿನ್ನ ಮೇಲೆ ಸುರಿಯಬೇಡ, ಸುಂದರ ಬದುಕಿನ ಕ್ಷಣಗಳನ್ನು ಆಸ್ವಾದಿಸಲು ಆಗದಷ್ಟು!
5) ಜೀವನದಲ್ಲಿ ಮಿತಿಮೀರಿ ದುಡಿದು ಆಸ್ತಿ ಮಾಡಬೇಡ, ನಿನ್ನ ಮಕ್ಕಳು ಆಸ್ತಿಗಾಗಿ ಬಡಿದಾಡಿಕೊಳ್ಳುವಷ್ಟು!
(Raja Marga Column)

ಎಲ್ಲ ಘಟನೆಗಳನ್ನು ನೆನಪಿಟ್ಟುಕೊಳ್ಳಬೇಡ, ನೆನಪುಗಳೇ ಭಾರವಾಗುವಷ್ಟು

6) ಜೀವನದಲ್ಲಿ ಯಾರ ಬಗ್ಗೆಯೂ ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡ, ಕೊನೆಗೆ ನಿರಾಸೆಯಲ್ಲಿ ಮುಳುಗಿ ಹೋಗುವಷ್ಟು!
7) ಜೀವನದಲ್ಲಿ ತುಂಬಾ ಘಟನೆಗಳನ್ನು ನೆನಪಿಟ್ಟು ಕೊಳ್ಳಬೇಡ, ಕಹಿ ನೆನಪುಗಳು ನಿನ್ನ ಸುಪ್ತ ಮನಸ್ಸನ್ನು ಕಸದ ತೊಟ್ಟಿ ಮಾಡುವಷ್ಟು!
8) ಜೀವನದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಪ್ರಶ್ನೆ ಮಾಡಬೇಡ, ಎಲ್ಲರೂ ನಿನ್ನನ್ನು ಮೂಲೆಗುಂಪು ಮಾಡುವಷ್ಟು!
9) ಜೀವನದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡ, ಅವರ ನಿರ್ಗಮನ ನಿಮ್ಮ ಬದುಕಿನಲ್ಲಿ ಶೂನ್ಯವನ್ನು ಉಂಟು ಮಾಡುವಷ್ಟು!
10) ಜೀವನದಲ್ಲಿ ಯಾರನ್ನೂ ತುಂಬಾ ನಿರ್ಲಕ್ಷ್ಯ ಮಾಡಬೇಡ, ನಿಮ್ಮ ಅಗತ್ಯಕ್ಕೆ ಯಾರೂ ದೊರೆಯದೆ ಹೋಗುವಷ್ಟು!

ಯಾರನ್ನೂ ನಂಬಬೇಡ, ಹಲ್ಲುಗಿಂಜಿ ನಿಲ್ಲಲೂ ಬೇಡ

11) ಜೀವನದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡ, ರಾತ್ರಿ ಕಂಡ ಕುರುಡು ಬಾವಿಗೆ ಹಗಲು ಬಿದ್ದು ಮುಳುಗುವಷ್ಟು!
12) ಜೀವನದಲ್ಲಿ ಯಾರಿಗೂ ನಿಮ್ಮ ಬದುಕಿನಲ್ಲಿ ಅನಗತ್ಯ ಸ್ಪೇಸ್ ಕೊಡಬೇಡ, ಅವರು ನಿಮ್ಮ ಬದುಕಿನಲ್ಲಿ ಶೂನ್ಯವನ್ನು ಕ್ರಿಯೇಟ್ ಮಾಡುವಷ್ಟು!
13) ಜೀವನದಲ್ಲಿ ಎಲ್ಲಾ ಅವಕಾಶಗಳನ್ನು ಕಿತ್ತುಕೊಳ್ಳಬೇಡ, ಬೇರೆಯವರು ನಿಮ್ಮ ಅವಕಾಶಗಳನ್ನು ಕಿತ್ತುಕೊಳ್ಳುವಷ್ಟು!
14) ಜೀವನದಲ್ಲಿ ಯಾರ ಮುಂದೆಯೂ ಅನಗತ್ಯವಾಗಿ ಹಲ್ಲುಗಿಂಜಿ ನಿಲ್ಲಬೇಡ, ಅವರು ಅದನ್ನು ನಿಮ್ಮ ದೌರ್ಬಲ್ಯ ಎಂದುಕೊಳ್ಳುವಷ್ಟು!
15) ಜೀವನದಲ್ಲಿ ದೊಡ್ಡ ದಾನಿ ಎಂದು ಎಂದಿಗೂ ಪೋಸ್ ಕೊಡಬೇಡ, ಜನರು ನಿಮ್ಮನ್ನು ಬರಿದು ಮಾಡಿ ಬೀದಿಗೆ ತಂದು ನಿಲ್ಲಿಸುವಷ್ಟು!

ಅತಿಯಾಗಿ ಮಾತನಾಡಬೇಡ.. ಮಾತೇ ಮೌಲ್ಯ ಕಳೆದುಕೊಳ್ಳುವಷ್ಟು..

16) ಜೀವನದಲ್ಲಿ ಎಷ್ಟೇ ಆಪ್ತರ ಬಳಿಯೂ ಮನಸು ಬಿಚ್ಚಿ ನಿಮ್ಮ ಎಲ್ಲ ಗುಟ್ಟುಗಳನ್ನು ಹೇಳಿಬಿಡಬೇಡ, ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಆಗುವಷ್ಟು!
17) ಜೀವನದಲ್ಲಿ ತುಂಬಾ ಓದಿ ವಿದ್ವಾಂಸ ಎಂದು ಕರೆಸಿಕೊಳ್ಳಬೇಡ, ಜನ ಸಾಮಾನ್ಯರಿಗೆ ನಿನ್ನ ವಿಷಯಗಳು ನಿಲುಕದಷ್ಟು!
18) ಜೀವನದಲ್ಲಿ ಬಿಸಿರಕ್ತ ಇರುವಾಗ ಅತಿಯಾಗಿ ದುಡಿದು ಖಾಲಿ ಆಗಬೇಡ, ಜೀವನದ ಸಂಧ್ಯಾಕಾಲದ ಕ್ಷಣಗಳನ್ನು ಅನುಭವಿಸಲು ಆಗದಷ್ಟು!
19) ಜೀವನದಲ್ಲಿ ಯಾರನ್ನೂ ಹೆಚ್ಚು ಬೆಳೆಸಲು ಹೋಗಬೇಡ, ಅವರೇ ನಿನ್ನನ್ನು ತುಳಿದು ಮೇಲೆ
ಏರುವಷ್ಟು!
20) ಜೀವನದಲ್ಲಿ ಯಾರಿಗೂ ಹೆಚ್ಚು ಭಾಷಣ ಬರೆದು ಕೊಡಬೇಡ, ನಿನ್ನ ಭಾಷಣವೇ ಅದರ ಮೌಲ್ಯ ಕಳೆದುಕೊಳ್ಳುವಷ್ಟು!

ಅತಿಯಾಗಿ ಅನುಕರಣೆ ಬೇಡ, ನಿನ್ನ ಅಸ್ಮಿತೆಯೇ ಕಳೆದುಹೋಗುವಷ್ಟು

21) ಜೀವನದಲ್ಲಿ ಯಾರಿಗೂ ಹೆಚ್ಚು ಪ್ರಾಮಿಸ್ ಕೊಡಬೇಡ, ಅವರೇ ನಿಮ್ಮ ಮೇಲೆ ಸವಾರಿ ಮಾಡುವಷ್ಟು!
22) ಜೀವನದಲ್ಲಿ ಯಾರಿಗೂ ಹೆಚ್ಚು ಭಾರವಾಗಬೇಡ, ಅವರು ನಿಮ್ಮನ್ನು ಎತ್ತಿ ದೂರಕ್ಕೆ ಒಗೆಯುವಷ್ಟು!
23) ಜೀವನದಲ್ಲಿ ಯಾರ ಜೊತೆಗೂ ತುಂಬಾ ಓಪನ್ ಆಗಬೇಡ, ಅವರು ನಿನ್ನನ್ನು ಕ್ಲೋಸ್ ಮಾಡುವಷ್ಟು!
24) ಜೀವನದಲ್ಲಿ ಯಾವಾಗಲೂ ಹೆಚ್ಚು ಪ್ರಚಾರದ ತೆವಲಿಗೆ ಬಲಿ ಆಗಬೇಡ, ನೀನು ಎಲ್ಲರಿಗೂ ಕಣ್ಣ ಕಿಸಿ ಆಗುವಷ್ಟು!
25) ಜೀವನದಲ್ಲಿ ಯಾರನ್ನೂ ಹೆಚ್ಚು ಕಾಪಿ ಮಾಡಬೇಡ, ನಿನ್ನ ಅಸ್ಮಿತೆಯನ್ನು ನೀನೇ ಮರೆತು ಬಿಡುವಷ್ಟು!

ಇದನ್ನೂ ಓದಿ : Raja Marga Column : ಅನುಕರಣೆಯಿಂದ ಯಾರೂ ಬೆಳೆಯುವುದಿಲ್ಲ, ಅನನ್ಯತೆಯೇ ನಮ್ಮ ಬ್ರಾಂಡ್‌

ಅತಿಯಾದ ಶಿಸ್ತು ಬೇಕಾಗಿಲ್ಲ.. ತಪ್ಪು ಮಾಡುವುದು ತಪ್ಪೇನಲ್ಲ

26) ಜೀವನದಲ್ಲಿ ಯಾರಿಗಾಗಿಯೋ ಖರ್ಚು ಮಾಡಿದ ದುಡ್ಡನ್ನು ಬರೆದಿಡಬೇಡ, ಮುಂದೊಮ್ಮೆ ನೀನೇ ಲೆಕ್ಕ ಮಾಡಿ ಕಣ್ಣೀರು ಸುರಿಸುವಷ್ಟು!
27) ಜೀವನದಲ್ಲಿ ತುಂಬಾ ಶಿಸ್ತಿನಲ್ಲಿ ಬದುಕುವ ಆಸೆ ಮಾಡಬೇಡ, ತಪ್ಪು ಮಾಡಲು ಹಿಂಜರಿಯುವಷ್ಟು!
28) ನಿನ್ನ ಜೀವನದಲ್ಲಿ ಯಾರನ್ನೂ ಅಂಡರ್ ಎಸ್ಟಿಮೇಟ್ ಮಾಡಬೇಡ, ಮುಂದೆ ಅವರೇ ನಿನಗೆ ಸ್ಪರ್ಧಿ ಆಗುವಷ್ಟು!
29) ಜೀವನದಲ್ಲಿ ಯಾರ ಮುಂದೆ ಕೂಡ ಹೆಚ್ಚು ಎಮೋಷನಲ್ ಆಗಬೇಡ, ಅವರು ಅದನ್ನು ನಿನ್ನ ದೌರ್ಬಲ್ಯ ಎಂದು ತಿಳಿದು ಕೊಳ್ಳುವಷ್ಟು!
30) ಜೀವನದಲ್ಲಿ ಯಾರಿಗೂ ಮಾಡಿದ ಸಹಾಯಗಳನ್ನು ನೆನಪು ಇಟ್ಟುಕೊಳ್ಳಬೇಡ, ಆ ನೆನಪುಗಳೇ ನಿನಗೆ ನೋವುಗಳಾಗಿ ಮುಂದೆ ಹಿಂಸೆ ಕೊಡುವಷ್ಟು!

ಸದ್ಯಕ್ಕೆ ಇಷ್ಟು ಸಾಕು, ಮುಂದೆ ಇನ್ನೊಮ್ಮೆ ವಿಸ್ತಾರ ಮಾಡಿ ಬರೆಯುತ್ತೇನೆ.

Exit mobile version