Site icon Vistara News

ರಾಜ ಮಾರ್ಗ ಅಂಕಣ | ಎಷ್ಟು ವೈವಿಧ್ಯಮಯ, ಎನಿತು ವಿಸ್ಮಯವೀ ಜಗತ್ತು! ಇಲ್ಲಿವೆ 40 ಅದ್ಭುತ ಸಂಗತಿಗಳು!

facts

ಕಣ್ತೆರೆದು ನೋಡಿದಾಗ ಜಗತ್ತು ಬಹಳಷ್ಟು ವಿಸ್ಮಯವಾಗಿ ನಮಗೆ ಕಾಣುತ್ತದೆ. ಕಣ್ಣಿಗೆ ಕಾಣುವ ಜಗತ್ತು ಮಾತ್ರ ಜಗತ್ತು ಅಲ್ಲ. ಅದರ ಆಚೆಗೂ ಸಾಕಷ್ಟು ಕೌತುಕಪೂರ್ಣ ಜಗತ್ತು ಇದೆ. ಅಂತಹ ಒಂದಿಷ್ಟು ಕೌತುಕಗಳು ಇಲ್ಲಿವೆ. Here are the most amazing and hilarious things of the World!

1) ಜಗತ್ತಿನಲ್ಲಿ ಇರುವ ಎಲ್ಲ ಗೆದ್ದಲುಗಳ ಒಟ್ಟು ತೂಕವು ಜಗತ್ತಿನ ಎಲ್ಲ ಮನುಷ್ಯರ ಒಟ್ಟು ತೂಕಕ್ಕಿಂತ ಹತ್ತು ಪಟ್ಟು ಹೆಚ್ಚು!
2) ಪ್ರತಿಯೊಬ್ಬ ಫ್ರೆಂಚ್ ನಾಗರಿಕರು ವರ್ಷಕ್ಕೆ ಸರಾಸರಿ 500 ಬಸವನ ಹುಳುಗಳನ್ನು ತಿನ್ನುತ್ತಾರೆ!
3) ಮಿಡತೆಗಳು ತಮ್ಮ ಕಾಲುಗಳಿಂದ ಶಬ್ದಗಳನ್ನು ಕೇಳುತ್ತವೆ!
4) ಸಿಂಹಗಳು ಎರಡು ವರ್ಷ ಪ್ರಾಯ ತಲುಪುವವರೆಗೂ ಘರ್ಜನೆ ಮಾಡುವುದೇ ಇಲ್ಲ!
5) ಬ್ರಿಟಿಷರು ಭಾರತಕ್ಕೆ 17ನೆಯ ಶತಮಾನಕ್ಕೆ ಆಗಮಿಸುವತನಕ ಭಾರತವು ಜಗತ್ತಿನ ಶ್ರೀಮಂತ ರಾಷ್ಟ್ರ ಆಗಿತ್ತು!

ಟೈಟಾನಿಕ್‌

6) ಇಡೀ ಜಗತ್ತಿನಲ್ಲಿ ಬೆನ್ನ ಮೇಲೆ ಮಲಗುವ ಸಾಮರ್ಥ್ಯ ಹೊಂದಿರುವ ಏಕೈಕ ಪ್ರಾಣಿ ಅಂದರೆ ಮನುಷ್ಯ ಮಾತ್ರ! ಕುದುರೆಗಳು ನಿಂತುಕೊಂಡೆ ಮಲಗುತ್ತವೆ! ಮೀನುಗಳು ಕಣ್ಣ ರೆಪ್ಪೆಯನ್ನು ತೆರೆದು ಮಲಗುತ್ತವೆ!
7) ಬಾವಲಿಗಳ ಕಾಲಿನ ಎಲುಬುಗಳು ಎಷ್ಟು ಮೆತ್ತಗಿವೆ ಎಂದರೆ ಅವುಗಳು ನಡೆಯಲಾರವು!
8) ಟೈಟಾನಿಕ್ ಹಡಗನ್ನು ತಯಾರು ಮಾಡಲು ತಗುಲಿದ ಖರ್ಚು 7 ಮಿಲಿಯನ್ ಡಾಲರ್. ಅದೇ ಹೆಸರಿನ ಸಿನೆಮಾ ಮಾಡಲು ತಗುಲಿದ ಖರ್ಚು ಬರೋಬ್ಬರಿ 200 ಮಿಲಿಯನ್ ಡಾಲರ್!
9) ನಕ್ಷತ್ರ ಮೀನುಗಳಿಗೆ ಮೆದುಳು ಇಲ್ಲವೇ ಇಲ್ಲ!
10) ನಮ್ಮ ತೋರುಬೆರಳು ಬೇರೆ ಬೆರಳುಗಳಿಗಿಂತ ಹೆಚ್ಚು ಸ್ಪರ್ಶ ಜ್ಞಾನ ಹೊಂದಿರುತ್ತದೆ!

11) ಇಂಗ್ಲಿಷ್ ವರ್ಣಮಾಲೆಯಲ್ಲಿ ಆರಂಭದಲ್ಲಿ 24 ಅಕ್ಷರಗಳು ಮಾತ್ರ ಇದ್ದವು. J ಮತ್ತು U ತಡವಾಗಿ ಸೇರಿಕೊಂಡವು!
12) ಸಂಸ್ಕೃತವು ಎಲ್ಲ ಭಾಷೆಗಳ ತಾಯಿ ಎಂದು ಕರೆಸಿಕೊಂಡಿದೆ. ಅದು ಬೇರೆಲ್ಲ ಭಾಷೆಗಳಿಗಿಂತ ಪುರಾತನ ಭಾಷೆ! ಅದೇ ರೀತಿ ಕಂಪ್ಯೂಟರ್ ಸಾಫ್ಟವೇರಗೆ ಅದು ಚೆನ್ನಾಗಿ ಹೊಂದಿಕೊಳ್ಳುವ ಭಾಷೆ ಎಂದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ!
13)ಮನುಷ್ಯರ ಬಾಯಿಯಲ್ಲಿ ಎರಡು ಸೆಟ್ ಹಲ್ಲುಗಳು ಇಡೀ ಜೀವನದಲ್ಲಿ ಉಂಟಾಗುತ್ತವೆ. ಆದರೆ ಆನೆಗಳ ಬಾಯಲ್ಲಿ ಆರು ಸೆಟ್ ಹಲ್ಲುಗಳು ಉಂಟಾಗುತ್ತವೆ. ಆರನೇ ಸೆಟ್ ಹಲ್ಲುಗಳು ಉದುರಿದ ನಂತರ ಆನೆಗಳು ಯಾವುದನ್ನೂ ತಿನ್ನಲು ಸಾಧ್ಯ ಆಗದೆ ಸಾಯುತ್ತವೆ!
14) ಎರಡನೇ ವಿಶ್ವಸಮರದ ಹೊತ್ತಿನಲ್ಲಿ ಅಮೇರಿಕ ದೇಶವು ಬಾಂಬ್ ಹಾಕಲು ಬಾವಲಿಗಳನ್ನು ತರಬೇತು ಮಾಡಿತ್ತು!
15) ದನಗಳಿಗೆ ಐದು ಮೈಲು ದೂರದಿಂದ ಸುವಾಸನೆಯನ್ನು ಪತ್ತೆ ಹಚ್ಚುವ ಶಕ್ತಿ ಇದೆ!

16) ವರ್ಜೀನಿಯಾ ದೇಶದಲ್ಲಿ ಕೋಳಿಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ಒಳಗೆ ಮಾತ್ರ ಮೊಟ್ಟೆ ಇಡುತ್ತವೆ!
17) ಯಾವುದೇ ಹಕ್ಕಿಗಳು ಸಾಮಾನ್ಯವಾಗಿ ಗೂಡಿನ ಒಳಗೆ ಮಲಗುವುದಿಲ್ಲ!
18) ಜಗತ್ತಿನ ಅತೀ ಸಣ್ಣ ಪಕ್ಷಿ ಎಂದರೆ ಅದು ಹಮ್ಮಿಂಗ್ ಬರ್ಡ್! ಒಂದು ಆಸ್ಟ್ರಿಚ್ ಪಕ್ಷಿಯ ಮೊಟ್ಟೆಯ ಒಳಗೆ 5000ಕ್ಕಿಂತ ಹೆಚ್ಚು ಹಮ್ಮಿಂಗ್ ಪಕ್ಷಿಯ ಮೊಟ್ಟೆಗಳನ್ನು ಫಿಟ್ ಮಾಡಬಹುದು!
19) ಜಪಾನಿನಲ್ಲಿ ರೋಬೋಟ್‌ಗಳು ಅಲ್ಲಿನ ಕೇಂದ್ರ ಸರಕಾರಕ್ಕೆ ತೆರಿಗೆ ಕಟ್ಟುತ್ತವೆ!
20) ಮನೆಯ ಬೆಕ್ಕುಗಳು ಲಿಂಬೆ ಹಣ್ಣುಗಳನ್ನು ದ್ವೇಷ ಮಾಡುತ್ತವೆ! ಅದರ ಪರಿಮಳವನ್ನು ಕೂಡ!

ಕುಣಿದು.. ಕುಣಿದು ಬಾರೆ..

21) ಜಗತ್ತಿನ ಹೆಚ್ಚಿನ ಆನೆಗಳ ತೂಕವು ಒಂದು ನೀಲಿ ತಿಮಿಂಗಲದ ನಾಲಿಗೆಯ ತೂಕಕ್ಕಿಂತ ಕಡಿಮೆ ಇರುತ್ತದೆ!
22) ಜಗತ್ತಿನ ಅತ್ಯಂತ ದುಬಾರಿ ಹವ್ಯಾಸ ಅಂದರೆ ತೋಟಗಾರಿಕೆ!
23) ರೋಮನ್ ಚಕ್ರವರ್ತಿಯಾದ ಕಾಲಿಗುಲ ತನ್ನ ಆಸ್ಥಾನದಲ್ಲಿ ಒಂದು ತರಬೇತು ಪಡೆದ ಕುದುರೆಗೆ ಸಭಾಸದನ ಸ್ಥಾನವನ್ನು ಕೊಟ್ಟಿದ್ದನು!
24) 300 ಮಿಲಿಯನ್ ವರ್ಷಗಳ ಅವಧಿಯಲ್ಲಿ ಒಂದಿಂಚೂ ಬದಲಾಗದ ಏಕೈಕ ಪ್ರಾಣಿ ಎಂದರೆ ಅದು ಡ್ರಾಗನ್ ಫ್ಲೈ ಮಾತ್ರ!
25) ಕನ್ನಡದ ‘ಮುಂಗಾರು ಮಳೆ’ ಸಿನೆಮಾದ ಕತೆಯನ್ನು ಮೊದಲು ಯೋಗರಾಜ್ ಭಟ್ ಅವರು ಕೇಳಿಸಿದ್ದು ಪುನೀತ್ ರಾಜಕುಮಾರ್ ಅವರಿಗೆ! ಅದರ ದುರಂತ ಅಂತ್ಯವನ್ನು ಬದಲಾಯಿಸಲು ಭಟ್ಟರು ಒಪ್ಪದ ಕಾರಣಕ್ಕೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಪಾಲಾಯಿತು!

26) ಇಂಗ್ಲೆಂಡ್ ಪಾರ್ಲಿಮೆಂಟ್ ಒಳಗೆ ಸ್ಪೀಕರ್ ಕೇವಲ ಆಲಿಸಿ ತೀರ್ಪು ಕೊಡುತ್ತಾನೆ. ಆತನಿಗೆ ಅಲ್ಲಿ ಮಾತಾಡುವ ಅಧಿಕಾರವು ಇರುವುದಿಲ್ಲ!
27) ಮೊನಾಲಿಸಾ ಚಿತ್ರವನ್ನು ಬರೆದ ಜಗತ್ತಿನ ಅತ್ಯುತ್ತಮ ಚಿತ್ರ ಕಲಾವಿದ ಲಿಯನಾರ್ಡ್ ಡಾವಿನ್ಸಿ ಒಂದು ದಿನವೂ ಶಾಲೆಗೆ ಹೋಗಿರಲಿಲ್ಲ! ವಿಮಾನ ಮತ್ತು ಪಾರಾಚ್ಯೂಟಗಳನ್ನು ಆಧುನಿಕ ವಿಜ್ಞಾನಿಗಳು ಸಂಶೋಧನೆ ಮಾಡುವ ನೂರಾರು ವರ್ಷಗಳ ಮೊದಲೇ ಡಾವಿನ್ಸಿ ಅವುಗಳ ಕಾಲ್ಪನಿಕ ಚಿತ್ರಗಳನ್ನು ಬಿಡಿಸಿದ್ದ!
28) ಇಂಗ್ಲೆಂಡ್ ರಾಜಕುಮಾರರಾದ ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸ್ ವಿಲಿಯಂ ಇದುವರೆಗೆ ಒಂದೇ ವಿಮಾನದಲ್ಲಿ ಪ್ರಯಾಣ ಹೋಗಿಲ್ಲ! ಅದು ಮುನ್ನೆಚ್ಚರಿಕೆಯ ಕ್ರಮ ಎನ್ನುತ್ತದೆ ಬ್ರಿಟಿಷ್ ಅರಮನೆ!
29) 1932ರ ಚಳಿಗಾಲದ ದಿನಗಳಲ್ಲಿ ವಿಶ್ವವಿಖ್ಯಾತ ನಯಾಗರಾ ಜಲಪಾತ ಪೂರ್ತಿ ಹೆಪ್ಪುಗಟ್ಟಿ ಮಂಜುಗಡ್ಡೆ ಆಗಿತ್ತು!
30) ಮೊಲಗಳ ಕಿವಿಗಳ ಸ್ಥಾನದಿಂದ ಅವುಗಳ ಮೂಡನ್ನು ಅರಿಯುತ್ತಾರೆ!

31) ಜಗತ್ತಿನಲ್ಲಿ ಅತೀ ಹೆಚ್ಚು ಜನ ಮದುವೆ ಆಗುವ ತಿಂಗಳು..? ಅದು ಖಂಡಿತ ಜೂನ್!
32) ಪ್ಯಾಕೆಟ್‌ ಹಾಲನ್ನು ಮೊದಲು ಕಂಡುಹಿಡಿದ ದೇಶವು ಫ್ರಾನ್ಸ್!
33) ಮಾನವನ ಮೆದುಳು ಸರಿಯಾಗಿ ಕೆಲಸ ಮಾಡಲು 10 ವಾಟ್ ಬಲ್ಬು ಬೆಳಗಲು ಬೇಕಾದಷ್ಟು ಕರೆಂಟ್ ಬೇಕು!
34) ಬ್ರಿಟನ್ ದೇಶದಲ್ಲಿ 70% ಅಮ್ಮಂದಿರು ಕೆಲಸಕ್ಕೆ ಹೋಗುತ್ತಾರೆ!
35) ಜಗತ್ತಿನ ಎಲ್ಲ ಮನುಷ್ಯರ ಒಟ್ಟು ತೂಕವು 420 ಮಿಲಿಯನ್ ಟನ್ ಆಗಿರುತ್ತದೆ!

36) ರೋಮ್ ನಗರದಲ್ಲಿ ಪ್ರತಿಮೆಗಳನ್ನು ಮಾಡುವಾಗ ಅವುಗಳ ತಲೆಗಳನ್ನು ಕಳಚುವ ವ್ಯವಸ್ಥೆ ಇರುತ್ತದೆ. ಒಂದು ಪ್ರತಿಮೆಯ ತಲೆಯನ್ನು ಕಳಚಿ ಇನ್ನೊಂದು ಪ್ರತಿಮೆಯ ತಲೆಯನ್ನು ಜೋಡಿಸುವ ವ್ಯವಸ್ಥೆ ಅಲ್ಲಿ ಇದೆ!
37) ಕಿಟಕಿಗಳ ಗಾಜಿಗೆ ಡಿಕ್ಕಿ ಹೊಡೆದು ವರ್ಷಕ್ಕೆ 10,000ಕ್ಕಿಂತ ಹೆಚ್ಚು ಪಕ್ಷಿಗಳು ಜಗತ್ತಿನಲ್ಲಿ ಸಾವನ್ನು ಅಪ್ಪುತ್ತವೆ!
38) ಆಫ್ರಿಕಾದ ಆನೆಗಳು ದಿನಕ್ಕೆ ಮೂರು ಬಾರಿ ಸ್ನಾನ ಮಾಡುತ್ತವೆ!
39) ಒಂಟೆಗಳಿಗಿಂತ ಜಿರಾಫೆಗಳು ನೀರಿಲ್ಲದೆ ಹೆಚ್ಚು ದಿನ ಬದುಕುತ್ತವೆ!
40) ನಮ್ಮ ದೇಹದಲ್ಲಿ ನೋವಿನ ಸಂವೇದನೆಗಳು ಒಂದು ಸೆಕೆಂಡಿಗೆ 350 ಅಡಿ ದೂರಕ್ಕೆ ಚಲಿಸುತ್ತವೆ!

ಈ ಸಂಗತಿಗಳು ಜಸ್ಟ್ ಟೈಮ್ ಪಾಸ್ ಅಲ್ಲ! ಇಂತಹ ಕೋಟಿ ಕೋಟಿ ಅಚ್ಚರಿಯ ಸಂಗತಿಗಳು ಜಗತ್ತಿನಲ್ಲಿ ಇವೆ. ಅದಕ್ಕಾಗಿ ನಾನು ಹೇಳುವುದು ಜಗತ್ತು ಅದ್ಭುತಗಳ ಮೂಟೆ! ಕೌತುಕದ ಮೊಟ್ಟೆ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕೇಳದೆ ನಿಮಗೀಗ ದೂರದಲ್ಲಿ ಯಾರೋ: ಶಂಕರನಿಗೊಂದು ಪ್ರೀತಿಯ ಪತ್ರ

Exit mobile version