Site icon Vistara News

ರಾಜ ಮಾರ್ಗ ಅಂಕಣ : Ordinary ಆಗಿರುವ ನಾವು Extraordinary ಆಗಲು ಬೇಕಾದ ಆ EXTRA ಯಾವುದು?

Extra mile

#image_title

ಆಂಗ್ಲ ಭಾಷೆಯಲ್ಲಿ Walk the EXTRA mile ಎಂಬ ಜನಪ್ರಿಯ ಮಾತಿದೆ. ಆ EXTRA ಯಾವುದು ಎಂದು ಹುಡುಕಲು ನಾನು ಪ್ರಯತ್ನ ಪಟ್ಟಾಗ ನನಗೆ ಸಿಕ್ಕಿದ ಉತ್ತರಗಳು ತುಂಬಾ ರೋಚಕ ಆಗಿದ್ದವು. ಒಂದೊಂದಾಗಿ ಅವುಗಳನ್ನು ನಾನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ.

1) ಒಬ್ಬಳು ತಾಯಿಯು ತನ್ನ ಮಗುವಿಗೆ ಎದೆ ಹಾಲು ಕೊಡುತ್ತಾಳೆ. ಆಗ ಅದರ ಜೊತೆಗೆ ಒಂದು ಬೊಗಸೆ ಪ್ರೀತಿ ಕೂಡ ಕೊಡುತ್ತಾಳೆ. ಆ ಪ್ರೀತಿಯು ಸಕ್ಕರೆಯಾಗಿ ಮಗುವಿಗೆ ಆ ಹಾಲು ಅಮೃತ ಸದೃಶ ಆಗುತ್ತದೆ. ಅದು EXTRA!

2) ಒಬ್ಬ ತಂದೆಯು ತನ್ನ ಮಗುವಿನ ಹೊಣೆಯನ್ನು ಹೊರುವುದರ ಜೊತೆಗೆ ತನ್ನ ಮಗುವಿನಲ್ಲಿ ನಂಬಿಕೆಯನ್ನು ಬೆಳೆಸುತ್ತಾನೆ. ಅದು EXTRA!

3) ಒಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಗೆ ಜ್ಞಾನವನ್ನು ಕೊಡುವುದರ ಜೊತೆಗೆ ತನ್ನ ವಿದ್ಯಾರ್ಥಿಯನ್ನು ಬದುಕಿಗೂ ಪ್ರಿಪೇರ್ ಮಾಡುತ್ತಾನೆ. ಅದು EXTRA!

4) ಒಬ್ಬ ವ್ಯಾಪಾರಿಯು ಗ್ರಾಹಕರನ್ನು ಸಂತೃಪ್ತಿಪಡಿಸುವ ಕೆಲಸದ ಜೊತೆಗೆ ನಗುಮುಖದ ಸೇವೆಯನ್ನೂ ನೀಡುತ್ತಾನೆ. ಅದು EXTRA!

5) ಒಬ್ಬ ಕಲಾವಿದನು ಜನರನ್ನು ರಂಜನೆ ಮಾಡುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನೂ ಕೊಡುತ್ತಾನೆ/ಳೆ. ಅದು EXTRA!

6) ಒಬ್ಬ ವೈದ್ಯ ರೋಗಿಯ ಆರೋಗ್ಯದ ಬಗ್ಗೆ ಕಾಳಜಿಯನ್ನು ಮಾಡುವುದರ ಜೊತೆಗೆ ಆತನ ಬದುಕಿನಲ್ಲಿ ಭರವಸೆಯನ್ನೂ ತುಂಬುತ್ತಾನೆ. ಅದು EXTRA!

7) ಒಬ್ಬ ನಾಯಕ/ಕಿಯು ನಮಗೆ ಗೆಲುವನ್ನು ತಂದುಕೊಡುವುದರ ಜೊತೆಗೆ ತನ್ನ ತಂಡದ ಸದಸ್ಯರಲ್ಲಿ ನಿರಂತರ ಸ್ಫೂರ್ತಿಯನ್ನೂ ತುಂಬುತ್ತಾರೆ. ಅದು EXTRA!

8) ಒಬ್ಬ ಕೋಚ್ ನಮಗೆ ತರಬೇತಿಯನ್ನು ನೀಡುವುದರ ಜತೆಗೆ ನಮ್ಮೊಳಗಿನ ಸಾಮರ್ಥ್ಯಗಳನ್ನು ನಾವೇ ಗುರುತಿಸುವಂತೆ ಕೂಡ ಮಾಡುತ್ತಾರೆ. ಅದು EXTRA!

9) ಒಬ್ಬ ಚಿತ್ರಕಾರನು ಬಣ್ಣದ ಚಿತ್ರಗಳನ್ನು ಬಿಡಿಸುವುದು ಮಾತ್ರವಲ್ಲ ನಮಗೆ ಆಂತರಿಕ ಸೌಂದರ್ಯವನ್ನು ಗುರುತಿಸಲು ಸಹಾಯ ಕೂಡ ಮಾಡುತ್ತಾನೆ/ಳೆ. ಅದು EXTRA!

10) ಒಬ್ಬ ಸಂಗೀತಕಾರನು ಸಂಗೀತವನ್ನು ನುಡಿಸುವುದು ಮಾತ್ರವಲ್ಲ, ನಮ್ಮೊಳಗಿನ ಭಾವ ಲೋಕವನ್ನು ಶ್ರೀಮಂತ ಮಾಡುತ್ತಾನೆ/ಳೆ. ಅದು EXTRA!

11) ಒಬ್ಬ ಉದ್ಯಮಶೀಲ ವ್ಯಕ್ತಿಯು ಅವಕಾಶಗಳನ್ನು ಹುಡುಕಿಕೊಂಡು ಹೋಗುವುದರ ಜೊತೆಗೆ ಇತರರಿಗೆ ಅವಕಾಶಗಳ ಮೂಟೆಯನ್ನು ಸೃಷ್ಟಿಸುತ್ತಾನೆ. ಅದು EXTRA!

12) ಒಬ್ಬ ರಾಜಕಾರಣಿಯು ತಾನು ನೆಟ್ಟಗಿರುವುದು ಮಾತ್ರವಲ್ಲ ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಯೋಚನೆ ಮಾಡಿ ಅದರ ಹಾಗೆ ಬದುಕುತ್ತಾನೆ/ಳೆ. ಅದು EXTRA!

13) ಒಬ್ಬ ಬರಹಗಾರನು/ಳು ಓದುಗರನ್ನು ಸೃಷ್ಟಿಸುವುದು ಮಾತ್ರವಲ್ಲ. ತನ್ನ ಹಾಗೆ ಬರೆಯುವ ಲೇಖಕರನ್ನು ಕೂಡ ಸೃಷ್ಟಿಸುತ್ತಾನೆ/ಳೆ. ಅದು EXTRA!

14) ಒಬ್ಬ ಲೆಜೆಂಡ್ ವ್ಯಕ್ತಿಯು ವ್ಯಕ್ತಿಗಳ ಸಂಬಂಧವನ್ನು ಪೋಷಣೆ ಮಾಡುವುದು ಮಾತ್ರವಲ್ಲ ತನ್ನ ಸಂಬಂಧಗಳನ್ನು ದಿನವೂ ವಿಸ್ತರಿಸುತ್ತಾನೆ/ಳೆ. ಅದು EXTRA!

15) ಒಬ್ಬ ಬಿಸಿನೆಸ್ ಲೀಡರ್ ವಸ್ತುಗಳನ್ನು ಮಾರಾಟ ಮಾಡುವುದು ಮಾತ್ರವಲ್ಲ ಹೊಸ ಐಡಿಯಾಗಳನ್ನು ಕೂಡ ಮಾರ್ಕೆಟ್ ಮಾಡುತ್ತಾನೆ/ಳೆ. ಅದು EXTRA!

16) ಒಬ್ಬ ಬಿಲ್ಡರ್ ಮನೆಗಳನ್ನು ಮಾತ್ರ ಕಟ್ಟುವುದು ಅಲ್ಲ. ಅದರೊಳಗೆ ವಾಸವಾಗಿರುವ ವ್ಯಕ್ತಿಗಳ ಕನಸುಗಳನ್ನು ಕೂಡ ಕಟ್ಟುತ್ತಾನೆ! ಅದು EXTRA.

17) ಒಬ್ಬ ನಾಗರಿಕನು ತನ್ನ ಹಕ್ಕುಗಳ ಬಗ್ಗೆ ಹೋರಾಟ ಮಾಡುವುದು ಮಾತ್ರವಲ್ಲ. ಪ್ರತೀ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯ ಜನ ಪ್ರತಿನಿಧಿಯನ್ನು ಆರಿಸುತ್ತಾನೆ. ಅದು EXTRA!

18) ಒಬ್ಬ ನ್ಯಾಯಾಧೀಶರು ಕೋರ್ಟಲ್ಲಿ ತೀರ್ಪನ್ನು ಕೊಡುವುದು ಮಾತ್ರವಲ್ಲ, ತನ್ನ ದೇಶವು ಒಪ್ಪಿದ ಸಂವಿಧಾನದ ಗೌರವವನ್ನು ಕಾಪಾಡುತ್ತಾರೆ. ಅದು EXTRA!

19) ಒಬ್ಬ ವಿಜ್ಞಾನಿಯು ಸಂಶೋಧನೆಗಳನ್ನು ಮಾತ್ರ ಮಾಡುವುದಲ್ಲ. ತನ್ನ ಸಂಶೋಧನೆಯ ಲಾಭವನ್ನು ಮನುಕುಲದ ಒಳಿತಿಗಾಗಿ ವಿನಿಯೋಗ ಮಾಡುತ್ತಾನೆ/ಳೆ. ಅದು EXTRA!

20) ಒಬ್ಬ ದೇವರು ಜಗತ್ತನ್ನು ಮುನ್ನಡೆಸುವುದು ಮಾತ್ರವಲ್ಲ ಒಳ್ಳೆಯ ಮೌಲ್ಯಗಳನ್ನು ಜಗತ್ತಿನಲ್ಲಿ ಪೋಷಣೆ ಮಾಡುತ್ತಾನೆ. ಅದು EXTRA!

21) ಒಬ್ಬ ಒಳ್ಳೆಯ ವ್ಯಕ್ತಿಯು ತನ್ನ ಪ್ರೀತಿಪಾತ್ರರನ್ನು ಬದಲಾವಣೆ ಮಾಡಲು ಹೊರಡುವ ಮೊದಲು ತಾನು ಪಾಸಿಟಿವ್ ಆಗಿ ಬದಲಾಗುತ್ತಾನೆ. ಅದು EXTRA!

22) ಒಬ್ಬ ಐಕಾನ್ ವ್ಯಕ್ತಿಯು ತಾನು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗುವ ಮೊದಲು ನೂರಾರು ಜನರ ಮೇಲೆ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಬೀರುತ್ತಾನೆ/ಳೆ. ಅದು EXTRA!

23) ಒಬ್ಬ ಧರ್ಮಗುರುವು ತನ್ನ ಧರ್ಮದ ಶ್ರೇಷ್ಠತೆಯನ್ನು ತನ್ನ ಧರ್ಮದ ಅನುಯಾಯಿಗಳಿಗೆ ಅರ್ಥ ಮಾಡಿಸುತ್ತಾರೆ. ಅದರ ಜೊತೆಗೆ ಜಗತ್ತಿನ ಎಲ್ಲ ಧರ್ಮಗಳ ತತ್ವಗಳು ಒಂದೇ ಎಂದು ಸಾರುತ್ತಾರೆ. ಅದು EXTRA!

24) ಒಬ್ಬ ಸಾಮಾನ್ಯ ಮನುಷ್ಯನು ತನಗಾಗಿ, ತನ್ನ ಕುಟುಂಬಕ್ಕಾಗಿ ಬದುಕುತ್ತಾನೆ. ಅದರ ಜೊತೆಗೆ ಸಮಾಜದ ಉನ್ನತಿಗಾಗಿ ಅವನಿಗೆ/ ಅವಳಿಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಲು ಸಾಧ್ಯವಾದರೆ ಅದು EXTRA!

25) ಒಬ್ಬ ವಿಷನರಿ ವ್ಯಕ್ತಿಯು ಒಂದು ಸಮಾಜವನ್ನು ಅಭಿವೃದ್ಧಿಪಡಿಸುತ್ತಾನೆ. ಅದರ ಜೊತೆಗೆ ಅದೇ ಸಮಾಜದ ಅರಿವನ್ನು ಹೆಚ್ಚಿಸಲು ಅವನಿಗೆ ಸಾಧ್ಯವಾದರೆ ಅದು EXTRA!

ಜೀವನದ ಯಶೋಯಾನದಲ್ಲಿ ಆ EXTRA MILE ಕ್ರಮಿಸಲು ನೀವು ಸಿದ್ಧರಾಗಿದ್ದೀರಾ? ಮಾಡುವ ಯಾವುದೇ ಕೆಲಸವನ್ನು ಕೂಡ ಖುಷಿ ಪಡುತ್ತಾ, ನಗುಮುಖದಲ್ಲಿ ಮಾಡಲು ಸಾಧ್ಯವಾದರೆ ಅದು EXTRA ಆಗಬಲ್ಲುದು!

ನಿಮಗೆ ಒಳ್ಳೆದಾಗಲಿ. ಹಾಗೆಯೇ ನಿಮ್ಮಿಂದ ಸಮಾಜಕ್ಕೆ ಒಳ್ಳೆದಾಗಲಿ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕನ್ನಡ ಶಾಲೆಗಳನ್ನು ಉಳಿಸಲು ಮಾದರಿ ಕಾರ್ಯಕ್ರಮ; ಅತ್ತೂರು ಶಾಲೆಯಲ್ಲಿ ಒಂದು ಸ್ಮರಣೀಯ ಪುನರ್ಮಿಲನ

Exit mobile version