Site icon Vistara News

ಇನ್ಫೋಸಿಸ್‌ಗೆ ಏಪ್ರಿಲ್-ಜೂನ್‌ನಲ್ಲಿ 5,360 ಕೋಟಿ ರೂ. ನಿವ್ವಳ ಲಾಭ

Infoysis

ನವ ದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್‌ ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ ೫,೩೬೦ ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಪ್ರಸಕ್ತ ಸಾಲಿನಲ್ಲಿ ೫೦,೦೦೦ ಹೊಸಬರನ್ನು ನೇಮಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಕಳೆದ ಏಪ್ರಿಲ್-ಜೂನ್‌ನಲ್ಲಿ ಇನ್ಫೋಸಿಸ್‌ ೨೧,೧೭೧ ಮಂದಿಯನ್ನು ನೇಮಿಸಿತ್ತು.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ೩.೨% ಏರಿಕೆಯಾಗಿದೆ. ( ೫,೧೯೫ ಕೋಟಿ ರೂ.) ಮಾರುಕಟ್ಟೆ ವಿಶ್ಲೇಷಕರ ಅಂದಾಜಿಗಿಂತ ಇದು ಕಡಿಮೆಯಾಗಿದೆ. ಜನವರಿ-ಮಾರ್ಚ್‌ ಅವಧಿಗೆ ಹೋಲಿಸಿದರೆ ೫.೭% ಇಳಿಕೆಯಾಗಿದೆ. ಹೀಗಿದ್ದರೂ ಕಂಪನಿಯ ತ್ರೈಮಾಸಿಕ ವಹಿವಾಟು ೨೭,೮೯೬ ಕೋಟಿ ರೂ.ಗಳಿಂದ ೩೪,೪೭೦ ಕೋಟಿ ರೂ.ಗೆ ವೃದ್ಧಿಸಿದೆ.

ಇನ್ಫೋಸಿಸ್‌ ೨೦೨೨-೨೩ರಲ್ಲಿ ತನ್ನ ಆದಾಯದ ಮುನ್ನೋಟದಲ್ಲಿ ೧೪-೧೫% ಹೆಚ್ಚಳವನ್ನು ಅಂದಾಜಿಸಿರುವುದು ಗಮನಾರ್ಹ.

ಜಾಗತಿಕ ಅನಿಶ್ಚಿತತೆಯ ಆರ್ಥಿಕ ಪರಿಸ್ಥಿತಿಯ ನಡುವೆಯೂ ಕಂಪನಿಯ ಒಟ್ಟಾರೆ ಫಲಿತಾಂಶ ಉತ್ತಮವಾಗಿದೆ. ಮುನ್ನೋಟವೂ ಸುಧಾರಿಸಿದೆ. ಐಟಿ ಸೇವೆಗಳಿಗೆ ಗ್ರಾಹಕರ ಬೇಡಿಕೆ, ಹೊಸ ಆರ್ಡರ್ಗಳ ಸಂಖ್ಯೆಯೂ ವೃದ್ಧಿಸಿದೆ. ಕಂಪನಿಯ ಡಿಜಿಟಲ್‌ ಕಾರ್ಯನಿರ್ವಹಣೆಯ ಸಾಮರ್ಥ್ಯ ಇದಕ್ಕೆ ಕಾರಣವಾಗಿದೆ ಎಂದು ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್‌ ತಿಳಿಸಿದ್ದಾರೆ.

Exit mobile version