Site icon Vistara News

ಇ-ಸ್ಕೂಟರ್‌ನಲ್ಲಿ ಬೆಂಕಿ ಆಕಸ್ಮಿಕ ಅಪರೂಪ ಎಂದ ಓಲಾ  ಮುಖ್ಯಸ್ಥ ಭವೀಶ್‌ ಅಗರವಾಲ್

ಹೊಸದಿಲ್ಲಿ: ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸುವುದು ಅತ್ಯಂತ ಅಪರೂಪ. ಹೀಗಿದ್ದರೂ ಇಂಥ ಅಪರೂಪದ ಪ್ರಕರಣಗಳು ಭವಿಷ್ಯದಲ್ಲೂ ಸಂಭವಿಸಬಹುದು ಎಂದು ಓಲಾ ಎಲೆಕ್ಟ್ರಿಕ್ ಕಂಪನಿಯ ಮುಖ್ಯಸ್ಥ ಭವೀಶ್ ಅಗರವಾಲ್ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಣದರಲ್ಲಿ ಮಾತನಾಡಿದ ಭವೀಶ್ ಅಗರವಾಲ್, ಭವಿಷ್ಯದಲ್ಲೂ ಅಪರೂಪಕ್ಕೆ ಇ-ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಬಹುದು. ಅಂಥ ಸಾಧ್ಯತೆಗಳನ್ನಿ ನಿರಾಕರಿಸುವಂತಿಲ್ಲ. ಆದರೆ ಅದು ಅತಿ ಅಪರೂಪವಾಗಿರುತ್ತದೆ ಎಂದು ವಿವರಿಸಿದರು.

ಓಲಾ 1400 ಇ-ಸ್ಕೂಟರ್‌ಗಳನ್ನು ಹಿಂಪಡೆದು ಸುರಕ್ಷತೆಯ ತಪಾಸಣೆ ನಡೆಸಿದೆ. ಕಳೆದ ಮಾರ್ಚ್ ನಲ್ಲಿ ಇ-ಸ್ಕೂಟರ್‌ನಲ್ಲಿ ಬೆಂಕಿ ಆಕಸ್ಮಿಕವಾಗಿ ಚರ್ಚೆಗೀಡಾಗಿತ್ತು.

” ಎಲೆಕ್ಟ್ರಿಕ್ ಇ-ಸ್ಕೂಟರ್‌ನ ಸಂಪೂರ್ಣ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ. ಸಾಧ್ಯವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಿಸಿದ್ದೇವೆ. ಯಾವುದೇ ಸಮಸ್ಯೆ ಉಂಟಾದರೂ, ಪರಿಹರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದ್ದರಿಂದ ಗ್ರಾಹಕರು ಆತಂಕಪಡಬೇಕಿಲ್ಲ” ಎಂದು ಭವೀಶ್ ಅಗರವಾಲ್ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಪೆಟ್ರೋಲ್ ಬಳಸುವ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗುತ್ತವೆ. ರಸ್ತೆಯಲ್ಲಿ 50 ಸಾವಿರ ಇ-ಸ್ಕೂಟರ್ ಗಳ ಪೈಕಿ ಕೇವಲ ಒಂದರಲ್ಲಿ ಬೆಂಕಿ ಅವಘಡ ಆಗಿದೆ. ಈ ಸಮಸ್ಯೆ ಇಡೀ ದ್ವಿಚಕ್ರ ವಾಹನ ಇಂಡಸ್ಟ್ರಿಗೆ ಎಂದು ಓಲಾ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಓಲಾ ದಕ್ಷಿಣ ಕೊರಿಯಾದ ಎಲ್‌ಜಿ ಎನರ್ಜಿ ಸಲ್ಯೂಷನ್ ಕಂಪನಿಯಿಂದ ಸೆಲ್‌ಗಳನ್ನು ಆಮದು ಮಾಡುತ್ತದೆ. ಚೀನಾದ ಅನರ್ಹ ಪೂರೈಕೆದಾರರಿಂದ ಖರೀದಿಸಬಾರದು ಎಂದು ಅವರು ಹೇಳಿದ್ದಾರೆ.
ಸರಕಾರದ ಪ್ರಾಥಮಿಕ ತನಿಖೆಯ ಪ್ರಕಾರ ಬ್ಯಾಟರಿ ಸೆಲ್‌ಗಳು ಮತ್ತು ಬ್ಯಾಟರಿ ಮ್ಯಾನೇಜ್ ಮೆಂಟ್ ಸಿಸ್ಟಮ್‌ನ ಲೋಪಗಳಿಂದ ಇ-ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸುತ್ತಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು.

Exit mobile version