Site icon Vistara News

ಏರ್‌ ಇಂಡಿಯಾದ ಹೊಸ ಬಾಸ್‌ ಕ್ಯಾಂಬೆಲ್‌ ವಿಲ್ಸನ್‌

ಹೊಸದಿಲ್ಲಿ: ಏರ್‌ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕ್ಯಾಂಬೆಲ್‌ ವಿಲ್ಸನ್‌ (50) ನೇಮಕವಾಗಿದ್ದಾರೆ.

ಈ ಹಿಂದೆ ಅವರು ಸಿಂಗಾಪುರ ಏರ್‌ ಲೈನ್ಸ್‌ನ ಅಧೀನ ಸಂಸ್ಥೆಯಾದ ಸ್ಕೂಟ್‌ನ ಸಿಇಒ ಆಗಿದ್ದರು. ಸಿಂಗಾಪುರ ಏರ್‌ ಲೈನ್ಸ್‌ ನಲ್ಲಿ ಕಂಪನಿಯ ಪರವಾಗಿ ಕೆನಡಾ, ಹಾಂಕಾಂಗ್‌ ಮತ್ತು ಜಪಾನ್‌ ನಲ್ಲಿ ಕಾರ್ಯನಿರ್ವಹಿಸಿದ್ದರು. 26 ವರ್ಷಗಳ ವೃತ್ತಿ ಅನುಭವ ಅವರಿಗೆ ಇದೆ.

ಕ್ಯಾಂಬೆಲ್‌ ವಿಲ್ಸನ್‌ ಅವರು ನ್ಯೂಜಿಲ್ಯಾಂಡ್‌ ವಿವಿಯಲ್ಲಿ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಏರ್‌ ಇಂಡಿಯಾ ವಿಶ್ವದ ಪ್ರಮುಖ ಏರ್‌ ಲೈನ್‌ ಗಳಲ್ಲೊಂದಾಗಿದ್ದು, ಅಲ್ಲಿ ಕೆಲಸ ಮಾಡಲು ಉತ್ಸುಕನಾಗಿರುವುದಾಗಿ ಕ್ಯಾಂಬೆಲ್‌ ತಿಳಿಸಿದ್ದಾರೆ.

Exit mobile version