Site icon Vistara News

ಚೀನಾದಂತೆ ಭಾರತ ಜಗತ್ತಿನ ಕಾರ್ಖಾನೆಯಾಗಬೇಕಾದ ಅವಶ್ಯಕತೆ ಈಗ ಇಲ್ಲ!

china industry

ನವದೆಹಲಿ: ಕೋವಿಡ್‌-೧೯ ಬಿಕ್ಕಟ್ಟಿನ ಬಳಿಕ ಇಡೀ ಜಗತ್ತಿನಲ್ಲಿ ಮಹತ್ತರವಾದ ಬದಲಾವಣೆಗಳು ಮತ್ತು ಹೊಸ ಸವಾಲುಗಳು ಉಂಟಾಗಿವೆ. ಇದುವರೆಗೆ ಜಗತ್ತಿನ ಕಾರ್ಖಾನೆ ಎನ್ನಿಸಿದ್ದ ಚೀನಾಕ್ಕೆ ಈಗ ಜಾಗತಿಕ ಮಟ್ಟದಲ್ಲಿ ಪೂರೈಕೆಯ ಸರಣಿಯನ್ನು (Global Supply Chain) ಮೊದಲಿನಂತೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ಕ್ರಮೇಣ ತನ್ನ ರಫ್ತನ್ನು ಹೆಚ್ಚಿಸುತ್ತಿರುವ ಭಾರತ, ಚೀನಾ ಮಾದರಿಯಲ್ಲಿ ಜಗತ್ತಿನ ಕಾರ್ಖಾನೆಯಾಗಲಿದೆಯೇ? ಈ ಮೂಲಕ ಚೀನಾ ೨೦೦೦-೨೦೨೧ರ ಎರಡು ದಶಕಗಳಲ್ಲಿ ಸಾಧಿಸಿದಂತೆ ಆರ್ಥಿಕ ಅಭಿವೃದ್ಧಿ ಕಾಣಬಹುದೇ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಉಂಟಾಗಿದೆ.‌

ಜಾಗತಿಕ ಪೂರೈಕೆ ಸರಣಿಯ ಸಾಧಕ-ಬಾಧಕ

ಕೋವಿಡ್‌ ಬಿಕ್ಕಟ್ಟು ಹಾಗೂ ರಷ್ಯಾ-ಉಕ್ರೇನ್‌ ಸಮರದ ಬಳಿಕ ಜಾಗತಿಕ ಪೂರೈಕೆಯ ಸರಣಿಯಲ್ಲಿನ ಲೋಪದೋಷಗಳು ಹಾಗೂ ಅದು ಮಹತ್ವ ಕಳೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಕೋವಿಡ್‌ ವೈರಸ್‌ ಹರಡುವುದನ್ನು ತಡೆಯಲು ಚೀನಾ ಅತ್ಯಂತ ಕಠಿಣ ನಿಯಂತ್ರಣ ಮತ್ತು ನಿರ್ಬಂಧಗಳನ್ನು ಹೇರಿತ್ತು. ಇದರ ಪರಿಣಾಮ ಚೀನಾದ ಕಾರ್ಖಾನೆಗಳಲ್ಲಿ ಉತ್ಪಾದನೆ ಕುಸಿಯಿತು. ಜಾಗತಿಕ ಪೂರೈಕೆಯ ಸರಣಿ ಅಸ್ತವ್ಯಸ್ತವಾಯಿತು. ಬಳಿಕ ರಷ್ಯಾ-ಉಕ್ರೇನ್‌ ಸಂಘರ್ಷದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವನ್ನು ದಂಡಿಸುವ ಉದ್ದೇಶದಿಂದ ನಿರ್ಬಂಧಗಳನ್ನುವ ಹೇರಿತು. ಇದರಿಂದಾಗಿ ಗೋಧಿ ಪೂರೈಕೆ, ಇಂಧನ ವಿತರಣೆ ಅಸ್ತವ್ಯಸ್ತ ಆಯಿತು. ಆದರೆ ಇಲ್ಲಿ ಮತ್ತೊಂದು ಬದಲಾವಣೆಯನ್ನು ಗಮನಿಸಬಹುದು. ಯುರೋಪ್‌ ಕೂಡ ರಷ್ಯಾದಿಂದ ತೈಲ ಮತ್ತು ಅನಿಲ ಆಮದನ್ನು ಹಂತಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ. ಈ ನಡುವೆ ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌, ಮುಂದಿನ ಕೆಲ ದಶಕಗಳಲ್ಲಿ ಭಾರತದ ಪ್ರಾಬಲ್ಯ ಗಣನೀಯ ವೃದ್ಧಿಸಲಿದೆ. ಆರ್ಥಿಕತೆ, ಪ್ರಜಪ್ರಭುತ್ವ ಹಾಗೂ ಜಾಗತಿಕ ಹವಾಮಾನ ಬದಲಾವಣೆಯ ವಿಷಯದಲ್ಲಿ ಮುಂಚೂಣಿಗೆ ಬರಲಿದೆ ಎಂದು ಹೇಳಿದ್ದಾರೆ.

ಈಗ ಉಳಿದಿರುವ ಮಹತ್ವದ ಪ್ರಶ್ನೆ ಏನೆಂದರೆ, ಭಾರತವು ಜಗತ್ತಿನ ಪೂರೈಕೆಯ ಸರಣಿಯಲ್ಲಿ ಪ್ರಾಮುಖ್ಯತೆ ಗಳಿಸಿ ಜಗತ್ತಿನ ಕಾರ್ಖಾನೆ ಎನ್ನಿಸಿಕೊಳ್ಳಬೇಕೆ? ಅದರಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವೇ? ಹೇಗೆ ಚೀನಾ ೨೦೦೦-೨೦೨೦ರ ತನಕ ಜಗತ್ತಿನ ಕಾರ್ಖಾನೆ ಎನ್ನಿಸಿ ತನ್ನ ಎಕಾನಮಿಯನ್ನು ಸುಧಾರಿಸಿತೋ, ಅದೇ ಮಾದರಿ ಭಾರತಕ್ಕೂ ಸೂಕ್ತವೇ? ಎಂಬುದು ಈಗ ಕಾಡುತ್ತಿರುವ ಪ್ರಶ್ನೆ ಎನ್ನುತ್ತಾರೆ ಟ್ಯಾಕ್ಸ್‌ ಇಂಡಿಯಾ ಆನ್‌ಲೈನ್‌ ಡಾಟ್‌ಕಾಮ್‌ನ ಸ್ಥಾಪಕ ಸಂಪಾದಕರಾದ ಶೈಲೇಂದ್ರ ಕುಮಾರ್.‌

ಅಂದು-ಇಂದಿನ ಪರಿಸ್ಥಿತಿ ಭಿನ್ನ

ಚೀನಾ ಜಾಗತಿಕ ಉತ್ಪಾದನೆಯ ಪ್ರಮುಖ ತಾಣವಾಗುವ ಮೂಲಕ ತನ್ನ ಜಿಡಿಪಿಯನ್ನು ೧.೨ ಲಕ್ಷ ಕೋಟಿ ಡಾಲರ್‌ನಿಂದ ೧೭ ಲಕ್ಷ ಕೋಟಿ ಡಾಲರ್‌ಗೆ ವೃದ್ಧಿಸಿದೆ. ಎರಡು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ಚೀನಾಕ್ಕೆ ಇದು ಸಾಧ್ಯವಾಗಿದೆ. ಆದರೆ ಈಗಿನ ಪರಿಸ್ಥಿತಿಯೇ ಬೇರೆ, ಆಗಿನ ಪರಿಸ್ಥಿತಿಯೇ ಬೇರೆ ಆಗಿತ್ತು. ಆಗ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಅಗ್ಗದ ಕಾರ್ಮಿಕರು, ಅಗ್ಗದ ಕಚ್ಚಾ ಸಾಮಾಗ್ರಿಗಳ ಅವಶ್ಯಕತೆ ಇತ್ತು. ಈ ಎಲ್ಲವನ್ನೂ ಚೀನಾ ಪೂರೈಸಿತ್ತು. ೧೯೯೫ರಿಂದ ೨೦೦೮ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಸರಕುಗಳ ವ್ಯಾಪಾರ ೧೭%ರಿಂದ ೨೫% ಏರಿತ್ತು. ಇದರಲ್ಲಿ ಚೀನಾದ ಪಾಲು ೪೪%ರಿಂದ ೫೨%ಕ್ಕೆ ಏರಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ.

ಭಾರತವು ಚೀನಾದಂತೆ ” ಜಗತ್ತಿನ ಕಾರ್ಖಾನೆ ʼ ಆಗಬೇಕಿಲ್ಲ ಏಕೆ?

Exit mobile version