Site icon Vistara News

ವಿಸ್ತಾರ Money Guide: 2022ರಲ್ಲಿ ಹೂಡಿಕೆಗೆ ಉತ್ತಮ ಬ್ಯಾಂಕಿಂಗ್‌, ಪಿಎಸ್‌ಯು ಮ್ಯೂಚುವಲ್‌ ಫಂಡ್ಸ್

debt funds

ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಡ್ಡಿ ದರಗಳನ್ನು ಏರಿಸಿದ ಬಳಿಕ ಡೆಟ್‌ ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ( Debt mutual fund) ಡೆಟ್‌ ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ಭವಿಷ್ಯದ ಬಗ್ಗೆ ಕಳವಳಕ್ಕೀಡಾಗಿದ್ದಾರೆ.‌

ಹೂಡಿಕೆಗೆ ಸುರಕ್ಷಿತ ಡೆಟ್‌ ಮ್ಯೂಚುವಲ್‌ ಫಂಡ್‌ಗಳನ್ನು ನೀವು ಹುಡುಕುತ್ತಿದ್ದರೆ, ಬ್ಯಾಂಕಿಂಗ್‌ ಮತ್ತು ಪಿಎಸ್‌ಯು ಡೆಟ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸ್ಲೀಮ್‌ಗಳು ತಮ್ಮ ಹೂಡಿಕೆಯಲ್ಲಿ ಕನಿಷ್ಠ ೮೦% ಪಾಲನ್ನು ಬ್ಯಾಂಕ್‌, ಪಿಎಸ್‌ಯು ವಲಯದ ಸಂಸ್ಥೆಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಸುರಕ್ಷಿತ ಹೂಡಿಕೆಗೆ ಅನುಕೂಲ

ತಜ್ಞರ ಪ್ರಕಾರ ಬ್ಯಾಂಕಿಂಗ್‌ ಮತ್ತು ಪಿಎಸ್‌ಯು ಡೆಟ್‌ ಮ್ಯೂಚುವಲ್‌ ಫಂಡ್‌ ಯೋಜನೆಗಳು ಸುರಕ್ಷಿತ ಹೂಡಿಕೆಗೆ ಸಹಕಾರಿ. ಏಕೆಂದರೆ ಅವುಗಳು ಪಿಎಸ್‌ಯು ಮತ್ತು ಬ್ಯಾಂಕ್‌ಗಳ ಮೇಲೆ ಹೂಡಿಕೆ ಮಾಡುತ್ತವೆ. ಇವುಗಳು ಬಹುತೇಕ ಸರ್ಕಾರಿ ಬೆಂಬಲಿತ ಸಂಸ್ಥೆಗಳಾದ್ದರಿಂದ ಸುರಕ್ಷಿತ. ಕ್ರೆಡಿಟ್‌ ರಿಸ್ಕ್‌ ಇರುವುದಿಲ್ಲ. ಹೀಗಿದ್ದರೂ ಇಲ್ಲಿ ಅಪಾಯ ಇಲ್ಲ ಎಂದಲ್ಲ. ಖಾಸಗಿ ಬ್ಯಾಂಕ್‌ಗಳ ಸಾಲಪತ್ರಗಳ ಮೇಲೆಯೂ ಹೂಡಿಕೆ ಮಾಡುವುದರಿಂದ ಕೆಲ ರಿಸ್ಕ್‌ ಇರುತ್ತದೆ. ಹೀಗಿದ್ದರೂ, ಬ್ಯಾಂಕಿಂಗ್‌ ವಲಯದ ಮೇಲೆ ವ್ಯಾಪಕ ನಿಯಂತ್ರಕ ವ್ಯವಸ್ಥೆ ಇರುತ್ತದೆ. ಇನ್ನೊಂದು ಅಪಾಯವೆಂದರೆ ಬಡ್ಡಿ ದರದ ಬದಲಾವಣೆಗಳು ಇಂಥ ಮ್ಯೂಚುವಲ್‌ ಫಂಡ್‌ಗಳ ಮೇಲೆ ಪ್ರತಿಕೂಲ ಪ್ರಭಾವವನ್ನೂ ಬೀರಬಹುದು.

ಹಾಗಾದರೆ ೨೦೨೨ರಲ್ಲಿ ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡುವುದಿದ್ದರೆ ಯಾವ ಡೆಟ್‌ ಫಂಡ್‌ಗಳು ಸೂಕ್ತ? ಇಲ್ಲಿದೆ ಪಟ್ಟಿ.

Exit mobile version