Site icon Vistara News

ಷೇರು ಮಾರುಕಟ್ಟೆಯಲ್ಲಿ EPFO ಹೂಡಿಕೆಯ ಮಿತಿ 20%ಕ್ಕೆ ಏರಿಕೆ ಸಂಭವ

epfo

ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಇಪಿಎಫ್‌ಒ, ಷೇರು ಮಾರುಕಟ್ಟೆಯಲ್ಲಿ ತನ್ನ ಹೂಡಿಕೆಯ ಮಿತಿಯನ್ನು ೨೦%ಕ್ಕೆ ಏರಿಸುವ ಸಾಧ್ಯತೆ ಇದೆ. ಈ ಸಂಬಂಧ ಪ್ರಸ್ತಾಪವನ್ನು ಇಪಿಎಫ್‌ಒ ಟ್ರಸ್ಟಿಗಳ ಮಂಡಳಿ ಜುಲೈ ೨೯ ಮತ್ತು ೩೦ರಂದು ನಡೆಯಲಿರುವ ಸಭೆಯಲ್ಲಿ ಅನುಮೋದಿಸುವ ನಿರೀಕ್ಷೆಯಿದೆ.

ಪ್ರಸ್ತುತ ಇಪಿಎಫ್‌ಒ ೫ರಿಂದ ೧೫ ಪರ್ಸೆಂಟ್‌ನ ಮಿತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಮಾಡುತ್ತದೆ. ಈ ಮಿತಿ ೨೦ ಪರ್ಸೆಂಟ್‌ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಪಿಎಫ್‌ಒದ ಸಲಹಾ ಮಂಡಳಿಯಾದ FAIC ಈಗಾಗಲೇ ಇದಕ್ಕೆ ಸಮ್ಮತಿಸಿದೆ.

2021-22ರಲ್ಲಿ ಇಪಿಎಫ್‌ಒ ೨,೮೮,೧೫,೪೯೮ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿತ್ತು. ೧,೦೪,೯೫೯ ಕೋಟಿ ರೂ.ಗಳನ್ನು ವಿತರಿಸಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಇಪಿಎಫ್‌ಒದ ಆದಾಯ ವೃದ್ಧಿಸುತ್ತಿದೆ. ಸದಸ್ಯರಿಗೆ ಹೆಚ್ಚಿನ ಬಡ್ಡಿ ಆದಾಯ ವಿತರಣೆಗೆ ಸಹಕಾರಿಯಾಗಲಿದೆ.

Exit mobile version