ಮುಂಬಯಿ: ಹಣದುಬ್ಬರವನ್ನು ಹತ್ತಿಕ್ಕುವ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30ಕ್ಕೆ ತನ್ನ ರೆಪೊ ದರವನ್ನು (Interest rate) ಹೆಚ್ಚಿಸುವ ನಿರೀಕ್ಷೆ ಇದೆ. ಇದರ ಪರಿಣಾಮ ಸಾಲಗಾರರ ಸಾಲದ ಕಂತುಗಳು (ಇಎಂಐ) ಹೆಚ್ಚಳವಾಗುವ ಆತಂಕ ಸೃಷ್ಟಿಯಾಗಿದೆ. ಕಳೆದ ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರ ಶೇ.7ಕ್ಕೆ ಏರಿಕೆ ಆಗಿರುವುದರಿಂದ ಆರ್‌ಬಿಐ ತನ್ನ ಬಡ್ಡಿ ದರವನ್ನು ಏರಿಸುವ ಸಾಧ್ಯತೆ ದಟ್ಟವಾಗಿದೆ. ಜುಲೈನಲ್ಲಿ ಹಣದುಬ್ಬರ 6.9% ರಷ್ಟಿತ್ತು.
ಆಹಾರ ವಸ್ತುಗಳ ದರ ಏರಿಕೆಯ ಪರಿಣಾಮ ರಿಟೇಲ್ ಹಣದುಬ್ಬರ ಆಗಸ್ಟ್‌ನಲ್ಲಿ ಮತ್ತೆ ಏರುಗತಿಯಲ್ಲಿರುವುದು ಸರ್ಕಾರ ಮತ್ತು ಆರ್‌ಬಿಐಗೆ ತಲೆನೋವಾಗಿ ಪರಿಣಮಿಸಿದೆ. ಆರ್‌ಬಿಐನ ಮುಂದಿನ ಹಣಕಾಸು ನೀತಿ ಪರಾಮರ್ಶೆ ಸೆಪ್ಟೆಂಬರ್ 30ಕ್ಕೆ ನಡೆಯಲಿದೆ.
ಸೆಪ್ಟೆಂಬರ್ ಬಳಿಕ ಮತ್ತೆ ಎರಡು ಕಂತುಗಳಲ್ಲಿ ತಲಾ 0.25% ಬಡ್ಡಿ ದರ (ರೆಪೊ ದರ) ಏರಿಕೆಯಾಗಲಿದ್ದು, 2023ರ ಮೊದಲ ತ್ರೈಮಾಸಿಕದ ವೇಳೆಗೆ 6.40%ಕ್ಕೆ ಹೆಚ್ಚಳವಾಗಲಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಬಡ್ಡಿ ದರ ಏರಿಕೆಯಾದರೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕಾರ್ಪೊರೇಟ್ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ.
ಇದನ್ನೂ ಓದಿ: Retail Inflation | ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರ 7%ಕ್ಕೆ ಏರಿಕೆ, ಆರ್‌ಬಿಐ ಬಡ್ಡಿ ದರ ಹೆಚ್ಚಳ ಸಂಭವ