ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮುಂದಿನ ವಾರ ತನ್ನ ರೆಪೊ ದರದಲ್ಲಿ ಏರಿಕೆಗೆ ಸಜ್ಜಾಗಿದೆ. ಸೆಪ್ಟೆಂಬರ್ 30ರಂದು ಬಡ್ಡಿ ದರದಲ್ಲಿ 0.50% ಏರಿಕೆಯನ್ನು ನಿರೀಕ್ಷಿಸಲಾಗಿದೆ. ಇನ್ನು ಕೆಲವರ ಪ್ರಕಾರ 0.30% ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಏರಿಕೆಯನ್ನಂತೂ ಬಹುತೇಕ ಎಲ್ಲರೂ ನಿರೀಕ್ಷಿಸಿದ್ದಾರೆ.
ಹಣದುಬ್ಬರ 7%ಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಅದರ ನಿಯಂತ್ರಣಕ್ಕೆ ಆರ್‌ಬಿಐ ಬಡ್ಡಿ ದರ ಏರಿಸುವ ಸನ್ನಾಹದಲ್ಲಿದೆ. ಡಾಲರ್ ಎದುರು ರೂಪಾಯಿ ದುರ್ಬಲವಾಗಿರುವುದರಿಂದ ಹಣದುಬ್ಬರ ನಿಗ್ರಹಿಸಲು ಬಡ್ಡಿ ದರ ಏರಿಸುವ ನಿರೀಕ್ಷೆ ಇದೆ.
ಅಮೆರಿಕದ ಫೆಡರಲ್ ರಿಸರ್ವ್ ಈ ವಾರ 0.75% ಬಡ್ಡಿ ದರ ಹೆಚ್ಚಳ ಮಾಡಿರುವುದರಿಂದ, ಆರ್‌ಬಿಐ ಕೂಡ ರೆಪೊ ದರವನ್ನು ಏರಿಸಬೇಕಾದ ಒತ್ತಡದಲ್ಲಿದೆ. ಡಾಲರ್ ಎದುರು ರೂಪಾಯಿ ದುರ್ಬಲವಾಗಿರುವುದರಿಂದ ಹಣದುಬ್ಬರ ಮತ್ತಷ್ಟು ಏರಿಕೆ ನಿರೀಕ್ಷಿಸಲಾಗಿದೆ. ಇದಕ್ಕೆ ಕಡಿವಾಣ ಹಾಲು ಬಡ್ಡಿ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಇದರ ಪರಿಣಾಮ ರೆಪೊ ದರ ಆಧಾರಿತ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲ ತುಟ್ಟಿಯಾಗಲಿದೆ.