ನವ ದೆಹಲಿ: ಈ ಸಲ ಹಬ್ಬದ ಸೀಸನ್‌ನಲ್ಲಿ ದೇಶದಲ್ಲಿ 1.25 ಲಕ್ಷ ಕೋಟಿ ರೂ. ಮೊತ್ತದ ಬಿಸಿನೆಸ್ ನಡೆದಿದೆ ಎಂದು ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of all India traders) ಸೋಮವಾರ ತಿಳಿಸಿದೆ.
ಧನ್ ತೇರಾಸ್ ಸಂದರ್ಭ 25,000 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿ ನಡೆದಿದೆ. ಆಟೊಮೊಬೈಲ್, ಮೊಬೈಲ್, ಕಂಪ್ಯೂಟರ್ ಸಂಬಂಧಿತ ಉತ್ಪನ್ನಗಳು, ಅಡುಗೆ ಮನೆ ಸಲಕರಣೆಗಳು, ಎಲೆಕ್ಟ್ರಾನಿಕ್ಸ್, ಅಲಂಕಾರಿಕ ವಸ್ತುಗಳ ಮಾರಾಟದ ಭರಾಟೆ ಇತ್ತು.
ಈ ಸಲ ಸಿಎಐಟಿ ನೀಡಿದ ಕರೆಯ ಮೇರೆಗೆ, ಭಾರತೀಯ ವರ್ತಕರು ಅಪ್ನಿ ದಿವಾಲಿ-ಭಾರತೀಯ ದಿವಾಲಿ ಎಂಬ ಅಭಿಯಾನವನ್ನು ನಡೆಸಿದ್ದರು. ವಿಶೇಷವಾಗಿ ಭಾರತೀಯ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡಿದ್ದರು. ಸ್ಥಳೀಯ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಸ್ಥಳೀಯ ಕರಕುಶಲಕರ್ಮಿಗಳಿಂದ ಉತ್ಪ್ನಗಳನ್ನು ಖರೀದಿಸಿ ಮಾರಿದ್ದರು.
ಈ ವರ್ಷ ರಿಟೇಲ್ ವಲಯದಲ್ಲಿ ಹಬ್ಬದ ಸೀಸನ್‌ನ ಒಟ್ಟು ವ್ಯಾಪಾರ 1.50 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೆಲ್‌ವಾಲ್ ತಿಳಿಸಿದ್ದಾರೆ.