ನವ ದೆಹಲಿ: ಕಳೆದ ಆಗಸ್ಟ್‌ನಲ್ಲಿ 1.43 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. (GST) 2021ರ ಇದೇ ಅವಧಿಗೆ ಹೋಲಿಸಿದರೆ 28% ಹೆಚ್ಚಳ ದಾಖಲಾಗಿದೆ. ಸತತ 6 ತಿಂಗಳಿನಿಂದ 1.4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. 2021 ರ ಆಗಸ್ಟ್‌ನಲ್ಲಿ 1,12,020 ಕೋಟಿ ರೂ. ಜಿಎಸ್‌ಟಿ ಸಂಗ್ರಹ ಆಗಿತ್ತು.
ಆಗಸ್ಟ್‌ನಲ್ಲಿ 1,43,612 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ 24,710 ಕೋಟಿ ರೂ. ಸಿಜಿಎಸ್‌ಟಿಯಾಗಿದೆ. 30,951 ಕೋಟಿ ರೂ. ಎಸ್‌ಜಿಎಸ್‌ಟಿ ಆಗಿದೆ. ಐಜಿಎಸ್‌ಟಿ 77,782 ಕೋಟಿ ರೂ. ಆಗಿದೆ. ಸೆಸ್ 10,168 ಕೋಟಿ ರೂ.ಗೆ ಏರಿಕೆಯಾಗಿದೆ. ಜಿಎಸ್‌ಟಿ ಮಂಡಳಿಯು ತೆರಿಗೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳು, ಆರ್ಥಿಕ ಚಟುವಟಿಕೆಗಳ ಚೇತರಿಕೆ ಇದಕ್ಕೆ ಕಾರಣ ಎಂದು ಸರ್ಕಾರ ತಿಳಿಸಿದೆ. ಕಳೆದ ಜುಲೈನಲ್ಲಿ 7.6 ಕೋಟಿ ಇ-ವೇ ಬಿಲ್‌ಗಳು ಸೃಷ್ಟಿಯಾಗಿವೆ.
ಕರ್ನಾಟಕದಲ್ಲಿ 95,583 ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಕರ್ನಾಟಕದಲ್ಲಿ ಕಳೆದ ಆಗಸ್ಟ್‌ನಲ್ಲಿ 9,583 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ರಾಜ್ಯಗಳ ಪೈಕಿ ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿರುವ ರಾಜ್ಯವಾಗಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ( 18,863 ಕೋಟಿ ರೂ.) ಕರ್ನಾಟಕ 2021 ರ ಆಗಸ್ಟ್‌ನಲ್ಲಿ 7,429 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿತ್ತು. ಇದರೊಂದಿಗೆ 29% ಏರಿಕೆ ದಾಖಲಿಸಿದೆ.
ಇದನ್ನೂ ಓದಿ:GST | ಅಕ್ಕಿ, ಗೋಧಿ, ಬೇಳೆ ಕಾಳುಗಳ ಚಿಲ್ಲರೆ ಮಾರಾಟಕ್ಕೆ ಜಿಎಸ್‌ಟಿ ಇಲ್ಲ: ಕೇಂದ್ರ ಸ್ಪಷ್ಟನೆ