Site icon Vistara News

MGNREGS Wages : 2023-24ರ ಸಾಲಿಗೆ ನರೇಗಾ ದಿನದ ವೇತನದಲ್ಲಿ 10.4% ಏರಿಕೆ

narega

narega

ನವ ದೆಹಲಿ: ಕೇಂದ್ರ ಸರ್ಕಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ (Mahatma Gandhi National Rural Employment Guarantee Scheme (MGNREGS) 2023-24ರ ಸಾಲಿಗೆ ದಿನದ ವೇತನದಲ್ಲಿ 10.4% ಏರಿಕೆ ಮಾಡಿದೆ. ಗ್ರಾಮೀಣ ವೇತನ ಮತ್ತು ಗ್ರಾಮಾಂತರ ಭಾಗದಲ್ಲಿ ಕೈಗಾರಿಕಾ ಸಂಬಳದ ಮೇಲೆ ಇದು ಪ್ರಭಾವ ಬೀರುವುದರಿಂದ ಇದು ಗಮನಾರ್ಹವಾಗಿದೆ ಎನ್ನುತ್ತಾರೆ ವಿಶ್ಲೇಷಕರು. ಪರಿಷ್ಕೃತ ವೇತನ 2023ರ ಏಪ್ರಿಲ್‌ 1ರಿಂದ ಅನ್ವಯವಾಗಲಿದೆ.

ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ನರೇಗಾ ದಿನದ ವೇತನದಲ್ಲಿ 7-26 ರೂ. ತನಕ ಏರಿಕೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಹರಿಯಾಣದಲ್ಲಿ ದಿನಕ್ಕೆ ಗರಿಷ್ಠ 357 ರೂ. ವೇತನ ಸಿಗಲಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ 221 ರೂ. ಸಿಗಲಿದೆ.

ನರೇಗಾ ಅಡಿಯಲ್ಲಿ ಗ್ರಾಮೀಣ ಕುಟುಂಬಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಸಿಗುತ್ತದೆ. ಕೌಶಲ್ಯ ರಹಿತ ಕಾರ್ಮಿಕರಿಗೆ ಆದಾಯ ಮೂಲವಾಗುತ್ತದೆ. ಜಾರ್ಖಂಡ್‌ನಲ್ಲಿ ಇನ್‌ಸ್ಟಿಟ್ಯೂಟ್‌ ಫಾರ್‌ ಡೆವಲಪ್‌ಮೆಂಟ್‌ ನಡೆಸಿದ ಸಮೀಕ್ಷೆಯ ಪ್ರಕಾರ ನರೇಗಾ ಚಟುವಟಿಕೆಗಳು ಉತ್ಪಾದಕತೆಯನ್ನು ಹೊಂದಿದೆ. ಉದಾಹರಣೆಗೆ ಜಾರ್ಖಂಡ್‌ನಲ್ಲಿ ನರೇಗಾ ಅಡಿಯಲ್ಲಿ 25,000 ಎಕರೆ ಜಾಗದಲ್ಲಿ ಮಾವಿನ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಸಣ್ಣ ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ.

Exit mobile version