Site icon Vistara News

10 financial planning rules : ಉಳಿತಾಯ ಮತ್ತು ಹೂಡಿಕೆಗೆ 10 ಸೂತ್ರ

cash note

ನಿಮ್ಮ ಬದುಕಿನಲ್ಲಿ ಹಣಕಾಸು ಉಳಿತಾಯ ಮತ್ತು ಹೂಡಿಕೆಯ ಪಯಣ ಮಹತ್ವಪೂರ್ಣ. ಅದಕ್ಕಾಗಿ ಒಂದು ಪ್ಲಾನ್‌ ಅಗತ್ಯ ಇರುತ್ತದೆ. ಹಾಗಾದರೆ ( 10 financial planning rules) ಈ ನಿಟ್ಟಿನಲ್ಲಿ ಸಹಕರಿಸುವ ಹತ್ತು ಪ್ರಮುಖ ನಿಯಮಗಳನ್ನು ನೋಡೋಣ.

1. ಕೊಡಬೇಕಾದ್ದನ್ನು ಮೊದಲು ಪಾವತಿಸಿ: (pay yourself first) : ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಉಳಿತಾಯ ಕಡ್ಡಾಯವಾಗಿ ಮಾಡಲೇಬೇಕು. ಬಳಿಕ ಉಳಿದ ಮೊತ್ತವನ್ನು ಖರ್ಚು ವೆಚ್ಚಗಳಿಗೆ ಬಳಸಬೇಕು. ಆದಾಯದಿಂದ ಉಳಿತಾಯದ ಹಣವನ್ನು ಕಳೆದಾಗ ಸಿಗುವ ಮೊತ್ತ ವೆಚ್ಚಕ್ಕೆ ಆಗಬೇಕು. ಆದರಿಂದ ನಿಮ್ಮ ಗುರಿಗಳನ್ನು ಖಾತರಿಪಡಿಸಿ. ಗುರಿಗಳನ್ನು ಸಾಧಿಸಲು ಉಳಿತಾಯ ಮಾಡಿರಿ. (Income ) ನಿಮ್ಮ ಉಳಿತಾಯಕ್ಕೆ ಎಷ್ಟು ಹಣ ಬೇಕು ಎಂಬುದನ್ನೂ ನಿರ್ಧರಿಸಿ. ಹಾಗೂ ಕುಟುಂಬದ ಖರ್ಚು ವೆಚ್ಚಗಳನ್ನು ನಿರ್ವಹಿಸಿ.

2. ನೀವು ಎಷ್ಟು ಹಣ ಉಳಿಸಬಹುದು? ( How much should you save): ವ್ಯಕ್ತಿಯೊಬ್ಬ 25ರ ವಯಸ್ಸಿನಲ್ಲಿ ಕರಿಯರ್‌ ಆರಂಭಿಸಿದರೆ, 10 ಪರ್ಸೆಂಟ್‌ ಆದಾಯವನ್ನು ಉಳಿಸಬಹುದು. ಆದಾಯ ಹೆಚ್ಚಳವಾದಂತೆ 15% ಕ್ಕೆ ಏರಿಸಬಹುದು. ನಿಮ್ಮ 40ನೇ ವಯಸ್ಸಿನಲ್ಲಿ ಕನಿಷ್ಠ 35% ಆದಾಯವನ್ನು ಉಳಿಸಬೇಕು.

3. 50-20-30 ನಿಯಮಾವಳಿ: ತಿಂಗಳೊಂದರಲ್ಲಿ ನೀವು ಎಷ್ಟು ಉಳಿತಾಯ ಮಾಡಬೇಕು ಎಂಬುದಕ್ಕೆ 50-20-30 ಸೂತ್ರ ಸಹಕಾರಿ. ಈ ಸೂತ್ರದ ಪ್ರಕಾರ ನಿಮ್ಮ ಆದಾಯದಲ್ಲಿ 50% ಮೊತ್ತವು ದೈನಂದಿನ ವೆಚ್ಚಗಳಿಗೆ ಹೋಗಬೇಕು. 20% ಮೊತ್ತವು ಅಲ್ಪ ಮತ್ತು ಮಧ್ಯಮ ಅವಧಿಯ ಉಳಿತಾಯದ ಗುರಿ ಸಾಧನೆಗೆ ಬಳಕೆಯಾಗಬೇಕು. 30% ಮೊತ್ತವನ್ನು ಆಹಾರ-ವಿಹಾರ-ಟ್ರಾವೆಲ್ಸ್‌ಗೆ ಬಳಸಬಹುದು. ನಿಮ್ಮ ವಯಸ್ಸು ಮತ್ತು ಅಗತ್ಯಾನುಸಾರ ಪರ್ಸಂಟೇಜ್‌ ಅನ್ನು ವ್ಯತ್ಯಾಸ ಮಾಡಬಹುದು.

4. 20-4-10 ನಿಯಮಾವಳಿ: ನೀವು ಸಾಲ ಮಾಡಿ ಕಾರನ್ನು ಖರೀದಿಸುವುದಿದ್ದರೆ ಈ 20-4-10 ರೂಲ್ಸ್‌ ಅನ್ವಯಿಸುತ್ತದೆ. 20 % ಡೌನ್‌ಪೇಮೆಂಟ್‌ ಮೊತ್ತಕ್ಕೆ ಅನ್ವಯಿಸುತ್ತದೆ. ಸಾಧ್ಯವಾದಷ್ಟು ಹೆಚ್ಚು ಡೌನ್‌ಪೇಮೆಂಟ್‌ ಕೊಡುವುದು ಉತ್ತಮ. 4 ಎಂದರೆ ಅಷ್ಟು ವರ್ಷದಲ್ಲಿ ಮರು ಪಾವತಿಸಬೇಕು. 7 ವರ್ಷ ತನಕ ಮರು ಪಾವತೊಸಲು ಸಮಯ ಸಿಕ್ಕಿದರೂ, 4 ವರ್ಷದಲ್ಲಿ ಋಣ ಮುಕ್ತರಾಗುವುದು ಸೂಕ್ತ. ನಿಮ್ಮ ವೇತನದ 10% ಮೊತ್ತ ಕಾರು ಸಾಲಕ್ಕೆ ಬಳಸಬಹುದು.

5. ತುರ್ತು ನಿಧಿ: ಆಪತ್ಕಾಲದಲ್ಲಿ ಬಳಕೆಗೋಸ್ಕರ ತುರ್ತುನಿಧಿಯೊಂದನ್ನು ಇಟ್ಟುಕೊಳ್ಳಿ. ಕನಿಷ್ಠ 3-6 ತಿಂಗಳಿನ ಮನೆ ಖರ್ಚಿಗೆ ಆಗುವಷ್ಟು ಹಣವನ್ನು ತುರ್ತುನಿಧಿಯಲ್ಲಿ ಇಟ್ಟುಕೊಳ್ಳಬೇಕು.

6. ಜೀವ ವಿಮೆ ಮರೆಯದಿರಿ: ನಿಮ್ಮ ವಾರ್ಷಿಕ ಆದಾಯದ 10 ಪಟ್ಟು ಮೌಲ್ಯಕ್ಕೆ ಸಮವಾಗುವಷ್ಟು ಕವರೇಜ್‌ ಇರುವ ವಿಮೆಯನ್ನು ಖರೀದಿಸಬೇಕು. ಟರ್ಮ್‌ ಇನ್ಷೂರೆನ್ಸ್‌ ಕೂಡ ಅವಶ್ಯಕ.

7. ನಿವೃತ್ತಿಯ ಜೀವನಕ್ಕಾಗಿ ಉಳಿತಾಯ: ಸಾಮಾನ್ಯವಾಗಿ ನಿಮ್ಮ ವಾರ್ಷಿಕ ಆದಾಯದ 20 ಪಟ್ಟು ಮೊತ್ತವು ನಿವೃತ್ತಿ ನಿಧಿಯಲ್ಲಿ ಇರಬೇಕು ಎನ್ನುತ್ತಾರೆ ಹಣಕಾಸು ತಜ್ಞರು.

ಇದನ್ನೂ ಓದಿ :Post Office Schemes: ಅಂಚೆ ಕಚೇರಿ ಉಳಿತಾಯ ಯೋಜನೆ; ಹೊಸ ಬಡ್ಡಿ ಎಷ್ಟು? ಯಾವ ಯೋಜನೆ ಉತ್ತಮ?

8. ಗೃಹ ಸಾಲ ಎಷ್ಟು ತೆಗೆದುಕೊಳ್ಳಬೇಕು? : ನಿಮ್ಮ ಮಾಸಿಕ ನಿವ್ವಳ ವೇತನದ 45-50%ಕ್ಕಿಂತ ಹೆಚ್ಚು ಇಎಂಐ ಅನ್ನು ಬ್ಯಾಂಕ್‌ಗಳು ನೀಡುವುದಿಲ್ಲ. ಇದು ಇತರ ಪರ್ಸನ;್‌ ಲೋನ್‌ಗಳನ್ನೂ ಒಳಗೊಂಡು ಅನ್ವಯಿಸುತ್ತದೆ.

9. ಈಕ್ವಿಟಿಗಳಲ್ಲಿ ಎಷ್ಟು ಹೂಡಬೇಕು? 30 ವರ್ಷದ ವ್ಯಕ್ತಿ ತನ್ನಲ್ಲಿ ಲಭ್ಯವಿರುವ ಹೂಡಿಕೆಗೆ ಅರ್ಹ ಆದಾಯದ ಪೈಕಿ 70% ಅನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು.

10. ಹೂಡಿಕೆಯಲ್ಲಿ ವೈವಿಧ್ಯತೆ ಇರಲಿ: ಯಾವಾಗಲೂ ಒಂದೇ ಅಸೆಟ್‌ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಲ್ಲ.

Exit mobile version