ನವ ದೆಹಲಿ: ಎಚ್‌ಸಿಎಲ್ ಟೆಕ್ (HCL Tech) ಪ್ರತಿ ಷೇರಿಗೆ 10 ರೂ.ಗಳ ಮಧ್ಯಂತರ ಡಿವಿಡೆಂಡ್ ಅನ್ನು ಗುರುವಾರ ಘೋಷಿಸಿದೆ. 2023ರ ಫೆಬ್ರವರಿ 1ಕ್ಕೆ ಡಿವಿಡೆಂಡ್ ವಿತರಣೆಯಾಗಲಿದೆ. ಪ್ರಸಕ್ತ ಸಾಲಿನಲ್ಲಿ ನಾಲ್ಕನೇ ಸಲ ಕಂಪನಿ ಡಿವಿಡೆಂಡ್ ವಿತರಿಸುತ್ತಿದೆ.
ಎಚ್‌ಸಿಎಲ್ ಟೆಕ್ ಕಳೆದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 4,096 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ ಕಂಪನಿ 3,442 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಂಪನಿಯ ಆದಾಯ 22,331 ಕೋಟಿ ರೂ.ಗಳಿಂದ 26,700 ಕೋಟಿ ರೂ.ಗೆ ಏರಿಕೆಯಾಗಿದೆ.
ಎಚ್‌ಸಿಎಲ್ ಟೆಕ್ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 6,000 ಹೊಸಬರನ್ನು ನೇಮಿಸಿದೆ. ಉದ್ಯೋಗಿಗಳ ವಲಸೆಯ ಪ್ರಮಾಣ 21.7% ಇತ್ತು.