Site icon Vistara News

1000 Notes coming back : 1,000 ರೂ. ನೋಟು ಮತ್ತೆ ಬರಲಿದೆಯೇ? ಆರ್‌ಬಿಐ ಗವರ್ನರ್‌ ಹೇಳಿದ್ದೇನು?

1000 Notes coming back 1,000 Rs Will the note come back What did RBI Governor say

#image_title

ನವ ದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ( Reserve Bank of India) 2,000 ರೂ. ನೋಟನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಮತ್ತೆ 1,000 ರೂ. ನೋಟನ್ನು ಬಿಡುಗಡೆ ಮಾಡಲಿದೆಯೇ? ಇಂಥದ್ದೊಂದು ವದಂತಿ ಹರಡಿದೆ. ಈ ಬಗ್ಗೆ ಸ್ವತಃ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಏನೆನ್ನುತ್ತಾರೆ? (1000 Notes coming back) ಇಲ್ಲಿದೆ ವರದಿ.

ಇಂಥ ವರದಿಗಳನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಳ್ಳಿ ಹಾಕಿದ್ದಾರೆ. 1,000 ರೂ. ನೋಟನ್ನು ಮತ್ತೆ ಬಿಡುಗಡೆಗೊಳಿಸುವ ಪ್ರಸ್ತಾಪ ಆರ್‌ಬಿಐ ಮುಂದಿಲ್ಲ ಎಂದು ದಾಸ್‌ ತಿಳಿಸಿದ್ದಾರೆ. ಸದ್ಯಕ್ಕೆ ಅಂಥ ಯಾವುದೇ ಪ್ರಸ್ತಾಪ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಸ್ಪಷ್ಟಪಡಿಸಿದ್ದಾರೆ.

2,000 ರೂ. ನೋಟನ್ನು 2016ರ ನವೆಂಬರ್‌ನಲ್ಲಿ ನೋಟು ಅಮಾನ್ಯತೆಯ (denomination) ವೇಳೆ ಬಿಡುಗಡೆ ಮಾಡಲಾಗಿತ್ತು. ಆಗ 500 ರೂ. ಹಾಗೂ 1,000 ರೂ. ನೋಟನ್ನು ಅಮಾನ್ಯ ಮಾಡಲಾಗಿತ್ತು. 10 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ರಾತ್ರೋರಾತ್ರಿ ಅಮಾನ್ಯವಾಗಿತ್ತು. ಆಗಿನ ಪರಿಸ್ಥಿತಿಗೆ 2,000 ರೂ. ನೋಟನ್ನು ಬಿಡುಗಡೆ ಮಾಡುವ ಅನಿವಾರ್ಯತೆ ಇತ್ತು. ನೋಟುಗಳ ಹಿಂತೆಗೆತದ ಬಳಿಕ ಆ ಹಣದ ಮೌಲ್ಯವನ್ನು ತಕ್ಷಣ ವ್ಯವಸ್ಥೆಗೆ ಸೇರಿಸುವ ಉದ್ದೇಶಕ್ಕಾಗಿ 2,000 ರೂ. ನೋಟನ್ನು ಬಿಡುಗಡೆ ಮಾಡಲಾಯಿತು ಎಂದು ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ತಿಳಿಸಿದ್ದಾರೆ. 2018ರಲ್ಲಿ 2,000 ನೋಟು ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು.

ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು (2000 Notes Withdrawn) ಜನತೆ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಲು ಅವಸರ ಮಾಡಬೇಕಿಲ್ಲ. ಸಾವಕಾಶವಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು (RBI Governor Shakti‌ Kanta Das) ತಿಳಿಸಿದ್ದಾರೆ.

ಜನತೆ ಮೇ 23ರಿಂದ ಆರಂಭಿಸಿ ಸೆಪ್ಟೆಂಬರ್‌ 30 ರ ತನಕ 2,000 ರೂ. ನೋಟುಗಳನ್ನು ಬ್ಯಾಂಕ್‌ ಕಚೇರಿಗಳು ಹಾಗೂ ಆರ್‌ಬಿಐನ ಸ್ಥಳೀಯ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಗಡುವು ನೀಡಲಾಗಿದೆ. ಸ್ವಚ್ಛ ನೋಟು ಉಪಕ್ರಮದ ಭಾಗವಾಗಿ (clean note policy) ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಸೆಪ್ಟೆಂಬರ್‌ 30ರ ಬಳಿಕವೂ 2,000 ರೂ. ನೋಟಿಗೆ ಕಾನೂನು ಮಾನ್ಯತೆ ಇರುತ್ತದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: 2000 Notes Withdrawn : 2,000 ರೂ. ನೋಟು ವಿನಿಮಯಕ್ಕೆ ಯಾವುದೇ ಐಡಿ ಪ್ರೂಫ್‌, ಸ್ಲಿಪ್‌ ಬೇಡ: ಎಸ್‌ಬಿಐ

Exit mobile version