ನವ ದೆಹಲಿ: ಶೆಲ್ ಇಂಡಿಯಾ ಭಾರತದಲ್ಲಿ 2030ರ ಒಳಗೆ 1,200 ಪೆಟ್ರೋಲ್ ಬಂಕ್‌ಗಳು ಮತ್ತು 10,000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್‌ಗಳನ್ನು (EV charging points) ವ್ಯವಸ್ಥೆಗೊಳಿಸಲಿದೆ.
ಶೆಲ್ ಗ್ರೂಪ್‌ನ ಜಾಗತಿಕ ಮಟ್ಟದ ಕಾರ್ಯತಂತ್ರದ ಭಾಗವಾಗಿ 10,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ಕಂಪನಿಯ (ಶೆಲ್ ಮೊಬಿಲಿಟಿ ಏಷ್ಯಾ) ಹಿರಿಯ ಉಪಾಧ್ಯಕ್ಷ ಆಮ್ರ್ ಅಡೆಲ್ ತಿಳಿಸಿದ್ದಾರೆ.
ಶೆಲ್ ಬೆಂಗಳೂರಿನಲ್ಲಿ ಇಂದು ತನ್ನ ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯವಸ್ಥೆಗೆ ಚಾಲನೆ ನೀಡಿದೆ. ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳಿಗೆ ರಿಚಾರ್ಜ್ ಮಾಡಬಹುದು. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಯಶವಂತಪುರ, ಹಳೆ ಮದ್ರಾಸ್ ರಸ್ತೆ, ಕನಕಪುರ, ಮಾರತ್‌ಹಳ್ಳಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲಿದೆ.