ನವ ದೆಹಲಿ: ನೀವು ಕಳೆದ ವರ್ಷ ಹೊಸ ಗ್ರಾಂಡ್ ವಿಟಾರಾ ಎಸ್‌ಯುವಿ ಖರೀದಿಸಿದ್ದರೆ, (Maruti Suzuki) ಬಹುಶಃ ಮಾರುತಿ ಸುಜುಕಿ ನಿಮ್ಮ ವಾಹನವನ್ನು ಹಿಂತೆಗೆದುಕೊಳ್ಳಲು ನೋಟಿಸ್ ಕಳಿಸಿರಬಹುದು.
ಮಾರುತಿ ಸುಜುಕಿ 11,000 ಗ್ರಾಂಡ್ ವಿಟಾರಾ ಎಸ್‌ಯುವಿಯನ್ನು ಸೋಮವಾರ ಹಿಂತೆಗೆದುಕೊಂಡಿದೆ. ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹಿಂಬದಿಯ ಸೀಟಿನ ಬೆಲ್ಟ್‌ಗೆ ಸಂಬಂಧಿಸಿ ತಾಂತ್ರಿಕ ಅಡಚಣೆ ಉಂಟಾಗಿರುವುದು ಇದಕ್ಕೆ ಕಾರಣ. ಹೀಗೆಯೇ ಬಿಟ್ಟರೆ ದೀರ್ಘಕಾಲೀನವಾಗಿ ಬೆಲ್ಟ್ ಸಡಿಲವಾಗುವ ಸಾಧ್ಯತೆ ಇರುತ್ತದೆ.
ಸಂಭವನೀಯ ತಾಂತ್ರಿಕ ಅಡಚಣೆಯನ್ನು ಕಂಪನಿಯು ಸರಿಪಡಿಸಿ ಅದರ ಮಾಲೀಕರಿಗೆ ನೀಡಲಿದೆ. ಕಳೆದ ವರ್ಷ ಆಗಸ್ಟ್ 8 ಮತ್ತು ನವೆಂಬರ್ 15ರ ನಡುವೆ ತಯಾರಿಸಿರುವ ಗ್ರಾಂಡ್ ವಿಟಾರಾ ಎಸ್‌ಯುವಿಗೆ ಇದು ಅನ್ವಯಿಸಲಿದೆ. ಕಂಪನಿ ಉಚಿತವಾಗಿ ಸರಿಪಡಿಸಿ ನೀಡಲಿದೆ.