Site icon Vistara News

GST slab| ಜಿಎಸ್‌ಟಿಯ 12% ದರದ ಸ್ಲ್ಯಾಬ್‌ ರದ್ದು ಸಂಭವ

New GST Rules New GST rules effective from today, what is the benefit Here are the details

ನವ ದೆಹಲಿ: ಜಿಎಸ್‌ಟಿ ಪದ್ಧತಿಯಲ್ಲಿರುವ ೧೨% ತೆರಿಗೆಯ ಶ್ರೇಣಿ ರದ್ದಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜಿಎಸ್‌ಟಿ ತೆರಿಗೆ ಶ್ರೇಣಿಗಳನ್ನು ಸುಧಾರಿಸುವುದಕ್ಕೆ ಸಂಬಂಧಿಸಿ ನಿಯುಕ್ತಿಯಾಗಿರುವ ಸಚಿವರುಗಳ ಉನ್ನತ ಮಟ್ಟದ ಸಮಿತಿಯು (GoM) ೧೨% ಸ್ಲ್ಯಾಬ್‌ ಅನ್ನು ರದ್ದುಪಡಿಸಲು ಪರಿಶೀಲಿಸುತ್ತಿದೆ. ಹಾಗೂ ೧೮% ಮತ್ತು ೨೮%ರ ಸ್ಲ್ಯಾಬ್‌ ಅನ್ನು ಉಳಿಸಿಕೊಳ್ಳಲು ಬಯಸಿದೆ. ಜಿಎಸ್‌ಟಿಯ ಒಟ್ಟು ಸಂಗ್ರಹದಲ್ಲಿ ೧೨% ಸ್ಲ್ಯಾಬ್‌ನ ಪಾಲು ೮% ಮಾತ್ರ ಆಗಿದೆ. ಹೀಗಾಗಿ ಈ ಶ್ರೇಣಿಯನ್ನು ರದ್ದುಪಡಿಸಬಹುದು ಎಂಬ ನಿಲುವನ್ನು ಸಮಿತಿಯ ಸದಸ್ಯರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಿದ್ದರೂ, ಅಂತಿಮ ತೀರ್ಮಾನವನ್ನು ಜಿಎಸ್‌ಟಿ ಮಂಡಳಿ ಕೈಗೊಳ್ಳಲಿದೆ.

೧೨% ಜಿಎಸ್‌ಟಿ ಯಾವುದಕ್ಕೆ ಇದೆ?: ಬೆಣ್ಣೆ, ತುಪ್ಪ, ಹಣ್ಣಿನ ರಸ, ಬಾದಾಮಿ, ೧೦೦೦ ರೂ. ತನಕದ ಪಾದರಕ್ಷೆಗಳು, ಹಲವು ಸಂಸ್ಕರಿತ ಉತ್ಪನ್ನಗಳು, ಸೋಲಾರ್‌ ವಾಟರ್‌ ಹೀಟರ್‌, ೧೦೦೦ ರೂ.ವರೆಗಿನ ಹೋಟೆಲ್‌ ಬಾಡಿಗೆ ೧೨% ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ.

ಜಿಎಸ್‌ಟಿ ಸಂಗ್ರಹಕ್ಕೆ ಸ್ಲ್ಯಾಬ್‌ಗಳ ಪಾಲು ಎಷ್ಟು?

‌ಜಿಎಸ್‌ಟಿ ಶ್ರೇಣಿ ( ಸ್ಲ್ಯಾಬ್)ಜಿಎಸ್‌ಟಿ ಸಂಗ್ರಹಕ್ಕೆ ನೀಡುವ ಪಾಲು
5%10%
12%8%
18%65%
28%16%

ಪ್ರಸ್ತುತ ಇರುವ ಜಿಎಸ್‌ಟಿ ಸ್ಲ್ಯಾಬ್‌ಗಳು: ೫%, ೧೨%, ೧೮% ಮತ್ತು ೨೮%. ಇದಲ್ಲದೆ ಬಂಗಾರಕ್ಕೆ ೩% ಹಾಗೂ ವಜ್ರ ಇತ್ಯಾದಿ ಅಮೂಲ್ಯ ಶಿಲೆಗಳಿಗೆ ೩% ಜಿಎಸ್‌ಟಿಯ ವಿಶೇಷ ಸ್ಲ್ಯಾಬ್‌ ಇದೆ. ಜಿಎಸ್‌ಟಿ ಮಂಡಳಿಯು ತೆರಿಗೆ ಸುಧಾರಣೆಗೆ ನಿಯುಕ್ತಿಗೊಳಿಸಿರುವ ಸಚಿವರುಗಳ ಮಟ್ಟದ ಸಮಿತಿಯ ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಿದ್ದಾರೆ. ಅಂತಿಮ ವರದಿ ಸಲ್ಲಿಸಲು ಮೂರು ತಿಂಗಳಿನ ಕಾಲಾವಕಾಶವನ್ನು ಕಳೆದ ಜೂನ್‌ನಲ್ಲಿ ನೀಡಲಾಗಿತ್ತು.

Exit mobile version