ನವ ದೆಹಲಿ: ಇಂಟರ್‌ನೆಟ್ ದಿಗ್ಗಜ ಆಲ್ಫಬೆಟ್ ಜಾಗತಿಕ ಮಟ್ಟದಲ್ಲಿ ತನ್ನ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ (Google lay off) ಶುಕ್ರವಾರ ಘೋಷಿಸಿದೆ.
ಕಂಪನಿಯ ಒಟ್ಟು ಸಿಬ್ಬಂದಿ ಬಲದಲ್ಲಿ 6% ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಸಿಇಒ ಸುಂದರ್ ಪಿಚೈ ಈ ಬಗ್ಗೆ ಉದ್ಯೋಗಿಗಳಿಗೆ ಇ-ಮೇಲ್ ಕಳಿಸಿದ್ದಾರೆ.
ಈ ನಿರ್ಧಾರದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಸುಂದರ್ ಪಿಚೈ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಇದು ಪ್ರಭಾವ ಬೀರಲಿದ್ದು, ಮೊದಲಿಗೆ ಅಮೆರಿಕದ ಸಿಬ್ಬಂದಿಗೆ ಅನ್ವಯಿಸಲಿದೆ. ಉದ್ಯೋಗ ಕಳೆದುಕೊಳ್ಳಲಿರುವ ಸಿಬ್ಬಂದಿಗೆ ಮುಂಗಡವಾಗಿ 80% ಬೋನಸ್ ಅನ್ನು ಆಲ್ಫಬೆಟ್ ನೀಡಲಿದೆ.