Site icon Vistara News

RIL | ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಜುಲೈ-ಸೆಪ್ಟೆಂಬರ್‌ನಲ್ಲಿ 13,656 ಕೋಟಿ ರೂ. ನಿವ್ವಳ ಲಾಭ

mukesh ambani

mukesh ambani

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ (RIL) ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 13,656 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 0.2% ಇಳಿಕೆಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ ತ್ರೈಮಾಸಿಕ ಆದಾಯ 2.32 ಲಕ್ಷ ಕೋಟಿ ರೂ.ಗಳಾಗಿದ್ದು, 34% ಏರಿಕೆಯಾಗಿದೆ. ತೈಲದಿಂದ ರಾಸಾಯನಿಕ ತನಕ ರಿಲಯನ್ಸ್‌ನ ಒಟ್ಟು ಬಿಸಿನೆಸ್‌ ಬೆಳವಣಿಗೆ ದಾಖಲಿಸಿದೆ.

ರಿಲಯನ್ಸ್‌ ಜಿಯೊಗೆ 4,518 ಕೋಟಿ ರೂ. ಲಾಭ:

ರಿಲಯನ್ಸ್‌ನ ರಿಟೇಲ್‌ ಬಿಸಿನೆಸ್‌ 43% ಏರಿಕೆಯಾಗಿದ್ದು, 64,936 ಕೋಟಿ ರೂ.ಗೆ ವೃದ್ಧಿಸಿದೆ. ರಿಲಯನ್ಸ್‌ ಜಿಯೊ ಆದಾಯ 21% ಹೆಚ್ಚಳವಾಗಿದ್ದು, 29,558 ಕೋಟಿ ರೂ.ಗೆ ಏರಿಕೆಯಾಗಿದೆ. ರಿಲಯನ್ಸ್‌ ಜಿಯೊ ಕಳೆದ ಜುಲೈ-ಸೆಪ್ಟೆಂಬರ್‌ನಲ್ಲಿ 4,518 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಲಾಭದಲ್ಲಿ 4% ಹೆಚ್ಚಳವಾಗಿದೆ.

Exit mobile version