ಮುಂಬಯಿ: ಮ್ಯೂಚುವಲ್ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಗಳ ಮೂಲಕ (Systematic investment plan-SIP) ಷೇರು ಮಾರುಕಟ್ಟೆಗೆ ಮಾಸಿಕ ಹೂಡಿಕೆಯ ಹರಿವು ಕಳೆದ ನವೆಂಬರ್‌ನಲ್ಲಿ ದಾಖಲೆಯ 13,307 ಕೋಟಿ ರೂ.ಗೆ ಏರಿಕೆಯಾಗಿದೆ.
ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಕುಸಿತ ಮತ್ತು ಅದರ ಪ್ರತಕೂಲ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸದೆ, ವಿಶ್ವಾಸದಿಂದ ಭಾರತೀಯ ಷೇರು ಮಾರುಕಟ್ಟೆಗೆ ಹೂಡಿಕೆಯ ಹರಿವು ಹೆಚ್ಚುತ್ತಿದೆ. ಮ್ಯೂಚುವಲ್ ಫಂಡ್ ಎಸ್‌ಐಪಿ ಮೂಲಕ ಹೂಡಿಕೆ ಇದೀಗ ಹೊಸ ಎತ್ತರಕ್ಕೇರಿದಂತಾಗಿದೆ.
ಮ್ಯೂಚುವಲ್ ಫಂಡ್ ಇಂಡಸ್ಟ್ರಿ ನಿರ್ವಹಿಸುತ್ತಿರುವ ಒಟ್ಟು ಆಸ್ತಿಯ ಮೌಲ್ಯ 40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಎಎಂಎಫ್‌ಐ ಅಂಕಿ ಅಂಶಗಳು ತಿಳಿಸಿವೆ. ಸತತ ಎರಡನೇ ತಿಂಗಳಿಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಹರಿದಿದೆ.
ಷೇರು ಪೇಟೆಗೆ ಭಾರತೀಯ ರಿಟೇಲ್ ಹೂಡಿಕೆಯ ಹರಿವು ಹೆಚ್ಚಳ ಆಗಿರುವುದರಿಂದ ವಿದೇಶಿ ಹೂಡಿಕೆಯ ಏರಿಳಿತಗಳ ಹೊರತಾಗಿಯೂ ಸೂಚ್ಯಂಕಗಳು ಸುಧಾರಿಸುತ್ತಿವೆ.