Site icon Vistara News

Make in India : ಸ್ಥಳೀಯ ಸಹಭಾಗಿತ್ವದಲ್ಲಿ ಆ್ಯಪಲ್‌ ಐಫೋನ್ ಉತ್ಪಾದನೆಗೆ ಚೀನಾದ 14 ಕಂಪನಿಗಳಿಗೆ ಅನುಮತಿ

iphone

ನವ ದೆಹಲಿ: ಭಾರತದಲ್ಲಿ ಸ್ಥಳೀಯ ಕಂಪನಿಗಳ ಜತೆಗೆ ಸಹಭಾಗಿತ್ವದಲ್ಲಿ (Joint venture) ಆ್ಯಪಲ್‌ ಕಂಪನಿಯ ಐಫೋನ್‌ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಚೀನಾ ಮೂಲದ 14 ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಈ ಕಂಪನಿಗಳು ಆ್ಯಪಲ್‌ನ ಉತ್ಪನ್ನಗಳ ಪೂರೈಕೆದಾರ ಕಂಪನಿಗಳಾಗಿವೆ. (Make in India) ಚೀನಾದ 17 ಕಂಪನಿಗಳು ಈ ಬಗ್ಗೆ ಸರ್ಕಾರವನ್ನು ಸಂಪರ್ಕಿಸಿತ್ತು.

ಲುಕ್ಸ್‌ಶೇರ್‌, ಸನ್ನಿ ಆಪ್ಟಿಕಲ್‌, ಹನ್ಸ್‌ ಲೇಸರ್‌ ಟೆಕ್ನಾಲಜಿ, ಯುಟೊ ಪ್ಯಾಕೇಜಿಂಗ್‌ ಟೆಕ್ನಾಲಜಿ, ಸ್ಟ್ರಾಂಗ್‌, ಸಾಲ್ಕೋಂಪ್‌, ಬೋಸನ್‌ ಸೇರಿದಂತೆ 14 ಚೀನಿ ಕಂಪನಿಗಳಿಗೆ ಆರಂಭಿಕ ಹಂತದ ಅನುಮತಿ ನೀಡಲಾಗಿದೆ.

ಚೀನಿ ಕಂಪನಿಗಳು ಸ್ಥಳೀಯ ಕಂಪನಿಗಳ ಸಹಭಾಗಿತ್ವದಲ್ಲಿ ಮಾತ್ರ ಇಲ್ಲಿ ಕಾರ್ಖಾನೆಗಳನ್ನು ತೆರೆಯಬಹುದು. ಜೆವಿ ಮಾಡಿದ ಬಳಿಕವಷ್ಟೇ ಉತ್ಪಾದನೆಗೆ ಅಂತಿಮ ಹಂತದ ಅನುಮರಿ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ಸಪ್ಲೈ ಚೈನ್‌ ವಿಸ್ತರಣೆಗೆ ಅವಕಾಶ: ಕೇಂದ್ರ ಸರ್ಕಾರ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗಳನ್ನು (PLI) ವಿಸ್ತರಿಸಿದ ಬಳಿಕ ಸಪ್ಲೈ ಚೈನ್‌ ವಿಸ್ತರಣೆಗೆ ಅವಕಾಶ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

Exit mobile version