Site icon Vistara News

LIC | ಎಲ್‌ಐಸಿಗೆ ಜುಲೈ-ಸೆಪ್ಟೆಂಬರ್‌ನಲ್ಲಿ 15,952 ಕೋಟಿ ರೂ. ನಿವ್ವಳ ಲಾಭ

LIC

ಮುಂಬಯಿ: ಭಾರತೀಯ ಜೀವ ವಿಮೆ ನಿಗಮ (LIC) ಕಳೆದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 15,952 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಣನೀಯ ಏರಿಕೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,433 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ನಿವ್ವಳ ಪ್ರೀಮಿಯಂ ಆದಾಯವು 26.6% ಏರಿಕೆಯಾಗಿದ್ದು, 1.32 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ಹೂಡಿಕೆಗಳಿಂದ ಆದಾಯದಲ್ಲಿ 10% ಹೆಚ್ಚಳವಾಗಿದೆ. (84,104 ಕೋಟಿ ರೂ.)

ಐದು ವರ್ಷಗಳ ಪ್ರೀಮಿಯಂ ಆದಾಯವು 11.3% ಹೆಚ್ಚಳವಾಗಿದ್ದು, 9,125 ಕೋಟಿ ರೂ.ಗೆ ವೃದ್ಧಿಸಿದೆ. ಸಿಂಗಲ್‌ ಪ್ರೀಮಿಯಂ 62% ಹೆಚ್ಚಳವಾಗಿದ್ದು, 66,901 ಕೋಟಿ ರೂ.ಗೆ ವೃದ್ಧಿಸಿದೆ.

ಎಲ್‌ಐಸಿಯ ಅನುತ್ಪಾದಕ ಆಸ್ತಿಯ ಪ್ರಮಾಣ ಇಳಿಕೆಯಾಗಿದ್ದು, 26,111 ಕೋಟಿ ರೂ.ಗೆ ತಗ್ಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 28,929 ಕೋಟಿ ರೂ.ನಷ್ಟಿತ್ತು.

Exit mobile version