ಬೆಂಗಳೂರು: ಚಿನ್ನದ ದರದಲ್ಲಿ ಶನಿವಾರ ೧೬೦ ರೂ. ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಶನಿವಾರ ೨೪ ಕ್ಯಾರಟ್ನ ಪ್ರತಿ ೧೦ ಗ್ರಾಮ್ ಬಂಗಾರದ ದರ ೫೨,೦೪೦ ರೂ.ಗೆ ಏರಿಕೆಯಾಗಿದೆ.
ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಬಂಗಾರದ ದರದಲ್ಲಿ ೧೫೦ ರೂ. ಏರಿಕೆಯಾಗಿದ್ದು, ೪೭,೭೦೦ ರೂ.ಗೆ ವೃದ್ಧಿಸಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ ೪೦೦ ರೂ. ಏರಿಕೆಯಾಗಿದ್ದು, ೬೩,೬೦೦ ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್ ದರದಲ್ಲಿ ೮೮೦ ರೂ. ಹೆಚ್ಚಳವಾಗಿದ್ದು, ೧೦ ಗ್ರಾಮ್ ದರ ೨೨,೮೧೦ ರೂ.ಗೆ ಜಿಗಿದಿದೆ.
ಚಿನ್ನದ ದರದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು ೫೫೦ ರೂ. ಏರಿಕೆಯಾಗಿದೆ. ಅಂತಾರಾಷ್ಟ್ರೀಯ ದರ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ.