ಮುಂಬಯಿ: ಭಾರತೀಯ ಜೀವ ವಿಮೆ ನಿಗಮಕ್ಕೆ ಎಲ್‌ಐಸಿಯಿಂದ ಬರಬೇಕಿರುವ ಡೆಟ್ ಎಕ್ಸ್‌ಪೋಶರ್‌ನ (ಸಾಲದ ಬಾಕಿ) ಮೊತ್ತ ಇದೀಗ 6,183 ಕೋಟಿ ರೂ.ಗೆ ಇಳಿಕೆಯಾಗಿದೆ. (Debt exposure) ಮಾರ್ಚ್ 5ರಂದು ಇದು 6,347 ಕೋಟಿ ರೂ.ನಷ್ಟಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು (Adani group) ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಎಲ್‌ಐಸಿಗೆ ಅದಾನಿ ಪೋರ್ಟ್ಸ್ & ಸೆಜ್‌ನಿಂದ 5,388 ಕೋಟಿ ರೂ. ಹಾಗೂ ಅದಾನಿ ಪವರ್‌ನಿಂದ 266 ಕೋಟಿ ರೂ, ಅದಾನಿ ಪವರ್ ಮಹಾರಾಷ್ಟ್ರ ಲಿಮಿಟೆಡ್-3ನೇ ಹಂತದಿಂದ 254 ಕೋಟಿ ರೂ, ಬರಬೇಕಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.